ಗೂಗಲ್‌ನಿಂದ ವಿಡಿಯೋ ಶಾಪಿಂಗ್ ಆಪ್‌ ಪರಿಚಯಿಸಲು ಸಿದ್ದತೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಬಳಕೆದಾರರಿಗೆ ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಬಳಕೆದಾರರ ಸ್ನೇಹಿ ಎನಿಸಿಕೊಂಡಿರುವ ಗೂಗಲ್‌ ಇದೀಗ ತನ್ನ ವೀಡಿಯೊ ಶಾಪಿಂಗ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದ್ದು, ಇದಕ್ಕೆ 'ಶಾಪ್‌ಲೂಪ್' ಎಂದು ಹೆಸರಿಸಲಾಗಿದೆ. ಸದ್ಯ ಇದೀಗ ಗೂಗಲ್‌ ವೀಡಿಯೋ ಏರಿಯಾ 120 ಎಂಬ ಪ್ರಾಯೋಗಿಕ ಯೋಜನೆಗಳಿಗಾಗಿ ಗೂಗಲ್‌ನ ಕಾರ್ಯಾಗಾರದಿಂದ ಈ ಪ್ಲಾಟ್‌ಫಾರ್ಮ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗ್ತಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ ವೀಡಿಯೋ ಶಾಪಿಂಗ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಒಂದೇ ವೇದಿಕೆಯಲ್ಲಿ ಶಾಪಿಂಗ್ ಮಾಡುವುದಕ್ಕೆ ಅವಕಾಶ ಕಲ್ಪಿಸುವುದಕ್ಕೆ ಗೂಗಲ್‌ ಪ್ಲ್ಯಾನ್‌ ರೂಪಿಸಿಕೊಂಡಿದೆ. ಸದ್ಯ ಗೂಗಲ್‌ ವಿಡಿಯೋ ಶಾಪಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ includes discovering, evaluating and buying products ನಂತಹ ಮೂರು ಸೇವೆಗಳನ್ನ ಒಂದೇ ವೇದಿಕೆಯಲ್ಲಿ ಒದಗಿಸುವುದಕ್ಕೆ ಸಿದ್ದತೆ ನಡೆಸಿದೆ. ಅಲ್ಲದೆ ಗೂಗಲ್‌ ತನ್ನ ಬಳಕೆದಾರರು ಬೇರೆ ಅಪ್ಲಿಕೇಶನ್‌ಗಳ ಮೊರೆ ಹೋಗದೆ ಎಲ್ಲಾ ಮಾದರಿಯ ಸೇವೆಗಳನ್ನು ಒದಗಿಸುವುದಕ್ಕೆ ಅವಕಾಶ ಕಲ್ಪಿಸುವುದಕ್ಕೆ ಪ್ಲ್ಯಾನ್‌ ರೂಪಿಸಿದೆ. ಅಷ್ಟಕ್ಕೂ ಗೂಗಲ್‌ನ ಈ ವಿಡಿಯೋ ಪ್ಲಾಟ್‌ಫಾರ್ಮ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ವೀಡಿಯೋ ಶಾಪಿಂಗ್‌ ಪ್ಲಾಟ್‌ಫಾರ್ಮ್‌ ಶಾಪ್‌ಲೂಪ್‌ನಲ್ಲಿ, ವೀಡಿಯೊಗಳು 90 ಸೆಕೆಂಡುಗಳಿಗಿಂತ ಕಡಿಮೆ ಅವಧಿಯನ್ನ ಹೊಂದಿದ್ದು, ಇದರಲ್ಲಿ ಬಳಕೆದಾರರಿಗೆ ಉತ್ಪನ್ನಗಳ ಬಗ್ಗೆ ವಿವರಿಸಲಿದೆ. ಈ ವೀಡಿಯೊಗಳಲ್ಲಿ ನೀವು ಬಯಸುವ ಉತ್ಪನ್ನದ ಮಾಹಿತಿ, ಉತ್ಪನ್ನಗಳ ವಿಶೇಷತೆ, ಅದರ ಕ್ವಾಲಿಟಿ, ಅದರ ಬೆಲೆ ಇತರೆ ಮಾಹಿತಿಗಳ ಬಗ್ಗೆ ಈ ವೀಡಿಯೊದಲ್ಲಿ ವಿವರಿಸುತ್ತದೆ ಎಂದು ಹೇಳಿಕೊಂಡಿದೆ. ಇದಕ್ಕಾಗಿ ಶಾಪ್‌ಲೂಪ್‌ನಲ್ಲಿ ಬ್ಯೂಟಿ ಪ್ರಾಡಕ್ಟ್‌, ಕಂಟೆಟ್‌ ಕ್ರಿಯೆಟರ್‌, ಪ್ರಕಾಶಕರು ಮತ್ತು ಆನ್‌ಲೈನ್ ಮಳಿಗೆಗಳ ಮಾಲೀಕರೊಂದಿಗೆ ಕನೆಕ್ಟಿವಿಟ ಹೊಂದುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.

ಶಾಪ್‌ಲೂಪ್

ಇದಲ್ಲದೆ ಮೇಕಪ್, ಚರ್ಮದ ರಕ್ಷಣೆಯ, ಕೂದಲು ಮತ್ತು ಉಗುರು ಸೇರಿದಂತೆ ನಾಲ್ಕು ವಿಭಾಗಗಳನ್ನು ಶಾಪ್‌ಲೂಪ್ ಪ್ರಸ್ತುತ ಪೂರೈಸುತ್ತದೆ ಎಂದು ಹೇಳಲಾಗ್ತಿದೆ. ಜೊತೆಗೆ ಇದರ ಮುಖಪುಟದಲ್ಲಿ ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಪ್ರದರ್ಶಿಸುತ್ತದೆ ಆದರೆ ಆಡಿಯೊ ಮ್ಯೂಟ್ ಆಗಿರಲಿದೆ ಎನ್ನಲಾಗ್ತಿದೆ. ಬಳಕೆದಾರರು ಈ ವೀಡಿಯೊವನ್ನು ಲೈಕ್‌ಮಾಡಬಹುದು, ಹಂಚಿಕೊಳ್ಳಬಹುದು ಮತ್ತು ಸೇವ್‌ ಮಾಡಬಹುದಾಗಿದೆ. ಅಲ್ಲದೆ ಈ ಪ್ರಾಡಕ್ಟ್‌ಗಳನ್ನ ಲೈಕ್‌ ಮಾಡಿದರೆ ಬಳಕೆದಾರರು ಖರೀದಿಸಬಹುದಾದ ವೆಬ್‌ಸೈಟ್‌ಗೆ ಲಿಂಕ್ ಅನ್ನು ಹೊಂದಿವೆ.

ಫ್ಲಾಟ್‌ಫಾರ್ಮ್‌

ಇನ್ನು ಈ ವೀಡಿಯೊಗಳ ಫ್ಲಾಟ್‌ಫಾರ್ಮ್‌ ನಲ್ಲಿನ ಎಲ್ಲಾ ವೀಡಿಯೋಗಳು ಎಲ್ಲ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಆದರೆ ಒಂದು ವೇದಿಕೆಯಲ್ಲಿ ಶಾಪಿಂಗ್ ಮಾಡುವಾಗ ಮೀವು ಖರೀದಿಸಬಹುದಾದ ಉತ್ಪನ್ನಗಳನ್ನು ಕಂಡುಹಿಡಿಯುವುದು, ಮೌಲ್ಯಮಾಪನ ಮಾಡುವುದು ಮತ್ತು ಖರೀದಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಶಾಪ್‌ಲೂಪ್ ಅನ್ನು ಪ್ರಸ್ತುತ ಮೊಬೈಲ್ ಬ್ರೌಸರ್ ಮೂಲಕ ಮಾತ್ರ ಪ್ರವೇಶಿಸಬಹುದು. ಆದರೆ ಪಟ್ಟಿ ಮಾಡಲಾದ ಉತ್ಪನ್ನಗಳು ಯುಎಸ್‌ ನಲ್ಲಿ ಮಾತ್ರ ಲಭ್ಯವಿದೆ. ಇನ್ನು ಗೂಗಲ್‌ನ ಪ್ರಾಯೋಗಿಕ ಯೋಜನೆಯಾಗಿರುವುದರಿಂದ, ಯಾವಾಗ ಇದು ಗ್ರಾಹಕರಿಗೆ ಲಭ್ಯವಾಗಲಿದೆ ಅನ್ನೊದನ್ನ ಇನ್ನು ಗೂಗಲ್‌ ದೃಡೀಕರಿಸಿಲ್ಲ.

Best Mobiles in India

English summary
Shoploop features video reviews of products displayed in a feed. It currently caters to makeup, skincare, hair and nail products.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X