ಗೇಮ್‌ ಪ್ರಿಯರಿಗೆ ನಿರಾಶೆ ಮೂಡಿಸಿದ ಗೂಗಲ್‌!..ಇನ್ಮುಂದೆ ಈ ಸೇವೆ ಅಲಭ್ಯ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಗೇಮಿಂಗ್‌ ಪ್ರಿಯರಿಗಾಗಿ ಪ್ರಾರಂಭಿಸಿದ್ದ ಸ್ಟೇಡಿಯಾ(Stadia) ಗೇಮಿಂಗ್‌ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಈ ಸೇವೆ ಗೇಮಿಂಗ್‌ ಪ್ರಿಯರನ್ನು ಆಕರ್ಷಿಸುವಲ್ಲಿ ವಿಫಲವಾದ ಕಾರಣ ಗೂಗಲ್‌ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದೆ. ಈ ಸೇವೆಯು ಜನವರಿ 18, 2023ರವರೆಗೆ ಮಾತ್ರ ಸೇವೆಯಲ್ಲಿರಲಿದೆ ಎಂದು ಗೂಗಲ್‌ ಸ್ಪಷ್ಟಪಡಿಸಿದೆ.

ಗೂಗಲ್‌

ಹೌದು, ಗೂಗಲ್‌ ಗೇಮರ್‌ಗಳಿಗಾಗಿ ಪರಿಚಯಿಸಿದ್ದ ಸ್ಟೇಡಿಯಾ ಗೇಮಿಂಗ್‌ ಸೇವೆ ಮುಂದಿನ ವರ್ಷದ ಜನವರಿಯಿಂದ ಸ್ಟಾಪ್‌ ಆಗಲಿದೆ. ಗೂಗಲ್‌ ಈ ಸೇವೆಯ ಮೂಲಕ ವಿಡಿಯೋ ಗೇಮ್ ಕನ್ಸೋಲ್ ದೈತ್ಯರನ್ನು ಸೆಳೆಯುವುದಕ್ಕೆ ಮುಂದಾಗಿತ್ತು. ಆದರೆ ಇದು ಅಷ್ಟು ಯಶಸ್ವಿಯಾಗದ ಕಾರಣ ಇದನ್ನು ಸ್ಟಾಪ್‌ ಮಾಡುವುದಾಗಿ ಗೂಗಲ್‌ ಇಂದು ತನ್ನ ಘೋಷಣೆಯಲ್ಲಿ ತಿಳಿಸಿದೆ. ಹಾಗಾದ್ರೆ ಸ್ಟೇಡಿಯಾ ಸೇವೆ ಪ್ರಾರಂಭವಾಗಿದ್ದು ಯಾವಾಗ? ಏನಿದರ ಕಾರ್ಯವೈಖರಿ? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಸ್ಟೆಡಿಯಾ

ಗೂಗಲ್‌ ಸ್ಟೆಡಿಯಾ ಗೇಮರ್‌ಗಳಿಗಾಗಿಯೇ ಪ್ರಾರಂಭವಾದ ಗೂಗಲ್‌ನ ವಿನೂತನ ಸೇವೆಯಾಗಿದೆ. ಇದು ಬಳಕೆದಾರರಿಗೆ ಆಂಡ್ರಾಯ್ಡ್‌ ಫೋನ್‌ಗಳು ಮತ್ತು TV ​​ಗಾಗಿ ಕ್ರೋಮಾಕಾಸ್ಟ್‌ ಅಪ್ಲಿಕೇಶನ್‌ ಡಿವೈಸ್‌ಗಳಲ್ಲಿ ಗೇಮ್‌ ಆಡುವುದಕ್ಕೆ ಅವಕಾಶ ನೀಡಿದೆ. ಗ್ರಾಹಕರು ಸ್ಟ್ರೀಮಿಂಗ್ ಗೇಮ್‌ಗಳನ್ನು ಸ್ಟೇಡಿಯಾ ಮೂಲಕ ಎಂಜಾಯ್‌ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಕೂಡ ನಿರೀಕ್ಷಿಸಿತ ಬೆಳವಣಿಗೆ ಸಾಧಿಸಿಲ್ಲ. ಇದೇ ಕಾರಣಕ್ಕೆ ಸ್ಟೇಡಿಯಾ ಸ್ಟ್ರೀಮಿಂಗ್ ಸೇವೆಯನ್ನು ಸ್ಥಗಿತಗೊಳಿಸಲು ಕಠಿಣ ನಿರ್ಧಾರವನ್ನು ಮಾಡಿದ್ದೇವೆ ಎಂದು ಗೂಗಲ್‌ ಹೇಳಿಕೊಂಡಿದೆ.

ಗೂಗಲ್‌ ಸ್ಟೇಡಿಯಾ

ಗೂಗಲ್‌ ಸ್ಟೇಡಿಯಾ ಸ್ಥಗಿತದ ನಿರ್ಧಾರದ ಇಂದು ಹೊರಬಂದಿದೆಯಾದರೂ, ಈ ಸೇವೆಯನ್ನು ನೀವು 2023ರ ಜನವರಿ18 ರವರೆಗೆ ಬಳಸುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಗೂಗಲ್‌ ಸ್ಟೋರ್‌ ಮೂಲಕ ಸ್ಟೇಡಿಯಾ ಹಾರ್ಡ್‌ವೇರ್‌ , ಗೇಮ್‌ಗಳು ಮತ್ತು ಆಡ್-ಆನ್ ವಿಷಯವನ್ನು ಖರೀದಿಸಿರುವವರಿಗೆ ಗೂಗಲ್‌ ರಿಫಂಡ್‌ ಮಾಡಲಿದೆ. ಮುಂದಿನ ವರ್ಷದಿಂದ ಗೂಗಲ್‌ ಸ್ಟೇಡಿಯಾ ಸೇವೆ ಲಭ್ಯವಾಗುವುದಿಲ್ಲ ಎಂದು ಸ್ಟೇಡಿಯಾ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಫಿಲ್ ಹ್ಯಾರಿಸನ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸ್ಟೇಡಿಯಾ

ಗೂಗಲ್‌ನ ಸ್ಟೇಡಿಯಾ ಪ್ರಾರಂಭವಾದಗ ಗೇಮರ್‌ಗಳಿಗೆ ಹೊಸತನದ ಅನುಭವ ನೀಡುವ ನಿರೀಕ್ಷೆ ಇಡಲಾಗಿತ್ತು. ಅದರಂತೆ ಡೆಸ್ಟಿನಿ 2 ಮತ್ತು ಅಸ್ಸಾಸಿನ್ಸ್ ಕ್ರೀಡ್ ಒಡಿಸ್ಸಿ ಸೇರಿದಂತೆ ಜನಪ್ರಿಯ ಥರ್ಡ್-ಪಾರ್ಟಿ ಫ್ರಾಂಚೈಸಿಗಳ ಮೂಲಕ ನವೆಂಬರ್ 2019 ರಲ್ಲಿ ಇದನ್ನು ಪರಿಚಯಿಸಲಾಗಿತ್ತು. ಜೊತೆಗೆ ಬೆಲೆಬಾಳುವ ಎಕ್ಸ್‌ಬಾಕ್ಸ್ ಅಥವಾ ಪ್ಲೇಸ್ಟೇಷನ್ ಕನ್ಸೋಲ್ ಅನ್ನು ಪಡೆಯಲು ಸಾಧ್ಯವಾಗದ ಪ್ರೇಕ್ಷಕರನ್ನು ಮೀರಿ ತಲುಪುವ ಪ್ರಯತ್ನದಲ್ಲಿ ಗೂಗಲ್‌ ಸ್ಟೇಡಿಯಾದಲ್ಲಿ ಸಾಕಷ್ಟು ಹೂಡಿಕೆ ಕೂಡ ಮಾಡಲಾಗಿತ್ತು. ಆದರೆ ಗೂಗಲ್‌ನ ಸ್ಟೇಡಿಯಾ ತಾನು ನಿರೀಕ್ಷಿಸಿದ ಗುರಿ ತಲುಪದ ಹಿನ್ನೆಲೆಯಲ್ಲಿ ಬಾಗಿಲು ಬಂದ್‌ ಮಾಡುವ ನಿರ್ಧಾರವನ್ನು ಘೋಷಣೆ ಮಾಡಿದೆ.

ಗೂಗಲ್‌ ಗೇಮಿಂಗ್‌

ಗೂಗಲ್‌ ಸ್ಟೇಡಿಯಾ ಸೇವೆಯನ್ನು ಸ್ಥಗಿತಗೊಳಿಸದ ನಂತರ ಗೂಗಲ್‌ ಗೇಮಿಂಗ್‌ನಿಂದ ದೂರ ಸರಿಯುತ್ತಿದೆಯಾ ಎಂದು ಭಾವನೆ ಸಹಜ. ಖಂಡಿತವಾಗಿಯೂ ಇಲ್ಲ, ಏಕೆಂದರೆ ಗೂಗಲ್‌ ಯುಟ್ಯೂಬ್‌, ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಅದರ AR ಸಾಹಸಕ್ಕಾಗಿ ಸ್ಟೇಡಿಯಾ ಟೆಕ್ನಾಲಜಿಯನ್ನು ಬಳಸುವುದನ್ನು ಮುಂದುವರಿಸಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇತ್ತೀಚೆಗೆ ಘೋಷಿಸಲಾದ ಗೇಮ್‌ಗಳಿಗೆ ಇಮ್ಮರ್ಸಿವ್ ಸ್ಟ್ರೀಮ್ ಮೂಲಕ AT&T ಯಂತಹ ಟೆಕ್ನಾಲಜಿಯನ್ನು ಒದಗಿಸಲಿದೆ ಎಂದು ವರದಿಯಾಗಿದೆ.

ಉದ್ಯಮ

ಇದಲ್ಲದೆ ನಾವು ಗೇಮಿಂಗ್‌ಗೆ ತಂತ್ರಜ್ಞಾನಕ್ಕೆ ಬದ್ಧರಾಗಿದ್ದೇವೆ, ಡೆವಲಪರ್‌ಗಳು, ಉದ್ಯಮ ಪಾಲುದಾರರು, ಕ್ಲೌಡ್ ಗ್ರಾಹಕರು ಮತ್ತು ರಚನೆಕಾರರ ಯಶಸ್ಸಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತಲೇ ಬರುತ್ತೆವೆ. ಇದಕ್ಕಾಗಿ ಹೊಸ ಪರಿಕರಗಳು, ತಂತ್ರಜ್ಞಾನಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಫಿಲ್ ಹ್ಯಾರಿಸನ್ ತಮ್ಮ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Best Mobiles in India

Read more about:
English summary
‌Google Stadia game streaming service is shutting down

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X