ದಕ್ಷಿಣ ಆಫ್ರಿಕಾದಲ್ಲಿ ಗೂಗಲ್‌ನ ಉಚಿತ ವೈ-ಫೈ ಯೋಜನೆ ಸ್ಥಗಿತ..!

By Gizbot Bureau
|

ಪ್ರಾರಂಭವಾದ ಮೂರೇ ತಿಂಗಳಲ್ಲಿ ಗೂಗಲ್‌ ತನ್ನ ಜಾಗತಿಕ ಉಚಿತ ವೈ-ಫೈ ಯೋಜನೆ ಗೂಗಲ್‌ ಸ್ಟೇಷನ್‌ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಗಿತಗೊಳಿಸಿದೆ. ದಕ್ಷಿಣ ಆಫ್ರಿಕಾದ ಥಿಂಕ್‌ ವೈ-ಫೈ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಗೂಗಲ್‌ ದಕ್ಷಿಣ ಆಫ್ರಿಕಾದಲ್ಲಿ ಜಾರಿಗೆ ತಂದಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಗೂಗಲ್‌ನ ಉಚಿತ ವೈ-ಫೈ ಯೋಜನೆ ಸ್ಥಗಿತ..!

ನಾವು ಈ ಯೋಜನೆ ಪ್ರಾರಂಭಿಸಿದಾಗಿನಿಂದ, ವೈ-ಫೈ ಪರಿಸರ ವ್ಯವಸ್ಥೆ ವಿಕಸನಗೊಂಡಿದೆ. ಮತ್ತು ದೇಶಗಳು ಮತ್ತು ಪಾಲುದಾರರುಗಳಿಂದ ಸಂಕೀರ್ಣ ಮತ್ತು ವಿಭಿನ್ನ ತಾಂತ್ರಿಕ ಅವಶ್ಯಕತೆಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ನಾವು ನಮ್ಮ ಯೋಜನೆಗಳನ್ನು ಮರು ಮೌಲ್ಯಮಾಪನ ಮಾಡುತ್ತಿದ್ದು, 2020ರ ಅಂತ್ಯದ ವೇಳೆಗೆ ಗೂಗಲ್‌ ಸ್ಟೇಷನ್‌ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಗೂಗಲ್‌ ದಕ್ಷಿಣ ಆಫ್ರಿಕಾ ಹೇಳಿದೆ.

ಟೆಕ್‌ ದೈತ್ಯ ಗೂಗಲ್‌, ನವೆಂಬರ್ 2019ರಲ್ಲಿ ಜೋಹಾನ್ಸ್‌ಬರ್ಗ್‌ನ ಸ್ಯಾಂಡ್‌ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗೂಗಲ್ ಸ್ಟೇಷನ್ ಪ್ರಾರಂಭಿಸುವುದಾಗಿ ಘೋಷಿಸಿತು. ವೆಸ್ಟರ್ನ್ ಕೇಪ್‌ನಲ್ಲಿ ಪ್ರಥಮ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಿತು. ಯೋಜನೆ ಪ್ರಾರಂಭವಾದಾಗ ಕೇಪ್‌ಟೌನ್‌ನ 125 ಸ್ಥಳಗಳಲ್ಲಿ ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗಿತ್ತು.

ಈ ಸೇವೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಗೂಗಲ್‌ ಮುಂದುವರಿಸುತ್ತಿಲ್ಲ. ಮತ್ತು ಈ ವರ್ಷದಲ್ಲಿ ತನ್ನ ಪಾಲುದಾರ ಥಿಂಕ್ ವೈ-ಫೈಗೆ ಯೋಜನೆಯ ಕಾರ್ಯಾಚರಣೆಗಳನ್ನು ಹಸ್ತಾಂತರಿಸಲಿದೆ. ವೆಸ್ಟರ್ನ್ ಕೇಪ್‌ನಲ್ಲಿ ಉಚಿತ ವೈ-ಫೈ ಉಪಕ್ರಮವು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿದೆ. ಈಸ್ಟರ್ನ್ ಕೇಪ್, ಗೌಟೆಂಗ್ ಮತ್ತು ಎಪ್ಯುಮಲಂಗಾದ ಕೆಲವು ಪ್ರದೇಶಗಳಿಗೆ ಉಚಿತ ವೈ-ಫೈ ನೀಡಲು ಈಗಾಗಲೇ ಯೋಜನೆಗಳು ನಡೆಯುತ್ತಿವೆ ಎಂದು ಥಿಂಕ್ ವೈ-ಫೈ ಸಿಇಒ ಜನೈನ್ ರೆಬೆಲೊ ಹೇಳಿದ್ದಾರೆ.

Most Read Articles
Best Mobiles in India

Read more about:
English summary
Google To Discontinue Free Wi-Fi Service In India Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X