ಗೂಗಲ್ ಮಾಡುತ್ತಿರುವ ಮೋಸ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ!!

|

ಅಂತರ್ಜಾಲ ಇಲ್ಲದೆ ಬದುಕಲು ಸಾಧ್ಯವಿಲ್ಲ, ಅದರಲ್ಲಿಯೂ ಅಂತರ್ಜಾಲದ ಹೆದ್ದಾರಿಯಂತಿರುವ ಗೂಗಲ್ ಬಳಸದೇ ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಗೂಗಲ್ ಎಂಬ ಒಂದು ಟೆಕ್ ದಿಗ್ಗಜ ಕಂಪೆನಿಯೊಂದನ್ನು ನಂಬಿ ವಿಶ್ವದ ಬಹುಪಾಲು ಜನರು ಅಂತರ್ಜಾಲದ ಒಳಗೆ ನುಗ್ಗುತ್ತಿದ್ದಾರೆ. ಆದರೆ, ಈ ವಿಶ್ವದ ನಂಬಿಕೆಯನ್ನು ಗೂಗಲ್ ಉಳಿಸಿಕೊಳ್ಳುತ್ತಿದೆಯೇ?

ಇಂತಹದೊಂದು ಪ್ರಶ್ನೆ ಅಂತರ್ಜಾಲ ಪ್ರಪಂಚದಲ್ಲಿ ಯಾವಾಗಲೂ ಪ್ರಚಲಿತವಾಗಿ ಕೇಳಿ ಬರುತ್ತದೆ. ಗೂಗಲ್ ಒಂದು ಖಾಸಾಗಿ ಸಂಸ್ಥೆಯಾಗಿರುವುದರಿಂದ ಗೂಗಲ್ ಮೇಲೆ ಅಪನಂಬಿಕೆಗಳು ಹುಟ್ಟುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಗೂಗಲ್‌ನಿಂದ ಏನೂ ತೊಂದರೆ ಇಲ್ಲ ಎಂದು ಅನಿಸುವಾಗಲೇ, ಇದೀಗ ಗೂಗಲ್ ಮಾಡಿರುವ ಕೆಲಸನಮ್ಮನ್ನು ದಿಗ್ಭ್ರಮೆಗೊಳಿಸುತ್ತಿದೆ.

ಗೂಗಲ್ ಮಾಡುತ್ತಿರುವ ಮೋಸ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ!!

ಹೌದು, ಗೂಗಲ್ ನಿಮ್ಮ ಸಂಪೂರ್ಣ ಚಲನವಲನಗಳನ್ನು ಯಾವಾಗಲೂ ದಾಖಲಿಸಿರುತ್ತದೆ. ಇದು ಸಾಮಾನ್ಯ ವಿಷಯ ಎಂದುಕೊಳ್ಳಬೇಡಿ. ಏಕೆಂದರೆ, ಗೂಗಲ್‌ಗೆ ನೀವು ಅನುಮತಿ ನೀಡಿದರೂ ಅಥವಾ ನೀಡದಿದ್ದರೂ ಸಹ ನಿಮ್ಮ ಎಲ್ಲಾ ಚಲನವಲನಗಳನ್ನು ದಾಖಲಿಸಿಕೊಳ್ಳುತ್ತದೆ. ಹಾಗಾದರೆ, ಏನಿದು ಶಾಕಿಂಗ್ ಮಾಹಿತಿ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಅನುಮತಿ ಇಲ್ಲದಿದ್ದರೂ ಡಾಟಾ ಟ್ರ್ಯಾಕ್!

ಅನುಮತಿ ಇಲ್ಲದಿದ್ದರೂ ಡಾಟಾ ಟ್ರ್ಯಾಕ್!

ಪ್ರಿನ್ಸ್ಟನ್‌ನಲ್ಲಿನ ಕಂಪ್ಯೂಟರ್-ಸೈನ್ಸ್ ಸಂಶೋಧಕರು ನಡೆಸಿರುವ ಅಸೋಸಿಯೇಟೆಡ್ ಪ್ರೆಸ್ ತನಿಖೆಯೊಂದು ಶಾಕಿಂಗ್ ಮಾಹಿತಿಯನ್ನು ಹೊರಹಾಕಿದೆ. ಆಂಡ್ರಾಯ್ಡ್ ಮತ್ತು ಐಪೋನ್ ಎರಡರಲ್ಲಿಯೂ ಗೂಗಲ್ ಸೇವೆಗಳು ನಿಮ್ಮ ಡೇಟಾವನ್ನು ಸಂಗ್ರಹಿಸಿಸುತ್ತಿವೆ.ನೀವು ಗೌಪ್ಯತೆ ಸೆಟ್ಟಿಂಗ್ ಅನ್ನು ಬಳಸುತ್ತಿದ್ದರೂ ಗೂಗಲ್ ಮಾತ್ರ ನಿಮ್ಮ ಡೇಟಾವನ್ನು ಕದಿಯುತ್ತಿದೆ.

ಟೈಮ್ಲೈನ್ ಗೌಪ್ಯತೆ ಅಪಾಯ!

ಟೈಮ್ಲೈನ್ ಗೌಪ್ಯತೆ ಅಪಾಯ!

ನೀವು ಯಾವುದಾದರೂ ಸ್ಥಳವನ್ನು ನ್ಯಾವಿಗೇಟ್ ಮಾಡಲು ಗೂಗಲ್ ಅನ್ನು ಬಳಸಿದರೆ ಸ್ಥಳಕ್ಕೆ ಪ್ರವೇಶವನ್ನು ಅನುಮತಿಸಲುಗೂಗಲ್ ನಕ್ಷೆ ಆಪ್ ಅನ್ನು ನೆನಪಿಸುತ್ತದೆ. ನಿಮ್ಮ ದಿನನಿತ್ಯದ ಚಲನೆಯನ್ನು ತೋರಿಸುವ "ಟೈಮ್ಲೈನ್" ನಲ್ಲಿ ನಿಮಿಷದ ನಿಮಿಷಗಳ ಪ್ರಯಾಣವನ್ನು ಸಂಗ್ರಹಿಸುವುದು ಗೌಪ್ಯತೆ ಅಪಾಯಗಳನ್ನು ಉಂಟುಮಾಡುತ್ತದೆ.

ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ನಮ್ಮ ಎಲ್ಲಾ ಹುಡುಕಾಟಗಳನ್ನು ಸಂಗ್ರಹಿಸುತ್ತದೆ!

ನಾವು ಇಂಟರ್‌ನೆಟ್ ಮೂಲಕ ಹುಡುಕುವ ಪ್ರತಿಯೊಂದು ವಿಷಯವನ್ನು ಕೂಡ ಗೂಗಲ್ ತನ್ನ ಸಾಧನಗಳಲ್ಲಿ ಸಂಗ್ರಹಿಸುತ್ತಿದೆ. ಈ ಡೇಟಾವೆಲ್ಲ ಗೂಗಲ್ ಕಂಪೆನಿಯ ಪ್ರತ್ಯೇಕ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ. ಇದರಿಂದಾಗಿ, ನಮ್ಮ ಫೋನ್ ಇತಿಹಾಸವನ್ನು ನಾವು ತೆರವುಗೊಳಿಸಲು ಸಾಧ್ಯವಿಲ್ಲ.

ಪ್ರತಿಯೊಂದು ಆಪ್ ಮಾಹಿತಿ ಸಂಗ್ರಹಿಸುತ್ತದೆ!

ಪ್ರತಿಯೊಂದು ಆಪ್ ಮಾಹಿತಿ ಸಂಗ್ರಹಿಸುತ್ತದೆ!

ನಾವು ನಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಸುವ ಪ್ರತಿಯೊಂದು ಆಪ್ ಮಾಹಿತಿಯನ್ನು ಗೂಗಲ್ ಸಂಗ್ರಹಿಸುತ್ತದೆ ಎನ್ನಲಾಗಿದೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವ ಆಪ್‌ಗಳನ್ನು ಎಷ್ಟು ಬಾರಿ ಬಳಸುತ್ತೇವೆ, ನಾವು ಯಾವಾಗ ಆ ಆಪ್‌ಅನ್ನು ಬಳಸುತ್ತೇವೆ, ನಾವು ಯಾವ ಜಾಗದಲ್ಲಿ ಆ ಆಪ್‌ ಅನ್ನು ಬಳಸುತ್ತೇವೆ ಎಂಬ ಮಾಹಿತಿಗಳನ್ನು ಗೂಗಲ್ ಸಂಗ್ರಹಿಸುತ್ತದೆ.

ಯೂಟ್ಯೂಬ್ ಹುಡುಕಾಟ ಸಂಗ್ರಹ!

ಯೂಟ್ಯೂಬ್ ಹುಡುಕಾಟ ಸಂಗ್ರಹ!

ಇಂಟರ್‌ನೆಟ್ ಬಳಸುಗ ಶೇ 80 ರಷ್ಟು ಜನರು ಯೂಟ್ಯೂಬ್ ವಿಡಿಯೋ ತಾಣವನ್ನು ಬಳಸುತ್ತಾರೆ ಎಂದು ಹೇಳಲಾಗಿದೆ. ನಿಮಗೆ ಗೊತ್ತಾ? ನಮ್ಮ ಎಲ್ಲಾ ಯೂಟ್ಯೂಬ್ ಹುಡುಕಾಟದ ಇತಿಹಾಸವನ್ನು ಗೂಗಲ್ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಮ್ಮ ರಾಜಕೀಯ ಆದ್ಯತೆಗಳು, ಧಾರ್ಮಿಕ ನಂಬಿಕೆಗಳು, ನಮ್ಮ ವ್ಯಕ್ತಿತ್ವ ಪ್ರಕಾರ ವಿಡಿಯೋಗಳನ್ನು ತೋರಿಸುತ್ತದೆ.

ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!

ಗೂಗಲ್ ಟೇಕ್ಔಟ್ ಡಾಕ್ಯುಮೆಂಟ್!

ಫೇಸ್‌ಬುಕ್‌ನಂತೆಯೇ ಗೂಗಲ್ ಕೂಡ ನಮ್ಮಲ್ಲಿ ಸಂಗ್ರಹಿಸಿದ ಎಲ್ಲ ಡೇಟಾವನ್ನು ಡೌನ್ಲೋಡ್ ಮಾಡಲು ಒಂದು ಆಯ್ಕೆಯನ್ನು ಒದಗಿಸುತ್ತದೆ. ಈ ಟೇಕ್ಔಟ್ ಡಾಕ್ಯುಮೆಂಟ್ ಎಲ್ಲಾ ನಮ್ಮ ಇಮೇಲ್‌ಗಳು ಬುಕ್ಮಾರ್ಕ್ಗಳು, ಸಂಪರ್ಕಗಳು, ಗೂಗಲ್ ಡ್ರೈವ್ ಫೈಲ್ಗಳು, ಗೂಗಲ್ನಿಂದ ನೀವು ತಂದ ಉತ್ಪನ್ನಗಳನ್ನು, ನೀವು ಡೌನ್ಲೋಡ್ ಮಾಡಿದ ಎಲ್ಲಾ ಚಿತ್ರಗಳನ್ನು ಹೊಂದಿರುತ್ತದೆ.

Best Mobiles in India

English summary
Google wants to know where you go so badly that it records your movements even when you explicitly tell it not to.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X