Subscribe to Gizbot

ಗೂಗಲ್ ನಿಂದ ಬಂಪರ್ ಆಫರ್: ಆಂಡ್ರಾಯ್ಡ್ ನಲ್ಲಿ ಬಗ್ ಕಂಡುಹಿಡಿಯಿರಿ 1.5 ಕೋಟಿ ಬಹುಮಾನ ಪಡೆಯಿರಿ

Written By:

ದೇಶ ವಿದೇಶದ ಲಕ್ಷಾಂತರ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿದ ವಾನ್ನಕ್ರೈ ಹಾಗೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ದಾಳಿ ನಡೆಸಿದ ಜುಡ್ಡು ವೈರಸ್ ದಾಳಿಯಿಂದ ಎಚ್ಚೆತ್ತುಕೊಂಡಿರುವ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ಡ್ ಓಎಸ್‌ನಲ್ಲಿ ಲೋಪ ಕಂಡುಹಿಡಿದವರಿಗೆ 2 ಲಕ್ಷ ಅಮೆರಿಕನ್ ಡಾಲರ್ ಎಂದರೆ ಒಂದುವರೆ ಕೋಟಿ ರೂ ಬಹುಮಾನವನ್ನು ನೀಡಲಿದೆಯಂತೆ.

ಆಂಡ್ರಾಯ್ಡ್ ನಲ್ಲಿ ಬಗ್ ಕಂಡುಹಿಡಿಯಿರಿ 1.5 ಕೋಟಿ ಬಹುಮಾನ ಪಡೆಯಿರಿ

ಪ್ಲೇ ಸ್ಟೋರಿನ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶಿಸಿದ್ದ ಜಡ್ಡು ವೈರಸ್ ಹಲವರು ದಿನಗಳಿಂದ ಆಂಡ್ರಾಯ್ಡ್‌ನಲ್ಲಿ ಉಳಿದು ಬಳಕೆದಾರಿಗೆ ತೊಂದರೆ ನೀಡುತ್ತಿತು, ಆದರೆ ಸದ್ಯ ಇದನ್ನು ಫ್ಲೇ ಸ್ಟೋರಿನಿಂದ ತೆಗೆದುಹಾಕಲಾಗಿದ್ದು, ಮುಂದೆ ಈ ರೀತಿಯಲ್ಲಿ ತೊಂದರೆಗಳು ಉಂಟಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಗೂಗಲ್ ಹೊಸ ಯೋಜನೆ ರೂಪಿಸಿದೆ.

ತನ್ನ ಬಳಕೆದಾರರನ್ನು ಹುರಿದುಂಬಿಸುವ ಸಲುವಾಗಿ ಮತ್ತು ಆಂಡ್ರಾಯ್ಡ್‌ನಲ್ಲಿರುವ ಬಗ್‌ಗಳನ್ನು ಹುಡುಕುವ ಸಲುವಾಗಿ ಯಾರು ಆಂಡ್ರಾಯ್ಡ್‌ನಲ್ಲಿ ಬಗ್‌ಗಳನ್ನು ಪತ್ತೇ ಹಚ್ಚಿ ಗೂಗಲ್‌ಗೆ ಮೊದಲು ತಿಳಿಸುತ್ತಾರೆಯೋ ಅವರಿಗೆ ಭರ್ಜರಿ ಬಹುಮಾನವನ್ನು ಘೋಷಣೆ ಮಾಡಿದೆ. ಇದರಿಂದಾದರು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ.

ಆಂಡ್ರಾಯ್ಡ್ ನಲ್ಲಿ ಬಗ್ ಕಂಡುಹಿಡಿಯಿರಿ 1.5 ಕೋಟಿ ಬಹುಮಾನ ಪಡೆಯಿರಿ

ಈಗಾಗಲೇ ಹೊಸ ಹೊಸ ಆವೃತ್ತಿಯ ಆಂಡ್ರಾಯ್ಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಗೂಗಲ್, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಸಲುವಾಗಿ ಈ ರೀತಿಯ ಕ್ರಮಕ್ಕೆ ಮುಂದಾಗಿ ತನ್ನ ತಪ್ಪುಗಳನ್ನು ತೋರಿಸಿದವರಿಗೆ ಗೌರವದೊಂದಿಗೆ ಬಹುಮಾನವನ್ನು ನೀಡಲಿದೆ.

ಇದಕ್ಕಾಗಿಯೇ ಬಗ್ ಬೊಂಟಿ ಪ್ರೋಗ್ರಾಮ್ ಅನ್ನು ಶುರು ಮಾಡಿದ್ದು, ಆಂಡ್ರಾಯ್ಡ್ ಹ್ಯಾಕ್ ಮಾಡುವವರು, ಸಕ್ಯೂರಿಟಿ ರಿಸರ್ಚ್ ನಡೆಸುವವರು ಈ ಹೊಸ ಘೋಷಣೆಯಿಂದ ಸ್ಪೂರ್ತಿಗೊಂಡು ತಪ್ಪು ಹುಡುಕುವ ಕೆಲಸಕ್ಕೆ ಮುಂದಾಗಲಿ ಎನ್ನುವುದು ಗೂಗಲ್ ಉದ್ದೇಶವಾಗಿದೆ.

Read more about:
English summary
Hoping to attract more researchers and engineers to the bug bounty programme by Google, has increased the rewards to up to $2,00,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot