ಗೂಗಲ್‌ನಿಂದ ಟಾಸ್ಕ್‌ಮೇಟ್‌ ಆಪ್‌ ಲಾಂಚ್‌! ಮನೆಯಿಂದಲೇ ಹಣ ಸಂಪಾದಿಸಿ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಹಲವು ಸೇವೆಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಅಪ್ಲಿಕೇಶನ್‌ ಪರಿಚಯಿಸಿರುವ ಗೂಗಲ್‌ ಇದೀಗ ಭಾರತದಲ್ಲಿ ಟಾಸ್ಕ್ ಮೇಟ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಅಪ್ಲಿಕೇಶನ್‌ನ ಮೂಲಕ, ಕಂಪನಿಯು ಬಳಕೆದಾರರಿಗೆ ಕೆಲವು ಕಾರ್ಯಗಳನ್ನು ಒದಗಿಸುತ್ತದೆ ಮತ್ತು ಈ ಕಾರ್ಯಗಳು ಪೂರ್ಣಗೊಂಡ ನಂತರ, ಅಪ್ಲಿಕೇಶನ್ ಬಳಕೆದಾರರಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಟಾಸ್ಕ್‌ಮೇಟ್‌ ಎನ್ನುವ ಹೊಸ ಅಪ್ಲಿಕೇಶನ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಈ ಅಪ್ಲಿಕೇಶನ್‌ ಬಳಸಿ ಬಳಕೆದಾರರು ಹಣವನ್ನು ಸಂಪಾದಿಸಬಹುದಾಗಿದೆ. ಇನ್ನು ಈ ಅಪ್ಲಿಕೇಶನ್ Google Play ಸ್ಟೋರ್‌ನಲ್ಲಿ ಲಭ್ಯವಿದೆ. ಆದಾಗ್ಯೂ, ಈ ಅಪ್ಲಿಕೇಶನ್ ಇನ್ನೂ ಬೀಟಾದಲ್ಲಿದೆ ಮತ್ತು ಹೊಸ ಬಳಕೆದಾರರು ಉಲ್ಲೇಖಿತ ಕೋಡ್‌ಗಳ ಬಳಕೆಯ ಮೂಲಕ ಮಾತ್ರ ಸೇರಲು ಸಾಧ್ಯವಾಗುತ್ತದೆ. ಇನ್ನು ಈ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಟಾಸ್ಕ್‌ಮೇಟ್‌

ಗೂಗಲ್‌ ಟಾಸ್ಕ್‌ಮೇಟ್‌ ಹೆಸರೇ ಸೂಚಿಸುವಂತೆ ಈ ಅಪ್ಲಿಕೇಶನ್‌ ಬಳಸಿ ಕೆಲವು ಟಾಸ್ಕ್‌ಗಳನ್ನ ಪೂರ್ತಿಗೊಳಿಸಿದರೆ ನಿಮೆ ಹಣ ಸಿಗಲಿದೆ. ಇನ್ನು ಅಪ್ಲಿಕೇಶನ್‌ನ ವಿವರಣೆಯಲ್ಲಿ, ಹೊಸ ಅಪ್ಲಿಕೇಶನ್ ಈ ಸಮಯದಲ್ಲಿ ಆಯ್ದ ಪರೀಕ್ಷಕರಿಗೆ ಮಾತ್ರ ಸೀಮಿತವಾಗಿದೆ ಎಂದು ಗೂಗಲ್ ಉಲ್ಲೇಖಿಸಿದೆ. ಬಳಕೆದಾರರು ರೆಫರಲ್ ಕೋಡ್ ಹೊಂದಿದ್ದರೆ ಮಾತ್ರ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಪ್ರಪಂಚದಾದ್ಯಂತದ ವ್ಯವಹಾರಗಳಿಂದ ಪೋಸ್ಟ್ ಮಾಡಲ್ಪಟ್ಟ ವಿವಿಧ ಸರಳ ಕಾರ್ಯಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಬಳಕೆದಾರರು

ಇನ್ನು ಬಳಕೆದಾರರು ಆಸಕ್ತಿ ಹೊಂದಿರುವ ಕಾರ್ಯಗಳಲ್ಲಿ ಭಾಗವಹಿಸಬಹುದು, ಅಥವಾ ಕಾರ್ಯಗಳನ್ನು ಬಿಟ್ಟುಬಿಡಲು ಆಯ್ಕೆ ಮಾಡಬಹುದು. ಅಪ್ಲಿಕೇಶನ್ ವಿವರಣೆಯ ಪ್ರಕಾರ, ಕೊಟ್ಟಿರುವ ಕಾರ್ಯಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಪೂರ್ಣಗೊಳಿಸಬಹುದು. ಬಳಕೆದಾರರ ಸ್ಥಳಕ್ಕೆ ಅನುಗುಣವಾಗಿ ಕಾರ್ಯಗಳನ್ನು ನಿಯೋಜಿಸಲಾಗುತ್ತದೆ. ಒಂದು ಸ್ಥಳಕ್ಕೆ ಹೋಗಿ ನಿರ್ದಿಷ್ಟ ಕಾರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಅಂದಾಜು ಸಮಯವನ್ನು ಸಹ Google ಒದಗಿಸುತ್ತದೆ. ನಿಮ್ಮ ಕಾರ್ಯವು ನಿಖರವಾಗಿ ಪೂರ್ಣಗೊಂಡ ನಂತರ, ಬಳಕೆದಾರರಿಗೆ ಅವರ ಸ್ಥಳೀಯ ಕರೆನ್ಸಿಯಲ್ಲಿ ಪಾವತಿಸಲಾಗುತ್ತದೆ.

ಗೂಗಲ್ ಟಾಸ್ಕ್ ಮೇಟ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಗೂಗಲ್ ಟಾಸ್ಕ್ ಮೇಟ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಟಾಸ್ಕ್ ಮೇಟ್ ಅಪ್ಲಿಕೇಶನ್ ಪ್ರಸ್ತುತ ಬೀಟಾದಲ್ಲಿದೆ ಮತ್ತು ಬಳಕೆದಾರರು ಅಪ್ಲಿಕೇಶನ್ ಬಳಸಲು ಅನುಮತಿಸಲು ಗೂಗಲ್ ಇನ್ವೈಟ್‌ ಆಧಾರಿತ ವ್ಯವಸ್ಥೆಯನ್ನು ಅವಲಂಬಿಸಿದೆ. ಒಮ್ಮೆ ನೀವು ಇನ್ವೈಟ್‌ ಪಡೆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೂರ್ಣಗೊಳಿಸಲು Google ನಿಮಗೆ ಸರಳ ಕಾರ್ಯಗಳನ್ನು ನೀಡುತ್ತದೆ. ಟಾಸ್ಕ್ ಮೇಟ್‌ನಲ್ಲಿ ಹೋಗಲು ಮೂರು ಹಂತಗಳಿವೆ. ನಿಮ್ಮ ಸ್ಥಳದ ಸಮೀಪವಿರುವ ಕಾರ್ಯಗಳಿಗಾಗಿ ನೀವು ಹುಡುಕುತ್ತೀರಿ ಮತ್ತು ನಂತರ ನಿಮ್ಮ ಗಳಿಕೆಯನ್ನು ಪ್ರಾರಂಭಿಸಿ. ನೀವು ಪ್ರತಿಫಲಗಳನ್ನು ಗಳಿಸಿದ ನಂತರ, ನೀವು ಅವುಗಳನ್ನು ಎನ್‌ಕ್ಯಾಶ್ ಮಾಡಬಹುದು. ಒಮ್ಮೆ ನೀವು ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಹಣಕ್ಕೆ ಗಮನಾರ್ಹವಾದ ಮೊತ್ತವನ್ನು ಹೊಂದಿದ್ದರೆ, ನೀವು ಪ್ರೊಫೈಲ್ ಪುಟಕ್ಕೆ ಹೋಗಿ ಕ್ಯಾಶ್ ಔಟ್ ಆಯ್ಕೆ ಮಾಡಬಹುದು. ಅಪ್ಲಿಕೇಶನ್ ನಂತರ ನಿಮ್ಮ ಇ-ವ್ಯಾಲೆಟ್ ಸೇವೆ ಅಥವಾ ನಿಮ್ಮ ಪಾಲುದಾರ ಬ್ಯಾಂಕ್‌ಗೆ ಮೊತ್ತವನ್ನು ವರ್ಗಾಯಿಸುತ್ತದೆ.

Best Mobiles in India

English summary
The Google Task Mate app is now available on Google Play and will pay users to do simple tasks on their smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X