Home
ಸುದ್ದಿಜಾಲ

ಗೂಗಲ್ ನೀಡಿರುವ ಒಂದು ಚಾಲೆಂಜ್ ಗೆದ್ದರೆ ಸಿಗುತ್ತೆ ಬರೋಬ್ಬರಿ 10.76 ಕೋಟಿ!

ನೀವು ಐಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಸರ್ಚ್ ಎಂಜಿನ್ ದೈತ್ಯ ಗೂಗಲ್ ನಿಮಗೊಂದು ಬಿಗ್ ಆಫರ್ ನೀಡಿದೆ. ಗೂಗಲ್ ನೀಡಿರುವ ಚಾಲೆಂಜ್ ಒಂದರಲ್ಲಿ ನೀವು ಗೆದ್ದರೆ ಬರೋಬ್ಬರಿ 10.76 ಕೋಟಿ ಬಹುಮಾನವನ್ನು ನಿಮ್ಮ ತೆಕ್ಕೆಗೆ ಹಾಕಿಕೊಳ್ಳಬಹುದಾಗಿದೆ.! ಹೌದು, ತನ್ನ ಬಳಕೆದಾರರ ಮಾಹಿತಿ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಯನ್ನು ಮೇಲೆರಿಸುವ ಬಹುದೊಡ್ಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಕಂಪೆನಿ ಮುಂದಾಗಿದ್ದು, ಇದಕ್ಕಾಗಿ 10.76 ಕೋಟಿ ಹಣವನ್ನು ಸ್ಪರ್ಧೆಯ ಮೂಲಕ ನೀಡುತ್ತಿದೆ.!

ಗೂಗಲ್ ಪಿಕ್ಸೆಲ್

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟು. ಗೂಗಲ್ ಒಡೆತನದ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಬೇಕು. ಹೀಗೆ ಹ್ಯಾಕ್ ಮಾಡಿದ ಯಾರಿಗಾದರೂ ಕಂಪನಿಯು 1.5 ಮಿಲಿಯನ್ ಡಾಲರ್ ಅಥವಾ 10.76 ಕೋಟಿ ಹಣವನ್ನು ಪಾವತಿಸಲಿದೆ. ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತ ಭದ್ರತೆ ಹೊಂದಿರುವ ಚಿಪ್ ಅನ್ನು ಪ್ರಬಲ ಚಿಪ್‌ಸೆಟ್ ಎಂದು ಗುರುತಿಸಲಾಗಿದ್ದು, ಇದನ್ನು ಮತ್ತಷ್ಟು ಶಕ್ತಿಯುತವಾಗಿರುವ ನಿಟ್ಟಿನಲ್ಲಿ ಗೂಗಲ್ ಇಂತಹದೊಂದು ಚಾಜೆಂಜ್ ಗೆದ್ದವರಿಗೆ ಭಾರೀ ಬಹುಮಾನವನ್ನು ಸಹ ಪ್ರಕಟಿಸಿದೆ.

ಗೂಗಲ್ ಪಿಕ್ಸೆಲ್

ಗೂಗಲ್ ಪಿಕ್ಸೆಲ್ ಸಾಧನಗಳಲ್ಲಿ ಕಂಡುಬರುವ ಎಂಟರ್‌ಪ್ರೈಸ್-ಗ್ರೇಡ್ ಸೆಕ್ಯುರಿಟಿ ಚಿಪ್ ಸಾಧನ ಮತ್ತು ಆಪರೇಟಿಂಗ್ ಸಿಸ್ಟಂನಲ್ಲಿ ಸೂಕ್ಷ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ನಿರ್ಮಿಸಲಾಗಿದೆ. ಇದನ್ನು ಗ್ರಾಹಕರ ಸುರಕ್ಷತೆಯನ್ನು ಹೆಚ್ಚು ಖಾತ್ರಿಗೊಳಿಸುವ ಪ್ರಬಲ ಸಾಧನ ಎಂದು ಕರೆಯಲಾಗಿದೆ. ಆದ್ದರಿಂದ ಇದನ್ನು ಹ್ಯಾಕ್ ಮಾಡಲು ಅಸಾಧ್ಯ ಎನ್ನುತ್ತಿವೆ ವರದಿಗಳು. ಆದರೆ, ಇಂತಹ ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವ ತಜ್ಞರು ನಮ್ಮ ಮಧ್ಯದಲ್ಲೇ ಇರುತ್ತಾರೆ. ಗೂಗಲ್ ತಂತ್ರಜ್ಞಾನ ಕೂಡ ಅಂತಿಮವಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಆಂಡ್ರಾಯ್ಡ್ ಓಎಸ್‌

ಆಂಡ್ರಾಯ್ಡ್ ಓಎಸ್‌ ಡೆವಲಪರ್ ಆವೃತ್ತಿಗಳಲ್ಲಿನ ನ್ಯೂನತೆಗಳನ್ನು ಹ್ಯಾಕ್ ಮಾಡುವ ಅಥವಾ ಎತ್ತಿ ತೋರಿಸುವ ವ್ಯಕ್ತಿಗಳಿಗೆ ಗೂಗಲ್ ಪ್ರತಿವರ್ಷ ಬಗ್ ಬೌಂಟಿ ಕಾರ್ಯಕ್ರಮದಡಿಯಲ್ಲಿ ಬಹುಮಾನ ನೀಡುತ್ತಿದೆ. ಗೂಗಲ್ ತನ್ನ ಬಗ್ ಬೌಂಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೂ 4 ಮಿಲಿಯನ್ ಡಾಲರ್‌ಗಳನ್ನು ಇಂತಹ ತಂತ್ರಜ್ಞರಿಗೆ ಪಾವತಿಸಿರುವುದಾಗಿ ತಿಳಿಸಿದೆ. ಭಾರತದ ಕೆಲ ಐಟಿ ತಂತ್ರಜ್ಞರು ಕೂಡ ಗೂಗಲ್ ನೂನ್ಯತೆಯನ್ನು ಎತ್ತಿ ತೋರಿಸಿ ಬಗ್ ಬೌಂಟಿ ಮೂಲಕ ಲಕ್ಷಾಂತಹ ಬಹುಮಾನ ಪಡೆದಿರುವುದನ್ನು ನಾವು ನೋಡಬಹುದು.

ಲೋಪದೋಷ

ವ್ಯಾಪಾರ ಹಾಗು ಉದ್ಯಮಗಳನ್ನು ನಡೆಸಲು ಬೇಕಿರುವ, ಅವಶ್ಯಕವಿರುವ ವೆಬ್ಸೈಟುಗಳು, ತಂತ್ರಾಂಶಗಳಲ್ಲಿ ಇರುವ ಅನೇಕ ಲೋಪದೋಷಗಳನ್ನು ಹುಡುಕಲು ಸಾಕಷ್ಟು ಖರ್ಚಾಗುತ್ತದೆ. ಹಲವು ತಂತ್ರಜ್ಞರ ಮೇಲೆ ಉದ್ಯಮಗಳು ಹಣ ಹೂಡಬೇಕಾಗುತ್ತದೆ. ಇದರಿಂದ ಖರ್ಚು ವಿಪರೀತ ಬರುತ್ತದೆ. ಕೆಲವೊಮ್ಮೆ ಅದೆಷ್ಟು ಖರ್ಚು ಮಾಡಿದರೂ ಎಲ್ಲ ಲೋಪದೋಷಗಳನ್ನು ಸರಿಪಡಿಸುವುದು ಎಷ್ಟೇ ತಜ್ಞರಿದ್ದರೂ ಸಾಧ್ಯವಾಗದ ಮಾತು ಎಂಬಂತಿರುತ್ತದೆ. ಹೀಗೆ ಇರುವಾಗ ಕಂಪೆನಿಗಳು "ಬಗ್ ಬೌಂಟಿ" ಎನ್ನುವ ಯೋಜನೆ ಮೊರೆ ಹೋಗುತ್ತಾರೆ.

Best Mobiles in India

English summary
Google is also offering other rewards for individuals who can hack or point out flaws in developer versions of the Android OS.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+