ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್‌ಗಳಿಗೆ ಗೆಟ್‌ಪಾಸ್‌ ನೀಡಲು ಮುಂದಾದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಬಿಗ್‌ ಶಾಕ್‌ ನೀಡಿದೆ. ಇದೇ ಮೇ 11ರಿಂದ ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡಲು ಮುಂದಾಗಿದೆ. ಅಂದರೆ ನಿಮ್ಮ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡಲು ಗೂಗಲ್‌ ನಿರ್ಧರಿಸಿದೆ. ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲು ಆಂಡ್ರಾಯ್ಡ್‌ನ ಪ್ರವೇಶಿಸುವಿಕೆ ಸೆಟ್ಟಿಂಗ್‌ಗಳಲ್ಲಿ ತನ್ನ ಡೆವಲಪರ್ ನೀತಿಗಳನ್ನು ಅಪ್ಡೇಟ್‌ ಮಾಡಲು ಗೂಗಲ್‌ ಮುಂದಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನ ಹೊಸ ನೀತಿಯ ಪ್ರಕಾರ ದೂರದಿಂದಲೇ ಕರೆಗಳನ್ನು ರೆಕಾರ್ಡ್ ಮಾಡುವ ಯಾವುದೇ ಅಪ್ಲಿಕೇಶನ್ ಅನ್ನು ಅನುಮತಿಸುವುದಿಲ್ಲ ಎಂದು ಗೂಗಲ್‌ ಹೇಳಿದೆ. ಕೆಲವು ಸಮಯದಿಂದ ಆಂಡ್ರಾಯ್ಡ್‌ನಲ್ಲಿ ಕಾಲ್‌ ರೆಕಾರ್ಡಿಂಗ್ ಅನ್ನು ನಿಲ್ಲಿಸಲು ಗೂಗಲ್ ಮುಂದಾಗಿದೆ. ಅದರಂತೆ ಇದೀಗ ಗೂಗಲ್‌ ಹೊಸ ಹೆಜ್ಜೆಯನ್ನು ಇಟ್ಟಿದೆ. ಇದಕ್ಕಾಗಿ ಗೂಗಲ್‌ ಮೈಕ್ರೊಫೋನ್‌ನಲ್ಲಿ ಇನ್-ಕಾಲ್ ಆಡಿಯೊ ರೆಕಾರ್ಡಿಂಗ್ ಅನ್ನು ತೆಗೆದುಹಾಕಿದೆ. ಹಾಗಾದ್ರೆ ಗೂಗಲ್‌ ಕಾಲ್‌ ರೆಕಾರ್ಡಿಂಗ್‌ ಅನ್ನು ಸ್ಟಾಪ್‌ ಮಾಡಲು ಮುಂದಾಗಿರೋದು ಯಾಕೆ ಅನನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಂಡ್ರಾಯ್ಡ್‌

ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡುವುದಕ್ಕೆ ಗೂಗಲ್‌ ಮುಂದಾಗಿದೆ. ಇದಕ್ಕಾಗಿ ಗೂಗಲ್‌ ಪ್ಲೇ ಸ್ಟೋರ್‌ನ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆ. ಆಂಡ್ರಾಯ್ಡ್‌ನ ಆಕ್ಸೆಸಿಬಿಲಿಟಿ ನೀತಿಯನ್ನು ಅಪ್ಡೇಟ್‌ ಮಾಡಲಿದೆ. ಅದರಂತೆ ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಅನುಮತಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. ಇನ್ನು ರೆಕಾರ್ಡಿಂಗ್ ಅಪ್ಲಿಕೇಶನ್‌ಗೆ ಪ್ರವೇಶವಿಲ್ಲದೆ, ಲೋಕಲ್‌ ಕಾಲ್‌ ರೆಕಾರ್ಡಿಂಗ್ ಮಾಡುವುದಕ್ಕೆ ಇನ್ಮುಂದೆ ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೇ 11 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಗೂಗಲ್‌ ವಿವರಿಸಿದೆ.

ವಿವಿಧ

ಇದಲ್ಲದೆ ವಿವಿಧ ದೇಶಗಳಲ್ಲಿನ ಕಾಲ್‌ ರೆಕಾರ್ಡಿಂಗ್ ಕಾನೂನುಗಳು ಕೂಡ ಈ ನಿಯಮವನ್ನು ಜಾರಿಗೊಳಿಸುವುದಕ್ಕೆ ಕಾರಣವಾಗಿದೆ. ಸದ್ಯ ಟ್ರೂ ಕಾಲರ್‌ ನಂತಹ ಅಪ್ಲಿಕೇಶನ್‌ಗಳು ಪ್ರಸ್ತುತ ಆಂಡ್ರಾಯ್ಡ್‌ನಲ್ಲಿ ಕಾಲ್‌ ರೆಕಾರ್ಡಿಂಗ್ ಫೀಚರ್ಸ್‌ ಅನ್ನು ಹೊಂದಿವೆ. ಆಂಡ್ರಾಯ್ಡ್‌10 ನಲ್ಲಿ ಈ ಅಪ್ಲಿಕೇಶನ್‌ ಅನ್ನು ಬಳಸಬಹುದಾಗಿರುವುದರಿಂದ ನೀವು ಕಾಲ್‌ ರೆಕಾರ್ಡಿಂಗ್‌ ಅನ್ನು ಮುಂದುವರೆಸಬಹುದಾಗಿದೆ. ಏಕೆಂದರೆ ಗೂಗಲ್‌ನ ಹೊಸ ಹೊಸ ಕರೆ ರೆಕಾರ್ಡಿಂಗ್ ನಿರ್ಬಂಧಗಳನ್ನು ಇತ್ತೀಚಿನ ಆಂಡ್ರಾಯ್ಡ್‌ 12-ಚಾಲಿತ ಫೋನ್‌ಗಳಿಗೆ ಮಾತ್ರ ಹೊರತರಲಾಗುತ್ತದೆ ಎಂದ ಹೇಳಲಾಗಿದೆ. ಒಂದು ವೇಳೆ ಗೂಗಲ್‌ನ ಪ್ಲೇ ಸ್ಟೋರ್‌ನ ಹೊಸ ನಿಯಮ ಆಂಡ್ರಾಯ್ಡ್‌ 10 ಮತ್ತು ಆಂಡ್ರಾಯ್ಡ್‌ 11 ಡಿವೈಸ್‌ಗಳಲ್ಲಿಯೂ ಜಾರಿಗೆ ಬಂದರೆ ಟ್ರೂ ಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ.

ಸ್ಯಾಮ್‌ಸಂಗ್‌

ಆದರೆ ಈ ಬದಲಾವಣೆಯಿಂದ ಅಂತರ್ನಿರ್ಮಿತ ಅಪ್ಲಿಕೇಶನ್‌ಗಳು ಪರಿಣಾಮ ಬೀರುವುದಿಲ್ಲ. ಅಂದರೆ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಶಿಯೋಮಿ ಮತ್ತು ಒಪ್ಪೋ ಕಂಪನಿಗಳು ನೀಡುವ ಇನ್-ಬಿಲ್ಟ್ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ. ಸದ್ಯ ಈ ಬದಲಾವಣೆಗೆ ಸಂಬಂಧಿಸಿದಂತೆ, ಈ ನೀತಿಯನ್ನು ಗೂಗಲ್‌ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಕೇವಲ ಫೋನ್‌ನಲ್ಲಿ ಮಾತ್ರ ಕಾಲ್‌ ರೆಕಾರ್ಡಿಂಗ್‌ ಅನ್ನು ನಿರ್ಬಂಧಿಸುತ್ತದೆಯೇ ಅಥವಾ ತಮ್ಮ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ಅಪ್ಲಿಕೇಶನ್ ಡೆವಲಪರ್‌ಗಳಿಗೆ ಹೇಳುತ್ತದೆಯೆ ಎನ್ನುವುನ್ನು ಗೂಗಲ್‌ ಇನ್ನು ದೃಢೀಕರಿಸಿಲ್ಲ. ಸದ್ಯ ಈ ಹೊಸ ನಿಯಮ ಇದೇ ಮೇ 11ರಿಂದ ಜಾರಿಗೆ ಬರಲಿದ್ದು, ಗೂಗಲ್‌ ಈ ನಿಯಮವನ್ನು ಹೇಗೆ ಜಾರಿಗೊಳಿಸಲಿದೆ ಎನ್ನುವುದು ತಿಳಿಯಲಿದೆ.

Best Mobiles in India

English summary
Google will soon remove call recording apps from Play Store

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X