ಆಧಾರ್ ಪೇಮೆಂಟ್ ಬಳಕೆ ಮುನ್ನ ಎಚ್ಚರ!..ಆಧಾರ್ ಮಾಹಿತಿ ಸೋರಿಕೆಯಾಗಿದೆ!!

Written By:

ಅತ್ಯಮೂಲ್ಯ ದಾಖಲೆ ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆಯಾಗಿವೆ ಎಂಬ ಪತ್ರಿಕಾ ವರದಿಗಳ ಬೆನ್ನಲ್ಲೇ ಇದೀಗ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿದೆ.! ಇದರಿಂದ ಸರ್ಕಾರದ ಬಳಿ ಇದ್ದ ಜನರ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆ ಎಂಬುದು ನಿಚ್ಚಳವಾಗಿದೆ.!!

ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

ಈವರೆಗೂ ಆಧಾರ್‌ ಕಾರ್ಡ್‌ ಪಡೆದುಕೊಳ್ಳಲು ನಾಗರಿಕರು ನೀಡಿರುವ ಮಾಹಿತಿ ಸೋರಿಕೆಯಾಗಬಹುದು ಎಂಬ ಎಚ್ಚರಿಕೆಗಳನ್ನು ಸರ್ಕಾರ ಕಡೆಗಣಿಸುತ್ತಲೇ ಬಂದಿತ್ತು. ಆದರೆ, ತಜ್ಞರೊಬ್ಬರು ಬರೆದಿರುವ ಪತ್ರವೊಂದು ಬಹಿರಂಗವಾಗಿದ್ದು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಈ ಪತ್ರದ ಪ್ರತಿಯೊಂದನ್ನು ಪ್ರಕಟಿಸಿದೆ.!! ಹಾಗಾದರೆ, ಆಧಾರ್‌ಮಾಹಿತಿ ಸೋರಿಕೆಯಾಗದ ವಿಷಯ ತಿಳಿದಿದ್ದು ಹೇಗೆ? ಮತ್ತು ಇದರಿಂದ ಆಗಬಹುದಾದ ಅನಾಹುತಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಚನಾ ದುರೇಜಾ ಪತ್ರ!!

ಅರ್ಚನಾ ದುರೇಜಾ ಪತ್ರ!!

ಸರ್ಕಾರದ ನಾನಾ ಇಲಾಖೆಗಳು ಹಾಗೂ ಸಚಿವಾಲಯಗಳು ಸಂಗ್ರಹಿಸಿರುವ ಜನರ ಆಧಾರ್‌ ಕಾರ್ಡ್ ನಂಬರ್, ಬ್ಯಾಂಕ್‌ ಅಕೌಂಟ್ ವಿವರಗಳು ಸೋರಿಕೆಯಾಗಿವೆ. ಅವುಗಳೀಗ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಇಲಾಖೆಯ ತಜ್ಞೆ ಅರ್ಚನಾ ದುರೇಜಾ ಪತ್ರವೊಂದನ್ನು ಬರೆದಿದ್ದಾರೆ.

ಎಲ್ಲೆಲ್ಲಿಯೂ ಆಧಾರ!!

ಎಲ್ಲೆಲ್ಲಿಯೂ ಆಧಾರ!!

ಆಧಾರ್‌ ಕಾರ್ಡ್‌ ಜತೆ ಜೋಡಿಸಿಕೊಟ್ಟುಕೊಂಡಿರುವ ಬ್ಯಾಂಕ್‌ ಅಕೌಂಟ್‌ಳ ಸುರಕ್ಷತೆ, ಹಣ ಪಾವತಿ ಪಾವತಿ ಸೇರಿದಂತೆ ಸಿಮ್‌ ಕಾರ್ಡ್ ಪಡೆದುಕೊಳ್ಳಲು ಆಧಾರ್ ನಂಬರ್ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿತ್ತು. ಹಾಗಾಗಿ, ಆಧಾರ್ ಮಾಹಿತಿ ಸೋರಿಕೆ ಇವೆಲ್ಲವಕ್ಕೂ ತೊಂದರೆಯಾಗಿದೆ.

ಪೇಮೆಂಟ್ ವ್ಯವಸ್ಥೆಗೆ ದಕ್ಕೆ.?

ಪೇಮೆಂಟ್ ವ್ಯವಸ್ಥೆಗೆ ದಕ್ಕೆ.?

ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆಯಾಗಿರುವುದರಿಂದ ಆಧಾರ್ ಪೇಮೆಂಟ್ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಬಯೋಮೆಟ್ರಿಕ್ ವ್ಯವಸ್ಥೆಯ ಮೇಲೆ ಇದರಿಂದ ಹೆಚ್ಚು ಪರಿಣಾಮ ಭೀರಲಿದ್ದು, ಸೈಬರ್ ಕ್ರಿಮಿನಲ್‌ಗಳು ಜನರನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚಿರುತ್ತದೆ.!!

ಸರ್ಕಾರದ ಮುಂದಿನ ನಡೆಯೇನು?

ಸರ್ಕಾರದ ಮುಂದಿನ ನಡೆಯೇನು?

ಸರ್ಕಾರದ ಎಲ್ಲಾ ಯೋಜನೆಗಳನ್ನು ಆಧಾರ್ ಮೂಲಕವೇ ನಡೆಸುವ ಚಿಂತನೆಯನ್ನು ಸರ್ಕಾರ ಹೊಂದಿದ್ದು, ಈ ಘಟನೆಯ ನಂತರ ಸರ್ಕಾರ ಮುಂದೆಯಾವ ನಿರ್ಧರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
chances are that your data is no longer secure.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot