ನಿಮ್ಮ ಫೋನ್ ಕಳೆದು ಹೋದರೆ ಸರ್ಕಾರದ ಈ ಹೊಸ ಪೋರ್ಟಲ್ ಬಳಸಿ

By Gizbot Bureau
|

ಭಾರತ ಸರ್ಕಾರವು ಇನ್ನು ಮುಂದೆ ನಿಮ್ಮ ಕಳೆದು ಹೋದ ಫೋನ್ ಹುಡುಕುವುದಕ್ಕೆ ಸಹಾಯ ಮಾಡುತ್ತದೆ. ಕೇಂದ್ರ ಟೆಲಿಕಾಂ ಸಚಿವರಾಗಿರುವ ರವಿಶಂಕರ್ ಪ್ರಸಾದ್ ಹೊಸ ವೆಬ್ ಸೈಟ್ ವೊಂದನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ನೀವು ನಿಮ್ಮ ಕಳೆದು ಹೋದ ಫೋನಿನ ಬಗ್ಗೆ ವರದಿ ಮಾಡಬಹುದು. ಸದ್ಯಕ್ಕೆ ಈ ವೆಬ್ ಸೈಟ್ ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಂದರೆ ಪ್ರಾರಂಭಿಕ ಟೆಸ್ಟಿಂಗ್ ಕೆಲಸವನ್ನು ನಡೆಸಲು ಕೇಂದ್ರ ಸರ್ಕಾರ ಮಹಾರಾಷ್ಟ್ರ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದೆ.

ಸಿಇಐಆರ್

2017 ರಲ್ಲೇ ಈ ತಂತ್ರಜ್ಞಾನವನ್ನು ಬಿಡುಗಡೆಗೊಳಿಸುವ ಬಗ್ಗೆ ಟೆಲಿಕಮ್ಯುನಿಕೇಷನ್ ಸಂಸ್ಥೆ ಪ್ರಕಟಣೆ ನೀಡಿತ್ತು.ಇದೀಗ ಡಾಟ್ ಸೆಂಟ್ರಲ್ ಇಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಅಂದರೆ ಕೇಂದ್ರ ಸಲಕರಣೆ ಗುರುತಿನ ನೊಂದಣಿಯನ್ನು ಅಭಿವೃದ್ಧಿಪಡಿಸಿದ್ದು ಮೊಬೈಲ್ ಡಿವೈಸ್ ಗಳಿಗೆ ಸಂಬಂಧಿಸಿದ ಬಿಲಿಯನ್ ಗಟ್ಟಲೆ ಇಎಂಇಐಗಳಿಗೆ ಕೇಂದ್ರೀಯ ಡಾಟಾಬೇಸ್ ನ್ನು ಪರಿಚಯಿಸಲಾಗುತ್ತದೆ.

ಕಳೆದು ಹೋದ ಮೊಬೈಲ್ ಫೋನ್ ಭಾರತ ಸರ್ಕಾರ ಹೇಗೆ ಟ್ರ್ಯಾಕ್ ಮಾಡುತ್ತದೆ?

ಕಳೆದು ಹೋದ ಮೊಬೈಲ್ ಫೋನ್ ಭಾರತ ಸರ್ಕಾರ ಹೇಗೆ ಟ್ರ್ಯಾಕ್ ಮಾಡುತ್ತದೆ?

15 ಸಂಖ್ಯೆಗಳಿರುವ ವಿಶೇಷ ಗುರುತಿನ ನಂಬರ್ ಇದನ್ನು ಇಂಟರ್ನ್ಯಾಷನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ( ಅಂತರಾಷ್ಟ್ರೀಯ ಮೊಬೈಲ್ ಸಲಕರಣೆಗಳ ಗುರುತು)ನ್ನು ಕಳೆದು ಹೋದ ಡಿವೈಸ್ ನ್ನು ಟ್ರ್ಯಾಕ್ ಮಾಡುವುದಕ್ಕೆ ಬಳಸಲಾಗುತ್ತದೆ. ಒಂದು ವೇಳೆ ನೀವು ನಿಮ್ಮ ಡಿವೈಸ್ ನ್ನು ಕಳೆದುಕೊಂಡರೆ ಮೊದಲಿಗೆ ಡಾಟ್ ನಲ್ಲಿ ದೂರನ್ನು ದಾಖಲಿಸಬೇಕು. ಅದನ್ನು ಮಾಡುವುದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆ 14422 ಕ್ಕೆ ಕರೆ ಮಾಡಬೇಕು. ಇಲ್ಲಿ ಒಮ್ಮೆ ಪೋಲೀಸ್ ದೂರು ದಾಖಲಾದ ನಂತರ ಡಾಟ್ ನಿಮ್ಮ ಐಎಂಇಐ ಸಂಖ್ಯೆಯನ್ನು ಗುರುತಿಸುತ್ತದೆ ಮತ್ತು ಬ್ಲ್ಯಾಕ್ ಲಿಸ್ಟ್ ಮಾಡುತ್ತದೆ.

ಮೊಬೈಲ್ ನೆಟ್ ವರ್ಕ್

ಇದು ನಿಮ್ಮ ಮೊಬೈಲ್ ಯಾರದ್ದೇ ಕೈಗೆ ಸಿಕ್ಕಿದರೂ ಕೂಡ ಅದನ್ನು ಬಳಸಲು ಅಸಾಧ್ಯವಾಗುವಂತೆ ಮಾಡಲಾಗುತ್ತದೆ.ಅಂದರೆ ಅವರು ಮೊಬೈಲ್ ಮೂಲಕ ಯಾವುದೇ ಮೊಬೈಲ್ ನೆಟ್ ವರ್ಕ್ ನ್ನು ಕೂಡ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಕಳೆದು ಹೋದ ಫೋನ್

ಈ ಹೊಸ ಪ್ರಕಟಣೆಯು ನಿಮ್ಮ ಕಳೆದು ಹೋದ ಫೋನ್ ಪುನಃ ಸಿಕ್ಕೇ ಸಿಗುತ್ತದೆ ಎಂಬ ಗ್ಯಾರೆಂಟಿಯನ್ನು ಕೊಡುವುದಿಲ್ಲ. ಆದರೆ, ಕಳ್ಳರು ನಿಮ್ಮ ಮೊಬೈಲ್ ನ್ನು ಮೂರನೇ ವ್ಯಕ್ತಿಗಳಿಗೆ ಮಾರುವುದು ಅಥವಾ ಸ್ವತಃ ಅವರೇ ಬಳಸುವುದಕ್ಕೆ ಅಸಾಧ್ಯಗೊಳಿಸುವಂತೆ ಮಾಡುವುದಕ್ಕೆ ನೆರವು ನೀಡುತ್ತದೆ ಮತ್ತು ನಿಮ್ಮ ವಯಕ್ತಿಕ ಡಾಟಾಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ.

ವೆಬ್ ಸೈಟ್ ಲೈವ್

ಡಾಟ್ ತಿಳಿಸಿರುವಂತೆ ನಿಮ್ಮ ಸೆಲ್ ಫೋನ್ ಆಪರೇಟರ್ ಕೂಡ ಇದೇ ಐಎಂಇಐ ಸಂಖ್ಯೆಯನ್ನು ಬಳಸಿ ನಿಮ್ಮ ಫೋನ್ ನ್ನು ಬ್ಲ್ಯಾಕ್ ಲಿಸ್ಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ವೆಬ್ ಸೈಟ್ ಲೈವ್ ಆದ ನಂತರ ಹೇಗೆ ನೀವು ನಿಮ್ಮ ಕಳೆದು ಹೋದ ಫೋನ್ ನ್ನು ಪುನಃ ಪಡೆಯಬಹುದು ಎಂಬ ಬಗೆಗಿನ ವಿವರಣೆಯನ್ನು ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಸಿಇಐಆರ್

ಸಿಇಐಆರ್ ನಲ್ಲೂ ಕೂಡ ಜಿಎಸ್ಎಂಎ ವಿಶ್ವದಾದ್ಯಂತ ಐಎಂಇಐ ಡಾಟಾಬೇಸ್ ಮತ್ತು ಐಎಂಇಐ ಸಂಖ್ಯೆಯನ್ನು ಟ್ರ್ಯಾಕ್ ಮಾಡಿ ನಕಲಿ ಸಾಧನಗಳನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಜಿಎಸ್ಎಂಎ ಗ್ಲೋಬಲ್ ಟ್ರೇಡ್ ಬಾಡಿಯಾಗಿದ್ದು ಜಗತ್ತಿನಾದ್ಯಂತದ ಮೊಬೈಲ್ ನೆಟ್ ವರ್ಕ್ ಆಪರೇಟರ್ ಗಳನ್ನು ಪ್ರತಿನಿಧಿಸುತ್ತದೆ.

ಡಾಟ್ ಮತ್ತು ಜಿಎಸ್ಎಂಎ ನಡುವಿನ ಸಹಭಾಗಿತ್ವ ಅಂದರೆ ನಿಮ್ಮ ಕಳೆದು ಹೋದ ಫೋನ್ ನ್ನು ವಿಶ್ವದಾದ್ಯಂತ ಟ್ರ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಕದಿಯಲ್ಪಟ್ಟ ಡಿವೈಸ್ ನ್ನು ಆಕ್ಟಿವೇಟ್ ಮಾಡುವುದಕ್ಕೆ ಯಾರೇ ಪ್ರಯತ್ನಿಸಿದರೂ ಕೂಡ ಟೆಲಿಕಾಂ ಆಪರೇಟರ್ ಅದನ್ನು ಗುರುತಿಸುತ್ತಾರೆ ಮತ್ತು ಹೊಸ ಬಳಕೆದಾರರ ಬಗ್ಗೆ ಪೋಲೀಸರಿಗೆ ಅಲರ್ಟ್ ನೀಡುತ್ತಾರೆ.ಲೈವ್ ಮಿಂಟ್ ಹೇಳುವ ಪ್ರಕಾರ ಇದು ಕಳೆದು ಹೋದ ಡಿವೈಸ್ ನ್ನು ಟ್ರೇಸ್ ಮಾಡುವುದಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಬಿಎಸ್ಎನ್ಎಲ್, ರಿಲಯನ್ಸ್ ಜಿಯೋ, ಭಾರತೀ ಏರ್ ಟೆಲ್ ಮತ್ತು ವಡಾಫೋನ್ ಐಡಿಯಾ ಲಿಮಿಟೆಡ್ ಕಳೆದು ಹೋದ ಡಿವೈಸ್ ಗಳನ್ನು ಪುನಃ ಹುಡುಕುವ ನಿಟ್ಟಿನಲ್ಲಿ ಡಾಟ್ ಗೆ ಸಹಾಯ ಮಾಡಲಿವೆ.

ಸರ್ಕಾರದ ಯೋಜನೆ

ಒಟ್ಟಿನಲ್ಲಿ ಸರ್ಕಾರದ ಈ ಯೋಜನೆಯಿಂದಾಗಿ ನಿಮ್ಮ ಡಿವೈಸ್ ಗೂ ಕೂಡ ಭದ್ರತೆ ಲಭ್ಯವಾದಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲೂ ಇದರ ಸದುಪಯೋಗವನ್ನು ಜನರು ಪಡೆಯಬಹುದಾಗಿದೆ.

Best Mobiles in India

Read more about:
English summary
Government launches portal to help find lost or stolen phones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X