ಭಾರತದಲ್ಲಿ 67 ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳು ನಿಷೇಧ: ಇಲ್ಲಿದೆ ಮಾಹಿತಿ!

|

ವಯಸ್ಕರ ಚಿತ್ರ(ನೀಲಿ)ಗಳನ್ನು ವೀಕ್ಷಿಸುವವರಿಗೆ ಭಾರತ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ಭಾರತದಲ್ಲಿ ವಯಸ್ಕರ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ 67 ವಯಸ್ಕ ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಿದೆ. ಭಾರತದ ಮಾಹಿತಿ ತಂತ್ರಜ್ಞಾನ (IT) ನಿಯಮಗಳು 2021 ಅನ್ನು ಉಲ್ಲಂಘಣೆ ಮಾಡಿರುವುದರಿಂದ ಈ ಕ್ರಮತೆಗೆದುಕೊಳ್ಳಲಾಗಿದೆ. ಆದರಿಂದ ಭಾರತದಲ್ಲಿ ನಿಷೇಧಿತ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸುವಂತೆ ದೂರಸಂಪರ್ಕ ಇಲಾಖೆಯು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP ಗಳಿಗೆ) ಆದೇಶವನ್ನು ನೀಡಿದೆ.

ವಯಸ್ಕರ

ಹೌದು, ಭಾರತದಲ್ಲಿ ವಯಸ್ಕರ ಚಿತ್ರವನ್ನು ಪ್ರಸಾರ ಮಾಡುವ 67 ವಯಸ್ಕ ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ 63 ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳನ್ನು ಪುಣೆ ನ್ಯಾಯಾಲಯ ಬ್ಯಾನ್‌ ಮಾಡಿ ಆದೇಶ ನೀಡಿದ್ದರೆ, ಉತ್ತರಾಖಂಡ ಹೈಕೋರ್ಟ್‌ನ ಆದೇಶದ ಮೇರೆಗೆ 4 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ಒಟ್ಟು 67 ವಯಸ್ಕ ವೆಬ್‌ಸೈಟ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ. ಅಷ್ಟಕ್ಕೂ ಪೊರ್ನ್‌ ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಯಸ್ಕರ

ಭಾರತದಲ್ಲಿ 67 ವಯಸ್ಕರ ವೆಬ್‌ಸೈಟ್‌ಗಳನ್ನು ನಿಷೇದಿಸಲಾಗಿದೆ. ದೇಶದ ಮಾಹಿತಿ ತಂತ್ರಜ್ಞಾನದ ನಿಯಮಗಳು, 2021ಕ್ಕೆ ದಕ್ಕೆ ತರುತ್ತಿರುವ ನಿಟ್ಟಿನಲ್ಲಿ ಈ ಸೈಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಸದ್ಯ ಬ್ಯಾನ್‌ ಆಗಿರುವ ಪೊರ್ನ್‌ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ವಿಡಿಯೋಗಳು ಮಹಿಳೆಯರ ನಮ್ರತೆಗೆ ಕಳಂಕ ತರುತ್ತದೆ ಎಂದು ಹೇಳಲಾಗಿದೆ. ವೀಡಿಯೊಗಳ ಭಾಗವಾಗಿರುವ ಜನರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಸರ್ಕಾರವು ವೆಬ್‌ಸೈಟ್‌ಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಿಲ್ಲ.

ಭಾರತದ

ಇನ್ನು ಭಾರತದ ಐಟಿ ನಿಯಮಗಳು 2021 ರ ಪ್ರಕಾರ ಇಂಟರ್‌ನೆಟ್ ಸೇವಾ ಪೂರೈಕೆದಾರರು ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ಹಿಂತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದರಲ್ಲಿ ಪೋಸ್ಟ್‌ ಮಾಡಿದ ವಿಷಯವು ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯಲ್ಲಿ ಅಂತಹ ವ್ಯಕ್ತಿಯನ್ನು ತೋರಿಸುತ್ತದೆ ಅಥವಾ ಚಿತ್ರಿಸುತ್ತದೆ ಎಂದು ಕಂಡುಬಂದರೆ ಅದನ್ನು ಹಿಂತೆಗೆದುಕೊಳ್ಳಬೇಕು. ಇದನ್ನು ಉಲ್ಲಂಘಿಸಿರುವುದರಿಂದ ಭಾರತದಲ್ಲಿ 67 ವಯಸ್ಕ ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿದೆ.

ಚಿತ್ರಗಳ

ಭಾರತದಲ್ಲಿ ವಯಸ್ಕರ ಚಿತ್ರಗಳ ವೆಬ್‌ಸೈಟ್‌ಗಳನ್ನು ಬ್ಯಾನ್‌ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅಶ್ಲಿಲತೆಯನ್ನು ಪ್ರತಿಬಿಂಬಿಸುವ ಹಲವು ಸೈಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಆದರೂ ಕೂಡ ವಯಸ್ಕರ ಚಿತ್ರಗಳ ವೆಬ್‌ಸೈಟ್‌ಗಳು ಹೊಸ ರೂಪದಲ್ಲಿ ಎಂಟ್ರಿ ನೀಡುತ್ತಲೇ ಬಂದಿವೆ. ಅದರಂತೆ ಭಾರತದಲ್ಲಿ ಇದೀಗ ಬ್ಯಾನ್‌ ಆಗಿರುವ 67 ವಯಸ್ಕ ವೆಬ್‌ಸೈಟ್‌ಗಳು ಸೇರಿ ಇಲ್ಲಿಯವರೆಗೆ ಬ್ಯಾನ್‌ ಆಗಿರುವ ಪೊರ್ನ್‌ ವೆಬ್‌ಸೈಟ್‌ಗಳ ಸಂಖ್ಯೆ 867ಕ್ಕೆ ತಲುಪಿದೆ.

ಭಾರತ

ಅಂದರೆ ಭಾರತ ಸರ್ಕಾರ 2015 ರಲ್ಲಿ, ವಯಸ್ಕರ ವೆಬ್‌ಸೈಟ್‌ಗಳ ಮೇಲೆ ಬ್ಯಾನ್‌ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮ 800 ಅಶ್ಲೀಲ ವೆಬ್‌ಸೈಟ್‌ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಈ ಬ್ಯಾನ್‌ ಆದೇಶದ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯು ಕೂಡ ಕಾರಣವಾಗಿತ್ತು. ಆದರೆ ನ್ಯಾಯಾಲಯವು ವಯಸ್ಕರ ವೆಬ್‌ಸೈಟ್‌ ಬ್ಯಾನ್‌ ಮಾಡುವುದಕ್ಕೆ ಸ್ಪಷ್ಟವಾಗಿ ಆದೇಶಿಸದಿದ್ದರೂ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೈಟ್‌ಗಳನ್ನು ತೆಗೆದುಹಾಕಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶ ನೀಡಿದ್ದರು.

ಸರ್ಕಾರವು

ಇನ್ನು ಸರ್ಕಾರವು ಉಲ್ಲೇಖಿಸಿದ ನಿಬಂಧನೆಯ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಒಪ್ಪಿಗೆಯಿಲ್ಲ ಆತನ ಅಶ್ಲೀಲ ವೀಡಿಯೊ ಅಪ್‌ಲೋಡ್‌ ಮಾಡಿದರೆ ಅದು ಅಶ್ಲೀಲತೆಯ ನಿದರ್ಶನಗಳಲ್ಲಿ ಅನ್ವಯಿಸುತ್ತದೆ ಎಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತದೆ. ಈ ಸೈಟ್‌ಗಳಲ್ಲಿ ಖಾಸಗಿ ಚಿತ್ರಗಳನ್ನು ಪೋಸ್ಟ್ ಮಾಡಿದ ನಿರ್ದಿಷ್ಟ ವ್ಯಕ್ತಿಗಳಿಂದ ದೂರುಗಳು ಬಂದ ನಂತರ ಸರ್ಕಾರ ಈ ಹೊಸ ಕ್ರಮವನ್ನು ತೆಗೆದುಕೊಂಡಿದೆಯೇ ಎಂಬುದರ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

Best Mobiles in India

Read more about:
English summary
Govt bans over 60 adult websites in India, again

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X