ವರ್ಷದೊಳಗೆ ರಾಷ್ಟ್ರೀಯ ಇ–ಕಾಮರ್ಸ್ ನೀತಿ!..ಪ್ರಮುಖ ಕಂಪೆನಿಗಳ ಆಕ್ಷೇಪ!

|

ಗಡಿಯಾಚೆಗೆ ದತ್ತಾಂಶ ಹರಿವು ನಿಯಂತ್ರಿಸಲು ಕಾನೂನು ಮತ್ತು ತಾಂತ್ರಿಕ ಔಕಟ್ಟು ರೂಪಿಸುವ ಸಲುವಾಗಿ ರಾಷ್ಟ್ರೀಯ ಇ-ಕಾಮರ್ಸ್ ಕರಡು ನೀತಿ ಇನ್ನೊಂದು ವರ್ಷದೊಳಗೆ ಜಾರಿಗೆ ಬರಲಿದೆ. ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿರುವ, ಉದ್ಯಮಗಳು ಸೂಕ್ಷ್ಮವಾದ ದತ್ತಾಂಶಗಳನ್ನು ಸ್ಥಳೀಯವಾಗಿ ಸಂಗ್ರಹಿಸುವ ಮತ್ತು ವಿದೇಶದಲ್ಲಿ ದಾಸ್ತಾನು ಮಾಡುವುದನ್ನು ನಿರ್ಬಂಧಿಸಲು ನೆರವಾಗುವ ರಾಷ್ಟ್ರೀಯ ಇ-ಕಾಮರ್ಸ್ ನೀತಿ ಜಾರಿಗೆ ಬರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ವರ್ಷದೊಳಗೆ ರಾಷ್ಟ್ರೀಯ ಇ–ಕಾಮರ್ಸ್ ನೀತಿ!..ಪ್ರಮುಖ ಕಂಪೆನಿಗಳ ಆಕ್ಷೇಪ!

ಆನ್ ಲೈನ್ ವಸ್ತುಗಳ ಮಾರಾಟದ ವಿಚಾರದಲ್ಲಿ ಭಾರತೀಯರ ಡಾಟಾವನ್ನು ಕಲೆ ಹಾಕುತ್ತಿದ್ದ ಕೆಲವು ವಿದೇಶಿ ಇ-ಕಾಮರ್ಸ್ ಸೈಟ್ ಗಳಿಗೆ ಭಾರತ ಕಡಿವಾಣ ಹಾಕಲು ಮುಂದಾಗಿದೆ. ಹಾಗಾಗಿ, ಹೊಸ ಕರಡು ನೀತಿಯನ್ನು ಜಾರಿಗೆ ತಂದಿರುವ ಭಾರತ ಭಾರತೀಯರ ಡಾಟಾ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಂಡಿದೆ. ಸಿದ್ಧಪಡಿಸರುವ ಇ-ಕಾಮರ್ಸ್ ಸಾಂಸ್ಥಿಕ ರೂಪುರೇಷೆಯಲ್ಲಿ ಎಫ್‌ಡಿಐ ಮತ್ತು ಇ-ಕಾಮರ್ಸ್ ಕರಡು ನೀತಿಯ ಕುರಿತಾಗಿ ಷೇರುದಾರರಿಗೆ ಇರುವ ಸಮಸ್ಯೆಗಳನ್ನು ಸಹ ಬಗೆಹರಿಸುವ ಸೂಚನೆಯನ್ನು ನೀಡಿದೆ.

ಆದರೆ, ರಾಷ್ಟ್ರೀಯ ಇ-ಕಾಮರ್ಸ್ ಕರಡು ನೀತಿಯಲ್ಲಿನ ಸಭೆಯಲ್ಲಿ ಫ್ಲಿಪ್‌ಕಾರ್ಟ್, ಅಮೆಜಾನ್‌, ಸ್ನ್ಯಾಪ್ ಡೀಲ್ ಸೇರಿದಂತೆ ಕೆಲವು ಇ-ಕಾಮರ್ಸ್ ಕಂಪನಿಗಳ ಉನ್ನತಾಧಿಕಾರಿಗಳು ಭಾಗವಹಿಸಿದ್ದು, ಪ್ರಮುಖ ಇ ಕಾಮರ್ಸ್ ಕಂಪೆನಿಗಳು ಕೆಲವು ಅಂಶಗಳ ಬಗ್ಗೆ ಹಲವು ಆಕ್ಷೇಪ ವ್ಯಕ್ತಪಡಿಸಿವೆ. ಹಾಗಾದರೆ, ಫೆಬ್ರವರಿಯಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಇ-ಕಾಮರ್ಸ್ ಕರಡು ನೀತಿಯಲ್ಲಿ ಯಾವ ಯಾವ ಮುಖ್ಯ ಅಂಶಗಳಿವೆ?, ಈ ನೀತಿ ಹೇಗೆ ಪೂರಕವಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಟೆಕ್ ಇಂಡಸ್ಟ್ರಿ ಮೇಲೆ ಹದ್ದಿನ ಕಣ್ಣು

ಟೆಕ್ ಇಂಡಸ್ಟ್ರಿ ಮೇಲೆ ಹದ್ದಿನ ಕಣ್ಣು

ಕರಡು ನೀತಿಯಲ್ಲಿ ಭಾರತ ಮತ್ತು ಭಾರತೀಯ ನಾಗರೀಕರ ಡಾಟಾಕ್ಕೆ ಸಾರ್ವಭೌಮ ಹಕ್ಕನ್ನು ಅವರು ಹೊಂದಿರುತ್ತಾರೆ ಎಂದು ಹೇಳಲಾಗಿದ್ದು ಇದು ಹೊಸ ಮಾರ್ಗದರ್ಶಿ ಸೂತ್ರದ ಪ್ರಮುಖ ಅಂಶವಾಗಿರುತ್ತದೆ. ಸರ್ಕಾರವು ಸ್ಪಷ್ಟವಾಗಿ ಎಲ್ಲಾ ನಿಯಮಗಳನ್ನು ಹೇಳಿದೆ ಮತ್ತು ನೀವು ಅವುಗಳನ್ನು ಪಾಲಿಸುವುದನ್ನು ನಾವು ಸ್ವಾಗತಿಸುತ್ತೇವೆ. ಜಗತ್ತಿನಾದ್ಯಂತ ಆರಾಮದಾಯಕವಾಗಿರಬಹುದು ಎಂಬ ಭಾವನೆಯಲ್ಲಿರುವ ಟೆಕ್ ಇಂಡಸ್ಟ್ರಿಗೆ ಒಂದು ರೀತಿಯಲ್ಲಿ ಹದ್ದಿನ ಕಣ್ಣಿಡುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಇಂಡಿಯಾ ಟೆಕ್ ನ ಸಿಇಓ ಆಗಿರುವ ರಮೇಶ್ ಕೈಲಾಸಂ.

ಪ್ರಭಾವ ಬೀರುವುದರ ಮೇಲೆ ನಿರ್ಭಂಧ

ಪ್ರಭಾವ ಬೀರುವುದರ ಮೇಲೆ ನಿರ್ಭಂಧ

ಯಾವುದೇ ಉತ್ಪನ್ನಗಳ ಮಾರಾಟ ದರದ ಮೇಲೆ ಇ-ಕಾಮರ್ಸ್ ಕಂಪೆನಿಗಳು ಯಾವುದೇ ನೇರ ಅಥವಾ ಪರೋಕ್ಷ ಪ್ರಭಾವ ಬೀರುವುದನ್ನು ನಿರ್ಭಂಧಿಸಬೇಕು ಎಂದು ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ. ಹೀಗಾಗಿ ಇ-ಕಾಮರ್ಸ್ ಕಂಪನಿಗಳ ರಿಟೇಲ್ ಮಾರುಕಟ್ಟೆ ತಂತ್ರಗಾರಿಕೆಗೆ ನಿರ್ಬಂಧ ಉಂಟಾಗಲಿದೆ ಎನ್ನಲಾಗಿದೆ. ಇದರ ಪರಿಣಾಮ ಗ್ರಾಹಕರಿಗೆ ನೀಡುವ ಭಾರಿ ಡಿಸ್ಕೌಂಟ್‌ಗೆ ಸದ್ಯಕ್ಕೆ ಕತ್ತರಿ ಪ್ರಯೋಗವಾಗಿ ಭಾರತೀಯ ಮೂಲದ ರಿಟೇಲ್ ಹಾಗೂ ಆನ್‌ಲೈನ್‌ ವಲಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. .

ಡಾಟಾ ಸ್ಟೋರೇಜ್ ಪ್ರಮುಖ ಅಂಶ

ಡಾಟಾ ಸ್ಟೋರೇಜ್ ಪ್ರಮುಖ ಅಂಶ

"ಭಾರತದ ಯಾವುದೇ ಸಂಸ್ಥೆ ವಿದೇಶದಲ್ಲಿ ಸಂಗ್ರಹವಾಗಿರುವ ಡಾಟಾವನ್ನು ಪ್ರವೇಶಿಸಲು ಅಥವಾ ಪಡೆಯಲು ತಕ್ಷಣವೇ ಪ್ರತಿಕ್ರಿಯೆ ನೀಡಬೇಕು ಮತ್ತು ಅನುಸರಿಸಬೇಕು ಎಂದು ಹೇಳಲಾಗಿದೆ. ಡಾಟಾ ಸ್ಟೋರೇಜ್ ಮತ್ತು ಅದರ ಬಳಕೆಯ ಬಗ್ಗೆ ಡ್ರಾಫ್ಟ್ ನಲ್ಲಿ ಪ್ರಮುಖವಾಗಿ ನಿರ್ದೇಶಿಸಲಾಗಿದೆ.ನೀತಿಯ ನಿರ್ವಹಣಾ ಅಧಿಕಾರಿಗಳು ಮತ್ತು ವಕೀಲರು ಹೇಳಿರುವ ಪ್ರಕಾರ ಸರ್ಕಾರವು ಕಳೆದ ಒಂದು ವರ್ಷದಲ್ಲಿ ತನ್ನ ನೀತಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಕೇಂದ್ರವು ಡಾಟಾ ಅಗತ್ಯವಿದ್ದಾಗ ಪಡೆಯಲು ಈ ನೀತಿ ಪೂರಕವಾಗಿರುತ್ತದೆ ಎಂದು ತಿಳಿದುಬಂದಿದೆ.

ಗ್ರಾಹಕರ ಗೌಪ್ಯತೆಗೆ ಹೆಚ್ಚು ಒತ್ತು

ಗ್ರಾಹಕರ ಗೌಪ್ಯತೆಗೆ ಹೆಚ್ಚು ಒತ್ತು

ಗ್ರಾಹಕರ ಗೌಪ್ಯತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ಯುರೋಪಿಯನ್ ಕಡ್ಡುಪಾಡುಗಳನ್ನು ಸಹ ಉದ್ಯಮದ ಕಾರ್ಯನಿರ್ವಾಹಕರು ಉದಾಹರಣೆ ನೀಡುತ್ತಿದ್ದರು. ಇಂತಹ ಸಂದರ್ಬದಲ್ಲಿ ಭಾರತವು ಕೂಡ ಅಂತಹ ಡಾಟಾಗಳಿಗೆ ಅಂದರೆ ದೇಶದ ಹೊರಗಿನ ಅಂತಹ ದತ್ತಾಂಶಗಳಿಗೆ ತಕ್ಷಣದ ಪ್ರವೇಶವನ್ನು ನೀಡಲಾಗುವ ಬಗ್ಗೆ ಹೇಳಿದೆ.ಇದು ಚೀನಾದ ಕೆಲವು ವೆಬ್ ಸೈಟ್ ಗಳಿಗೆ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ಲಬ್ ಫ್ಯಾಕ್ಟರಿ, ಶೈನ್ ಗಳಿಗೆ ಪೆಟ್ಟು

ಕ್ಲಬ್ ಫ್ಯಾಕ್ಟರಿ, ಶೈನ್ ಗಳಿಗೆ ಪೆಟ್ಟು

ಹೊಸ ನೀತಿ ಜಾರಿಯಿಂದಾಗಿ ಚೀನಾಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಡಾಟಾ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದಾಗ ಡಾಟಾ ಶೇರಿಂಗ್ ಮತ್ತು ಸರ್ಕಾರವು ಇಚ್ಛಿಸಿದರೆ ಯಾವಾಗ ಬೇಕಿದ್ದರೂ ಡಾಟಾ ಆಕ್ಸಿಸ್ ಗೆ ಈ ಹೊಸ ನೀತಿ ಅನುಕೂಲ ಮಾಡಿಕೊಡುತ್ತದೆ .ಹೊಸ ನಿಯಮಾವಳಿಗಳು ಚೀನಾದ ಇ-ಕಾಮರ್ಸ್ ಸೈಟ್ ಗಳಾದ ಕ್ಲಬ್ ಫ್ಯಾಕ್ಟರಿ, ಶೈನ್ ಇತ್ಯಾದಿಗಳಿಗೆ ಭಾರೀ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಇವುಗಳು ತಮ್ಮ ಪ್ರೊಡಕ್ಟ್ ಗಳನ್ನು ಗಿಫ್ಟ್ ಎಂದು ಭಾರತದಲ್ಲಿ ಮಾರಾಟ ನಡೆಸುತ್ತಿದ್ದವು. ಇವುಗಳಿಗೆ ಇನ್ನು ಮುಂದೆ ದೊಡ್ಡ ಹೊಡೆತವನ್ನು ಭಾರತ ನೀಡುತ್ತದೆ.

Best Mobiles in India

English summary
Government will come out with a national e-commerce policy within 12 months to facilitate achieving holistic growth of the sector, an official said.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X