ಕೇವಲ 41,500ರೂ.ಗೆ ಸೇಲ್‌ ಆಯ್ತು ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ!

|

ಆನ್‌ಲೈನ್ ವಲಯದ ದರೋಡೆಕೋರರೆಂದೆ ಬಿಂಬಿತವಾಗಿರುವ ಹ್ಯಾಕರ್ಸ್‌ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಗೆ ಕನ್ನಹಾಕಿದ್ದಾರೆ. 267 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾವನ್ನು 41,500 ರೂ.ಗಳಿಗೆ (ಅಂದಾಜು 500 ಯುರೋಗಳು) ಡಾರ್ಕ್‌ ವೆಬ್‌ನಲ್ಲಿ ಮಾರಾಟ ಮಾಡಿದ್ದಾರೆ ಎಂದು ಸೈಬರ್ ಅಪಾಯದ ಮೌಲ್ಯಮಾಪನ ವೇದಿಕೆ ಸೈಬಲ್ ತಾಣವು ಮಾಹಿತಿ ಹೊರಹಾಕಿದೆ.

ಕೇವಲ 41,500ರೂ.ಗೆ ಸೇಲ್‌ ಆಯ್ತು ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ!

ಹೌದು, 267 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಹ್ಯಾಕರ್‌ಗಳು ಸೇಲ್ ಮಾಡಿದ್ದಾರೆ. ಮಾರಾಟವಾಗ ಡೇಟಾವು ಫೇಸ್‌ಬುಕ್ ಬಳಕೆದಾರರ ಇ-ಮೇಲ್ ವಿಳಾಸಗಳು, ಅವರ ಹೆಸರುಗಳು, ಫೇಸ್‌ಬುಕ್ ಐಡಿಗಳು, ಹುಟ್ಟಿದ ದಿನಾಂಕಗಳು ಮತ್ತು ಫೋನ್ ಸಂಖ್ಯೆಗಳನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ಸೈಬಲ್ ತಿಳಿಸಿದೆ. ಆದರೆ ಫೇಸ್‌ಬುಕ್ ಬಳಕೆದಾರರ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆ ಆಗಿಲ್ಲ ಎಂದು ಹೇಳಲಾಗಿದೆ.

ಕೇವಲ 41,500ರೂ.ಗೆ ಸೇಲ್‌ ಆಯ್ತು ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ!

ಫೇಸ್‌ಬುಕ್‌ ಬಳಕೆದಾರರ ಮಾಹಿತಿಯ ಸೋರಿಕೆಯು ಮೂರನೇ ವ್ಯಕ್ತಿಯ API (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ಫೇಸ್) ನಲ್ಲಿನ ಸೋರಿಕೆ ಅಥವಾ ಸ್ಕ್ರ್ಯಾಪಿಂಗ್‌ನಿಂದ ಆಗಿರಬಹುದು ಎಂದು ಕಂಪನಿಯ ವರದಿಯಲ್ಲಿ ತಿಳಿಸಿದೆ. ಹಾಗೆಯೇ ಮಾರಾಟವಾದ ಡೇಟಾವು ಬಳಕೆದಾರರ ಸೂಕ್ಷ್ಮ ವಿವರಗಳನ್ನು ಹೊಂದಿರುವುದರಿಂದ, ಇದನ್ನು ಸೈಬರ್‌ ಅಪರಾಧಿಗಳು ಫಿಶಿಂಗ್ ಮತ್ತು ಸ್ಪ್ಯಾಮಿಂಗ್‌ಗಾಗಿ ಬಳಸಬಹುದು ಎಂದು ಅದು ಎಚ್ಚರಿಸಿದೆ.

ಕೇವಲ 41,500ರೂ.ಗೆ ಸೇಲ್‌ ಆಯ್ತು ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ!

ಹಾಗೆ ನೋಡಿದರೇ ಫೇಸ್‌ಬುಕ್ ಡೇಟಾ ಮಾರಾಟ ಇದು ಮೊದಲ ಬಾರಿಯೆನಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ 26.7 ಕೋಟಿ ಫೇಸ್‌ಬುಕ್‌ ಬಳಕೆದಾರರ ಡೇಟಾವನ್ನು ಕಳವು ಮಾಡಲಾಗಿರುವ ಬಗ್ಗೆ ವರದಿಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ವಕ್ತಾರೊರ್ವರು, ಬಳಕೆದಾರರ ಮಾಹಿತಿ ಮಾರಾಟವನ್ನು ವಿಷಯವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದರು. ಆದರೆ ಬಳಕೆದಾರರ ಮಾಹಿತಿಯನ್ನು ಉತ್ತಮವಾಗಿ ರಕ್ಷಿಸಲು ಕಳೆದ ಕೆಲವು ವರ್ಷಗಳಲ್ಲಿ ನಾವು ಮಾಡಿದ ಬದಲಾವಣೆಗಳ ಮೊದಲು ಈ ಸೋರಿಕೆ ಆಗಿರಬಹುದೆಂದು ಹೇಳಿದ್ದಾರೆ. ಬಳಕೆದಾರರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ಕಾಲಕಾಲಕ್ಕೆ ಬದಲಾಯಿಸುವಂತೆ ಸೂಚಿಸುತ್ತಲೆ ಇದ್ದೆವೆ.

Best Mobiles in India

English summary
Hackers have sold personal data 267 million Facebook users for just Rs 41,500.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X