Subscribe to Gizbot

2020ರ ವೇಳೆಗೆ ಗ್ರಾಮೀಣ ಭಾಗದ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ.!

Written By: Lekhaka

ಇತ್ತೀಚೆಗೆ ಬೊಸ್ಟನ್ ಕಾನ್ಸಲ್ಟಿಂಗ್ ಗ್ರೂಪ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಮುಂದಿನ ದಿನಗಳಲ್ಲಿ ಅಂದರೆ 2020ರ ವೇಳೆಗೆ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆಯೂ ಗ್ರಾಮೀಣ ಭಾಗದಲ್ಲಿ ಅಧಿಕವಾಗಲಿದೆ. ಅಲ್ಲದೇ ಇದರಲ್ಲಿ ಮಹಿಳೆಯರ ಸಂಖ್ಯೆಯೂ ಶೇ.40 ರಷ್ಟು ಇರಲಿದ್ದು ಮತ್ತು 35 ವರ್ಷಕ್ಕಿಂತ ಮೆಲ್ಪಟ್ಟವರ ಸಂಖ್ಯೆಯೂ ಶೇ. 33 % ರಷ್ಟು ಇರಲಿದೆ ಎನ್ನಲಾಗಿದೆ.

2020ರ ವೇಳೆಗೆ ಗ್ರಾಮೀಣ ಭಾಗದ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ.!

ಅಲ್ಲದೇ 2020ರ ವೇಳೆಗೆ ಪ್ರತಿ 5 ಮಂದಿಯಲ್ಲಿ 4 ಮಂದಿ ಮೊಬೈಲ್ ಮೂಲಕವೇ ಇಂಟರ್ನೆಟ್ ಬಳಕೆ ಮಾಡುತ್ತಿರುತ್ತಾರೆ ಎಂದು ಈ ವರದಿ ತಿಳಿಸಿದೆ. ಇನ್ನು ಎಂಟು ವರ್ಷಗಳಲ್ಲಿ ಭಾರತದಲ್ಲಿ 250 ಮಿಲಿಯನ್ 3G ಸಂಪರ್ಕಗಳಿದ್ದವು, ಆದರೆ ಜಿಯೋ ಕೇಲವ 7 ತಿಂಗಳಲ್ಲಿ 100 ಮಿಲಿಯನ್ 4G ಬಳಕೆದಾರರನ್ನು ಸೃಷ್ಟಿಸುವ ಮೂಲಕ ದಾಖಲೆ ನಿರ್ಮಿಸಿತ್ತು.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಇದಲ್ಲದೇ G7 ರಾಷ್ಟ್ರಗಳಲ್ಲಿ 2025ರಲ್ಲಿ ಸುಮಾರು 850 ಮಿಲಿಯನ್ ಬಳಕೆದಾರರು ಇರಲಿದ್ದಾರೆ ಎನ್ನಲಾಗಿದೆ. ಇದಲ್ಲದೇ 2025ರ ಒಳಗೆ ಸುಮಾರು ದೇಶದ ಎಲ್ಲಾ ಜನರು ಮೊಬೈಲ್ ಬಳಕೆಯನ್ನು ಶುರು ಮಾಡಲಿದ್ದಾರೆ. ಇದರಲ್ಲಿ ವೇಗದ ಇಂಟರ್ನೆಟ್ ಬಳಕೆಯು ದೊರೆಯಲಿದೆ.

ವಿಡಿಯೊ ಗೇಮ್‌ನಲ್ಲಿ ಗೆಲ್ಲಲು ಬಾಲಕ ಆತ್ಮಹತ್ಯೆ..ಪೋಷಕರೆ ಏನಿದು ಗೊತ್ತಾ?..ಎಚ್ಚರ!!

ಈ ಹಿನ್ನಲೆಯಲ್ಲಿ ಭಾರತೀಯ ಡಿಜಿಟಲ್ ಮಾರುಕಟ್ಟೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆಯನ್ನು ಮಾಡಲು ವಿವಿಧ ಕಂಪನಿಗಳು ಮುಂದಾಗಿದ್ದು, ಸುಮಾರು 500 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಬಂಡವಾಳವು ಇಲ್ಲಿ ಹೂಡಿಕೆ ಯಾಗಲಿದೆ.

ಒಟ್ಟಿನಲ್ಲಿ ಜನರಿಗೆ ಕಡಿಮೆ ಬೆಲೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯೂ ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಅತೀ ದೊಡ್ಡ ದೇಶದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದು ಬೆಳವಣಿಗೆಯ ದೃಷ್ಟಿಯಿಂದ ಉತ್ತಮವಾದದ್ದು.

Read more about:
English summary
India will have more than 850 million online users by 2025 more than the combined populations of the G7 countries.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot