ದೈನಂದಿನ 1.5GB ಡೇಟಾ ಬೇಕಿದ್ದರೆ ಈ ಪ್ಲಾನ್‌ಗಳನ್ನ ರೀಚಾರ್ಜ್‌ ಮಾಡಿ!

|

ಭಾರತದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ದರ್ಬಾರ್‌ ಮುಂದುವರೆದಿದೆ. ಟೆಲಿಕಾಂ ಕಂಪೆನಿಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಈ ಪೈಕಿ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನಗಳನ್ನು ಒಳಗೊಂಡಿರುವ ಪ್ಲಾನ್‌ಗಳಿಗೆ ಬೇಡಿಕೆ ಇದೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳು ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ 500ರೂ ಗಿಂತ ಒಳಗಿನ ಪ್ಲಾನ್‌ಗಳು ಬಳಕೆದಾರರ ನೆಚ್ಚಿನ ಆಯ್ಕೆಯಾಗಿವೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ದೈನಂದಿನ 1.5GB, 2GB, 3GB ಡೇಟಾ ನೀಡುವ ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಕೆಲವು ಯೋಜನೆಗಳು 1.5GB, 2GB ದೈನಂದಿನ ಡೇಟಾವನ್ನು 56 ದಿನಗಳ ಮಾನ್ಯತೆಯಲ್ಲಿ ನೀಡುತ್ತಿವೆ. ಕೆಲವು ಪ್ಲಾನ್‌ಗಳು 28 ದಿನಗಳ ಮಾನ್ಯತೆ ಪಡೆದುಕೊಂಡಿವೆ. ಸದ್ಯ ಬಳಕೆದಾರರಿಗೆ ಡೈಲಿ 1.5GB ಡೇಟಾ ಪ್ರಯೋಜನ ನೀಡುವ ಪ್ಲಾನ್‌ಗಳಲ್ಲಿ ಯಾವುದು ಸೂಕ್ತ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ 249ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 249ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 249ರೂ ಪ್ರಿಪೇಯ್ಡ್ ಪ್ಲಾನ್‌ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಡೈಲಿ 1.5GB ಡೇಟಾ ಜೊತೆಗೆ ಅನಿಮಿತ ಕರೆ, ದೈನಂದಿನ 100 SMS ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದು ಅಮೆಜಾನ್‌ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಚಂದಾದಾರಿಕೆಯನ್ನು ನೀಡುತ್ತದೆ. ಇದಲ್ಲದೆ ಏರ್‌ಟೆಲ್‌ 399ರೂ, ಗಳ ಪ್ರಿಪೇಯ್ಡ್ ಪ್ಲಾನ್ ಕೂಡ ಹೊಂದಿದೆ. ಈ ಪ್ಲಾನ್‌ ಡೈಲಿ 1.5GB ಡೇಟಾ, ಅನಿಮಿತ ಕರೆ, ಎಸ್ಎಂಎಸ್‌ ಪ್ರಯೋಜನಗಳನ್ನು 56 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ.

ಜಿಯೋ 199ರೂ. ಪ್ರಿಪೇಯ್ಡ್ ಪ್ಲಾನ್

ಜಿಯೋ 199ರೂ. ಪ್ರಿಪೇಯ್ಡ್ ಪ್ಲಾನ್

ಜಿಯೋ 199ರೂ. ಪ್ರಿಪೇಯ್ಡ್ ಪ್ಲಾನ್ ದೈನಂದಿನ 1.5GB ಡೇಟಾವನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ಅನಿಯಿತ ಕರೆ ಪ್ರಯೋಜನ ಮತ್ತು ದಿನಕ್ಕೆ 100 ಎಸ್‌ಎಂಎಸ್ ಹಾಗೂ ಜಿಯೋ ಆಪ್‌ಗಳಿಗೆ ಪೂರಕ ಚಂದಾದಾರಿಕೆ ಸೇವೆಯನ್ನು 28 ​​ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ. ಇದಲ್ಲದೆ ಜಿಯೋ 399 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಹೊಂದಿದ್ದು, ಇದು ಕೂಡ 1.5GB ಡೈಲಿ ಡೇಟಾವನ್ನು ನೀಡಲಿದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ನೀಡಲಿದೆ. ಈ ಪ್ಲಾನ್‌ 56 ದಿನಗಳ ಮಾನ್ಯತೆ ಹೊಂದಿದೆ.

ವಿ ಟೆಲಿಕಾಂ 249ರೂ, ಪ್ರಿಪೇಯ್ಡ್ ಪ್ಲಾನ್

ವಿ ಟೆಲಿಕಾಂ 249ರೂ, ಪ್ರಿಪೇಯ್ಡ್ ಪ್ಲಾನ್

ವಿ ಟೆಲಿಕಾಂ 249ರೂ, ಪ್ರಿಪೇಯ್ಡ್ ಪ್ಲಾನ್‌ ಡೈಲಿ 1.5GB ಡೇಟಾ ನೀಡುವ ಪ್ಲಾನ್‌ ಆಗಿದೆಎ. ಈ ಪ್ಲಾನ್‌ ಕೂಡ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನಿಮಿತ ಕರೆ ಮತ್ತು 100 ಎಸ್‌ಎಂಎಸ್ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಈ ಪ್ಲಾನ್ ಬಿಂಗ್ ಆಲ್-ನೈಟ್ ಆಫರ್ ಅನ್ನು ಹೊಂದಿದೆ ಮತ್ತು ಆಪ್ ಮೂಲಕ ರೀಚಾರ್ಜ್ ಮಾಡಿದಾಗ 5GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಇದಲ್ಲದೆ ವಿ ಟೆಲಿಕಾಂ 399ರೂ ಪ್ರಿಪೇಯ್ಡ್ ಪ್ಲಾನ್ ಕೂಡ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ದೈನಂದಿನ 1.5GB ಡೇಟಾ, ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸೇವೆ ದೊರೆಯಲಿದೆ. ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳು ಮೇಲೆ ತಿಳಿಸಿದ ಯೋಜನೆಯಲ್ಲಿರುವಂತೆಯೇ ಇರುತ್ತವೆ.

ಬಿಎಸ್‌ಎನ್‌ಎಲ್‌ 153ರೂ ಪ್ರಿಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ 153ರೂ ಪ್ರಿಪೇಯ್ಡ್‌ ಪ್ಲಾನ್‌

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ಖಾಸಗಿ ಟೆಲಿಕಾಂಗಳಿಗೆ ಪ್ರತಿಸ್ಪರ್ಧಿಯಾಗಿ ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಬಿಎಸ್‌ಎನ್‌ಎಲ್‌ 153ರೂ ಪ್ರಿಪೇಯ್ಡ್‌ ಪ್ಲಾನ್‌ ಕೂಡ ಸೇರಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ ದೈನಂದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿದ್ದು, 28 ದಿನಗಳ ಮಾನ್ಯತೆಯನ್ನು ಹಯೊಂದಿದೆ. ಜೊತೆಗೆ ಬಿಎಸ್‌ಎನ್‌ಎಲ್‌ 485ರೂ ಗಳ ಪ್ಲಾನ್‌ ಅನ್ನು ಸಹ ಹೊಂದಿದೆ. ಈ ಪ್ಲಾನ್‌ 1.5GB ದೈನಂದಿನ ಡೇಟಾ ಪ್ರಯೋಜನವನ್ನು 90 ದಿನಗಳ ಮಾನ್ಯತೆಯೊಂದಿಗೆ ನೀಡಲಿದೆ.

Most Read Articles
Best Mobiles in India

English summary
Some of these plans offer 1.5GB daily data that will last users up to 56 days. BSNL’s Rs 485 plan offers 90 days validity along with 1.5GB daily data and calling benefits.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X