2023ರ ಜನವರಿಗೆ ಎಂಟ್ರಿ ನೀಡಲಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

|

2023ಕ್ಕೆ ಕಾಲಿಡಲು ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ಈ ಕ್ಷಣದಲ್ಲಿ ಹಿಂದಿನ ವರ್ಷ ನಡೆದ ಘಟನೆಗಳ ಜೊತೆಗೆ ಮುಂದಿನ ವರ್ಷ ಮಾಡಬೇಕಾದ ಕಾರ್ಯಗಳ ಬಗ್ಗೆ ಎಲ್ಲರಿಗೂ ಆಲೋಚನೆ ಇದ್ದೆ ಇರುತ್ತದೆ. ಇದು ಎಲ್ಲಾ ವಲಯಕ್ಕೂ ಕೂಡ ಅನ್ವಯಿಸುತ್ತದೆ. ಟೆಕ್‌ ವಲಯದಲ್ಲಿಯೂ ಕೂಡ 2023ರಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿದೆ ಅನ್ನೊ ಚರ್ಚೆ ಜೋರಾಗಿದೆ. ಇದರ ನಡುವೆ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು 2023ರ ಜನವರಿ ತಿಂಗಳಿನಲ್ಲಿ ಎಂಟ್ರಿ ನೀಡೋಕೆ ತಯಾರಿ ನಡೆಸಿವೆ.

2023

ಹೌದು, 2023 ರ ಜನವರಿ ತಿಂಗಳಿನಲ್ಲಿ ಹಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿವೆ. ಇದರಲ್ಲಿ ಕೆಲವು ಸ್ಮಾರ್ಟ್‌ಫೋನ್‌ ಫೀಚರ್ಸ್‌ ಈಗಾಗಲೇ ಬಹಿರಂಗವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿವೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಕೂಡ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿವೆ. ಹಾಗಾದ್ರೆ 2023ರ ಜನವರಿ ತಿಂಗಳಿನಲ್ಲಿ ಮಾರುಕಟ್ಟೆಗೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ಮಿ ನೋಟ್‌ 12 ಸರಣಿ

ರೆಡ್ಮಿ ನೋಟ್‌ 12 ಸರಣಿ

2023 ರ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ರೆಡ್ಮಿ ನೋಟ್‌ 12 ಸರಣಿ ಕೂಡ ಸೇರಿದೆ. ಇದರಲ್ಲಿ ರೆಡ್ಮಿ ನೋಟ್‌ 12 ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 4 ಜನ್ 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಮುಖ್ಯ ಕ್ಯಾಮೆರಾ 48MP ಸೆನ್ಸಾರ್‌ ಇರಲಿದೆ. ಇದು 8MP ಸೆಲ್ಫಿ ಕ್ಯಾಮೆರಾ ಕೂಡ ಒಳಗೊಂಡಿಲಿದೆ.

ಪೊಕೊ C50

ಪೊಕೊ C50

2023ರ ಆರಂಭದಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಪೊಕೊ C50 ಕೂಡ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಇದು 6,000 mAh ಸಾಮರ್ಥ್ಯದ ಬ್ಯಾಟರಿ ಮತ್ತು ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಪ್ರೈಸ್‌ಟ್ಯಾಗ್‌ನಲ್ಲಿ ಬರಲಿದೆ ಎಂದು ವರದಿಯಾಗಿದೆ.

ಐಕ್ಯೂ 11 ಸರಣಿ

ಐಕ್ಯೂ 11 ಸರಣಿ

ಐಕ್ಯೂ 11 ಸರಣಿ ಕೂಡ 2023ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೆ ತಯಾರಿ ನಡೆಸಿದೆ. ಈ ಸರಣಿಯ ಐಕ್ಯೂ 11 ಫೋನ್‌ 6.78 ಇಂಚಿನ E6 AMOLED ಡಿಸ್‌ಪ್ಲೇ ಹೊಂದಿದೆ. ಇದು HDR10+ ಬೆಂಬಲವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅ್ನು ಹೊಂದಿದೆ. ಜೊತೆಗೆ 120W ವೇಗದ ಚಾರ್ಜಿಂಗ್‌ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಟೆಕ್ನೋ ಫ್ಯಾಂಟಮ್ X2

ಟೆಕ್ನೋ ಫ್ಯಾಂಟಮ್ X2

ಟೆಕ್ನೋ ಫ್ಯಾಂಟಮ್ X2 ಸ್ಮಾರ್ಟ್‌ಫೋನ್‌ ಹೊಸ ವರ್ಷದ ಆರಂಭದಲ್ಲಿ ಭಾರತಕ್ಕೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್‌, ಎರಡನೇ ಕ್ಯಾಮೆರಾ 13MP ಸೆನ್ಸಾರ್‌, ಮೂರನೇ ಕ್ಯಾಮೆರಾ 2MP ಸೆನ್ಸಾರ್‌ ಪಡೆದಿರುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಬಹುದು. ಇದಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 8GB ವರ್ಚುವಲ್ RAM ಅನ್ನು ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 8,000 ರೂ.ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
Here are the top 5 upcoming Samrtphone launches of January 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X