ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸರ್ಕಾರದ ಯಾವುದೇ ಸೇವೆಗಳನ್ನು ಪಡೆಯುವುದಕ್ಕೂ ಆಧಾರ್ ಕಾರ್ಡ್‌ ಅವಶ್ಯಕತೆಯಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಹಲವಾರು ಸೇವೆಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಇನ್ನು ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಫೋಟೋ, ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಸಂಬಂಧ ವಿಳಾಸವನ್ನು ಅಗತ್ಯವಿದ್ದರೆ ತಿದ್ದುಪಡಿ ಮಾಡಿಕೊಳ್ಳಬಹುದು. ಇದರಲ್ಲಿ ಫೋಟೋವನ್ನು ಬದಲಾಯಿಸುವುದಕ್ಕೂ ಅವಕಾಶವಿದೆ.

ಆಧಾರ್‌ಕಾರ್ಡ್‌

ಹೌದು, ಆಧಾರ್‌ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿ ಸೇರಿದಂತೆ ಹಲವು ಅಗತ್ಯ ಬದಲಾವಣೆಗಳನ್ನು ಆಗಾಗ ಅಪ್ಡೇಟ್‌ ಮಾಡಬಹುದು. ನೀವು ಆಧಾರ್‌ ಕಾರ್ಡ್‌ ಪಡೆದುಕೊಂಡು ಬಹ ದಿನಗಳಾಗಿದ್ದು ನಿಮ್ಮ ಫೋಟೋ ಬದಲಾಯಿಸಬೇಕೆಂದರೆ ಅದಕ್ಕೂ ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆಧಾರ್ ಕಾರ್ಡ್‌ನಲ್ಲಿ ಫೋಟೋವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್ ಕಾರ್ಡ್‌

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಫೋಟೋವನ್ನು ಅಪ್ಡೇಟ್‌ ಮಾಡುವುದಕ್ಕೆ ಆನ್‌ಲೈನ್‌ನಲ್ಲಿ ಅವಕಾಶವಿಲ್ಲ. ನಿಮ್ಮ ಫೋಟೋ ಬದಲಾಯಿಸಬೇಕಾದರೆ ನೀವು ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಆದರೆ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೊದಲು ನೀವು ಆನ್‌ಲೈನ್‌ನಲ್ಲಿ ಆಧಾರ್‌ ಫೋಟೋ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಅಪ್ಡೇಟ್‌ ಮಾಡಲು ನೀವು ಅನುಸರಿಸಬೇಕಾದ ಹಂತಗಳೇನು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವುದು ಹೇಗೆ?

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಥವಾ https://uidai.gov.in/. ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ:2 ನಂತರ ಆಧಾರ್‌ ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಹಂತ:3 ಇದೀಗ ಫೋಟೋ ಬದಲಾವಣೆಗೆ ಸಂಬಂಧಿಸಿದ ಫಾರ್ಮ್‌ನಲ್ಲಿ ಅಗತ್ಯವಿರುವ ಮಾಹಿತಿಯನ್ನು ತುಂಬಿರಿ.
ಹಂತ:4 ಅಗತ್ಯವಿರುವ ವಿವರ ಭರ್ತಿ ಮಾಡಿದ ನಂತರ ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.
ಹಂತ:5 ಇದಾದ ನಂತರ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ನಿಮ್ಮ ವಿವರಗಳನ್ನು ದೃಡೀಕರಿಸುತ್ತಾರೆ.
ಹಂತ:6 ನಂತರ ನಿಮ್ಮ ಹೊಸ ಫೋಟೋವನ್ನು ಆಧಾರ್ ನೋಂದಣಿ ಕೇಂದ್ರದಲ್ಲಿ ತೆಗೆದುಕೊಳ್ಳಲಾಗುತ್ತದೆ.
ಹಂತ:7 ಫೋಟೋ ಬದಲಾವಣೆ ಸೇವೆಗಾಗಿ ನಿಮ್ಮಿಂದ GST ಸೇರಿದಂತೆ 25ರೂ. ಶುಲ್ಕವನ್ನು ವಿಧಿಸಲಾಗುತ್ತದೆ.
ಹಂತ:8 ನಿಮ್ಮ ಫೋಟೋ ಬದಲಾವಣೆಯ ನಂತರ ಅಪ್‌ಡೇಟ್ ವಿನಂತಿ ಸಂಖ್ಯೆಯೊಂದಿಗೆ (URN) ಸ್ವೀಕೃತಿ ಚೀಟಿಯನ್ನು ಒದಗಿಸಲಾಗುತ್ತದೆ.
ಹಂತ:9 ಈ ಸಂಖ್ಯೆಯನ್ನು ಬಳಸಿ UIDAI ವೆಬ್‌ಸೈಟ್‌ನಲ್ಲಿ ನಿಮ್ಮ ಆಧಾರ್‌ ಅಪ್ಡೇಟ್‌ ಸ್ಟೆಟಸ್‌ ಅನ್ನು ಚೆಕ್‌ ಮಾಡಬಹುದಾಗಿದೆ.ನವೀಕರಣ ಸ್ಥಿತಿಯನ್ನು ಪರಿಶೀಲಿಸಲು ಈ URN ಅನ್ನು ಬಳಸಲಾಗುತ್ತದೆ.

ಆಧಾರ್ ಕಾರ್ಡ್‌ ಆನ್‌ಲೈನ್‌ನಲ್ಲಿ ಮರುಪಡೆಯಲು ಈ ಕ್ರಮ ಅನುಸರಿಸಿ!

ಆಧಾರ್ ಕಾರ್ಡ್‌ ಆನ್‌ಲೈನ್‌ನಲ್ಲಿ ಮರುಪಡೆಯಲು ಈ ಕ್ರಮ ಅನುಸರಿಸಿ!

ಇದಲ್ಲದೆ ಒಂದು ವೇಳೆ ನಿಮ್ಮ ಆಧಾರ್‌ ಕಾರ್ಡ್‌ ಕಳೆದು ಹೋದರೆ ಆನ್‌ಲೈನ್‌ ಮೂಲಕ ಮರಳಿ ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಈ ಕೆಳಗಿನ ಕ್ರಮಗಳನ್ನು ಅನಸರಿಸಬೇಕಾಗುತ್ತದೆ.
* UIDAI-- uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ‘ಆಧಾರ್ ಸೇವೆಗಳು' ವಿಭಾಗದ ಅಡಿಯಲ್ಲಿ, ‘ನನ್ನ ಆಧಾರ್' ಆಯ್ಕೆಯನ್ನು ಟ್ಯಾಪ್ ಮಾಡಿ.
* ಈಗ, ‘ರಿಟ್ರೈವ್ ಲಾಸ್ಟ್ ಅಥವಾ ಫಾರ್ಗಾಟನ್ ಇಐಡಿ / ಯುಐಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಕ್ಯಾಪ್ಚಾವನ್ನು ಪರಿಶೀಲಿಸಿ ಮತ್ತು ‘ಕಳುಹಿಸು ಒಟಿಪಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್‌ನಲ್ಲಿ ನೀವು ಸ್ವೀಕರಿಸಿದ ಆರು-ಅಂಕಿಯ ಒಟಿಪಿಯನ್ನು ನಮೂದಿಸಿ.
* ನಿಮ್ಮ ವಿನಂತಿಸಿದ ಯುಐಡಿ / ಇಐಡಿ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುತ್ತದೆ.
* ನಿಮ್ಮ ಇ-ಆಧಾರ್ ನಕಲನ್ನು ಡೌನ್‌ಲೋಡ್ ಮಾಡಲು ನೀವು ಇದನ್ನು ಬಳಸಬಹುದು.

Most Read Articles
Best Mobiles in India

English summary
You can update several details on Aadhaar including your photograph. Here is how to change photo in Aadhaar card in easy steps.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X