ಅಬ್ಬಬ್ಬಾ ನಿಮ್ಮ ಬಟ್ಟೆಯಿಂದಲೇ ಮೊಬೈಲ್‌ ಚಾರ್ಜ್‌ ಮಾಡಬಹುದು!

|

ನೀವು ಧರಿಸುವ ಬಟ್ಟೆಯ ಮೂಲಕವೇ ನಿಮ್ಮ ಮೊಬೈಲ್‌ ಚಾರ್ಜ್‌ ಮಾಡುವುದಕ್ಕೆ ಅವಕಾಶ ಸಿಕ್ಕರೆ ಹೇಗಿರಲಿದೆ. ಇಂತಹದೊಂದು ಕಲ್ಪನೆ ಕೂಡ ಊಹಿಸಲು ಸಾಧ್ಯವಿಲ್ಲ. ಆದರೆ ಮುಂದುವರೆದ ಟೆಕ್ನಾಲಜಿಯ ಜಮಾನದಲ್ಲಿ ಇದು ಸಾಧ್ಯವಿದೆ. ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಹೊಸ ಇ-ಟೆಕ್ಸ್‌ಟೈಲ್‌ ಚಾರ್ಜರ್‌ ಎಂಟ್ರಿ ನೀಡಿದೆ. ಇದು ನಿಮ್ಮನ್ನು ಅಚ್ಚರಿಗೆ ದೂಡುವುದು ಮಾತ್ರವಲ್ಲ, ನಿಮ್ಮ ಊಹೆಯನ್ನು ಕೂಡ ಮೀರಿಸಿಬಿಡುತ್ತದೆ.

ಟೆಕ್‌

ಹೌದು, ಟೆಕ್‌ ಮಾರುಕಟ್ಟೆಗೆ ಹೊಸ ಇ-ಟೆಕ್ಸ್‌ಟೈಲ್‌ ಚಾರ್ಜರ್ ಬಿಡುಗಡೆಯಾಗಿದೆ. ಇದು ನಿಮ್ಮ ಫೋನ್ ಚಾರ್ಜಿಂಗ್ ಪ್ರಕ್ರಿಯೆಯ ರೀತಿಯನ್ನು ಶಾಶ್ವತವಾಗಿ ಬದಲಾಯಿಸುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಈ ಟೆಕ್ನಾಲಜಿಯಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಬಟ್ಟೆಗಳನ್ನು ಬಳಸಬಹುದಾಗಿದೆ. ಮೊಬೈಲ್‌ ಚಾರ್ಜ್‌ ಮಾಡುವ ಬಟ್ಟೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದ್ರೆ ಏನಿದು ಇ-ಟೆಕ್ಸ್‌ಟೈಲ್‌? ಇದರಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇ-ಟೆಕ್ನಾಲಜಿ?

ಇ-ಟೆಕ್ನಾಲಜಿ?

ಮೊಬೈಲ್‌ ಅನ್ನು ಚಾರ್ಜ್‌ ಮಾಡುವುದಕ್ಕಾಗಿಯೇ ಇ-ಟೆಕ್ಸ್‌ಟೈಲ್ ಅನ್ನು ಪರಿಚಯಿಸಲಾಗಿದೆ. ಇದು ಒಂದು ರೀತಿಯ ವಿಶೇಷವಾದ ಬಟ್ಟೆಯಾಗಿದ್ದು, ಸಾಮಾನ್ಯ ಬಟ್ಟೆಗಳಿಗಿಂತ ವಿಭಿನ್ನವಾಗಿದೆ. ಆದರೆ ಈ ಬಟ್ಟೆಗಳನ್ನು ಧರಿಸಿಕೊಂಡು ಫೋನ್‌ ಅನ್ನು ಚಾರ್ಜ್‌ ಮಾಡಬಹುದಾಗಿದೆ. ಇದನ್ನು ಫ್ಯಾಬ್ರಿಕ್ ಬಳಸಿ ತಯಾರಿಸಲಾಗಿದ್ದು, ಬಟ್ಟೆಗಳು ಸೌರ ಶಕ್ತಿಯನ್ನು ಉಳಿಸುತ್ತವೆ ಮತ್ತು ಸ್ಟೋರೇಜ್‌ ಮಾಡಲಿದೆ. ಈ ಸೌರಶಕ್ತಿಯ ಮೂಲಕ ನೀವು ಬಯಸಿದಾಗ ಅದನ್ನು ಸ್ಮಾರ್ಟ್‌ಫೋನ್ ಚಾರ್ಜ್‌ಗೆ ಬಳಸಬಹುದಾಗಿದೆ.

ಇ- ಟೆಕ್ಸ್‌ಟೈಲ್‌ ಪರಿಕಲ್ಪನೆಯ ಮೂಲ ಯಾವುದು?

ಇ- ಟೆಕ್ಸ್‌ಟೈಲ್‌ ಪರಿಕಲ್ಪನೆಯ ಮೂಲ ಯಾವುದು?

ಈ ಹೊಸ ತಂತ್ರಜ್ಞಾನ ನಾಟಿಂಗ್ ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಕಲ್ಪನೆಯಾಗಿದೆ. ಬಟ್ಟೆಗಳ ಮೂಲಕ ಮೊಬೈಲ್‌ ಅನ್ನು ಚಾರ್ಜ್‌ ಮಾಡುವ ಪರಿಕಲ್ಪನೆಯೊಂದಿಗೆ ಈ ಹೊಸ ಬಟ್ಟೆಯನ್ನು ಸಿದ್ದಪಡಿಸಿದ್ದಾರೆ. ಸೂರ್ಯನ ಶಾಖವನ್ನು ಹೀರಿಕೊಂಡು ಅದನ್ನು ಮೊಬೈಲ್‌ ಚಾರ್ಜ್‌ ಮಾಡಲು ಬಳಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ವಿಶೇಷ ಫ್ಯಾಬ್ರಿಕ್ ಬಳಸಿ ಈ ಬಟ್ಟೆಯನ್ನು ಸಿದ್ಧಪಡಿಸಿದ್ದಾರೆ. ಈ ಬಟ್ಟೆ ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಬಳಸಬಹುದಾದ ಸೌರ ಶಕ್ತಿಯನ್ನು ಸಂಗ್ರಹಿಸುತ್ತದೆ.

ಏನಿದು ಫ್ಯಾಬ್ರಿಕ್‌ ವಿಶೇಷ?

ಏನಿದು ಫ್ಯಾಬ್ರಿಕ್‌ ವಿಶೇಷ?

ಫ್ಯಾಬ್ರಿಕ್ ಸೋಲಾರ್‌ ಎನರ್ಜಿಯನ್ನು ಸೇವ್‌ ಮಾಡಲಿದ್ದು, ಸ್ಟೋರೇಜ್‌ ಮಾಡಲಿದೆ. ಇದಕ್ಕಾಗಿ ವಿಜ್ಞಾನಿಗಳು 1,200 ಸ್ಮಾಲ್‌ ಸೋಲಾರ್‌ ಪ್ಯಾನಲ್‌ಗಳನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಸೋಲಾರ್‌ ಎನರ್ಜಿಯನ್ನು ಸ್ಟೋರೇಜ್‌ ಮಾಡಲು ಸಾಧ್ಯವಾಗಲಿದೆ. ಇದನ್ನು ಬಳಸಿಕೊಂಡು ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಬಹುದು. ಈ ಫ್ಯಾಬ್ರಿಕ್ 400 ಮಿಲಿವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಗ್ಯಾಜೆಟ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್ಸ್‌ ಕೂಡ ಸೇರಿವೆ.

ಟೆಕ್ನಾಲಜಿ

ಸದ್ಯ ಈ ಹೊಸ ಟೆಕ್ನಾಲಜಿ ಟೆಕ್‌ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಒಂದು ವೇಳೆ ಈ ಟೆಕ್ನಾಲಜಿ ಎಲ್ಲಾ ಕಡೆಯು ಯಶಸ್ವಿಯಾದರೆ ಸ್ಮಾರ್ಟ್‌ಫೋನ್‌ಗಳ ಚಾರ್ಜಿಂಗ್‌ ಟೆಕ್ನಾಲಜಿಯಲ್ಲಿ ಹೊಸ ಬದಲಾವಣೆಯಾಗುವುದು ಖಂಡಿತ. ಅಲ್ಲದೆ ಮೊಬೈಲ್‌ ಚಾರ್ಜಿಂಗ್‌ಗಾಗಿ ಹುಡುಕಾಡುವ ಅವಶ್ಯಕತೆ ಕೂಡ ಇರುವುದಿಲ್ಲ. ಕೇವಲ ಸೂರ್ಯನ ಕಿರಣಗಳನ್ನು ಬಳಸಿಕೊಂಡು ನೀವು ಧರಿಸಿದ ಬಟ್ಟೆಯ ಮೂಲಕವೇ ನಿಮ್ಮ ಡಿವೈಸ್‌ಗಳನ್ನು ಚಾರ್ಜ್‌ ಮಾಡಿಬಿಡಬಹುದು.

ಚಾರ್ಜ್‌

ಸದ್ಯ ಬಟ್ಟೆಯ ಮೂಲಕ ಚಾರ್ಜ್‌ ಮಾಡಲು ಅನುಮತಿಸುವ ಈ ಟೆಕ್ನಾಲಜಿ ಮೂಲಕ ಚಾರ್ಜ್‌ ಮಾಡುವಾಗ ಇದಕ್ಕೆ ವಾಯರ್‌ ಚಾರ್ಜಿಂಗ್‌ ಅವಶ್ಯಕತೆಯಿದೆಯಾ? ಇಲ್ಲ ಇದು ಕೇವಲ ವಾಯರ್‌ಲೆಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆಯಾ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗಬೇಕಿದೆ.

Best Mobiles in India

Read more about:
English summary
here is how you can charge your phone and other gadgets using clothes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X