ಇಂಟರ್‌ನೆಟ್‌ ಇಲ್ಲದೆ ಹೋದರೂ UPI ಮೂಲಕ ಹಣ ಕಳುಹಿಸಲು ಹೀಗೆ ಮಾಡಿ!

|

ಪ್ರಸ್ತುತ ದಿನಗಳಲ್ಲಿ ಯುಪಿಐ ಪಾವತಿ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಕೊರೊನಾ ವೈರಸ್‌ನ ಆಗಮನದ ನಂತರ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಇನ್ನೂ ಹೆಚ್ಚಿನ ಪ್ರಸಿದ್ದಿ ಪಡೆದುಕೊಂಡಿದೆ. ಇನ್ನು ಯುಪಿಐ ಪಾವತಿ ವ್ಯವಸ್ಥೆಗೆ ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್‌ ಅವಶ್ಯಕತೆ ಇದೆ. ಇಂಟರ್‌ನೆಟ್‌ ಇಲ್ಲದ ಸಮಯದಲ್ಲಿ ಯುಪಿಐ ಪಾವತಿ ಮಾಡುವುದು ಕಷ್ಟಕರವಾಗಲಿದೆ. ಇಂತಹ ಸನ್ನಿವೇಶದಲ್ಲಿ ಏನು ಮಾಡುವುದು ಅನ್ನೊದು ಕೆಲವರಿಗೆ ತಿಳಿದೆ ಇಲ್ಲ. ಆದರೆ ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದೆ ಹೋದರೂ ಸಹ ಯುಪಿಐ ಪಾವತಿ ಮಾಡುವುದಕ್ಕೆ ಅವಕಾಶವಿದೆ.

ಇಂಟರ್ನೆಟ್

ಹೌದು, ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದೇ ಹೋದರೆ UPI ಪಾವತಿ ವ್ಯವಸ್ಥೆ ಬಳಸುವುದು ಕಷ್ಟಕರ. ಆದಾಗ್ಯೂ, ಯುಎಸ್‌ಎಸ್‌ಡಿ ಆಧಾರಿತ ಮೊಬೈಲ್ ಬ್ಯಾಂಕಿಂಗ್‌ ಮೂಲಕ ಯಾವುದೇ ಡೇಟಾ ಕನೆಕ್ಟಿವಿಟಿ ಇಲ್ಲದೆ ಯುಪಿಐ ಪಾವತಿ ಮೂಲಕ ಹಣವನ್ನು ಕಳುಹಿಸಬಹುದಾಗಿದೆ. ಇದನ್ನು ಬಳಸಿ ನೀವು ನಿಮ್ಮ ಆಂಡ್ರಾಯ್ಡ್ ಫೋನ್, ಐಫೋನ್ ಅಥವಾ ಬೇಸಿಕ್‌ ಫೀಚರ್ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದೆ ಆಫ್‌ಲೈನ್ UPI ಪಾವತಿ ಮಾಡಬಹುದು. ಅದು ಹೇಗೆ ಸಾಧ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್‌ ಇಲ್ಲದೆ UPI ಪಾವತಿ ಮಾಡುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್‌ ಇಲ್ಲದೆ UPI ಪಾವತಿ ಮಾಡುವುದು ಹೇಗೆ?

ಇಂಟರ್‌ನೆಟ್‌ ಇಲ್ಲದೆ ನೀವು ಯುಪಿಐ ಪಾವತಿ ಮಾಡಬೇಕಾದ ಸನ್ನಿವೇಶ ಎದುರಾದಗ ಎಲ್ಲರೂ ಸಂಕಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ.ಇಂತಹ ಸನ್ನಿವೇಶದಲ್ಲಿ ಯುಎಸ್‌ಎಸ್‌ಡಿ ಆಧಾರಿತ *99# ಆಫ್‌ಲೈನ್ ಮೂಲಕ ಪೇಮೆಂಟ್‌ ಅನ್ನು ಮಾಡಬಹುದಾಗಿದೆ. ಇನ್ನು ಯುಎಸ್‌ಎಸ್‌ಡಿ ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭದಲ್ಲಿ ಎನ್‌ಯುಐಪಿ ಸೇವೆಯಾಗಿ ಎನ್‌ಪಿಐಸಿ ಆರಂಭಿಸಿತ್ತು. ಇದನ್ನು BHIM ಜೊತೆಗೆ ಡಿಸೆಂಬರ್ 2016 ರಲ್ಲಿ ಪ್ರಾರಂಭಿಸಲಾಗಿದೆ.

NPCI

NPCI ಯುಪಿಐ ಪಾವತಿಗಳನ್ನು ಅಪ್‌ಗ್ರೇಡ್ ಮಾಡಿದ USSD 2.0 ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ಯುಪಿಐ ಪಾವತಿಯನ್ನು ಇಂಟರ್‌ನೆಟ್‌ ಇಲ್ಲದೆ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಈ ಸೇವೆಯನ್ನು ಬಳಸಿಕೊಂಡು ನೀವು ಬೇಸಿಕ್‌ ಮೊಬೈಲ್‌ಗಳಲ್ಲೂ ಸಹ ಯುಪಿಐ ಪಾವತಿಯನ್ನು ಮಾಡಬಹುದಾಗಿದೆ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ಕೂಡ ಮೊಬೈಲ್‌ ಬ್ಯಾಕಿಂಗ್‌ ಸೇಔಎ ಬಳಸುವುದಕ್ಕೆ ಅವಕಾಸ ನೀಡಲಿದೆ. ಇದನ್ನು ಬಳಸಿ ನೀವು ಯಾವುದೇ ಡೇಟಾ ಸಂಪರ್ಕವಿಲ್ಲದೆ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

 ಆಫ್‌ಲೈನ್ UPI ಪಾವತಿ ಸೇವೆಯ ವಿಶೇಷತೆಗಳು!

ಆಫ್‌ಲೈನ್ UPI ಪಾವತಿ ಸೇವೆಯ ವಿಶೇಷತೆಗಳು!

* ಇಂಟರ್‌ನೆಟ್‌ ಇಲ್ಲದೆ ಹಣಕಾಉ ಪಾವತಿ ಮಾಡಲು ಅವಕಾಶ ನೀಡಲಿದೆ.
* ಹಣವನ್ನು ಕಳುಹಿಸುವುದು, ಅಕೌಂಟ್‌ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಮತ್ತು ಯುಪಿಐ ಪಿನ್ ಬದಲಾಯಿಸುವ ಫೀಚರ್ಸ್‌ಗಳನ್ನು ಬಳಸಬಹುದು.
* ಇನ್ನು ನೀವು ಎಲ್ಲಾ ಟೆಲಿಕಾಂಗಳಲ್ಲಿ ಸಾಮಾನ್ಯ ಕೋಡ್ *99# ಮೂಲಕ ಪ್ರವೇಶಿಸಬಹುದು.
* GSM ಸೇವಾ ಪೂರೈಕೆದಾರರಲ್ಲಿ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
* ಇನ್ನು ಈ ಸೇವೆ ದಿನದ 24ಗಂಟೆಯೂ ಲಭ್ಯವಾಗಲಿದೆ.
* ನಿಮ್ಮ ಆಯ್ಕೆಯ ಭಾಷೆಗಳಲ್ಲಿ ಪ್ರವೇಶಿಸಬಹುದು.

ಇನ್ನು 99# ಬಳಸಿ ಇಂಟರ್‌ನೆಟ್‌ ಇಲ್ಲದೆ UPI ಮೂಲಕ ಹಣ ಕಳುಹಿಸುವುದು ಹೇಗೆ?

ಇನ್ನು 99# ಬಳಸಿ ಇಂಟರ್‌ನೆಟ್‌ ಇಲ್ಲದೆ UPI ಮೂಲಕ ಹಣ ಕಳುಹಿಸುವುದು ಹೇಗೆ?

ಹಂತ:1 ಡಯಲ್ *99#
ನಿಮ್ಮ ಮೊಬೈಲ್‌ನಲ್ಲಿ *99# ಡಯಲ್ ಮಾಡಿ. ನಂತರ ನಿಮಗೆ ಸೆಂಡ್‌ ಮನಿ, ರಿಸಿವ್‌ ಮನಿ, ಬ್ಯಾಲೆನ್ಸ್ ಚೆಕ್‌, ಮೈ ಪ್ರೊಫೈಲ್, ಮತ್ತು ಯುಪಿಐ ಪಿನ್ ಸೇರಿದಂತೆ ಏಳು ವಿಭಿನ್ನ ಆಯ್ಕೆಗಳು ನಿಮಗೆ ಮೇನ್‌ ಮೆನುವಿನಲ್ಲಿ ಕಾಣಿಸಲಿದೆ. ಇದರಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಆಯ್ಕೆ ಮಾಡಿ.

ಹಂತ:2 ಸೆಂಡ್‌ ಮನಿ ಆಯ್ಕೆಮಾಡಿ
ನೀವು ಯಾರಿಗಾದರೂ ಹಣ ಕಳುಹಿಸಬೇಕಾದರೆ ಲಭ್ಯವಿರುವ ಆಯ್ಕೆಗಳಿಂದ 'ಹಣ ಕಳುಹಿಸಿ' ಆಯ್ಕೆ ಮಾಡಿರಿ, ಇದಕ್ಕಾಗಿ ನೀವು ಒಂದನ್ನು ಒತ್ತಿರಿ. ನಂತರ ನಿಮಗೆ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಬಳಸಿ ಹಣವನ್ನು ಕಳುಹಿಸುವ ಆಯ್ಕೆ ಕಾಣಲಿದೆ. ಇದರಲ್ಲಿ ನೀವು ಯಾವ ಆಯ್ಕೆಯನ್ನು ಮಾಡುತ್ತಿರಿ ಅದನ್ನು ಆಯ್ಕೆ ಮಾಡಿರಿ.

ಹಂತ:3 ಯಾರಿಗೆ ಕಳುಹಿಸಬೇಕು ಅವರನ್ನು ಆಯ್ಕೆ ಮಾಡಿ
ನೀವು ಮೊಬೈಲ್ ಸಂಖ್ಯೆ ಮೂಲಕ ಹಣ ಕಳುಹಿಸುವುದಾದರೆ ನೀವು ಹಣ ಕಳುಹಿಸುತ್ತಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
UPI ID ಯನ್ನು ಆಯ್ಕೆ ಮಾಡಿದರೆ: ಆ ವ್ಯಕ್ತಿಯ UPI ID ಯನ್ನು ನಮೂದಿಸಿ

ಹಂತ:4 ಅಮೌಂಟ್‌ ಎಂಟ್ರಿ ಮಾಡಿ
ನೀವು ಫಲಾನುಭವಿಯ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿದ ನಂತರ, ಅಮೌಂಟ್‌ ಎಂಟ್ರಿ ಮಾಡಿ.

ಹಂತ:5 ನಿಮ್ಮ UPI ಪಿನ್ ಎಂಟ್ರಿ ಮಾಡಿರಿ
ಮೇಲಿನ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ ನೀವು ನಿಮ್ಮ ಆರು ಅಥವಾ ನಾಲ್ಕು-ಅಂಕಿಯ UPI ಪಿನ್ ಎಂಟ್ರಿ ಮಾಡಿ, ನಂತರ, ಸೆಂಡ್‌ ಅನ್ನು ಕ್ಲಿಕ್ ಮಾಡಿ.ಈಗ ನಿಮ್ಮ ಹಣ ನೀವು ಬಯಸಿದ ವ್ಯಕ್ತಿಯ ಅಕೌಂಟ್‌ಗೆ ವರ್ಗಾವಣೆ ಆಗಿರುತ್ತದೆ.

Best Mobiles in India

Read more about:
English summary
how you can make offline UPI payments without internet on any phone out there.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X