ಜಾಗತಿಕ ಮಾರುಕಟ್ಟೆಯ ಅತ್ಯಂತ ಜನಪ್ರಿಯ 5G ಸ್ಮಾರ್ಟ್‌ಫೋನ್‌ಗಳು!

|

ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಕೂಡ ಬದಲಾಗುತ್ತಿದೆ. ಅಲ್ಲದೆ ನೆಟ್‌ವರ್ಕ್‌ಗಳ ವೇಗ ಕೂಡ ಹೆಚ್ಚಾಗುತ್ತಿದ್ದು, 4G ಯಿಂದ 5G ಗೆ ಬದಲಾಗುತ್ತಿದ್ದಾರೆ. ಇನ್ನು 5G ಸ್ಮಾರ್ಟ್‌ಫೋನ್‌ಳಲ್ಲಿ ಹ್ಯಾಂಡ್‌ಸೆಟ್‌ಗಳಲ್ಲಿ ಸ್ಥಿರವಾದ ರೋಲ್ ಔಟ್ ಆಗುವುದರಿಂದ, 5G ಸ್ಮಾರ್ಟ್‌ಫೋನ್‌ಗಳ ಬೇಡಿಕೆ ನಿಧಾನವಾಗಿ ಹೆಚ್ಚುತ್ತಿದೆ. ಅದರಲ್ಲೂ ಐಫೋನ್‌ ಮತ್ತು ಉನ್ನತ-ಮಟ್ಟದ ಸ್ಯಾಮ್‌ಸಂಗ್ ಫೋನ್‌ಗಳು ಸೇರಿದಂತೆ ಹೆಚ್ಚಿನ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಭವಿಷ್ಯದ ದೃಷ್ಟಿಯಿಂದ ಬಳಕೆದಾರರಿಗೆ 5G ಬೆಂಬಲವನ್ನು ನೀಡುತ್ತಿವೆ.

ಸ್ಮಾರ್ಟ್‌ಫೋನ್‌

ಹೌದು, ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು 5G ಯನ್ನು ಬೆಂಬಲಿಸಲಿವೆ. ಸದ್ಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್‌ನ ಇತ್ತೀಚಿನ ವರದಿಯ ಪ್ರಕಾರ, ಐಫೋನ್ 12 ಶ್ರೇಣಿ, ಸ್ಯಾಮ್‌ಸಂಗ್, ಹುವಾವೇ ಮತ್ತು ಒಪ್ಪೋ ಫೋನ್‌ಗಳ ಜೊತೆಗೆ ವಿಶ್ವದಾದ್ಯಂತ ಹೆಚ್ಚು ಮಾರಾಟವಾದ 5G ಸ್ಮಾರ್ಟ್‌ಫೋನ್ ಆಗಿದೆ. ಹಾಗಾದ್ರೆ ಜಾತಿಕ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ 5G ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಫೋನ್ 12

ಆಪಲ್ ಐಫೋನ್ 12

ಆಪಲ್‌ ಐಫೋನ್‌ 12 ವಿಶ್ವದಲ್ಲಿಯೇ ಅ ತ್ಯಂತ ಜನಪ್ರಿಯ 5G ಸ್ಮಾರ್ಟ್‌ಫೋನ್ ಆಗಿದ್ದು, 16% ಮಾರುಕಟ್ಟೆ ಪಾಲು ಹೊಂದಿದೆ. ಸದ್ಯ ಕೌಂಟರ್‌ಪಾಯಿಂಟ್ ರಿಸರ್ಚ್‌ನ ಮಾಸಿಕ ಮಾರುಕಟ್ಟೆ ಪಲ್ಸ್ ಸೇವೆಯ ಪ್ರಕಾರ ಅಕ್ಟೋಬರ್‌ನಲ್ಲಿ ವಿಶ್ವದ ಅತ್ಯಂತ ಜನಪ್ರಿಯ 5 ಜಿ ಸ್ಮಾರ್ಟ್‌ಫೋನ್ ಆಗಿದೆ.

ಆಪಲ್ ಐಫೋನ್ 12 ಪ್ರೊ

ಆಪಲ್ ಐಫೋನ್ 12 ಪ್ರೊ

ಆಪಲ್‌ ಐಫೋನ್‌ 12 ಪ್ರೊ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ 8% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಮಾಸಿಕ ಮಾರುಕಟ್ಟೆ ಪಲ್ಸ್ ಸೇವೆಯ ಪ್ರಕಾರ, ಆಪಲ್ ಐಫೋನ್ 12 ಪ್ರೊ ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟವಾದ 5G ಮಾದರಿಯಾಗಿದೆ. ಐಫೋನ್ 12 ಮತ್ತು 12 ಪ್ರೊ ಒಟ್ಟಾಗಿ ಅಕ್ಟೋಬರ್‌ನಲ್ಲಿ ನಡೆದ ಒಟ್ಟು 5G ಸ್ಮಾರ್ಟ್‌ಫೋನ್ ಮಾರಾಟದ ನಾಲ್ಕನೇ ಒಂದು ಭಾಗವನ್ನು ವಶಪಡಿಸಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ ಅತ್ಯಂತ ಜನಪ್ರಿಯ ಆಂಡ್ರಾಯ್ಡ್ 5G ಸ್ಮಾರ್ಟ್‌ಫೋನ್ ಆಗಿದೆ. ವಿಶ್ವದ ಒಟ್ಟು 5G ಸ್ಮಾರ್ಟ್‌ಫೋನ್ ಮಾರಾಟದಲ್ಲಿ 4% ಮಾರುಕಟ್ಟೆ ಪಾಲನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಮೂರನೇ ಸ್ಥಾನದಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 5G ಸ್ಮಾರ್ಟ್‌ಫೋನ್‌ ವಿಶ್ವದ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಅಲ್ಲದೆ 5G ಯನ್ನು ಬೆಂಬಲಿಸುವ ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಲಭ್ಯವಿರುವ ಆಂಡ್ರಾಯ್ಡ್ ಫೋನ್‌ಗಳಲ್ಲಿ ಒಂದಾಗಿದೆ.

ಹುವಾವೇ ನೋವಾ 7 5G

ಹುವಾವೇ ನೋವಾ 7 5G

ಸೀಮಿತ ಲಭ್ಯತೆಯನ್ನು ಹೊಂದಿದ್ದರೂ ಹೆಚ್ಚು ಮಾರಾಟವಾದ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಹುವಾವೇ ನೋವಾ 7 5G ಕೂಡ ಸ್ಥಾನ ಪಡೆದುಕೊಂಡಿದೆ. ಏಪ್ರಿಲ್ 2020 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಹುವಾವೇ ನೋವಾ 7 5G ಕಂಪನಿಯ ಸ್ವಂತ ಕಿರಿನ್ 985 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ.

Best Mobiles in India

English summary
With the steady roll out of 5G handsets, the demand for 5G smartphones is slowly increasing.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X