Subscribe to Gizbot

ಸ್ಯಾಮ್‌ಸಂಗ್ ಓನ್ಲಿ 4G VoLTE ಸಪೋರ್ಟ್ ಸ್ಮಾರ್ಟ್‌ಫೋನ್ ಲಾಂಚ್‌ಗೆ ನಿರ್ಧಾರ: ಏಕೆ ಗೊತ್ತೇ?

Written By:

ದಕ್ಷಿಣ ಕೊರಿಯಾ ಸ್ಮಾರ್ಟ್‌ಫೋನ್‌ ತಯಾರಕ ದೈತ್ಯ ಕಂಪನಿ 'ಸ್ಯಾಮ್‌ಸಂಗ್', ಭಾರತದಲ್ಲಿ ಕೇವಲ 4G VoLTE ಸಪೋರ್ಟ್‌ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಲಾಂಚ್‌ ಮಾಡುವ ಬಗ್ಗೆ ಮಾಹಿತಿ ಪ್ರಕಟಗೊಳಿಸಿದೆ. ಅಂದಹಾಗೆ ಈ ತೀರ್ಮಾನಕ್ಕೆ ಕಾರಣ ಭಾರತದಲ್ಲಿ ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕ್ಷೇತ್ರ.

ಭಾರತದಲ್ಲಿ ವೇಗವಾಗಿ ಟೆಲಿಕಾಂ ಕ್ಷೇತ್ರ ಬೆಳೆಯಲು ಪ್ರಮುಖ ಕಾರಣ 'ರಿಲಾಯನ್ಸ್ ಜಿಯೋ' ಎಂದು ಸ್ಯಾಮ್‌ಸಂಗ್ ಹೇಳಿದ್ದು, ದೇಶದಲ್ಲಿ ಮೊದಲ LTE ನೆಟ್‌ವರ್ಕ್‌ ಇದಾಗಿದೆ ಎಂದಿದೆ. ಈ ನೆಟ್‌ವರ್ಕ್ ನೀವು ಇರುವ ಪ್ರದೇಶದಲ್ಲಿ 3G, 2G ನೆಟ್‌ವರ್ಕ್‌ ಇದ್ದೂ, 4G ನೆಟ್‌ವರ್ಕ್‌ ಇಲ್ಲದಿದ್ದರೂ ಹಿಂದೆ ಸರಿಯುವುದಿಲ್ಲ. ಅಂದಹಾಗೆ ಸ್ಯಾಮ್‌ಸಂಗ್‌(samsung) ಕೇವಲ 4G VoLTE ಸಪೋರ್ಟ್ ಡಿವೈಸ್‌ಗಳನ್ನು ಮಾತ್ರ ಲಾಂಚ್‌ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದು ಏಕೆ ಎಂದು ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೇ.80 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು 4G ಎನೇಬಲ್ ಆಗಿವೆ

ಶೇ.80 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು 4G ಎನೇಬಲ್ ಆಗಿವೆ

ಭಾರತದ ಸ್ಯಾಮ್‌ಸಂಗ್ ಉಪಾಧ್ಯಕ್ಷ, ಮನು ಶರ್ಮಾ'ರವರು ಶೇ.80 ಕ್ಕೂ ಹೆಚ್ಚು ಜನರು 4G ಎನೇಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ನಂಬಿದ್ದಾರೆ. ಇತ್ತೀಚೆಗೆ ಕೈಗೊಂಡ ಸಮೀಕ್ಷೆ ಪ್ರಕಾರ, ರಿಲಾಯನ್ಸ್ ಜಿಯೋ ಪ್ರಭಾವದಿಂದಾಗಿ ದಿನದಿಂದ ದಿನಕ್ಕೆ 4G ಬಳಕೆದಾರರು ಹೆಚ್ಚಾಗುತ್ತಿದ್ದಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರಂಭಿಕ ಸ್ಮಾರ್ಟ್‌ಫೋನ್‌ಗಳಲ್ಲಿ VoLTE ಫೀಚರ್

ಆರಂಭಿಕ ಸ್ಮಾರ್ಟ್‌ಫೋನ್‌ಗಳಲ್ಲಿ VoLTE ಫೀಚರ್

ಶರ್ಮಾ'ರವರು ಕಂಪನಿಯು ಎಲ್ಲಾ ಸಿಗ್ಮೆಂಟ್‌ಗಳಲ್ಲೂ, ಅಂದರೆ ಆರಂಭಿಕ ಕೆಟಗರಿಯಲ್ಲೂ 4G VoLTE ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲಿದೆ ಎಂದು ಹೇಳಿದ್ದಾರೆ. ಕಂಪನಿಯು ಈಗಾಗಲೇ ಗ್ಯಾಲಕ್ಸಿ ಜೆ2 (2016), ಗ್ಯಾಲಕ್ಸಿ ಆನ್‌5 (2016) ಸ್ಮಾರ್ಟ್‌ಫೋನ್‌ಗಳನ್ನು ಈ ಕೆಟಗರಿಯಲ್ಲಿ ಹೊಂದಿದೆ.

 ನೋಯ್ಡಾ ತಯಾರಕ ಘಟಕದ ಅಭಿವೃದ್ದಿ

ನೋಯ್ಡಾ ತಯಾರಕ ಘಟಕದ ಅಭಿವೃದ್ದಿ

ಸ್ಯಾಮ್‌ಸಂಗ್‌ ಸುಮಾರು 2,000 ರೂ ಕೋಟಿಯನ್ನು, ನೋಯ್ಡಾ ತಯಾರಕ ಘಟಕದಲ್ಲಿ 4G ಸ್ಮಾರ್ಟ್‌ಫೋನ್‌ ತಯಾರಿಸಲು ಹೂಡಿಕೆ ಮಾಡಿದೆ. ಇದೊಂದು ಉತ್ತಮ ಬೆಳವಣಿಗೆ ಆಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ

ಭಾರತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ

ಮೊದಲೇ ಹೇಳಿದಂತೆ, ಭಾರತದ ಟೆಲಿಕಾಂ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬದಲಾವಣೆ ತಂದಿದೆ. ವಿಶೇಷವಾಗಿ ರಿಲಾಯನ್ಸ್ ಜಿಯೋ ಲಾಂಚ್ ಮತ್ತು ಜಿಯೋ ನೀಡಿದ ಡಿಸೆಂಬರ್‌ 31 ರವರೆಗಿನ ಉಚಿತ ಸೇವೆ ಬೆಳವಣಿಗೆಗೆ ಕಾರಣವಾಗಿದೆ.

ಗುಡ್‌ ಫಾರ್‌ ರಿಲಾಯನ್ಸ್ ಜಿಯೋ

ಗುಡ್‌ ಫಾರ್‌ ರಿಲಾಯನ್ಸ್ ಜಿಯೋ

ಸ್ಯಾಮ್‌ಸಂಗ್ ಕೈಗೊಂಡಿರುವ ತೀರ್ಮಾನದಿಂದ ಇನ್ನುಮುಂದೆ ರಿಲಾಯನ್ಸ್ ಜಿಯೋಗು ಸಹ ಬಿಗ್‌ ಡೀಲ್ ಆಗಲಿದೆ, ಕಾರಣ ಜಿಯೋ ಸಿಮ್ 3G/2G ನೆಟ್‌ವರ್ಕ್‌ನಲ್ಲಿ ವರ್ಕ್‌ ಆಗುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is the Reason Why Samsung Decided to Launch Only 4G VoLTE Supported Smartphones in India. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot