ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು!

|

ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಡಯುತ್ತಲೇ ಇವೆ. ದೇಶದ ಅಗ್ರ ಮೂರು ಟೆಲಿಕಾಂಗಳಾದ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ವಿಶೇಷ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ತಮ್ಮ ಬಳಕೆದಾರರಿಗೆ ಪ್ರಿಪೇಯ್ಡ್ ಪ್ಲಾನ್‌ಗಳು ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಾ ಬಂದಿವೆ. ಇವುಗಳಲ್ಲಿ ಬಜೆಟ್‌ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳು ಕೂಡ ಸೇರಿವೆ. ಇದಲ್ಲದೆ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ಹೆಚ್ಚುವರಿ ಪ್ರಯೋಜನಗಳು ಮತ್ತು ಚಂದಾದಾರಿಕೆಗಳನ್ನು ನೀಡಲಿವೆ.

ಪೋಸ್ಟ್‌ಪೇಯ್ಡ್

ಹೌದು, ಟೆಲಿಕಾಂ ಕಂಪೆನಿಗಳು ಪರಿಚಯಿಸಿರುವ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತಾ ಬಂದಿವೆ. ಕೆಲವು ಪ್ಲಾನ್‌ಗಳು ದುಬಾರಿಯಾಗಿವೆಯಾದರೈ ಕೆಲವು ಪ್ಲಾನ್‌ಗಳು ಬಜೆಟ್ ಬೆಲೆಯಲ್ಲಿಯೂ ದೊರೆಯಲಿವೆ. ಇದಲ್ಲದೆ ಜಿಯೋ, ಏರ್‌ಟೆಲ್‌, ವಿ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಅನೇಕ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಹಾಗಾದ್ರೆ ಜಿಯೋ, ಏರ್‌ಟೆಲ್‌, ವಿ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂಗಳ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌

ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌

ಜಿಯೋ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ 599ರೂ. ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ತಿಂಗಳಿಗೆ ಒಟ್ಟು 100GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಡೇಟಾ ಪ್ರಯೋಜನ ಮುಗಿದ ನಂತರ ಬಳಕೆದಾರರು 10ರೂ ಬೆಲೆಯಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ದಿನನಿತ್ಯ 100 SMS ಸೌಲಭ್ಯ ಕೂಡ ಲಭ್ಯ. ಇದಲ್ಲದೆ ಬಳಕೆದಾರರು ಈ ಪ್ಲಾನ್‌ನಲ್ಲಿ ಒಂದು ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಪಡೆಯುತ್ತಾರೆ. ಇದರ ಜೊತೆಗೆ, ಮಲ್ಟಿ OTT ಚಂದಾದಾರಿಕೆಗಳನ್ನು ಸಹ ನೀಡುತ್ತಿದೆ. ಇದರಿಂದ ಬಳಕೆದಾರರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಏರ್‌ಟೆಲ್‌ನ ಫ್ಯಾಮಿಲಿ ಇನ್ಫಿನಿಟಿ 999 ಪ್ಲಾನ್‌

ಏರ್‌ಟೆಲ್‌ನ ಫ್ಯಾಮಿಲಿ ಇನ್ಫಿನಿಟಿ 999 ಪ್ಲಾನ್‌

ಈ ಪ್ಲಾನ್‌ ಏರ್‌ಟೆಲ್ ಟೆಲಿಕಾಂ ನೀಡುವ ಅತ್ಯಂತ ಬಜೆಟ್‌ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ ಆಗಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ 200 GB ವರೆಗೆ ರೋಲ್‌ಓವರ್‌ನೊಂದಿಗೆ 150 GB ಮಾಸಿಕ ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ಲಾನ್‌ನಲ್ಲಿ ಬಳಕೆದಾರರು ಕುಟುಂಬ ಸದಸ್ಯರಿಗೆ 1 ಸಾಮಾನ್ಯ ಸಿಮ್ ಮತ್ತು 2 ಉಚಿತ ಆಡ್-ಆನ್ ನಿಯಮಿತ ಧ್ವನಿ ಸಂಪರ್ಕಗಳನ್ನು ಪಡೆಯಬಹುದಾಗಿದೆ. ಜೊತೆಗೆ ಈ ಪ್ಲಾನ್‌ ಏರ್‌ಟೆಲ್ ಥ್ಯಾಂಕ್ಸ್ ಪ್ಲಾಟಿನಂ ರಿವಾರ್ಡ್‌ಗಳೊಂದಿಗೆ ಬರುತ್ತದೆ. ಅಲ್ಲದೆ 1 ವರ್ಷಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವವನ್ನು ನೀಡಲಿದೆ.

ವಿ ಟೆಲಿಕಾಂ ಫ್ಯಾಮಿಲಿ ಪ್ಲಾನ್‌

ವಿ ಟೆಲಿಕಾಂ ಫ್ಯಾಮಿಲಿ ಪ್ಲಾನ್‌

ವಿ ಟೆಲಿಕಾಂ 699ರೂ. ಪ್ಲಾನ್‌ ಅಗ್ಗದ ಬೆಲೆಯಲ್ಲಿ ದೊರೆಯುವ ಫ್ಯಾಮಿಲಿ ಪ್ಲಾನ್‌ ಆಗಿದೆ. ಇನ್ನು ಈ ಪ್ಲಾನ್‌ನಲ್ಲಿ ಎರಡು ಸದಸ್ಯರಿಗೆ ಸಂಪರ್ಕವನ್ನು ನೀಡುತ್ತದೆ. ಈ ಪ್ಲಾನ್‌ ಪ್ರಾಥಮಿಕ ಸಂಪರ್ಕಗಳು ಮತ್ತು ದ್ವಿತೀಯಕ ಸಂಪರ್ಕಗಳಿಗೆ ತಲಾ 40GB ಡೇಟಾ ಅಂದರೆ, ಒಟ್ಟು 80GB ಡೇಟಾವನ್ನು ನೀಡುತ್ತದೆ. ಇದಲ್ಲದೆ ಬಳಕೆದಾರರು ತಿಂಗಳಿಗೆ 3000 SMS ಜೊತೆಗೆ 200GB ವರೆಗೆ ರೋಲ್‌ಓವರ್ ಡೇಟಾವನ್ನು ಪಡೆಯಬಹುದು. ಜೊತೆಗೆ ದೈನಂದಿನ ಅನ್‌ಲಿಮಿಟೆಡ್‌ ಕಾಲ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿ ಮೂವೀಸ್‌ ಮತ್ತು TV ​​ಗೆ ಪ್ರವೇಶ ಕೂಡ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌

ಬಿಎಸ್‌ಎನ್‌ಎಲ್‌ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌

ಸರ್ಕಾರಿ ಸ್ವಾಮ್ಯದ ಟೆಲಿಕಾಂ BSNL ಕೂಡ ಅಗ್ಗದ ಬೆಲೆಯಲ್ಲಿ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ 525ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಕೂಡ ಸೇರಿದೆ. ಈ ಪ್ಲಾನ್‌ನಲ್ಲಿ HPLMN ಮತ್ತು MTNL ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್ ದೊರೆಯಲಿದೆ. ಜೊತೆಗೆ ದಿನಕ್ಕೆ 100 SMS ಹಾಗೂ 255GB ವರೆಗಿನ ಡೇಟಾ ರೋಲ್‌ಓವರ್‌ನೊಂದಿಗೆ 85GB ಉಚಿತ ಡೇಟಾವನ್ನು ಸಹ ಪಡೆಯಬಹುದಾಗಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ ಸೌಲಭ್ಯದೊಂದಿಗೆ ಹೆಚ್ಚುವರಿ ಕುಟುಂಬ ಸಿಮ್ ಅನ್ನು ಸಹ ನೀಡುತ್ತದೆ.

Best Mobiles in India

Read more about:
English summary
Here's basic family postpaid plans offered by Jio, Airtel, Vi and BSNL

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X