iOS 16 ಫೋಟೋಸ್‌ ಆಪ್‌ನಲ್ಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?

|

ಆಪಲ್‌ ಕಂಪೆನಿಯ ಬಹು ನಿರೀಕ್ಷಿತ iOS 16 ಈಗಾಗಲೇ ಲೈವ್ ಆಗಿದೆ. ಐಫೋನ್‌ 8 ನಂತರ ಪ್ರಾರಂಭವಾಗುವ ಎಲ್ಲಾ ಐಫೋನ್‌ ಬಳಕೆದಾರರಿಗೂ ಈ ಸಾಫ್ಟ್‌ವೇರ್‌ ಬಳಕೆಗೆ ಲಭ್ಯವಿದೆ. ಇನ್ನು ಈ ಹೊಸ ಆಪರೇಟಿಂಗ್‌ ಸಿಸ್ಟಂನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಫೋನ್‌ನಲ್ಲಿ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದರಿಂದ ಐಫೋನ್‌ ಬಳಕೆ ಮಾಡುವುದು ಇನ್ನಷ್ಟು ರೋಮಾಂಚನವನ್ನು ಉಂಟುಮಾಡಲಿದೆ. ಅಲ್ಲದೆ ಕೆಲವು ಇಂಟರ್‌ಬಿಲ್ಟ್‌ ಅಪ್ಲಿಕೇಶನ್‌ಗಳ ಕಾರ್ಯವನ್ನು ಇದು ವಿಸ್ತರಣೆ ಮಾಡಿದೆ.

ಆಪಲ್‌

ಹೌದು, ಆಪಲ್‌ ಕಂಪೆನಿಯ ಹೊಸ iOS 16 ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ iOS 16ನಲ್ಲಿ ರನ್‌ ಆಗುವ ಐಫೋನ್‌ಗಳಲ್ಲಿ ನಿಮಗೆ ಹೆಚ್ಚಿನ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ. ಇದರಲ್ಲಿ ಐಫೋನ್‌ ಫೋಟೋ ಅಪ್ಲಿಕೇಶನ್‌ ಸೇರಿರುವ ಫೀಚರ್ಸ್‌ಗಳು ಸಾಕಷ್ಟು ಗಮನ ಸೆಳೆದಿವೆ. ಅದರಲ್ಲೂ ಫೋಟೋ ಅಪ್ಲಿಕೇಶನ್‌ನಲ್ಲಿ ಫೋಟೋ ಲೈಬ್ರರಿ, ಕಾಪಿ ಆಂಡ್‌ ಫೇಸ್ಟ್‌ ಎಡಿಟ್ಸ್‌ನಂತಹ ಫೀಚರ್ಸ್‌ಗಳನ್ನು ನಿಮ್ಮ ಬಳಕೆಯ ಅನುಭವವನ್ನು ಹೆಚ್ಚಿಸಲಿವೆ. ಹಾಗಾದ್ರೆ iOS 16 ನಿಂದಾಗಿ ಫೋಟೋ ಅಪ್ಲಿಕೇಶನ್‌ನಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಡೆಂಟಿಫೈ ಮತ್ತು ಡಿಲೀಟ್‌ ಡುಪ್ಲಿಕೇಟ್ಸ್‌

ಐಡೆಂಟಿಫೈ ಮತ್ತು ಡಿಲೀಟ್‌ ಡುಪ್ಲಿಕೇಟ್ಸ್‌

iOS 16 ಫೋಟೋ ಅಪ್ಲಿಕೇಶನ್‌ನಲ್ಲಿ ನಕಲಿ ಪತ್ತೆ ಅತ್ಯಂತ ಉಪಯುಕ್ತವಾದ ಸೇರ್ಪಡೆಯಾಗಿದೆ. ಇದು ಐಫೋನ್‌ನಲ್ಲಿ ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಿದೆ. ಇದರಿಂದ ನಿಮ್ಮ ಐಫೋನ್‌ನಲ್ಲಿರುವ ಡುಪ್ಲಿಕೇಟ್‌ ಫೋಟೋಗಳನ್ನು ಐಡೆಂಟಿಫೈ ಮಾಡಲು ಸಾಧ್ಯವಾಗಲಿದೆ. ಇದು ನಿಮ್ಮ ಕಂಪ್ಲೀಟ್‌ ಫೋಟೋ ಲೈಬ್ರರಿಯನ್ನು ಸ್ಕ್ಯಾನ್ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡುಪ್ಲಿಕೇಟ್‌ ಫೋಟೋಗಳು ಕಂಡುಬಂದರೆ ಅವುಗಳನ್ನು ಡುಪ್ಲಿಕೇಶನ್‌ ಫೋಲ್ಡರ್‌ನಲ್ಲಿ ಇರಿಸಲಿದೆ.

ಲಾಕ್‌ ದಿ ಹಿಡನ್‌ ಫೋಲ್ಡರ್‌

ಲಾಕ್‌ ದಿ ಹಿಡನ್‌ ಫೋಲ್ಡರ್‌

ಇನ್ನು iOS 16 ಮೂಲಕ ಫೋಟೋ ಅಪ್ಲಿಕೇಶನ್‌ ಸೇರಿದ ಪ್ರಮುಖ ಫೀಚರ್ಸ್‌ಗಳಲ್ಲಿ ಹಿಡನ್‌ ಆಲ್ಬಮ್‌ ಅನ್ನು ಲಾಕ್‌ ಮಾಡುವ ಆಯ್ಕೆ ಕೂಡ ಒಂದಾಗಿದೆ. ಇದು ನಿಮ್ಮ ಎಲ್ಲಾ ವೈಯಕ್ತಿಕ ಫೋಟೋಗಳನ್ನು ಫೋಟೋ ಲೈಬ್ರರಿಯಿಂದ ಹೈಡ್‌ ಮಾಡಲಿ ಅನುಮತಿಸಲಿದೆ. iOS 16 ನಲ್ಲಿ ಹಿಡನ್‌ ಆಲ್ಬಮ್‌ನಲ್ಲಿ ಬಯೋಮೆಟ್ರಿಕ್ ಲಾಕಿಂಗ್ (ಫೇಸ್ ಐಡಿ ಅಥವಾ ಟಚ್ ಐಡಿ) ಅನ್ನು ತರುತ್ತದೆ.

ಕಾಪಿ ಪೇಸ್ಟ್‌ ಎಡಿಟ್ಸ್‌

ಕಾಪಿ ಪೇಸ್ಟ್‌ ಎಡಿಟ್ಸ್‌

iOS 16 ಫೋಟೋಸ್‌ ಅಪ್ಲಿಕೇಶನ್‌ನಲ್ಲಿ ಹೊಸ ಫೋಟೋ ಮತ್ತು ವೀಡಿಯೊ ಎಡಿಟಿಂಗ್ ಸಾಮರ್ಥ್ಯಗಳನ್ನು ನೀಡಿದೆ. ಇದು ಫೋಟೋಗಳಿಗೆ ಹೆಚ್ಚು ಉಪಯುಕ್ತವಾದ ಎಡಿಟಿಂಗ್ ಆಯ್ಕೆಗಳನ್ನು ನೀಡಿದೆ. ಅದರಲ್ಲಿಯೂ ಫೋಟೋ ಮತ್ತು ವೀಡಿಯೊಗಳ ನಡುವೆ ಎಡಿಟ್‌ ಅನ್ನು ಕಾಪಿ ಮತ್ತು ಫೆಸ್ಟ್‌ ಮಾಡುವ ಸಾಮರ್ಥ್ಯವನ್ನು ನೀಡಿದೆ.

ಅಂಡೂ ಆಂಡ್‌ ರಿಡೋ ಎಡಿಟ್ಸ್‌

ಅಂಡೂ ಆಂಡ್‌ ರಿಡೋ ಎಡಿಟ್ಸ್‌

iOS 16 ಅಂಡೂ ಆಂಡ್‌ ರೀಡೂ ಎಡಿಟ್ಸ್‌ ಆಯ್ಕೆಯನ್ನು ಸೇರಿಸಿದೆ. ಇದರಿಂದ ಫೋಟೋಸ್‌ ಅಪ್ಲಿಕೇಶನ್‌ನಲ್ಲಿ ನೀವು ಫೋಟೋ/ವೀಡಿಯೊಗೆ ಸೇರಿಸಿದ ಎಡಿಟ್‌ ಅನ್ನು ರಿಡೋ ಮಾಡುವ ಮತ್ತು ಅಂಡೂ ಮಾಡುವ ಆಯ್ಕೆ ನೀಡಲಾಗಿದೆ. ನೀವು ಫೋಟೋಗಳನ್ನು ಎಡಿಟ್‌ ಮಾಡಿ ನಿಮಗೆ ಸರಿ ಎನಿಸದಿದ್ದಾಗಿ ಸರಳ ಟ್ಯಾಪ್‌ ಮೂಲಕ ಮೂಲ ಆವೃತ್ತಿಗೆ ಹಿಂದಿರುಗಬಹುದಾಗಿದೆ.

ಬ್ಯಾಕ್‌ಗ್ರೌಂಡ್‌

ಬ್ಯಾಕ್‌ಗ್ರೌಂಡ್‌

iOS 16 ಫೋಟೋಸ್‌ ಅಪ್ಲಿಕೇಶನ್‌ನಲ್ಲಿ ಸೇರ್ಪಡೆ ಮಾಡಿರುವ ಪ್ರಮುಖ ಫೀಚರ್ಸ್‌ ಇದಾಗಿದೆ. ಇದು ಬ್ಯಾಕ್‌ಗ್ರೌಂಡ್‌ನಲ್ಲಿರುವ ಕಂಟೆಂಟ್‌ ಅನ್ನು ತೆಗೆದುಹಾಕುವುದಾಗಿದೆ. ಅಂದರೆ ಚಿತ್ರಗಳು ಮತ್ತು ವೀಡಿಯೋಗಳೆರಡರೊಂದಿಗೂ ಇದು ಕಾರ್ಯನಿರ್ವಹಿಸುತ್ತದೆ. ನೀವು ಎಡಿಟ್‌ ಮಾಡುವಾಗ ಬ್ಯಾಕ್‌ಗ್ರೌಂಡ್‌ ತೆಗೆದುಹಾಕಲು ಬಯಸುವ ಕಂಟೆಂಟ್‌ ಅನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀವು ಫ್ರೇಮ್‌ಗೆ ಬಂದಾಗ ವೀಡಿಯೊವನ್ನು ವಿರಾಮಗೊಳಿಸಬಹುದು.

Best Mobiles in India

English summary
Here's Best Features About Photos app in iOS 16.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X