ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಫೋನ್‌ನಲ್ಲಿ ಈ ಟಿಪ್ಸ್‌ಗಳನ್ನು ಫಾಲೋ ಮಾಡಿ!

|

ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಪರಿಚಯಿಸಿರುವ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನಿನಲ್ಲಿರುವ ಫೀಚರ್ಸ್‌ಗಳು ಫೋನ್‌ ಬಳಕೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಸುಧಾರಿತ ಬ್ಯಾಟರಿ ಬಾಳಿಕೆ ಮತ್ತು ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳಿಂದ ಫೋನ್‌ ಬಳಕೆ ಸಾಕಷ್ಟು ಸ್ಮೂತ್‌ ಎನಿಸಲಿದೆ. ಇದಕ್ಕೆ ಪೂರಕವಾದ ಡಿಸ್‌ಪ್ಲೇ ವಿನ್ಯಾಸ ಕೂಡ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ನಲ್ಲಿರುವ ಫೀಚರ್ಸ್‌ಗಳು ಎಲ್ಲರ ಗಮನಸೆಳೆದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕೆಲವು ಶಾರ್ಟ್‌ಕಟ್‌ ಆಯ್ಕೆಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಫೋನ್‌ನಲ್ಲಿ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ನಿಮ್ಮ ಫೋನ್‌ ಬಳಕೆ ಇನ್ನಷ್ಟು ಅರಾಮದಾಯಕವಾಗಿರಲಿದೆ. ಹಾಗಾದ್ರೆ ಗ್ಯಾಲಕ್ಸಿ Z ಫ್ಲಿಪ್ 4 ಫೋನ್‌ನಲ್ಲಿ ನೀವು ಅನುಸರಿಸಬೇಕಾದ ಪ್ರಮುಖ ಟಿಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್ ಆಯ್ಕೆಗಳು

ಫ್ಲಿಪ್ ಆಯ್ಕೆಗಳು

ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಕರೆ ಸ್ವಿಕರಿಸುವುದಕ್ಕೆ ಹಲವು ಫ್ಲಿಪ್‌ ಆಯ್ಕೆಗಳು ಲಭ್ಯವಿದೆ. ಅದರಂತೆ ನೀವು ಕರೆ ಬಂದಾಗ ಸ್ಮಾರ್ಟ್‌ಫೋನ್‌ ಅನ್ನು ಸ್ಟೈಲ್‌ ಆಗಿ ತಿರುಗಿಸುವ ಮೂಲಕ ಕಾಲ್‌ ರಿಸಿವ್‌ ಮಾಡಬಹುದಾಗಿದೆ. ಅಲ್ಲದೆ ಫೋನ್‌ ಅನ್ನು ಕ್ಲೋಸ್‌ ಮಾಡುವ ಮೂಲಕ ನಿಮ್ಮ ಕಾಲ್‌ ಅನ್ನು ಕಟ್‌ ಮಾಡುವುದಕ್ಕೆ ಕೂಡ ಅವಕಾಶವಿದೆ.

ಕಸ್ಟಮೈಸ್‌ ಕವರ್ ಸ್ಕ್ರೀನ್‌

ಕಸ್ಟಮೈಸ್‌ ಕವರ್ ಸ್ಕ್ರೀನ್‌

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಕವರ್‌ ಸ್ಕ್ರೀನ್‌ ವೈವಿಧ್ಯಮಯವಾಗಿ ಸೆಟ್‌ ಮಾಡುವುದಕ್ಕೆ ಬಯಸುತ್ತಾರೆ. ಇದಕ್ಕೆ ತಕ್ಕಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ಕವರ್‌ ಸ್ಕ್ರೀನ್‌ನಲ್ಲಿ ವೀಡಿಯೋ ವಾಲ್‌ಪೇಪರ್‌ ಅನ್ನು ಸೆಟ್‌ ಮಾಡಬಹುದು. ಇದಕ್ಕಾಗಿ ನೀವು ಫೋನ್‌ ಸೆಟ್ಟಿಂಗ್ಸ್‌ ತೆರೆದು, ಕವರ್ ಸ್ಕ್ರೀನ್ ಆಯ್ಕೆಮಾಡಬೇಕು. ಇದರಲ್ಲಿ ನಿಮ್ಮ ಕವರ್ ಸ್ಕ್ರೀನ್‌ನಲ್ಲಿ ಟೈಂ ಮತ್ತು ಡೇಟ್‌ ಹೇಗೆ ಕಾಣಲಿದೆ ಅನ್ನೊದನ್ನ ಕಸ್ಟಮೈಸ್‌ ಮಾಡುವ ಆಯ್ಕೆ ಕಾಣಲಿದೆ. ಇಲ್ಲಿ ಲಭ್ಯವಿರುವ ಆಯ್ಕೆಗಳಿಂದ ನೀವು ಕಸ್ಟಮ್ ವಾಲ್‌ಪೇಪರ್ ಅನ್ನು ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ ನೀವು ಬಯಸುವ ವೀಡಿಯೊವನ್ನು ಕವರ್ ಸ್ಕ್ರೀನ್ ವಾಲ್‌ಪೇಪರ್‌ನಲ್ಲಿ ಸೆಟ್‌ ಮಾಡಲು ಬಯಸಿದರೆ "ಗ್ಯಾಲರಿಯಿಂದ ಆರಿಸಿ" ಆಯ್ಕೆಯನ್ನು ಆರಿಸಬೇಕಾಗುತ್ತದೆ.

ಕ್ವಿಕ್‌ ಲಾಂಚ್‌ ಕ್ಯಾಮೆರಾ

ಕ್ವಿಕ್‌ ಲಾಂಚ್‌ ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯ ಕ್ಯಾಮರಾವನ್ನು ಬಳಸುವಾಗ ಈ ಆಯ್ಕೆ ಸೂಕ್ತ ಎನಿಸಲಿದೆ. ಇದರಿಂದ ನೀವು ತೆಗೆದುಕೊಳ್ಳುವ ಫೋಟೋಗಳು ಸ್ಪಷವಾಗಿದೆಯಾ ಇಲ್ಲವೇ ಎಂದು ತಿಳಿಯಲು ಸಾಧ್ಯವಾಗಲಿದೆ. ಇದರಿಂದ ನೀವು ಫೋಟೋ/ವೀಡಿಯೊವನ್ನು ತೆಗೆದುಕೊಳ್ಳುತ್ತಿರುವಾಗ, ಪ್ರಿವ್ಯೂ ಅನ್ನು ಕವರ್ ಸ್ಕ್ರೀನ್‌ನಲ್ಲಿ ನೋಡಲು ಸಾಧ್ಯವಾಗಲಿದೆ. ಈ ಫೀಚರ್ಸ್‌ ಅನ್ನು ಆನ್ ಮಾಡಲು, ಮೊದಲಿಗೆ ನಿಮ್ಮ ಫೋನ್ ತೆರೆಯಿರಿ, ನಂತರ ಕ್ಯಾಮರಾವನ್ನು ಸ್ಟಾರ್ಟ್‌ ಮಾಡಿ, ಇದರಲ್ಲಿ ಕಾಣುವ ಮೇಲಿನ ಬಲ ಮೂಲೆಯಲ್ಲಿರುವ ಬಟನ್ ಟ್ಯಾಪ್‌ ಮಾಡಬೇಕಾಗುತ್ತದೆ.

ಲ್ಯಾಬ್ಸ್ ಮತ್ತು ಫ್ಲೆಕ್ಸ್ ಮೋಡ್

ಲ್ಯಾಬ್ಸ್ ಮತ್ತು ಫ್ಲೆಕ್ಸ್ ಮೋಡ್

ಲ್ಯಾಬ್ಯ್‌ ಫೀಚರ್ಸ್‌ ಆಯ್ಕೆಯು ಪ್ರಾಯೋಗಿಕ ಫೀಚರ್ಸ್‌ಗಳ್ನು ತರಲಿದೆ ಮತ್ತು ಫ್ಲಿಪ್ ಅನ್ನು ಫ್ಲಿಪ್ ಮಾಡಲಿದೆ. ಅಂದರೆ ಮಲ್ಟಿ ವಿಂಡೋದಲ್ಲಿ ಯಾವುದೇ ಅಪ್ಲಿಕೇಶನ್‌ ರನ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಸ್ಪ್ಲಿಟ್ ಸ್ಕ್ರೀನ್ ವ್ಯೂನಲ್ಲಿ ಫುಲ್‌ ಸ್ಕ್ರೀನ್‌ ಮಲ್ಟಿ-ವಿಂಡೋ ಬಳಸುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಈ ಫೋನ್‌ನಲ್ಲಿ ಫ್ಲೆಕ್ಸ್ ಮೋಡ್ ಪ್ಯಾನೆಲ್ ಕೂಡ ಇದೆ. ಇದು ಸ್ಥಳೀಯವಾಗಿ ಬೆಂಬಲಿಸದ ಅಪ್ಲಿಕೇಶನ್‌ಗಳಲ್ಲಿ ಫ್ಲೆಕ್ಸ್ ಮೋಡ್ ಅನ್ನು ಬಳಸುವುದಕ್ಕೆ ಅನುಮತಿಸುತ್ತದೆ.

ಸೈಡ್ ಕೀ

ಸೈಡ್ ಕೀ

ಈ ಸ್ಮಾರ್ಟ್‌ಫೋನ್‌ನಲ್ಲಿ ಸೈಡ್ ಕೀ ಯನ್ನು ಸಾಕಷ್ಟು ವಿಚಾರಗಳಿಗೆ ಬಳಸಬಹುದು. ಕ್ಯಾಮೆರಾ ಪ್ರಿವ್ಯೂಗೆ ಮಾತ್ರವಲ್ಲದೆ ಸ್ಯಾಮ್‌ಸಂಗ್‌ ಪೇ ಅನ್ನು ಫೈರ್ ಅಪ್ ಮಾಡಲು ಡಬಲ್ ಪ್ರೆಸ್ ಮಾಡುವ ಮೂಲಕ ಬಳಸಬಹುದಾಗಿದೆ. ಅಲ್ಲದೆ ಹಳೆಯ ಪವರ್ ಆಫ್ ಮೆನುವನ್ನು ಸಕ್ರಿಯಗೊಳಿಸಲು ನೀವು ಪ್ರೆಸ್ ಮತ್ತು ಹೋಲ್ಡ್ ಅನ್ನು ಸಹ ಬದಲಾಯಿಸಬಹುದು.

ಸ್ಮಾರ್ಟ್ ವಿಜೆಟ್

ಸ್ಮಾರ್ಟ್ ವಿಜೆಟ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್‌ನಲ್ಲಿ ಸ್ಮಾರ್ಟ್‌ ವಿಜೆಟ್ಸ್‌ ಅನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಹೋಮ್‌ಸ್ಕ್ರೀನ್‌ನಲ್ಲಿ ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ, ಇದರಲ್ಲಿ ವಿಜೆಟ್ಸ್‌ ಅನ್ನು ಟ್ಯಾಪ್‌ ಮಾಡಿರಿ. ನಂತರ ವಿಜೆಟ್ಸ್‌ ಗಾತ್ರವನ್ನು ಆಯ್ಕೆಮಾಡಿ ಮತ್ತು ಅದನ್ನು ಹೋಮ್‌ಸ್ಕ್ರೀನ್‌ನಲ್ಲಿ ಸೆಟ್‌ ಮಾಡಬಹುದು.

Best Mobiles in India

English summary
Here's Best tips and tricks on Samsung Galaxy Z Flip 4 users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X