ಬಿಎಸ್ಎನ್ಎಲ್ ಗ್ರಾಹಕರು 1 ಜಿಬಿ ಡಾಟಾವನ್ನು ಉಚಿತವಾಗಿ ಪಡೆಯುವುದು ಹೇಗೆ?

|

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.ತನ್ನ ಹೊಸ ಮೈ ಬಿಎಸ್ಎನ್ಎಲ್ ಆಂಡ್ರಾಯ್ಡ್ ಆಪ್ ನ್ನು ಬಿಎಸ್ಎನ್ಎಲ್ ಸಂಸ್ಥೆ ಬಿಡುಗಡೆಗೊಳಿಸುತ್ತಿದೆ. ಇದರ ಪರಿಚಯಾರ್ತವಾಗಿ 1 ಜಿಬಿ ಡಾಟಾವನ್ನು ಆಪ್ ಡೌನ್ ಲೋಡ್ ಮಾಡಿಕೊಂಡವರಿಗೆ ಉಚಿತವಾಗಿ ನೀಡುತ್ತಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

30 ದಿನಗಳ ಅವಧಿಗೆ ಹೆಚ್ಚುವರಿ ಡಾಟಾ:

30 ದಿನಗಳ ಅವಧಿಗೆ ಹೆಚ್ಚುವರಿ ಡಾಟಾ:

ಇದು ಉಚಿತ ಡಾಟಾವಾಗಿದ್ದು 30 ದಿನಗಳ ಅವಧಿಯನ್ನು ಹೊಂದಿರುತ್ತದೆ ಮತ್ತು ನಿಮ್ಮ ಈಗಿನ ಪ್ಲಾನ್ ಗೆ ಸೇರಿಕೊಳ್ಳುವ ಹೆಚ್ಚುವರಿ ಡಾಟಾ ಪ್ಲಾನ್ ಆಗಿರುತ್ತದೆ. ಉದಾಹರಣೆಗೆ ನೀವು ಪ್ರತಿದಿನ ಒಂದು ಜಿಬಿ ಉಚಿತ ಡಾಟಾ ಪ್ಲಾನ್ ನಲ್ಲಿ ಇದ್ದಲ್ಲಿ ನೀವು ಹೆಚ್ಚುವರಿ ಲಭ್ಯವಾಗುವ ಡಾಟಾವನ್ನು ಬಿಎಸ್ಎನ್ಎಲ್ 3ಜಿ ನೆಟ್ ವರ್ಕ್ ನಲ್ಲಿ ಬಳಸಿಕೊಳ್ಳಬಹುದು.

ಡಿಸೆಂಬರ್ 31ರ ವರೆಗೆ ಮಾತ್ರವೇ ಇರುವ ಆಫರ್:

ಡಿಸೆಂಬರ್ 31ರ ವರೆಗೆ ಮಾತ್ರವೇ ಇರುವ ಆಫರ್:

ಈ ಆಫರ್ ನ್ನು ಪಡೆಯಲು, ಬಳಕೆದಾರರು ಸಿಂಪಲ್ ಆಗಿ ಮೈ ಬಿಎಸ್ಎನ್ಎಲ್ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇದು ಉಚಿತವಾಗಿ ಲಭ್ಯವಾಗುವ ಆಪ್ ಆಗಿರುತ್ತದೆ.ಆದರೆ ಪ್ರಮುಖವಾಗಿ ನೀವು ತಿಳಿದಿರಬೇಕಾಗಿರುವುದು ಈ ಆಫರ್ ಕೇವಲ ಡಿಸೆಂಬರ್ 31 ರ ವರೆಗೆ ಮಾತ್ರವೇ ಇರುತ್ತದೆ.

ಅಕೌಂಟ್ ವಿವರಣೆ ನೀಡುವ ಆಪ್:

ಅಕೌಂಟ್ ವಿವರಣೆ ನೀಡುವ ಆಪ್:

ಮೈ ಬಿಎಸ್ಎನ್ಎಲ್ ಆಪ್ ಬಳಕೆದಾರರಿಗೆ ಡಾಟಾ ಪ್ರದರ್ಶನ ಮತ್ತು ಅಕೌಂಟ್ ವಿವರಗಳು ಮತ್ತು ಡಾಟಾ ಎಷ್ಟಿದೆ ಎಂಬಿತ್ಯಾದಿ ವಿವರಗಳನ್ನು ನೀಡುತ್ತದೆ. ಬಳಕೆದಾರರು ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಬಿಲ್ ಗಳನ್ನು ಇಲ್ಲಿ ಪಾವತಿಸಬಹುದಾಗಿದ್ದು ಟೆಲಿಕಾಂ ಆಪರೇಟರ್ ನೀಡುವ ಸ್ಪೆಷಲ್ ಆಫರ್ ಗಳನ್ನು ನೀವಿಲ್ಲಿ ಪರೀಕ್ಷಿಸಬಹುದು. ಈ ಹೊಸ ಆಪ್ ಕಾಲ್2ಆಕ್ಷನ್ ಕಮ್ಯುನಿಕೇಷನ್ ಇಂಡಿಯಾದೊಂದಿಗಿನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.

ಬಿಎಸ್ಎನ್ಎಲ್ ನ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅನುಪಮ್ ಶ್ರೀವಾತ್ಸವ್ ಅವರು ತಿಳಿಸಿರುವಂತೆ ಈ ಹೊಸ ಆಪ್ ಬಿಎಸ್ಎನ್ಎಲ್ ನ ಸದ್ಯ ಆಂಡ್ರಾಯ್ಡ್ ಡಿವೈಸ್ ನಲ್ಲಿರುವ 5 ಮಿಲಿಯನ್ ಗ್ರಾಹಕರ ಡಾಟಾಬೇಸ್ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದ್ದು ಎಲ್ಲರನ್ನೂ ತಲುಪುವ ಉದ್ದೇಶವನ್ನು ಹೊಂದಲಾಗಿದೆ. ಈ ಹೊಸ ಆಪ್ ನಿಂದಾಗಿ ಹೊಸ ಸೇವೆ ಮತ್ತು ಸೌಲಭ್ಯವು ಗ್ರಾಹಕರನ್ನು ತಲುಪಲಿದೆ ಎಂದು ತಿಳಿಸಿದ್ದಾರೆ.


Best Mobiles in India

Read more about:
English summary
Here’s how BSNL users can avail 1GB free data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X