ಗೂಗಲ್‌ನ ಈ ವಿಚಾರ ಕೇಳಿದ್ರೆ ನೀವು ಅಚ್ಚರಿಯಾಗೋದು ಪಕ್ಕಾ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಮತ್ತೊಂದು ಉಪಯುಕ್ತ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇನ್ಮುಂದೆ ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಸ್ಮಾರ್ಟ್‌ಫೋನ್‌ ಮೂಲಕವೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಮತ್ತು ಕಣ್ಣಿನ ಆರೋಗ್ಯ ಸ್ಥಿತಿ ಪತ್ತೆ ಹಚ್ಚುವುದಕ್ಕೆ ಅವಕಾಶ ಸಿಗಲಿದೆ. ಇದಕ್ಕಾಗಿ ಹೊಸ ಪ್ಲಾನ್‌ ರೂಪಿಸುತ್ತಿರುವುದಾಗಿ ಗೂಗಲ್ ಘೋಷಿಸಿದೆ. ಇದರಿಂದ ಲಕ್ಷಾಂತರ ಆಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತಮ್ಮ ಮನೆಯಲ್ಲಿಯೇ ಕುಳಿತು ಹೆಲ್ತ್‌ ಸ್ಟೇಟಸ್‌ ಚೆಕ್‌ ಮಾಡುವುದಕ್ಕೆ ಸುಲಭವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ಮನೆಯಲ್ಲಿಯೇ ಕುಳಿತು ಹೃದಯದ ಆರೋಗ್ಯ ಸ್ಥಿತಿ ಪರೀಕ್ಷಿಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಕಣ್ಣಿನ ಆರೋಗ್ಯ, ಹೃದಯದ ಆರೋಗ್ಯವನ್ನು ಪರೀಕ್ಷಿಸುವುದಕ್ಕೆ ಹೊಸ ಯೋಜನೆ ರೂಪಿಸುತ್ತಿದೆ. ಇದರಲ್ಲಿ ಎದೆಯ ಮೇಲೆ ನಿಮ್ಮ ಫೋನ್‌ ಇರಿಸಿದಾಗ ಹೃದಯದ ಶಬ್ದಗಳನ್ನು ರೆಕಾರ್ಡ್ ಮಾಡಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಬಳಸಲು ಯೋಜಿಸಲಾಗಿದೆ ಎಂದು ಗೂಗಲ್ ಹೇಳಿದೆ. ಹಾಗಾದ್ರೆ ಗೂಗಲ್‌ನ ಹೊಸ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಮೂಲಕವೇ ಹೃದಯದ ಆರೋಗ್ಯ ತಿಳಿಯುವಂತೆ ಮಾಡಲು ಗೂಗಲ್‌ ಮುಂದಾಗಿದೆ. ಗೂಗಲ್‌ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿರುವಂತೆ ಸ್ಟೆತಸ್ಕೋಪ್‌ನೊಂದಿಗೆ ಯಾರೊಬ್ಬರ ಹೃದಯ ಮತ್ತು ಶ್ವಾಸಕೋಶವನ್ನು ಆಲಿಸುವುದು ದೈಹಿಕ ಪರೀಕ್ಷೆಯ ನಿರ್ಣಾಯಕ ಭಾಗವಾಗಿದೆ. ಆದರೆ ಮಹಾಪಧಮನಿಯ ಸ್ಟೆನೋಸಿಸ್‌ಗಾಗಿ ಸ್ಕ್ರೀನಿಂಗ್‌ಗೆ ಸ್ಟೆತೊಸ್ಕೋಪ್ ಅಥವಾ ಅಲ್ಟ್ರಾಸೌಂಡ್ ಜೊತೆಗೆ ವೈಯಕ್ತಿಕ ಮೌಲ್ಯಮಾಪನದಂತಹ ವಿಶೇಷ ಉಪಕರಣಗಳ ಅಗತ್ಯವಿರುತ್ತದೆ. ಇದಕ್ಕಾಗಿ ಗೂಗಲ್ ಸ್ಮಾರ್ಟ್‌ಫೋನ್ ಮೂಲಕವೇ ಹೃದಯ ಆರೋಗ್ಯ ಮಟ್ಟವನ್ನು ಅಳೆಯಲು ಮುಂದಾಗಿದೆ. ಇದಕ್ಕೆ ಸ್ಮಾರ್ಟ್‌ಫೋನ್‌ನಲ್ಲಿರುವ ಮೈಕ್ರೊಫೋನ್‌ಗಳು ಉಪಯೋಗಕ್ಕೆ ಬರಲಿವೆ ಎನ್ನಲಾಗಿದೆ.

ಗೂಗಲ್‌

ಗೂಗಲ್‌ ಪ್ರಕಾರ ನಮ್ಮ ಇತ್ತೀಚಿನ ಸಂಶೋಧನೆಯು ಸ್ಮಾರ್ಟ್‌ಫೋನ್ ಹೃದಯ ಬಡಿತವನ್ನು ಪತ್ತೆ ಮಾಡಬಹುದೇ ಎಂದು ಪರೀಕ್ಷೆ ನಡೆಯುತ್ತಿದೆ. ನಾವು ಪ್ರಸ್ತುತ ಕ್ಲಿನಿಕಲ್ ಅಧ್ಯಯನ ಪರೀಕ್ಷೆಯ ಆರಂಭಿಕ ಹಂತದಲ್ಲಿದ್ದೇವೆ, ಆದರೆ ನಮ್ಮ ಕೆಲಸವು ಸ್ಮಾರ್ಟ್‌ಫೋನ್ ಅನ್ನು ಪ್ರವೇಶಿಸಬಹುದಾದ ಆರೋಗ್ಯ ಮೌಲ್ಯಮಾಪನಕ್ಕಾಗಿ ಹೆಚ್ಚುವರಿ ಸಾಧನವಾಗಿ ಬಳಸಲು ಜನರಿಗೆ ಅಧಿಕಾರ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ. ಇದರ ಜೊತೆಗೆ, ಕಣ್ಣಿನ ಕಾಯಿಲೆಗಳನ್ನು ಪತ್ತೆಹಚ್ಚಲು ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ಬಳಸಿ ತೆಗೆಯಲಾದ ಫೋಟೋಗಳನ್ನು ಬಳಸಲು ಗೂಗಲ್ ಪ್ಲಾನ್‌ ಮಾಡಿದೆ.

ಸ್ಮಾರ್ಟ್‌ಫೋನ್‌ನಲ್ಲಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತೆಗೆದ ಫೋಟೋಗಳಿಂದ ಮಧುಮೇಹ ಮತ್ತು ಮಧುಮೇಹವಲ್ಲದ ಕಾಯಿಲೆಗಳನ್ನು ಪತ್ತೆಹಚ್ಚಲು ಸಹಾಯ ಮಾಡಬಹುದೇ ಎಂದು ಪರೀಕ್ಷಿಸಲು ಗೂಗಲ್‌ ಮುಂದಾಗಿದೆ. ಇದಕ್ಕಾಗಿ EyePACS ಮತ್ತು ಚಾಂಗ್ ಗುಂಗ್ ಸ್ಮಾರಕ ಆಸ್ಪತ್ರೆ ನಂತಹ ಪಾಲುದಾರರೊಂದಿಗೆ ಕ್ಲಿನಿಕಲ್ ಸಂಶೋಧನೆಯಲ್ಲಿ ಕೆಲಸ ಮಾಡಲು ಯೋಜಿಸುತ್ತಿದೆ ಎಂದು ಗೂಗಲ್‌ ಹೇಳಿದೆ. ಇದರಿಂದ ಜನರು ತಮ್ಮ ವೈದ್ಯರ ಸಹಾಯದಿಂದ ತಮ್ಮ ಮನೆಗಳಲ್ಲಿಯೇ ಕುಳಿತು ಆರೋಗ್ಯದ ಪರಿಸ್ಥಿತಿಗಳ ಬಗ್ಗೆ ತಿಳಿಯಲು ಸಹಾಯವಾಗಲಿದೆ ಎನ್ನವ ಆಶಯವನ್ನು ಗೂಗಲ್‌ ಹೊಂದಿದೆ. ಸದ್ಯ ಈ ಸಂಶೋಧನೆಯು ಕಂಪನಿಯ AI-ಆಧಾರಿತ ARDA ಅಲ್ಗಾರಿದಮ್ ಅನ್ನು ಆಧರಿಸಿದೆ ಎಂದು ಗೂಗಲ್‌ ತನ್ನ ಘೋಷಣೆಯಲ್ಲಿ ತಿಳಿಸಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಬಳಕೆದಾರರಿಗೆ ಆರೋಗ್ಯ ಕೇಂದ್ರಿತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದರಂತೆ ನೀವು ಗೂಗಲ್‌ನಲ್ಲಿ ಸರ್ಚ್‌ ಮಾಡುವಾಗಲೇ ಡಾಕ್ಟರ್ಸ್‌ ಅಪಾಯಿಂಟ್‌ ಯಾವಾಗ ಲಭ್ಯವಿದೆ ಅನ್ನೊದನ್ನ ತಿಳಿಸುತ್ತದೆ. ಇದಕ್ಕಾಗಿ ಟೆಕ್ ದೈತ್ಯ CVS ನಲ್ಲಿ ಮಿನಿಟ್‌ ಕ್ಲಿನಿಕ್‌ ಮತ್ತು ಫೀಚರ್ಸ್‌ ಸ್ಟಾರ್ಟಿಂಗ್‌ ರೋಲ್‌ಗಾಗಿ ಹೆಚ್ಚಿನ ಅಪಾಯಿಂಟ್‌ಮೆಂಟ್ ಶೆಡ್ಯೂಲರ್‌ಗಳೊಂದಿಗೆ ಕೈಜೋಡಿಸಿದೆ. ಈ ಫೀಚರ್ಸ್‌ ಮುಂಬರುವ ವಾರಗಳಲ್ಲಿ ಲಭ್ಯವಾಗಲಿದ್ದು, ಆರಂಭದಲ್ಲಿ ಕೇವಲ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ.

Best Mobiles in India

English summary
Here's how Google wants you to use your phone to detect health conditions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X