ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಆಧಾರ್ ಬಳಸಿ ಸಾಲ ಪಡೆದಿದ್ದಿರಾ..? ಕಾನೂನು ಉಲ್ಲಂಘನೆಯಾಗುತ್ತೇ ಎಚ್ಚರ..!

|

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ನ ವಾರ್ಷಿಕ ಫ್ಲ್ಯಾಗ್ ಶಿಪ್ ಸೇಲ್ ಕಾರ್ಯಕ್ರಮವನ್ನು ನಾಳೆಯಿಂದ ಆರಂಭವಾಗುತ್ತಿದ್ದು, ಆಧಾರ್ ಕಾರ್ಡ್ ಬಳಸಿ ಸಾಲ ಸೌಲಭ್ಯ ಪಡೆಯಲು ಗ್ರಾಹಕರಿಗೆ ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದು ಇದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳುತ್ತಿದ್ದಾರೆ. ಖಾಸಗಿಯವರು ರಾಷ್ಟ್ರೀಯ ಗುರುತಿನ ಚೀಟಿಯನ್ನು ಅಂದರೆ ಆಧಾರ್ ಕಾರ್ಡ್ ನ್ನು ಗುರುತಿಗಾಗಿ ಖಡ್ಡಾಯಗೊಳಿಸಿ ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿತ್ತು.

ಆಧಾರ್ ಬಳಸಿ ಸಾಲ ಸೌಲಭ್ಯ:

ಆಧಾರ್ ಬಳಸಿ ಸಾಲ ಸೌಲಭ್ಯ:

ಎರಡೂ ಇ-ಕಾಮರ್ಸ್ ಸೈಟ್ ಗಳು ಕ್ರೆಡಿಟ್/ಡೆಬಿಟ್ ಕಾರ್ಡ್ ಇಲ್ಲದೆ ಇದ್ದರೂ ಆಧಾರ್ ಐಡಿ ನಂಬರ್ ಬಳಸಿ ಗ್ರಾಹಕರ ಖರೀದಿಗೆ ಅವಕಾಶ ನೀಡುತ್ತಿದೆ. ಈ ಅವಕಾಶವು ಅಂದರೆ ಆಧಾರ್ ಬಳಸಿ ಇನ್ಸೆಂಟ್ ಲೋನ್ ಅಥವಾ ಸಾಲ ಸೌಲಭ್ಯ ಪಡೆಯುವುದರಿಂದಾಗಿ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣವಿಲ್ಲದೆ ಖರೀದಿಯನ್ನು ಮಾಡದೇ ಇರುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ.

ಎಷ್ಟು ಸಾಲ ಯಾವ ಆಧಾರದಲ್ಲಿ ಲಭ್ಯವಾಗುತ್ತೆ?

ಎಷ್ಟು ಸಾಲ ಯಾವ ಆಧಾರದಲ್ಲಿ ಲಭ್ಯವಾಗುತ್ತೆ?

ಬಡ್ಡಿ ರಹಿತ ಉಚಿತ ಸಾಲ ಸೌಲಭ್ಯವು 60,000 ರುಪಾಯಿ ವರೆಗೆ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಎರಡರಲ್ಲೂ ಲಭ್ಯವಾಗುತ್ತದೆ. ನೀವು ಇವರೆಡೂ ಸೈಟ್ ಗಳ ಮೊಬೈಲ್ ಆಪ್ ನಲ್ಲಿ ಸೈನ್ ಇನ್ ಆದ ಕೂಡಲೇ ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಗೆ ಎಷ್ಟು ರುಪಾಯಿವರೆಗಿನ ಸಾಲ ಸೌಲಭ್ಯವು ಲಭ್ಯವಾಗುತ್ತದೆ ಎಂಬ ವಿವರವನ್ನು ತಿಳಿಯಬಹುದು. ಇದು ಗ್ರಾಹಕರ ಹಿಂದಿನ ಖರೀದಿ ಮತ್ತು ಪಾವತಿ ಹಿಸ್ಟರಿಯನ್ನು ಆಧರಿಸಿ ನೀಡಲಾಗುತ್ತದೆ.

ಕಾನೂನು ಉಲ್ಲಂಘನೆ:

ಕಾನೂನು ಉಲ್ಲಂಘನೆ:

ಆದರೆ ಲಾಯರ್ ಗಳು ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಇಂತಹ ವಿವರಗಳನ್ನು ಪಡೆಯುವುದಕ್ಕೆ ಖಾಸಗಿ ಕಂಪೆನಿಗಳು ಯಾವುದೇ ಕಾರಣಗಳನ್ನು ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂಬ ಅಭಿಪ್ರಾಯವನ್ನು ಸಾಲಿಸಿಟರ್ ಜನರಲ್ ಆಗಿರುವ ವಿ ವಿಲ್ಸನ್ ಅವರು ತಿಳಿಸುತ್ತಾರೆ.

ಯಾವುದೇ ಶಾಪಿಂಗ್ ಫ್ಲಾಟ್ ಫಾರ್ಮ್ ಕೂಡ ಈ ರೀತಿ ಆಧಾರ್ ವಿವರಗಳನ್ನು ಗ್ರಾಹಕರಿಂದ ಕೇಳುವಂತಿಲ್ಲ. ಖಾಸಗಿ ಕಂಪೆನಿಗಳು ಆಧಾರ್ ಬಾರ್ ಕೋಡ್ ಗಳನ್ನು ಬಳಸುವುದನ್ನು ತಪ್ಪು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದೀಗ ಈ ಎರಡೂ ಸೈಟ್ ಗಳು ಬಳಸುತ್ತಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ತಾಂತ್ರಿಕವಾಗಿ ಇದು ಯುಐಡಿಎಐಗೆ ಇದುವರೆಗೂ ಸಾಧ್ಯವಾಗಿತ್ತು. ಆದರೆ ಇದೀಗ ತಾತ್ಕಾಲಿಕವಾಗಿ ಏರ್ ಟೆಲ್ ಗೂ ಆಧಾರಾ ಡಾಟಾಬೇಸ್ ಬಳಸುವುದನ್ನು ನಿಲ್ಲಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಲಾ ಫರ್ಮ್ ಒಂದರ ಮುಖ್ಯಸ್ಥರಾಗಿರುವ ರಮೇಶ್ ಕುಮಾರ್.

ನಿಯಮ ಪಾಲಿಸಲು ಕಂಪೆನಿ ಬದ್ಧ:

ನಿಯಮ ಪಾಲಿಸಲು ಕಂಪೆನಿ ಬದ್ಧ:

ಇನ್ನು ಬಗ್ಗೆ ಫ್ಲಿಪ್ ಕಾರ್ಟ್ ಬಳಿ ಕೇಳಿದರೆ ಅದರ ವಕ್ತಾರರು ಸುಪ್ರೀಂಕೋರ್ಟಿನ ತೀರ್ಪಿನ್ನು ಪಾಲಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಅಮೇಜಾನ್ ವಕ್ತಾರರೂ ಕೂಡ ಸ್ಥಳೀಯ ನಿಮಯಾವಳಿಗಳನ್ನು ಪಾಲಿಸಲು ವಿಶ್ವದಾದ್ಯಂತ ನಮ್ಮ ಕಂಪೆನಿ ತಯಾರಿದೆ ಎಂದು ತಿಳಿಸಿದ್ದಾರೆ.

Best Mobiles in India

English summary
Here's how it may 'pay' to use Aadhaar on Flipkart and Amazon. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X