ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡಲು ಹೀಗೆ ಮಾಡಿ!

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಮ್ಯಾಪ್‌ ಕೂಡ ಒಂದಾಗಿದೆ. ಗೂಗಲ್‌ ಮ್ಯಾಪ್‌ ಇಂದು ನಗರ ಪ್ರದೇಶದ ಜನರಿಗೆ ಮಾತ್ರವಲ್ಲ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸುವ ಎಲ್ಲರಿಗೂ ಸಾಕಷ್ಟು ಉಪಯುಕ್ತವಾಗಿದೆ. ಇದೇ ಕಾರಣಕ್ಕೆ ಗೂಗಲ್‌ ಮ್ಯಾಪ್‌ನಲ್ಲಿ ಗೂಗಲ್‌ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಗೂಗಲ್‌ ಮ್ಯಾಪ್‌ನಲ್ಲಿ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಈ ಫೀಚರ್ಸ್‌ ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಮಾತ್ರ ಲಭ್ಯವಿದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ನಲ್ಲಿರುವ ಸ್ಟ್ರೀಟ್‌ ವ್ಯೂ ಫೀಚರ್ಸ್ ಸಾಕಷ್ಟು ಅನುಕೂಲಕರವಾಗಿದೆ. ಈ ಫೀಚರ್ಸ್‌ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹ್ಮದ್‌ನಗರ ಮತ್ತು ಅಮೃತಸರ ಸೇರಿದಂತೆ ಭಾರತದ 10 ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಇದಲ್ಲದೆ ಶೀಘ್ರದಲ್ಲೇ ದೇಶದಾದ್ಯಂತ ಹೆಚ್ಚಿನ ನಗರಗಳಲ್ಲಿ ಈ ಫೀಚರ್ಸ್‌ ಪರಿಚಯಿಸುವುದಾಗಿ ಗೂಗಲ್‌ ಹೇಳಿಕೊಂಡಿದೆ. ಇನ್ನು ಈ ಫೀಚರ್ಸ್‌ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ಅನಾನುಕೂಲತೆಯನ್ನು ಕೂಡ ಹೊಂದಿದೆ.

ಗೂಗಲ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಉಪಯುಕ್ತ ಫೀಚರ್ಸ್‌ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಬಳಕೆದಾರರಿಗೆ ಸ್ಥಳದ 360-ಡಿಗ್ರಿ ರಿಯಲ್‌ ಟೈಂ ವ್ಯೂ ಅನ್ನು ನೀಡಲಿದೆ. ಇದರಿಂದ ಸ್ಟ್ರೀಟ್ ವ್ಯೂ ನಲ್ಲಿ ಬಳಕೆದಾರರು ತಾವು ಸರ್ಚ್‌ ಮಾಡುತ್ತಿರುವ ಸ್ಥಳದ ಲೈವ್‌ ವ್ಯೂ ಅನ್ನು ಕಾಣಬಹುದು. ಅಲ್ಲದೆ ತಾವು ಬೇಟಿ ನೀಡಲು ಬಯಸುವ ಸ್ಥಳದಲ್ಲಿ ಜನಸಂದಣಿ ಹೇಗಿದೆ, ಅಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ತಿಳಿಯಲು ಸಾಧ್ಯವಿದೆ. ಜೊತೆಗೆ ಬಳಕೆದಾರರು ತಾವು ಭೇಟಿ ನೀಡಲು ಯೋಜಿಸುತ್ತಿರುವ ಸ್ಥಳದಲ್ಲಿ ಪಾರ್ಕಿಂಗ್‌ ಸೇರಿದಂತೆ ಎಲ್ಲಾ ವಿಧದ ಸೇವೆಗಳ ಮಾಹಿತಿ ತಿಳಿಯಬಹುದು.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಅನ್ನು ಕೆಟ್ಟ ಕೆಲಸಗಳಿಗೂ ಬಳಸುವ ಮಂದಿ ಇರುವುದರಿಂದ ಇದರ ಅನಾನುಕೂಲತೆ ಕೂಡ ಉಂಟಾಗಲಿದೆ. ಅಂದರೆ ಇದೀಗ ನಿಮ್ಮ ಮನೆಯ ಸೇರಿದಂತೆ ಎಲ್ಲಾ ಮನೆಗಳ ವಿವರವನ್ನು ಸ್ಟ್ರೀಟ್‌ ವ್ಯೂ ನಲ್ಲಿ ಕಾಣಬಹುದು. ಇದರಿಂದ ಕಳ್ಳರು ನಿಮ್ಮ ಪ್ರದೇಶದಲ್ಲಿ ಅಥವಾ ನಿಮ್ಮ ಮನೆಯ ಸುತ್ತಾ ಮುತ್ತಾ ಏನಿದೆ? ಸಿಸಿಟಿವಿಗಳು ಇದೆಯಾ? ಇಲ್ಲವೆ? ಜನಸಂದಣಿ ಹೇಗಿರಲಿದೆ ಎಂಬಿತ್ಯಾದಿ ಎಂಬೆಲ್ಲಾ ಮಾಹಿತಿ ಸುಲಭವಾಗಿ ದೊರಕಲಿದೆ. ಇದು ಕಳ್ಳರು, ಇಲ್ಲವೇ ದುರುಳರಿಗೆ ಸಹಾಯವಾಗಲಿದ್ದು, ನಿಮ್ಮ ಭದ್ರತೆಗೆ ದಕ್ಕೆ ತರುವ ಸಾಧ್ಯತೆ ಕೂಡ ಇದೆ.

ಗೂಗಲ್‌

ಇದೇ ಕಾರಣಕ್ಕೆ ಗೂಗಲ್‌ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಜೊತೆಗೆ ಮತ್ತೊಂದು ಆಯ್ಕೆಯನ್ನು ಕೂಡ ನೀಡಿದೆ. ಇದರಿಂದ ನಿಮ್ಮ ಭದ್ರತೆಗೆ ಯಾವುದೇ ತೊಂದರೆ ಭಾರದಂತೆ ಎಚ್ಚರಿಕೆ ವಹಿಸಬಹುದಾಗಿದೆ. ಅಂದರೆ ಸ್ಟ್ರೀಟ್‌ ವ್ಯೂ ನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮ್ಮ ಮನೆಯ ವಿವರಗಳನ್ನು ದುರುಳರು ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ನೀವು ಸುಖಾಸುಮ್ಮನೇ ನಿಮ್ಮ ಮನೆಯ ವಿವರವನ್ನು ಬ್ಲರ್‌ ಮಾಡಲು ಸಾಧ್ಯವಿಲ್ಲ. ಬದಲಿಗೆ ನೀವು ಗೂಗಲ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ನಿಮ್ಮ ಮನೆಯ ವಿವರವನ್ನು ಯಾಕೇ ಬ್ಲರ್‌ ಮಾಡಬೇಕು ಅನ್ನದನ್ನ ತಿಳಿಸಬೇಕಾಗುತ್ತದೆ. ನೀವು ನೀಡಿರುವ ಕಾರಣ ಗೂಗಲ್‌ಗೆ ತೃಪ್ತಿಯಾದರೆ ಮಾತ್ರ ಸ್ಟ್ರೀಟ್‌ ವ್ಯೂನಲ್ಲಿ ನೀವು ಹೈಲೈಟ್‌ ಮಾಡಿರುವ ಪ್ರದೇಶವನ್ನು ಬ್ಲರ್‌ ಮಾಡಲಿದೆ.

ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂನಲ್ಲಿ ನಿಮ್ಮ ಮನೆಯನ್ನು ಬ್ಲರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಗೂಗಲ್‌ ಮ್ಯಾಪ್‌ ತೆರೆಯಿರಿ.
ಹಂತ:2 ಇದೀಗ ಸರ್ಚ್‌ ಬಾರ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ನಮೂದಿಸಿ ಮತ್ತು ಎಂಟರ್ ಒತ್ತಿರಿ.
ಹಂತ:3 ನಂತರ ನೀವು ಬ್ಲರ್‌ ಮಾಡಲು ಬಯಸುವ ಫೋಟೋವನ್ನು ಸರ್ಚ್‌ ಮಾಡಿ.
ಹಂತ:4 ಇದೀಗ ವಿಂಡೋದ ಕೆಳಗಿನ ಬಲ ಮೂಲೆಯಲ್ಲಿ, ರಿಪೋರ್ಟ್‌ ಎ ಪ್ರಾಬ್ಲಂ ಕ್ಲಿಕ್‌ ಮಾಡಿ.
ಹಂತ:5 ನಂತರ ತೆರೆಯುವ ವಿಂಡೋದಲ್ಲಿ, ನೀವು ಸಮಸ್ಯೆಯನ್ನು ವರದಿ ಮಾಡುತ್ತಿರುವ ಕಾರಣಕ್ಕಾಗಿ ಗೌಪ್ಯತೆಯನ್ನು ಆಯ್ಕೆಮಾಡಿ.
ಹಂತ:6 ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ:7 ಸಬ್ಮಿಟ್‌ ಬಟನ್‌ ಟ್ಯಾಪ್‌ ಮಾಡಿ.

ನೀವು

ಒಮ್ಮೆ ನೀವು ನಿಮ್ಮ ಸಮಸ್ಯೆಯನ್ನು ಗೂಗಲ್‌ಗೆ ವರದಿ ಮಾಡಿದರೆ, ಗೂಗಲ್‌ ನಿಮ್ಮ ರಿಕ್ವೆಸ್ಟ್‌ ಅನ್ನು ಪರಿಶೀಲಿಸುತ್ತದೆ. ಅದಕ್ಕೆ ನೀವು ನೀಡಿರುವ ವರದಿ ತೃಪ್ತಿಕರವಾದರೆ ನೀವು ಆಯ್ಕೆ ಮಾಡಿರುವ ಪ್ರದೇಶವನ್ನು ಬ್ಲರ್‌ ಮಾಡಲಿದೆ.

Best Mobiles in India

English summary
Here's How to blur your house in Google Maps’ Street View

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X