ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ ವಿಳಾಸವನ್ನು ಬದಲಾಯಿಸುವುದು ಹೇಗೆ ?

|

ಇಂದಿನ ದಿನಗಳಲ್ಲಿ ನೀವು ಯಾವುದೇ ದ್ವಿಚಕ್ರ ವಾಹನ ಇಲ್ಲವೇ ನಾಲ್ಕು ಚಕ್ರಗಳ ವಾಹನ ಚಲಾಯಿಸಬೇಕಾದರೂ ಡ್ರೈವಿಂಗ್‌ ಲೈಸೆನ್ಸ್‌ ಅತ್ಯಗತ್ಯವಾಗಿದೆ. ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯ ದಾಖಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸವನ್ನು ಮಾತ್ರವಲ್ಲದೆ ನೀವು ಚಲಾಯಿಸಲು ಅರ್ಹವಾಗಿರುವ ವಾಹನಗಳ ಪ್ರಕಾರವನ್ನು ಕೂಡ ನೀಡಲಾಗಿರುತ್ತದೆ. ಇದೇ ಕಾರಣಕ್ಕೆ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸ ಸರಿಯಾಗಿ ನಮೂದಾಗಿರುವುದು ಬಹಳ ಮುಖ್ಯವಾಗಿದೆ.

ಡ್ರೈವಿಂಗ್‌

ಹೌದು, ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ವಿಳಾಸ ನಮೂದಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಇದಲ್ಲದೆ ನೀವು ನಿಮ್ಮ ವಿಳಾಸವನ್ನು ಬದಲಾಯಿಸಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ ವಿಳಾಸವನ್ನು ಬದಲಾಯಿಸುವುದು ಸೂಕ್ತ. ಡ್ರೈವಿಂಗ್‌ ಲೈಸೆನ್ಸ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕವೂ ಕೂಡ ಬದಲಾಯಿಸಬಹುದಾಗಿದೆ. ಹಾಗಾದ್ರೆ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸವನ್ನು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆನ್‌ಲೈನ್‌ ಮೂಲಕ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸವನ್ನು ಬದಲಾಯಿಸುವುದು ಹೇಗೆ ?

ಆನ್‌ಲೈನ್‌ ಮೂಲಕ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸವನ್ನು ಬದಲಾಯಿಸುವುದು ಹೇಗೆ ?

ಹಂತ:1 ಮೊದಲಿಗೆ ಪರಿವಾಹನ್ ಸಾರಥಿಯ ಅಧಿಕೃತ ವೆಬ್‌ಸೈಟ್ https://sarathi.parivahan.gov.in ಗೆ ಹೋಗಿ
ಹಂತ:2 ಇದರ ಮುಖಪುಟದಲ್ಲಿ ಗೋಚರಿಸುವ ಡ್ರಾಪ್‌ಡೌನ್ ಮೆನುವಿನಿಂದ ನಿಮ್ಮ ಕರೆಂಟ್‌ ಸ್ಟೆಟಸ್‌ ಅನ್ನು ಆಯ್ಕೆ ಮಾಡಿ.
ಹಂತ:3 ನಂತರ ವಿವಿಧ ಸೇವೆಗಳ ಪೇಜ್‌ ಅನ್ನು ಕಾಣಬಹುದು. ಇದರಲ್ಲಿ ಅಡ್ರೆಸ್‌ ಚೇಂಜ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:4 ಇದೀಗ ಅಡ್ರೆಸ್‌ ಚೇಂಜ್‌ ಮಾಡಲು ಅರ್ಜಿ ಸಲ್ಲಿಸುವ ಪೇಜ್‌ ತೆರೆಯಲಿದೆ.
ಹಂತ:5 ಇದರಲ್ಲಿ ನೀವು ನಿಮ್ಮ DL ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ
ಹಂತ:6 ಈಗ ಗೆಟ್ ಡಿಎಲ್ ಡಿಟೇಲ್ಸ್ ಬಟನ್ ಕ್ಲಿಕ್ ಮಾಡಿ

ಹೌದು

ಹಂತ:7 ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೆಕ್ಸ್ಟ್‌ ಪೇಜ್‌ನಲ್ಲಿ ತೋರಿಸಲಾಗುತ್ತದೆ. ಇದರಲ್ಲಿ ಹೌದು ಆಯ್ಕೆ ಮಾಡುವ ಮೂಲಕ ವಿವರಗಳನ್ನು ದೃಢೀಕರಿಸಿ
ಹಂತ:8 ನಂತರ ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನ ವರ್ಗವನ್ನು ಆಯ್ಕೆಮಾಡಿ ಮತ್ತು ಸಂಬಂಧಪಟ್ಟ RTO ಅನ್ನು ಆಟೋ-ಪಿಕ್ ಮಾಡಲು ನಿಮ್ಮ ಪ್ರಸ್ತುತ ವಿಳಾಸದ ಪಿನ್‌ಕೋಡ್ ಅನ್ನು ನಮೂದಿಸಿ
ಹಂತ:9 ನಂತರ ಕಂಟಿನ್ಯೂ ಕ್ಲಿಕ್ ಮಾಡಿ
ಹಂತ:10 ನಿಮ್ಮ ಮಾಹಿತಿಯನ್ನು ಎಡಿಟ್‌ ಮಾಡಲು ಪೇಜ್‌ ತೆರೆಯಲಿದೆ. ಇಲ್ಲಿ ನಿಮ್ಮ ಹೊಸ ವಿಳಾಸ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು ಮುಂದುವರಿಸು ಬಟನ್ ಅನ್ನು ಆಯ್ಕೆ ಮಾಡಿ
ಹಂತ:11 ಇದಾದ ನಂತರ ಅಪ್ಲಿಕೇಶನ್ ಸಂಖ್ಯೆಯ ಪ್ರಿಂಟ್ ತೆಗೆದುಕೊಳ್ಳಿ
ಹಂತ:12 ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ
ಹಂತ:13 ನಂತರ ಪ್ರಿಂಟ್ ರಶೀದಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸ ಬದಲಾಯಿಸಲು ಬೇಕಾದ ಅಗತ್ಯ ದಾಖಲೆಗಳು!

ಡ್ರೈವಿಂಗ್ ಲೈಸೆನ್ಸ್‌ನಲ್ಲಿ ವಿಳಾಸ ಬದಲಾಯಿಸಲು ಬೇಕಾದ ಅಗತ್ಯ ದಾಖಲೆಗಳು!

* ಅಪ್ಲಿಕೇಶನ್‌ ಫಾರ್ಮ್ 33
* ನೋಂದಣಿ ಪ್ರಮಾಣಪತ್ರ (ವಾಹನದ RC)
* ಹೊಸ ವಿಳಾಸದ ಪುರಾವೆ
* ಇನ್ಯುರೆನ್ಸ್‌ ಸೆರ್ಟಿಫಿಕೆಟ್‌
* ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ

 ಸ್ಮಾರ್ಟ್ ಕಾರ್ಡ್ ಫೀ

* ಸ್ಮಾರ್ಟ್ ಕಾರ್ಡ್ ಫೀ
* ಫೈನಾನ್ಷಿಯರ್‌ನಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ
* ಫಾರ್ಮ್ 60 ಮತ್ತು ಫಾರ್ಮ್ 61
* ಚಾಸಿಸ್ ಮತ್ತು ಎಂಜಿನ್ ಪೆನ್ಸಿಲ್ ಪ್ರಿಂಟ್
* ಮಾಲೀಕರ ಸಹಿ ಗುರುತಿಸುವಿಕೆ

ಈ ಮೇಲಿನ ದಾಖಲೆಗಳು ಹಾಗೂ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ನಲ್ಲಿನ ವಿಳಾಸವನ್ನು ಬದಲಾಯಿಸಬಹುದಾಗಿದೆ.

Best Mobiles in India

English summary
Here's how to change address on a Driving License online

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X