ಆಂಡ್ರಾಯ್ಡ್‌ 13 ಬೆಂಬಲಿತ ಫೋನ್‌ಗಳಲ್ಲಿ ಅಪ್ಲಿಕೇಶನ್ ಭಾಷೆ ಬದಲಾಯಿಸಲು ಹೀಗೆ ಮಾಡಿ!

|

ಗೂಗಲ್‌ ಇತ್ತೀಚಿಗೆ ಆಂಡ್ರಾಯ್ಡ್‌ 13 ಅನ್ನು ಅನಾವರಣಗೊಳಿಸಿದೆ. ಸದ್ಯ ಆಂಡ್ರಾಯ್ಡ್‌ 13 ಆಪರೇಟಿಂಗ್‌ ಸಿಸ್ಟಂ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಇನ್ನು ಆಂಡ್ರಾಯ್ಡ್‌ 13 ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮಲ್ಟಿ ಲ್ಯಾಂಗ್ವೇಜ್‌ ಫೀಚರ್ಸ್‌ ಕೂಡ ಒಂದಾಗಿದೆ. ಆಂಡ್ರಾಯ್ಡ್‌ 13 ಭಾರತದ ಹಲವು ಆಯ್ಕೆಯ ಭಾಷೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಭಾಷಾ ಬೆಂಬಲವನ್ನು ನೀಡುತ್ತದೆ. ಆದರಿಂದ ನೀವು ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ನಲ್ಲಿ ನೀವು ಆಯ್ಕೆ ಮಾಡುವ ಭಾಷೆ ಇಡೀ ಸಿಸ್ಟಮ್‌ನ ಭಾಷೆಯಾಗುತ್ತದೆ.

ಆಂಡ್ರಾಯ್ಡ್‌ 13

ಹೌದು, ಆಂಡ್ರಾಯ್ಡ್‌ 13ನಲ್ಲಿ ಮಲ್ಟಿ ಲ್ಯಾಂಗ್ವೇಜ್‌ ಆಯ್ಕೆಯನ್ನು ನೀಡಲಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13 ಬೆಂಬಲಿಸುವಾಗ ನೀವು ಇಂಗ್ಲಿಷ್ ಅನ್ನು ಡೀಫಾಲ್ಟ್ ಭಾಷೆಯಾಗಿ ಆಯ್ಕೆ ಮಾಡಿದರೆ, ಅದೇ ಭಾಷೆಯಲ್ಲಿಯೇ ಎಲ್ಲಾ ಅಪ್ಲಿಕೇಶನ್‌ಗಳನ್ನು ಲಭ್ಯವಾಗಲಿದೆ. ಆದರೆ ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಿಸ್ಟಮ್‌ನಂತೆಯೇ ಅದೇ ಭಾಷೆಯನ್ನು ನೀವು ಬಳಸದೇ ಇರದಂತೆ ಮಾಡುವುದಕ್ಕೆ ಕೂಡ ಅವಕಾಶವಿದೆ. ಇದಕ್ಕಾಗಿ ನೀವು ನಿರ್ದಿಷ್ಟ ಅಪ್ಲಿಕೇಶನ್‌ಗೆ ನಿರ್ದಿಷ್ಟ ಭಾಷೆಯನ್ನು ಸಹ ಸೆಟ್‌ ಮಾಡಬಹುದು. ಹಾಗಾದ್ರೆ ಆಂಡ್ರಾಯ್ಡ್‌ 13 ನಲ್ಲಿ ಅಪ್ಲಿಕೇಶನ್‌ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಂಡ್ರಾಯ್ಡ್‌ 13 ನಲ್ಲಿ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಚೇಂಜ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ 13 ನಲ್ಲಿ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಚೇಂಜ್‌ ಮಾಡುವುದು ಹೇಗೆ?

ಹಂತ:1 ಆಂಡ್ರಾಯ್ಡ್‌ 13 ನಲ್ಲಿ ಚಾಲನೆಯಲ್ಲಿರುವ ನಿಮ್ಮ ಸ್ಯಾಮ್‌ಸಂಗ್‌ ಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ.
ಹಂತ:2 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಜನರಲ್‌ ಮ್ಯಾನೇಜ್‌ಮೆಂಟ್‌ ಕಾಣಲಿದೆ. ಅದರ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದೀಗ, ಅಪ್ಲಿಕೇಶನ್ ಭಾಷೆಗಳನ್ನು ಟ್ಯಾಪ್ ಮಾಡಿ.
ಹಂತ:4 ನಂತರ ನಿಮ್ಮ ಆಯ್ಕೆಯ ಅಪ್ಲಿಕೇಶನ್ ಆಯ್ಕೆಮಾಡಿ.
ಹಂತ:5 ಇದೀಗ ನೀವು ಆಯ್ಕೆ ಮಾಡಿದ ಅಪ್ಲಿಕೇಶನ್‌ ಭಾಷೆಯನ್ನು ಸುಲಭವಾಗಿ ಬದಲಾಯಿಸಬಹುದು.

ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಚೇಂಜ್‌ ಮಾಡುವುದು ಹೇಗೆ?

ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ ಲ್ಯಾಂಗ್ವೇಜ್‌ ಚೇಂಜ್‌ ಮಾಡುವುದು ಹೇಗೆ?

ಹಂತ:1 ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ ತೆರೆಯಿರಿ
ಹಂತ:2 ಇದರಲ್ಲಿ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಸಿಸ್ಟಮ್ ಮೇಲೆ ಕ್ಲಿಕ್ ಮಾಡಿ.
ಹಂತ:3 ನಂತರ ಭಾಷೆಗಳು ಮತ್ತು ಇನ್‌ಪುಟ್ ಮೇಲೆ ಟ್ಯಾಪ್ ಮಾಡಿ.
ಹಂತ:4 ಇದೀಗ ಅಪ್ಲಿಕೇಶನ್ ಭಾಷೆಗಳನ್ನು ಟ್ಯಾಪ್ ಮಾಡಿ.
ಹಂತ:5 ನಂತರ ನಿಮ್ಮ ಆಯ್ಕೆಯ ಅಪ್ಲಿಕೇಶನ್ ಹಾಗೂ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ.

ನೀವು ಆಯ್ಕೆ ಮಾಡಿದ ಅಪ್ಲಿಕೇಶನ್ ನಿಮ್ಮ ಆದ್ಯತೆಯ ಭಾಷೆಯನ್ನು ಹೊಂದಿರಬೇಕು, ಆದರೆ ಸಿಸ್ಟಮ್ ಡೀಫಾಲ್ಟ್ ಭಾಷೆಯಲ್ಲಿ ಉಳಿಯುತ್ತದೆ.

ಗೂಗಲ್‌ನ

ಇದಲ್ಲದೆ ಗೂಗಲ್‌ನ ಆಂಡ್ರಾಯ್ಡ್‌ 13 ಸಾಕಷ್ಟು ಕುತೂಹಲಕರ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಫೀಚರ್ಸ್‌ಗಳು ಐಒಎಸ್‌ ಮಾದರಿಯ ಅನುಭವ ನೀಡಲಿದೆ ಎನ್ನಲಾಗಿದ್ದು, ಪ್ರಮುಖ ಫೀಚರ್ಸ್‌ಗಳ ವಿವರಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಯಬಹುದು.

ಮೋರ್‌ ಮೆಟೀರಿಯಲ್‌ ಯು
ಆಂಡ್ರಾಯ್ಡ್‌ 13 ಒಳಗೊಂಡಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಮೆಟೀರಿಯಲ್ ಯು ಒಂದಾಗಿದೆ. ಇದರಲ್ಲಿ ನಿಮ್ಮ ವಾಲ್‌ಪೇಪರ್ ಅನ್ನು ಆಧರಿಸಿ ನಿಮ್ಮ ಯೂಸರ್‌ ಇಂಟರ್ಫೇಸ್ (UI) ಅನ್ನು ಪರ್ಸನಲೈಜ್ಡ್‌ ಮಾಡಬಹುದಾಗಿದೆ. ಇದು ಆಂಡ್ರಾಯ್ಡ್‌ನ ಕಲರ್‌ ಪ್ಯಾಲೆಟ್ ಮೇಲೆ ಪ್ರಭಾವ ಬೀರುತ್ತದೆ. ಅಂದರೆ ನಿಮ್ಮ ವಾಲ್‌ಪೇಪರ್‌ಗೆ ಸೆಟ್‌ ಮಾಡಲು ಆಂಡ್ರಾಯ್ಡ್‌ ಕಲರ್‌ ಸ್ಕೀಮ್‌ ಅನ್ನು ಅಳವಡಿಸಿಕೊಳ್ಳಲಿದೆ. ಅಲ್ಲದೆ ಥರ್ಡ್-ಪಾರ್ಟಿ ಅಪ್ಲಿಕೇಶನ್ ಐಕಾನ್‌ಗಳನ್ನು ಸೇರಿಸಲು ಈ ಫಿಚರ್ಸ್‌ ಅನ್ನು ವಿಸ್ತರಿಸಲಾಗುತ್ತಿದೆ. ಅಲ್ಲದೆ ಮೀಡಿಯಾ ಕಂಟ್ರೋಲ್‌ಗಳನ್ನು ಕವರ್ ಮಾಡಲು ಗೂಗಲ್‌ ಮೆಟೀರಿಯಲ್ ಯು ಅನ್ನು ಸಹ ವಿಸ್ತರಿಸಿದೆ.

RCS ಮೆಸೇಜಿಂಗ್ ಸುಧಾರಣೆಗಳು

RCS ಮೆಸೇಜಿಂಗ್ ಸುಧಾರಣೆಗಳು

ಇನ್ನು ಆಂಡ್ರಾಯ್ಡ್‌ 13 ಅಲ್ಲಿ ಕಂಡು ಬರುವ ಪ್ರಮುಖ ಫೀಚರ್ಸ್‌ ಅಂದರೆ ಗೂಗಲ್‌ ತನ್ನ ಶಾರ್ಟ್‌ ಮೆಸೇಜ್‌ ಸರ್ವಿಸ್‌ ಅನ್ನು (SMS) ರಿಚ್ ಕಮ್ಯುನಿಕೇಶನ್ ಸರ್ವಿಸ್‌ಗೆ (RCS) ಅಪ್‌ಗ್ರೇಡ್ ಮಾಡುತ್ತಿರುವುದು. ಈ ಸೇವೆಯಲ್ಲಿ ನಿಮಗೆ 1-1 ಸಂಭಾಷಣೆಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಸೇರಿದಂತೆ ಉತ್ತಮ ಪ್ರೈವೆಸಿ ಫೀಚರ್ಸ್‌ಗಳು ಲಭ್ಯವಾಗಲಿವೆ. ಇನ್ನು RCSನಲ್ಲಿ ನೀವು ಗುಣಮಟ್ಟದ ಫೋಟೋ ಶೇರ್‌ ಕೂಡ ಮಾಡಬಹುದಾಗಿದೆ.

Best Mobiles in India

English summary
Here's How to change app language on Android 13 smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X