ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮೆಟಾ ಒಡೆತನದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳು ಸಾಕಷ್ಟು ಬಳಕೆದಾರರನ್ನು ಸೆಳೆದಿವೆ. ಹೆಚ್ಚು ಜನರು ಬಳಸುವ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇದೇ ಕಾರಣಕ್ಕೆ ಮೆಟಾ ಕಂಪೆನಿ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಲ್ಯಾಂಗ್ವೇಜ್‌ ಚೇಂಜ್‌ ಸೆಟ್ಟಿಂಗ್ಸ್‌ ಕೂಡ ಸೇರಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ನಲ್ಲಿ ನೀವು ನಿಮ್ಮ ಆಯ್ಕೆಯ ಭಾಷೆಯನ್ನು ಬದಲಾಯಿಸಲು ಅವಕಾಶವಿದೆ. ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ಪ್ಲಾಟ್‌ಫಾರ್ಮ್‌ ಪ್ರವೇಶಿಸುವ ಬಳಕೆದಾರರು ನಂತರ ತಮ್ಮ ಭಾಷೆಯನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಹಾಗಾದ್ರೆ ನೀವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಳಸುವ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಮ್ಮ ಫೇಸ್‌ಬುಕ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಫೇಸ್‌ಬುಕ್‌ನಲ್ಲಿ ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಭಾಷೆ ಮತ್ತು ಪ್ರದೇಶ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಫೇಸ್‌ಬುಕ್‌ನಲ್ಲಿ ಬಟನ್‌, ಕ್ಯಾಪ್ಶನ್‌ ಮತ್ತು ಇತರ ಪಠ್ಯಕ್ಕಾಗಿ ಭಾಷೆಯನ್ನು ಟ್ಯಾಪ್ ಮಾಡಿ.
ಹಂತ:6 ನೀವು ಫೇಸ್‌ಬುಕ್ ಕಾಣಿಸಿಕೊಳ್ಳಲು ಬಯಸುವ ಭಾಷೆಯನ್ನು ಆಯ್ಕೆಮಾಡುವ ಮೂಲಕ ಭಾಷೆಯನ್ನು ಬದಲಾಯಿಸಿ.

ಐಫೋನ್‌ನಲ್ಲಿ ಫೇಸ್‌ಬುಕ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಐಫೋನ್‌ನಲ್ಲಿ ಫೇಸ್‌ಬುಕ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಐಫೋನ್‌ನಲ್ಲಿ ಫೇಸ್‌ಬುಕ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಕೆಳಗೆ ಬಲಭಾಗದಲ್ಲಿರುವ ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ ಆಯ್ಕೆಯನ್ನು ಟ್ಯಾಪ್ ಮಾಡಿ,
ಹಂತ:4 ಇದರಲ್ಲಿ ಸೆಟ್ಟಿಂಗ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ನಂತರ ಭಾಷೆ ಮತ್ತು ಪ್ರದೇಶ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಫೇಸ್‌ಬುಕ್‌ನಿಂದ ಬಟನ್‌ಗಳು, ಶೀರ್ಷಿಕೆಗಳು ಮತ್ತು ಇತರ ಪಠ್ಯಕ್ಕಾಗಿ ಭಾಷೆಯನ್ನು ಟ್ಯಾಪ್ ಮಾಡಿ.
ಹಂತ:7 ಇದೀಗ ನೀವು ನಿಮ್ಮ iPhone ನಲ್ಲಿ ಫೋನ್ ಸೆಟ್ಟಿಂಗ್‌ಗಳನ್ನು ತೆರೆಯಿರಿ ಟ್ಯಾಪ್ ಮಾಡಿ ಮತ್ತು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
ಈ ಮೂಲಕ ಫೇಸ್‌ಬುಕ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಬದಲಾಯಿಸಬಹುದು.

ಆಂಡ್ರಾಯ್ಡ್‌ನಲ್ಲಿ ಇನ್‌ಸ್ಟಾಗ್ರಾಮ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವುದು ಹೇಗೆ?

ಆಂಡ್ರಾಯ್ಡ್‌ನಲ್ಲಿ ಇನ್‌ಸ್ಟಾಗ್ರಾಮ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ಆಂಡ್ರಾಯ್ಡ್‌ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:3 ಮೇಲಿನ ಬಲಭಾಗದಲ್ಲಿರುವ ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಸೆಟ್ಟಿಂಗ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಇದರಲ್ಲಿ ಅಕೌಂಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಲ್ಯಾಂಗ್ವೇಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ: ಇದೀಗ ನೀವು ಬಳಸಲು ಬಯಸುವ ಭಾಷೆಯನ್ನು ಟ್ಯಾಪ್ ಮಾಡುವ ಮೂಲಕ ಭಾಷೆ ಬದಲಾಯಿಸಬಹುದು.

ಐಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಅನ್ನು ಬದಲಾಯಿಸುವುದು ಹೇಗೆ?

ಐಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಲ್ಯಾಂಗ್ವೇಜ್‌ ಸೆಟ್ಟಿಂಗ್ಸ್‌ ಅನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು ನಿಮ್ಮ ಐಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಕೆಳಗಿನ ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಮೇಲಿನ ಬಲ ಮೂಲೆಯಲ್ಲಿ ಮೋರ್‌ ಆಯ್ಕೆಗಳನ್ನು ಟ್ಯಾಪ್ ಮಾಡಿ.
ಹಂತ:4 ನಂತರ ಸೆಟ್ಟಿಂಗ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಮುಂದೆ, ಖಾತೆ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ಭಾಷೆ ಆಯ್ಕೆಯನ್ನು ಮಾಡಿ
ಹಂತ:7 ನಂತರ ಕಂಟಿನ್ಯೂ ಟ್ಯಾಪ್ ಮಾಡಿ ಮತ್ತು ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.

Best Mobiles in India

English summary
Here's how to change language settings in Facebook, Instagram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X