ಐಫೋನ್‌ ಮೂಲಕ ನಿಮ್ಮ ವಾಯ್ಸ್‌ ಟ್ವೀಟ್‌ಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವುದು ಹೇಗೆ?

|

ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಯಾವುದೇ ಘನೆ ನಡೆದರೂ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ಎಲ್ಲಾ ಮಾದರಿಯ ವಿಚಾರಗಳು ಕೂಡ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಲೇ ಇರುತ್ತವೆ. ಇಂದಿನ ದಿನಗಳಲ್ಲಿ ಟ್ವಿಟರ್‌ ಪ್ರಮುಖ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ ಆಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ವಾಯ್ಸ್‌ ಟ್ವೀಟ್‌ ಫೀಚರ್ಸ್‌ ಕೂಡ ಒಂದಾಗಿದೆ. ಇದರಿಂದ ಬಳಕೆದಾರರು ತಮ್ಮ ವಾಯ್ಸ್‌ಮೂಲಕವೇ ಟ್ವೀಟ್‌ಮಾಡಬಹುದಾಗಿದೆ. ಟೆಕ್ಸ್ಟ್‌ ಅನ್ನು ಟೈಪ್‌ ಮಾಡದಯೇ ಟ್ವಿಟರ್‌ನಲ್ಲಿ ಟ್ವೀಟ್‌ಗಳನ್ನು ತ್ವರಿತವಾಗಿ ಪೋಸ್ಟ್ ಮಾಡಲು ಈ ಫೀಚರ್ಸ್‌ ಸಹಾಯ ಮಾಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ನಿಮ್ಮ ಸ್ಟಾರ್ಟ್‌ ವಾಯ್ಸ್‌ ಟ್ವೀಟ್ ಅನ್ನು ನೀವು ಪೋಸ್ಟ್ ಮಾಡಿದ ನಂತರ ನಿಮ್ಮ ಪಠ್ಯ ಟ್ವೀಟ್‌ಗಳನ್ನು ಫಾಲೋ-ಅಪ್‌ಗಳಾಗಿ ಸೇರಿಸಬಹುದು. ಹಾಗಾದ್ರೆ iPhone ನಲ್ಲಿ ವಾಯ್ಸ್‌ ಟ್ವೀಟ್‌ಗಳನ್ನು ಪೋಸ್ಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಯ್ಸ್‌ ಟ್ವೀಟ್‌

ವಾಯ್ಸ್‌ ಟ್ವೀಟ್‌ ಮಾಡುವುದರಿಂದ ನೀವು ಹೇಳಬೇಕಾದ ವಿಚಾರವನ್ನು ಟೈಪ್‌ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದನೀವು ಹೇಳುವ ವಿಚಾರವನ್ನು ಇನ್ನು ವೇಗವಾಗಿ ತಿಳಿಸಬಹುದಾಗಿದೆ. ಇದು ಟ್ವೀಟ್ ಮಾಡುವ ಬಳಕೆದಾರರಿಗೆ ಮಾತ್ರವಲ್ಲದೆ ಅವರ ಅನುಯಾಯಿಗಳಿಗೂ ಉತ್ತಮ ಅನುಭವವನ್ನು ನೀಡಲಿದೆ. ಏಕೆಂದರೆ ಅವರು ತಮ್ಮ ಸಂದೇಶಗಳನ್ನು ಓದುವ ಬದಲು ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ಕೇಳಲು ಸಾಧ್ಯವಾಗುತ್ತದೆ.

ಟ್ವೀಟ್‌

ಇನ್ನು ವಾಯ್ಸ್‌ ಟ್ವೀಟ್‌ಗಳನ್ನು 2 ನಿಮಿಷ ಮತ್ತು 20 ಸೆಕೆಂಡುಗಳವರೆಗೆ ಮಾತ್ರ ರೆಕಾರ್ಡ್ ಮಾಡಬಹುದು. ಸಂದೇಶದ ಮಿತಿಯನ್ನು ಮೀರಿದರೆ, ಅದನ್ನು ಸ್ವಯಂಚಾಲಿತವಾಗಿ ಥ್ರೆಡ್‌ಗೆ ಹಾಕಲಾಗುತ್ತದೆ. ಹೆಚ್ಚುವರಿಯಾಗಿ, ನಿಮ್ಮ ವಾಯ್ಸ್‌ ಟ್ವೀಟ್‌ಗಳಲ್ಲಿನ ಪಠ್ಯಕ್ಕೆ ಫಾಲೋ-ಅಪ್ ಟ್ವೀಟ್‌ಗಳನ್ನು ಸಹ ನೀವು ಸೇರಿಸಬಹುದು. ಆದರೂ, ನಿಮ್ಮ ವಾಯ್ಸ್‌ ಅನ್ನು ಬಳಸಿಕೊಂಡು ಟ್ವೀಟ್‌ಗಳಿಗೆ ಪ್ರತ್ಯುತ್ತರಗಳನ್ನು ಪೋಸ್ಟ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದನ್ನು ಮೂಲ ಟ್ವೀಟ್ ಆಗಿ ಮಾತ್ರ ಮಾಡಬಹುದಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಪ್ರಾರಂಭವಾದಾ ಈ ಫೀಚರ್ಸ್‌ Twitter ನಲ್ಲಿ ವಾಯ್ಸ್‌ ಟ್ವೀಟ್ ಮಾಡುವುದನ್ನು iOS ಬಳಕೆದಾರರಿಗೆ ನಿರ್ಬಂಧಿಸಲಾಗಿದೆ. ಆದಾಗ್ಯೂ, ಡೆಸ್ಕ್‌ಟಾಪ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಜನರಿಗೆ iOS ವಾಯ್ಸ್‌ ಟ್ವೀಟ್‌ಗಳನ್ನು ಪ್ರವೇಶಿಸಬಹುದು.

ಐಫೋನ್‌ ಮೂಲಕ ನೀವು ವಾಯ್ಸ್‌ ಟ್ವೀಟ್‌ಗಳನ್ನು ಪೋಸ್ಟ್‌ ಮಾಡುವುದು ಹೇಗೆ?

ಐಫೋನ್‌ ಮೂಲಕ ನೀವು ವಾಯ್ಸ್‌ ಟ್ವೀಟ್‌ಗಳನ್ನು ಪೋಸ್ಟ್‌ ಮಾಡುವುದು ಹೇಗೆ?

ಹಂತ:1 ಮೊದಲನೆಯದಾಗಿ, ನಿಮ್ಮ ಐಫೋನ್‌ ನಲ್ಲಿ ಟ್ವಿಟರ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಕೆಳಗಿನ ಬಲಭಾಗದಲ್ಲಿರುವ ಟ್ವೀಟ್ ಕಂಪೋಸ್ ಐಕಾನ್ ಮೇಲೆ ನೀವು ಟ್ಯಾಪ್ ಮಾಡಿರಿ
ಹಂತ:3 ಇದೀಗ ನಿಮ್ಮ ಕೀಬೋರ್ಡ್ ಮೇಲೆ ಲಭ್ಯವಿರುವ 'wavelengths' ವಾಯ್ಸ್‌ ಟ್ವೀಟ್ ಐಕಾನ್ ಮೇಲೆ ಕ್ಲಿಕ್ ಮಾಡಿ
ಹಂತ:4 wavelengths ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ವಾಯ್ಸ್‌ ಟ್ವೀಟ್ ಐಕಾನ್ ಕೀಬೋರ್ಡ್ ಮೇಲೆ ಪಾಪ್ ಅಪ್ ಆಗುತ್ತದೆ
ಹಂತ:5 ಇದರಲ್ಲಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು.
ಹಂತ:6 ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡುವುದನ್ನು ಪೂರ್ಣಗೊಳಿಸದ ನಂತರ finished ಟ್ಯಾಪ್ ಮಾಡಿ.

Best Mobiles in India

English summary
Here's how to post tweets in your own voice via iPhone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X