ವಾಟ್ಸಾಪ್‌ನಲ್ಲಿ ದೀಪಾವಳಿ ಸ್ಟಿಕ್ಕರ್‌ ಸೆಂಡ್‌ ಮಾಡೋದು ಹೇಗೆ?

|

ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಐತಿಹ್ಯವಿದೆ. ಇದರಲ್ಲಿ ದೀಪಾವಳಿ ಹಬ್ಬವೂ ಕೂಡ ಸೇರಿದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಇಡೀ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹಬ್ಬದ ಸಮಯದಲ್ಲಿ ತಮ್ಮ ಕುಟುಂಬದವರು, ಸ್ನೇಹಿತರಿಗೆ ವಾಟ್ಸಾಪ್‌ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ಬಳಕೆದಾರರಿಗೆ ಹಬ್ಬಗಳ ಸಮಯದಲ್ಲಿ ವಿಶೇಷ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಪರಿಚಯಿಸುತ್ತಲೇ ಬಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ದೀಪಾವಳಿ ಸಂಭ್ರಮವನ್ನು ಇನ್ನಷ್ಟು ರಂಗಾಗಿಸುವ ಅನಿಮೇಟೆಡ್‌ ಸ್ಟಿಕ್ಕರ್‌ ಪ್ಯಾಕ್‌ ಪರಿಚಯಿಸಿದೆ. ದೀಪಾವಳಿ ಸಂಭ್ರಮವನ್ನು ತಮ್ಮವರ ಜೊತೆಗೆ ಶುಭಾಶಯದ ಮೂಲಕ ಹಂಚಿಕೊಳ್ಳುವ ಅವಕಾಶ ನೀಡಿದೆ. ಈ ಮೂಲಕ ಶುಭಾಶಯ ವಿನಿಮಯಕ್ಕಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಬಳಸುವ ಅವಶ್ಯಕತೆ ಇಲ್ಲದಂತೆ ಮಾಡಿದೆ. ಇನ್ನು ಹೊಸ ದೀಪಾವಳಿ ಸ್ಟಿಕ್ಕರ್‌ ಪ್ಯಾಕ್‌ನಲ್ಲಿ ಖುಷಿ ಹಂಚಿಕೊಳ್ಳುವ ಹಾಗೂ ಕಲರ್‌ಫುಲ್‌ ಸ್ಟಿಕ್ಕರ್‌ ಗಳನ್ನು ನೀಡಿದೆ. ಹಾಗಾದ್ರೆ ಈ ವಾಟ್ಸಾಪ್‌ ದೀಪಾವಳಿ ಸ್ಟಿಕ್ಕರ್‌ ಪ್ಯಾಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ದೀಪಾವಳಿ ಪ್ರಯುಕ್ತ ಕಲರ್‌ಫುಲ್‌ ದೀಪಾವಳಿ ಸ್ಟಿಕ್ಕರ್‌ ಪ್ಯಾಕ್‌ ಪರಿಚಯಿಸಿದೆ. ಇದರಿಂದ ದೀಪಾವಳಿ ಹಬ್ಬದ ಶುಭಾಶಯ ಹಂಚಿಕೊಳ್ಳುವುದ ಇನ್ನಷ್ಟು ರೋಮಾಂಚನ ನೀಡಲಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇನ್ನು ವಾಟ್ಸಾಪ್‌ನಲ್ಲಿ ಹೊಸ ದೀಪಾವಳಿ ಸ್ಟಿಕ್ಕರ್‌ಗಳು ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಗೆ ಗೋಚರಿಸಲಿದೆ. ಇದರಲ್ಲಿ ವಾಟ್ಸಾಪ್‌ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಇತ್ತೀಚಿನ ವಾಟ್ಸಾಪ್‌ ಅಪ್ಡೇಟ್‌ ಅನ್ನು ಹೊಂದಿರಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ದೀಪಾವಳಿ ಸ್ಟಿಕ್ಕರ್‌ ಸೆಂಡ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ದೀಪಾವಳಿ ಸ್ಟಿಕ್ಕರ್‌ ಸೆಂಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಅಪ್ಡೇಟ್‌ ಮಾಡಿರಿ.
ಹಂತ:2 ಅಪ್ಡೇಟ್‌ ಮಾಡಿದ ನಂತರ ನಿಮ್ಮ ಆಯ್ಕೆಯ ಚಾಟ್ ಅನ್ನು ತೆರೆಯಿರಿ.
ಹಂತ:3 ಇದರಲ್ಲಿ ಸ್ಟಿಕ್ಕರ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಐಒಎಸ್ ಬಳಕೆದಾರರು ಟೆಕ್ಸ್ಟ್‌ ಬಾರ್‌ ಬಲಭಾಗದಲ್ಲಿ ಈ ಆಯ್ಕೆಯನ್ನು ಕಾಣಬಹುದಾಗಿದೆ. ಆದರೆ ಆಂಡ್ರಾಯ್ಡ್‌ನಲ್ಲಿ ಸ್ಟಿಕ್ಕರ್‌ಗಳ ಐಕಾನ್ GIF ಆಯ್ಕೆಯ ಪಕ್ಕದಲ್ಲಿ ಕಾಣಲಿದೆ.
ಹಂತ:4 ನಂತರ ನೀವು ಕೇವಲ '+' ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಹ್ಯಾಪಿ ದೀಪಾವಳಿ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಿ.
ಹಂತ:5 ಡೌನ್‌ಲೋಡ್‌ ಮಾಡಿದ ನಂತರ, ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ನಿಮ್ಮ ದೀಪಾವಳಿ ಶುಭಾಶಯಗಳನ್ನು ಸ್ಟಿಕ್ಕರ್‌ ಮೂಲಕ ಕಳುಹಿಸಬಹುದಾಗಿದೆ.

ದೀಪಾವಳಿ

ಇನ್ನು ವಾಟ್ಸಾಪ್‌ನಲ್ಲಿರುವ ದೀಪಾವಳಿ ಸ್ಟಿಕ್ಕರ್‌ಗಳು ನಿಮಗೆ ಇಷ್ಟವಾಗದಿದ್ದರೆ, ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಿಂದ ಕೂಡ ಸ್ಟಿಕ್ಕರ್‌ ಪ್ಯಾಕ್‌ ಡೌನ್‌ಲೋಡ್‌ ಮಾಡಬಹುದು. ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಡೌನ್‌ಲೋಡ್‌ ಮಾಡಿದ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ನಿಮ್ಮ ಆಯ್ಕೆಯ ಚಾಟ್‌ಗಳಿಗೆ ದೀಪಾವಳಿ 2021 ಶುಭಾಶಯಗಳನ್ನು ಕಳುಹಿಸಬಹುದಾಗಿದೆ. ಇದಕ್ಕಾಗಿ, ಆಂಡ್ರಾಯ್ಡ್ ಬಳಕೆದಾರರು ಮೊದಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ "ವಾಟ್ಸಾಪ್‌ ದೀಪಾವಳಿ ಸ್ಟಿಕ್ಕರ್‌ಗಳು" ಎಂದು ಸರ್ಚ್‌ ಮಾಡಬೇಕಾಗುತ್ತದೆ. ಇದರಲ್ಲಿ ಕೆಲವು ಸ್ಟಿಕ್ಕರ್‌ ಪ್ಯಾಕ್‌ಗಳ ಅಪ್ಲಿಕೇಶನ್‌ಗಳು ಕಾಣಲಿವೆ. ಇದರಲ್ಲಿ ನೀವು ನಿಮ್ಮ ಆದ್ಯತೆಗೆ ಅನುಗುಣವಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಬಹುದು. ನಂತರ ವಾಟ್ಸಾಪ್‌ಗೆ ನಿಮ್ಮ ಮೆಚ್ಚಿನ ದೀಪಾವಳಿ ಸ್ಟಿಕ್ಕರ್ ಪ್ಯಾಕ್‌ಗಳನ್ನು ಸೇರಿಸಬಹುದು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಮಾಡಲಿದೆ. ಇಷ್ಟು ದಿನ ಡಿಲೀಟ್ ಫಾರ್ ಎವೆರಿ ಒನ್ ಇದ್ದ ಸಮಯದ ಮಿತಿಯ ಬದಲಾವಣೆ ಮಾಡಲಿದೆ ಎನ್ನುವ ವರದಿಯಾಗಿದೆ. ಡಿಲೀಟ್ ಫಾರ್ ಎವೆರಿ ಒನ್ ಫೀಚರ್ಸ್‌ 2017 ರಲ್ಲಿ ವಾಟ್ಸಾಪ್‌ಗೆ ಸೇರ್ಪಡೆ ಆಗಿತ್ತು. ಪ್ರಾರಂಭದಲ್ಲಿ ಏಳು ನಿಮಿಷಗಳ ಮಿತಿ ಹೊಂದಿದ್ದ ಈ ಫೀಚರ್ಸ್‌ ನಂತರದಲ್ಲಿ ಒಂದು ಗಂಟೆಯ ಅವಧಿಯನ್ನು ಹೊಂದಿತ್ತು. ಪ್ರಸ್ತುತ ಒಂದು ಗಂಟೆಯ ಅವಧಿಯನ್ನು ಹೊಂದಿದೆ. ಇದು ವಾಟ್ಸಾಪ್‌ ತನ್ನ ಬಳಕೆದಾರರಿಗೆ ಪರಿಚಯಿಸಿರುವ ಅತ್ಯಂತ ಉಪಯುಕ್ತ ಮತ್ತು ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿದೆ. ಈ ಆಯ್ಕೆಯ ಮೂಲಕ ನೀವು ಯಾರಿಗಾದರೂ ಅಥವಾ ಗ್ರೂಪ್‌ಗೆ ತಪ್ಪಾದ ಚಾಟ್‌ ಸಂದೇಶವನ್ನು ಕಳುಹಿಸಿದ್ದರೆ ಯಾರಿಗೂ ಕಾಣದಂತೆ ಡಿಲೀಟ್‌ ಮಾಡಲು ಅವಕಾಶ ನೀಡಲಿದೆ. ಇದರಿಂದ ನಿಮಗಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಅವಕಾಶ ಸಿಗಲಿದೆ. ಸದ್ಯ WABetaInfo ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ ಕಂಪನಿಯು ಈ ಫೀಚರ್ಸ್‌ನ ಸಮಯದ ಮಿತಿಯನ್ನು ಅನಿರ್ದಿಷ್ಟ ಅವಧಿಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ.

Most Read Articles
Best Mobiles in India

English summary
Here's a quick at how you can use the festive stickers to send wishes to your friends and family on WhatsApp.to know more visit to kannada.gizbot.com..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X