ಇನ್‌ಸ್ಟಾಗ್ರಾಮ್‌ನಲ್ಲಿ ಸೈಲೆಂಟ್‌ ಮೆಸೇಜಸ್‌ ಸೆಂಡ್‌ ಮಾಡುವುದು ಹೇಗೆ?

|

ಜನಪ್ರಿಯ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದೆನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಫೋಟೋ ಮತ್ತು ವೀಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ ಒಳಗೊಂಡಿರುವ ವಿಶೇಷ ಫೀಚರ್ಸ್‌ಗಳಲ್ಲಿ'ಸೈಲೆಂಟ್ ಮೆಸೇಜಸ್‌' ಫೀಚರ್ಸ್‌ ಕೂಡ ಸೇರಿದೆ. ಇದು ಇನ್‌ಸ್ಟಾಗ್ರಾಮ್‌ನ DM ಗಳಲ್ಲಿ ಯಾರಿಗಾದರೂ ಮ್ಯೂಟ್ ಮಾಡಿದ ಮೆಸೇಜ್‌ ಕಳುಹಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಸೈಲೆಂಟ್‌ ಮೆಸೇಜಸ್‌ ಫೀಚರ್ಸ್‌ ಅನ್ನು ಹೊಂದಿದೆ. ಇದರಿಂದ ಸೈಲೆಂಟ್‌ ಮೆಸೇಜ್‌ ಮಾಡುವುದಕ್ಕೆ ಅವಕಾಶವಿದೆ. ಈ ಫೀಚರ್ಸ್‌ ಮೂಲಕ ಗ್ರೂಪ್‌ ಚಾಟ್‌ಗಳಲ್ಲಿ ಸೈಲೆಂಟ್‌ ಮೆಸೇಜ್‌ ಮಾಡಬಹುದು. ಇದಲ್ಲದೆ ಈ ಫೀಚರ್ಸ್‌ ಖಾಸಗಿ ಚಾಟ್‌ಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಸೈಲೆಂಟ್‌ ಮೆಸೇಜ್‌ ಸೆಂಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಸೈಲೆಂಟ್‌ ಮೆಸೇಜಸ್‌ ಸೆಂಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಸೈಲೆಂಟ್‌ ಮೆಸೇಜಸ್‌ ಸೆಂಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಸೈಲೆಂಟ್‌ ಮೆಸೇಜಸ್‌ಗಳನ್ನು ಕಳುಹಿಸಲು, ನೀವು ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾಗುತ್ತದೆ. ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ DM ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ ಚಾಟ್ ತೆರೆಯಿರಿ.
ಹಂತ:4 ನಂತರ ನಿಮ್ಮ ಸಂದೇಶಗಳನ್ನು ಸೈಲೆಂಟ್‌ ಆಗಿ ಸೆಂಡ್‌ ಮಾಡಲು, "@silent" ಎಂದು ಟೈಪ್ ಮಾಡಿ.(@silent ).
ಹಂತ:5 ಇದಾದ ನಂತರ ಸೆಂಡ್‌ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ಫೀಚರ್ಸ್‌ ಮೂಲಕ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶಗಳನ್ನು ಕಳುಹಿಸಿದರೆ ಸಂದೇಶ ಸ್ವಿಕರಿಸಿದ ವ್ಯಕ್ತಿಯು ನಿಮ್ಮ ಸಂದೇಶದ ಯಾವುದೇ ಅಧಿಸೂಚನೆಯ ಧ್ವನಿಯನ್ನು ಪಡೆಯುವುದಿಲ್ಲ.

ಇನ್‌ಸ್ಟಾಗ್ರಾಮ್‌

ಇದಲ್ಲದೆ ಮೆಟಾ ಕಂಪೆನಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ 3D ಅವತಾರ್ ಫೀಚರ್ಸ್‌ ಪರಿಚಯಿಸಿದೆ. ಈ ತ್ರಿಡಿ ಅವತಾರ್‌ನಲ್ಲಿ ಕಾಕ್ಲಿಯರ್ ಇಂಪ್ಲಾಂಟ್‌ಗಳು ಮತ್ತು ಕಿವಿಯ ಮೇಲಿನ ಶ್ರವಣ ಡಿವೈಸ್‌ಗಳನ್ನು ಸೇರಿಸುವ ಆಯ್ಕೆಗಳನ್ನು ಕೂಡ ನೀಡಿದೆ. ಇದೀಗ ಮೆಟಾ ಪರಿಚಯಿಸಿರುವ ತ್ರೀಡಿ ಅವತಾರ್‌ ಫೀಚರ್ಸ್‌ ಭಾರತೀಯ ಬಳಕೆದಾರರಿಗೆ ಲಭ್ಯವಿದೆ. ಇದರ ಮೂಲಕ ನಿಮ್ಮದೇ ಆದ ತ್ರೀಡಿ ಅವತಾರ್‌ಗಳನ್ನು ಕ್ರಿಯೆಟ್‌ ಮಾಡಬಹುದು.

ಇನ್‌ಸ್ಟಾಗ್ರಾಮ್‌

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂಭಾಷಣೆಗಳನ್ನು ಯಾರೂ ನೋಡದಂತೆ ಹೈಡ್‌ ಮಾಡುವುದಕ್ಕೆ ಅವಕಾಶವಿದೆ. ಇದರಿಂದ ನಿಮ್ಮ ಪರ್ಸನಲ್‌ ಚಾಟ್‌ ಅನ್ನು ಮರೆಯಾಗಿಡಬಹುದಾಗಿದೆ. ಇದಲ್ಲದೆ ಇತರ ಡಿಎಂಗಳಿಗೆ ಪ್ರವೇಶವನ್ನು ಪಡೆದರೂ ಸಹ, ನಿರ್ದಿಷ್ಟ ಚಾಟ್‌ಗಳನ್ನು ಮರೆಮಾಡಲು ನೀವು ಆಯ್ಕೆ ಮಾಡಬಹುದು. ಆದರೆ ಇನ್‌ಸ್ಟಾಗ್ರಾಮ್‌ ನಿಮಗೆ "ಹೈಡ್‌ ಚಾಟ್ಸ್‌" ಆಯ್ಕೆಯನ್ನು ನೀಡುವುದಿಲ್ಲ. ಆದರೆ ನೀವು ಚಾಟ್ಸ್‌ ಹೈಡ್‌ ಮಾಡುವುದಕ್ಕೆ ಕೆಲವು ನಿಯಮಗಳನ್ನು ಅನುಸರಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ಗಳನ್ನು ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಸಂಭಾಷಣೆಗಳನ್ನು ಹೈಡ್‌ ಮಾಡಲು ಎರಡು ಮಾರ್ಗಗಳಿವೆ.
ವಿಧಾನ-1
ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಚಾಟ್‌ಗಳಿಗೆ ಹೋಗಿ
ಹಂತ:2 ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:3 ಚಾಟ್ ಅನ್ನು ಹೈಡ್‌ ಮಾಡಲು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಮೇಲಕ್ಕೆ ಸ್ವೈಪ್ ಮಾಡಿ
ಹಂತ:4 ಇದೀಗ ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು. ಮೆಸೇಜ್‌ ಸ್ವೀಕರಿಸುವವರು ನಿಮ್ಮ ಪಠ್ಯವನ್ನು ಓದಿದ ನಂತರ ಅವರು ಡಿಸ್‌ಅಪಿಯರ್‌ ಆಗಲಿದ್ದಾರೆ. ನೀವು GIF ಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಈ ಮೋಡ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ವ್ಯಾನಿಶ್‌ ಮೋಡ್‌ ಅನ್ನು ಮತ್ತೆ ಸ್ವೈಪ್ ಮಾಡುವ ಮೂಲಕ ನೀವು ಈ ಮೋಡ್ ಅನ್ನು ಆಫ್ ಮಾಡಬಹುದು.

ವಿಧಾನ-2
ಹಂತ:1 ಮೊದಲಿಗೆ ನಿಮ್ಮ ಪ್ರೊಫೈಲ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಮೆನು ಸಾಲುಗಳ ಮೇಲೆ ಟ್ಯಾಪ್ ಮಾಡಿ
ಹಂತ:2 ಸೆಟ್ಟಿಂಗ್ಸ್‌>ಅಕೌಂಟ್‌> ಖಾತೆ ಪ್ರಕಾರವನ್ನು ಬದಲಿಸಿ> ಬ್ಯುಸಿನೆಸ್‌ ಅಕೌಂಟ್‌ಗೆ ಬದಲಿಸಿ
ಹಂತ:3 ನಂತರ, ಸಂದೇಶಗಳ ವಿಭಾಗಕ್ಕೆ ಹೋಗಿ ಮತ್ತು ನೀವು ಹೈಡ್‌ ಮಾಡಲು ಬಯಸುವ ಚಾಟ್ ಅನ್ನು ತೆರೆಯಿರಿ
ಹಂತ:4 ಈಗ 'ಮೂವ್ ಟು ಜನರಲ್' ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:5 ನಂತರ ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ವೈಯಕ್ತಿಕ ಖಾತೆಗೆ ಬದಲಿಸಿ.
ಹಂತ:6 ಇದೀಗ ನಿಮ್ಮ ಸಂಬಂಧಿತ ಚಾಟ್‌ಗಳು ಕಣ್ಮರೆಯಾಗುತ್ತವೆ.

Most Read Articles
Best Mobiles in India

Read more about:
English summary
Instagram is one of the most popular social media apps on the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X