ಜಿಯೋ ಗ್ರಾಹಕರು ಹೀಗೆ ಮಾಡಿದ್ರೆ ಸಿಗಲಿದೆ ಅನ್‌ಲಿಮಿಟೆಡ್‌ 5G ಡೇಟಾ!

|

ಜಿಯೋ ಟೆಲಿಕಾಂ ಜಿಯೋ ಟ್ರೂ 5G ಗ್ರಾಹಕರಿಗೆ ವೆಲ್‌ಕಮ್‌ ಆಫರ್‌ಗಳನ್ನು ನೀಡುತ್ತಿದೆ. ಭಾರತದಲ್ಲಿ ಜಿಯೋ ಟ್ರೂ 5G ಲಭ್ಯವಿರುವ ಪ್ರದೇಶಗಳಲ್ಲಿ ಈ ಆಫರ್‌ನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆಫರ್‌ನಲ್ಲಿ ನೀವು 5G ನೆಟ್‌ವರ್ಕ್‌ ಬಳಸುತ್ತಿದ್ದರೆ 1Gbps ವೇಗದಲ್ಲಿ ಅನ್‌ಲಿಮಿಟೆಡ್‌ 5G ಡೇಟಾವನ್ನು ನೀಡಲಿದೆ. ಇನ್ನು ಜಿಯೋ ಟ್ರೂ 5G ವೆಲ್‌ಕಮ್ ಆಫರ್‌ ಪಡೆಯಬೇಕಾದರೆ ಎಲ್ಲಾ ಬಳಕೆದಾರರು 239ರೂ ಅಥವಾ ಅದಕ್ಕಿಂತ ಹೆಚ್ಚಿನ ಹಣ ಮೌಲ್ಯದ ರೀಚಾರ್ಜ್‌ ಮಾಡಬೇಕಾಗುತ್ತದೆ.

ಜಿಯೋ

ಹೌದು, ಜಿಯೋ ಟ್ರೂ 5G ವೆಲ್‌ಕಮ್‌ ಆಫರ್‌ ಪಡೆದುಕೊಳ್ಳಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕಿದೆ. ಒಮ್ಮೆ ನೀವು ಜಿಯೋ ವೆಲ್‌ಕಮ್‌ ಆಫರ್‌ಗೆ ಅರ್ಹತೆ ಪಡೆದುಕೊಂಡರೆ ಅನ್‌ಲಿಮಿಟೆಡ್‌ ಡೇಟಾವನ್ನು ಪಡೆಯಬಹುದಾಗಿದೆ. ವೇಗದ ಡೇಟಾ ಪ್ರಯೋಜನಗಳನ್ನು ಕೂಡ ಅನುಭವಿಸಬಹುದಾಗಿದೆ. ಹಾಗಾದ್ರೆ ಜಿಯೋ ವೆಲ್‌ಕಮ್‌ ಆಫರ್‌ಗಾಗಿ ನೀವು ಸೈನ್‌ ಇನ್‌ ಆಗೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ವೆಲ್‌ಕಮ್‌ ಆಫರ್‌ಗೆ ಸೈನ್‌ ಆಪ್‌ ಆಗುವ ಮುನ್ನ ಅನುಸರಿಸಬೇಕಾದ ಕ್ರಮಗಳು!

ಜಿಯೋ ವೆಲ್‌ಕಮ್‌ ಆಫರ್‌ಗೆ ಸೈನ್‌ ಆಪ್‌ ಆಗುವ ಮುನ್ನ ಅನುಸರಿಸಬೇಕಾದ ಕ್ರಮಗಳು!

ಮೊದಲಿಗೆ ನೀವು ನಿಮ್ಮ ನಗರದಲ್ಲಿ ಜಿಯೋ ಟ್ರೂ 5G ಸೇವೆ ಲಭ್ಯವಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ನೀವು ಜಿಯೋ ವೆಬ್‌ಸೈಟ್‌ನಲ್ಲಿ 5G ಬೆಂಬಲಿತ ನಗರಗಳ ಪಟ್ಟಿಯನ್ನು ಕಾಣಬಹುದು. ನಂತರ ನಿಮ್ಮ ಫೋನ್‌ 5G ಬೆಂಬಲಿಸಲಿದೆಯಾ ಅನ್ನೊದನ್ನ ಗಮನಿಸಿ. ನಂತರ ಜಿಯೋ ಸಿಮ್ ಹೊಂದಿರುವ ಯಾವುದೇ 5G ಸ್ಮಾರ್ಟ್‌ಫೋನ್‌ನಲ್ಲಿ, ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಮೈ ಜಿಯೋ ಅಪ್ಲಿಕೇಶನ್‌ ತೆರೆಯಿರಿ ಮತ್ತು ಸೆಟ್‌ ಮಾಡಿರಿ.

ಜಿಯೋ

ಇದೀಗ ಮೈ ಜಿಯೋ ಅಪ್ಲಿಕೇಶನ್‌ನ ಮೇನ್‌ಪೇಜ್‌ನಲ್ಲಿ ಜಿಯೋ ಟ್ರೂ 5G ವೆಲ್‌ಕಮ್ ಆಫರ್ ಮತ್ತು ಅದಕ್ಕೆ ಅರ್ಹರಾಗುವುದು ಹೇಗೆ ಅನ್ನೊದರ ವಿವರವನ್ನು ಕಾಣಲು ಪ್ರಾಂಪ್ಟ್‌ ಕಾಣಬೇಕಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಜಿಯೋ 5G ವೆಲ್‌ಕಮ್‌ ಆಫರ್‌ ಲಭ್ಯವಿದ್ದರೆ ಮಾತ್ರ ಪ್ರಾಂಪ್ಟ್ ತೋರಿಸುತ್ತದೆ. ಇದಾದ ನಂತರ ಆಫರ್‌ಗಾಗಿ ಸೈನ್ ಅಪ್ ಮಾಡಲು ಅಪ್ಲಿಕೇಶನ್‌ನಲ್ಲಿ ತೋರಿಸುವ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬೇಕಿದೆ. ಒಂದು ವೇಳೆ ನೀವು Jio 5G ವೆಲ್ಕಮ್ ಆಫರ್‌ಗೆ ಅರ್ಹರಾಗಿದ್ದರೆ, SMS ಮತ್ತು ವಾಟ್ಸಾಪ್‌ನಲ್ಲಿ ಸಂದೇಶ ಬರಲಿದೆ.

ಸಂದೇಶ

ಆದರೆ ಈ ಸಂದೇಶ ಕೆಲವು ಜನರಿಗೆ ಒಂದು ವಾರಕ್ಕಿಂತ ಹೆಚ್ಚಿನ ಸಮಯದ ನಂತರ ಬರುವ ಸಾಧ್ಯತೆಯಿದೆ. ಒಮ್ಮೆ ನೀವು ವೆಲ್‌ಕಮ್‌ ಆಫರ್‌ ಆಲರ್ಟ್‌ ಸಂದೇಶ ಸ್ವೀಕರಿಸಿದರೆ 239ರೂ ಅಥವಾ ಅದಕ್ಕಿಂತ ಹೆಚ್ಚಿನ ಅನ್‌ಲಿಮಿಟೆಡ್‌ ಕಾಲ್‌ ಪ್ಲಾನ್‌ ಅನ್ನು ರೀಚಾರ್ಜ್‌ ಮಾಡುವ ಪ್ರೋಗ್ರಾಂನ ಭಾಗವಾಗಬಹುದು. ಇಲ್ಲವೆ ಮೈ ಜಿಯೋ ಅಪ್ಲಿಕೇಶನ್‌ ಮೂಲಕ ಹೊಸ ಪ್ಲಾನ್‌ಗೆ ನೇರವಾಗಿ ಸ್ಕಿಪ್ ಮಾಡಬಹುದು.

ಪ್ಲಾನ್‌

239ರೂ. ಅಥವಾ ಅದಕ್ಕಿಂತ ಹೆಚ್ಚಿನ ಪ್ಲಾನ್‌ ಮೂಲಕ ವೆಲ್‌ಕಮ್‌ ಆಫರ್‌ಗೆ ಎಂಟ್ರಿ ನೀಡಿದ ಮೇಲೆ ನೀವು ನಿಮ್ಮ ಫೋನ್‌ನಲ್ಲಿ ಜಿಯೋ 5G ಅನ್ನು ಬಳಸಬಹುದು. ಇದಕ್ಕಾಗಿ ನೀವು ನಿಮ್ಮ 5G ಫೋನ್‌ನಲ್ಲಿ 5G ನೆಟ್‌ವರ್ಕ್ ಅನ್ನು ಆಕ್ಟಿವ್‌ ಗೊಳಿಸಬೇಕಾಗುತ್ತದೆ. ಇದಕ್ಕಾಗಿ ನೀವು ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್‌>ನೆಟ್‌ವರ್ಕ್ ಮತ್ತು ಇಂಟರ್ನೆಟ್>ಸಿಮ್‌ಗಳು>ಆದ್ಯತೆಯ ನೆಟ್‌ವರ್ಕ್ ಪ್ರಕಾರವನ್ನು ಆಯ್ಕೆ ಮಾಡಬೇಕಾಗುತ್ತದೆ. ಇನ್ನು ಐಒಎಸ್‌ನಲ್ಲಿ ಸೆಟ್ಟಿಂಗ್ಸ್‌> ಮೊಬೈಲ್ ಡೇಟಾ> ಮೊಬೈಲ್ ಡೇಟಾ ಆಯ್ಕೆಗಳು> ವಾಯ್ಸ್‌ ಮತ್ತು ಡೇಟಾಗೆ ನ್ಯಾವಿಗೇಟ್ ಮಾಡಬಹುದಾಗಿದೆ. ಇದಾದ ನಂತರ ನಿಮ್ಮ ಫೋನ್‌ನಲ್ಲಿ 5G ಟಾಗಲ್ ಆನ್ ಮಾಡಿದರೆ ತಕ್ಷಣವೇ 5G ನೆಟ್‌ವರ್ಕ್‌ ಬರಲಿದೆ.

5G

ಇದಾದ ನಂತರ ನಿಮ್ಮ ಮೈ ಜಿಯೋ ಅಪ್ಲಿಕೇಶನ್‌ಗೆ ಹಿಂತಿರುಗಿದರೆ, ಮೇನ್‌ ಪೇಜ್‌ನಲ್ಲಿ ಪ್ರತ್ಯೇಕ 5G ಟ್ಯಾಬ್ ನಲ್ಲಿ ನಿಮ್ಮ 5G ಡೇಟಾದ ವಿವರವನ್ನು ಕಾಣಬಹುದು. ಅಲ್ಲದೆ ಅನ್‌ಲಿಮಿಟೆಡ್‌ 5G ಡೇಟಾಗೆ ಕೂಡ ನೀವು ಪ್ರವೇಶವನ್ನು ಪಡೆದುಕೊಂಡಿರುವುದನ್ನು ಸಹ ಕಾಣಬಹುದು.

Best Mobiles in India

Read more about:
English summary
All users need to do once they are in on the Jio True 5G Welcome offer is recharge with a plan of Rs 239 or above to be eligible.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X