ಇಂಟರ್‌ನೆಟ್‌ ಇಲ್ಲದೇ ಹೋದರು ಜಿ-ಮೇಲ್‌ ಕಳುಹಿಸಲು ಹೀಗೆ ಮಾಡಿ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಪರಿಚಯಿಸಿರುವ ಜನಪ್ರಿಯ ಸೇವೆಗಳಲ್ಲಿ ಜಿ-ಮೇಲ್‌ ಕೂಡ ಒಂದಾಗಿದೆ. ನಿಮ್ಮ ಕಚೇರಿಯೊಂದಿಗೆ ಇಲ್ಲವೇ ಸಹದ್ಯೋಗಿಗಳಿಗೆ ಅಗತ್ಯ ಮಾಹಿತಿಯನ್ನು ಜಿ-ಮೇಲ್‌ ಮುಖಾಂತರ ಸುರಕ್ಷಿತವಾಗಿ ಸೆಂಡ್‌ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಬಹುತೇಕ ಮಂದಿ ಜಿ-ಮೇಲ್‌ ಅಕೌಂಟ್‌ ಅನ್ನು ಹೊಂದಿದ್ದಾರೆ. ಅದರಂತೆ ಜಿ-ಮೇಲ್‌ ಕೂಡ ತನ್ನ ಬಳಕೆದಾರರಿಗೆ ಅಗತ್ಯ ಫೀಚರ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಕಳುಹಿಸುವ ಆಯ್ಕೆ ಕೂಡ ಸೇರಿದೆ.

ಜಿ-ಮೇಲ್‌

ಹೌದು, ಜಿ-ಮೇಲ್‌ ಬಳಸುವಾಗ ಏಕಾಏಕಿ ಇಂಟರ್‌ನೆಟ್‌ ಕನೆಕ್ಟಿವಿಟಿ ಸ್ಥಗಿತಗೊಂಡಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿ-ಮೇಲ್‌ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸುವ ಆಯ್ಕೆಯನ್ನು ನೀಡಿದೆ. ಆದರೆ ಈ ಆಯ್ಕೆಯು ಜ-ಮೇಲ್‌ ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಮಾತ್ರ ವರ್ಕ್‌ ಆಗಲಿದೆ. ಆಫ್‌ಲೈನ್ ಮೇಲ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸಬಹುದಾಗಿದೆ. ಹಾಗಾದ್ರೆ ಇಮಟರ್‌ನೆಟ್‌ ಇಲ್ಲದಿರುವಾಗ ಜಿ-ಮೇಲ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟರ್‌ನೆಟ್‌

ಇಂಟರ್‌ನೆಟ್‌ ಇಲ್ಲದಿದ್ದರೂ ಜಿ-ಮೇಲ್‌ ಅನ್ನು ಬಳಸಬೇಕಾದರೆ ಮೊದಲಿಗೆ ನೀವು ಜಿ ಮೇಲ್‌ನಲ್ಲಿ ಆಫ್‌ಲೈನ್‌ ಮೇಲ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಬೇಕಾಗುತ್ತದೆ. ಇದರಿಂದ ಬಳಕೆದಾರರು ಇಂಟರ್‌ನೆಟ್‌ ಇಲ್ಲದ ಸಮಯದಲ್ಲಿಯೂ ಜಿ-ಮೇಲ್‌ನ ಇನ್‌ಬಾಕ್ಸ್ ಅನ್ನು ಪ್ರವೇಶಿಸಬಹುದು. ಅನ್‌ ರೀಡ್‌ ಆಗಿರುವ ಇ-ಮೇಲ್‌ಗಳನ್ನು ರೀಡ್‌ ಮಾಡಬಹುದು. ಅಲ್ಲದೆ ಇ-ಮೇಲ್‌ ಅನ್ನು ಕೂಡ ಕಳುಹಿಸಬಹುದಾಗಿದೆ. ಇದಕ್ಕಾಗಿ ನೀವು ಕ್ರೋಮ್ ಬ್ರೌಸರ್ ವಿಂಡೋ ಮೂಲಕ ಮಾತ್ರ ಜಿ-ಮೇಲ್‌ ಬಳಸಬೇಕಾಗುತ್ತದೆ.

ಜಿ-ಮೇಲ್‌

ಜಿ-ಮೇಲ್‌ನಲ್ಲಿ ನೀವು ಆಫ್‌ಲೈನ್ ಮೋಡ್ ಆಕ್ಟಿವ್‌ ಮಾಡಿದಾಗ ಜಿ-ಮೇಲ್‌ ಆಟೋಮ್ಯಾಟಿಕ್‌ ಆಫ್‌ಲೈನ್ ಪ್ರವೇಶಕ್ಕಾಗಿ ಇತ್ತೀಚಿನ ಇಮೇಲ್‌ಗಳನ್ನು ಸಿಂಕ್ ಮಾಡುತ್ತದೆ. ಅಲ್ಲದೆ ಅವುಗಳನ್ನು 7 ದಿನಗಳಿಂದ 90 ದಿನಗಳವರೆಗೆ ನಿರ್ದಿಷ್ಟ ಅವಧಿಯವರೆಗೆ ಪ್ರೊಟೆಕ್ಟ್‌ ಮಾಡಲಿದೆ. ಯಾವುದೇ ಒಳಬರುವ ಇಮೇಲ್‌ಗಳ ಲೈಟ್ ಆವೃತ್ತಿಯನ್ನು ಡೌನ್‌ಲೋಡ್ ಮಾಡುತ್ತದೆ. ಇದಲ್ಲದೆ ಬಳಕೆದಾರರು ಯಾವುದೇ ಸಮಯದಲ್ಲಿ ಜಿ-ಮೇಲ್‌ನ ಆಫ್‌ಲೈನ್ ಡೇಟಾವನ್ನು ಡಿಲೀಟ್‌ ಮಾಡುವುದಕ್ಕೆ ಕೂಡ ಅವಕಾಶವಿದೆ.

ಇಂಟರ್‌ನೆಟ್‌ ಇಲ್ಲದಿರುವಾಗ Gmail ಬಳಸುವುದು ಹೇಗೆ?

ಇಂಟರ್‌ನೆಟ್‌ ಇಲ್ಲದಿರುವಾಗ Gmail ಬಳಸುವುದು ಹೇಗೆ?

ಹಂತ:1 ಮೊದಲಿಗೆ ಜಿ-ಮೇಲ್‌ ನಲ್ಲಿ ಆಫ್‌ಲೈನ್ ಸೆಟ್ಟಿಂಗ್ಸ್‌ ತೆರೆಯಿರಿ
ಹಂತ:2 ಇದರಲ್ಲಿ ಆಫ್‌ಲೈನ್ ಮೇಲ್ ಅನ್ನು ಆಕ್ಟಿವ್‌ ಮಾಡಿರಿ.
ಹಂತ:3 ಇದೀಗ ನೀವು ಎಷ್ಟು ದಿನಗಳ ಸಂದೇಶಗಳನ್ನು ಸಿಂಕ್ ಮಾಡಲು ಬಯಸುತ್ತೀರಿ ಅನ್ನೊದನ್ನ ಆಯ್ಕೆ ಮಾಡಿರಿ.
ಹಂತ:4 ಬದಲಾವಣೆಗಳನ್ನು ಸೇವ್‌ ಮಾಡಲು ಸೇವ್‌ ಕ್ಲಿಕ್ ಮಾಡಿ.

ಇದೀಗ ನೀವು ಸುಲಭವಾಗಿ ಇಂಟರ್‌ನೆಟ್‌ ಇಲ್ಲದಿರುವಾಗಲೂ ಕೂಡ ಜಿ-ಮೇಲ್‌ ಅನ್ನು ಬಳಸಬಹುದಾಗಿದೆ.

ನಿಮ್ಮ ಜಿ-ಮೇಲ್‌ ಪಾಸ್‌ವರ್ಡ್ ನಿಮಗೆ ನೆನಪಿಲ್ಲದಿದ್ದಾಗ ಏನು ಮಾಡುವುದು?

ನಿಮ್ಮ ಜಿ-ಮೇಲ್‌ ಪಾಸ್‌ವರ್ಡ್ ನಿಮಗೆ ನೆನಪಿಲ್ಲದಿದ್ದಾಗ ಏನು ಮಾಡುವುದು?

ನಿಮ್ಮ Googleನ ಜಿ-ಮೇಲ್‌ ಖಾತೆಯ ಪಾಸ್‌ವರ್ಡ್ ಅನ್ನು ನೀವು ನೆನಪಿಟ್ಟುಕೊಳ್ಳಲು ಸಾಧ್ಯವಾಗದಿದ್ದಾಗ, ನಿಮ್ಮ ಖಾತೆಯನ್ನು ಮತ್ತೆಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ. ಹಂತ 1: ಯಾವುದೇ ಬ್ರೌಸರ್ ತೆರೆಯಿರಿ ಮತ್ತು "Google Account Recovery" ಗಾಗಿ ಹುಡುಕಿ ಮತ್ತು ಫಲಿತಾಂಶಗಳಲ್ಲಿನ ಮೊದಲ ಲಿಂಕ್‌ಗೆ ಹೋಗಿ. Google Account Recovery ಪುಟದಲ್ಲಿ, ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ.
ಹಂತ 2: ನೀವು ನೆನಪಿಡುವ ಹಿಂದಿನ ಯಾವುದೇ ಪಾಸ್‌ವರ್ಡ್ ಅನ್ನು Google ಈಗ ಕೇಳುತ್ತದೆ. ನೀವು ಹಿಂದಿನ ಪಾಸ್‌ವರ್ಡ್ ಅನ್ನು ನೆನಪಿಸಿಕೊಂಡರೆ, ಅದನ್ನು ಇಲ್ಲಿ ನಮೂದಿಸಿ ಮತ್ತು ಉಳಿದ ಸೂಚನೆಗಳನ್ನು ಅನುಸರಿಸಿ. ಇಲ್ಲದಿದ್ದರೆ, ಕೆಳಗಿನ ಎಡಭಾಗದಲ್ಲಿರುವ ‘Try another way' ಆಯ್ಕೆಯನ್ನು ಆರಿಸಿ.
ಹಂತ 3: ನೀವು ಖಾತೆಯನ್ನು ಮತ್ತೆ ಪಡೆಯಲು ಪ್ರಯತ್ನಿಸುತ್ತಿದ್ದೀರಾ ಎಂದು ಪರಿಶೀಲಿಸಲು Google ಈಗ ನಿಮಗೆ ಭದ್ರತಾ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತದೆ. ಅಲ್ಲದೆ ನೀವು ಬೇರೆಯವರಲ್ಲ ಎಂಬುದನ್ನು ದೃಡಪಡಿಸಿ. ನಿಮ್ಮ ಪಾಸ್‌ವರ್ಡ್ ಬದಲಾಯಿಸಲು ಮತ್ತು ನಿಮ್ಮ ಖಾತೆಯನ್ನು ಮರುಪಡೆಯಲು ಸೂಚನೆಗಳನ್ನು ಅನುಸರಿಸಿ.

Best Mobiles in India

Read more about:
English summary
Here's How to use Gmail without an internet connection

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X