ಆಪಲ್ ಐಫೋನ್ ಇದೀಗ ಕೇವಲ 46,600 ರುಪಾಯಿಗೆ ಲಭ್ಯ

By Gizbot Bureau
|

ಇದೇ ಮೊದಲ ಬಾರಿಗೆ- ಬಿಡುಗಡೆಗೊಂಡ ಒಂದು ತಿಂಗಳ ನಂತರ- ನೂತನ ಹೊಸ ಕೈಗೆಟುಕುವ ಬೆಲೆಯ ಐಫೋನ್ ಆಕರ್ಷಕವಾಗಿರುವ ಆಫರ್ ನಲ್ಲಿ ಲಭ್ಯವಾಗುತ್ತಿದೆ.ಇಂಡಿಯಾಸ್ಟೋರ್.ಕಾಮ್ ನಲ್ಲಿ ಪ್ರಕಟಿಸಿರುವಂತೆ ಆಸಕ್ತ ಗ್ರಾಹಕರು ಐಫೋನ್ ನ್ನು ಅತೀ ಕಡಿಮೆ ಅಂದರೆ 46,600 ರುಪಾಯಿ ಬೆಲೆಗೆ ಖರೀದಿಸಬಹುದು. ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರ ಈ ಕೆಳಗೆ ಇದೆ ಗಮನಿಸಿ.

ಆಫರ್ ಬೆಲೆ ಹೀಗಿದೆ:

ಆಫರ್ ಬೆಲೆ ಹೀಗಿದೆ:

64ಜಿಬಿ ವೇರಿಯಂಟ್ ನ ಐಫೋನ್ ಎಕ್ಸ್ ಆರ್ ನ ಬೆಲೆ 76,900 ರುಪಾಯಿಗಳು. ಆದರೆ ಇದೀಗ ಬಿಡುಗಡೆಯ ಪ್ರಯುಕ್ತ ವಿಭಿನ್ನ ಆಫರ್ ನಲ್ಲಿ ಲಭ್ಯವಿದೆ.ಆರಂಭಿಕರಿಗಾಗಿ 5,300 ರುಪಾಯಿಯ ಇನ್ಸೆಂಟ್ ರಿಯಾಯಿತಿ ಇದೆ(ಕೆಲವು ಆಯ್ದ ಆಪಲ್ ರೀಟೈಲ್ ಸ್ಟೋರ್ ಗಳಲ್ಲಿ ಮಾತ್ರ). ಇದರ ಜೊತೆಗೆ 25,000 ರುಪಾಯಿ ವರೆಗೆ ಹಳೆಯ ಡಿವೈಸ್ ಗಳಿಗೆ ಎಕ್ಸ್ ಚೇಂಜ್ ಆಫರ್ ನ್ನು ನೀಡಲಾಗುತ್ತದೆ( ಇದೂ ಕೂಡ ಕೆಲವು ಅಧಿಕೃತ ಆಪಲ್ ಸ್ಟೋರ್ ಗಳಲ್ಲಿ ಮಾತ್ರವೇ ಲಭ್ಯ). ಇದೆರಡೂ ಆಫರ್ ಗಳು ಐಫೋನ್ ಬೆಲೆಯನ್ನು 46,600 ರುಪಾಯಿಗೆ ಇಳಿಸುತ್ತದೆ. ಯಾವ ಗ್ರಾಹಕರು ಸಿಟಿಬ್ಯಾಂಕ್ ಅಥವಾ ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುತ್ತಾರೋ ಅವರಿಗೆ ಹೆಚ್ಚುವರಿ 10% ರಿಯಾಯಿತಿ ಕೂಡ ಲಭ್ಯವಾಗುತ್ತದೆ.ಆದರೆ ಈ ಆಫರ್ ಗೆ ಕೆಲವು ಪ್ರಮುಖ ನೀತಿ-ನಿಯಮಗಳನ್ನು ಅಳವಡಿಸಲಾಗಿದೆ.

ಎಕ್ಸ್ ಚೇಂಜ್ ಆಫರ್:

ಎಕ್ಸ್ ಚೇಂಜ್ ಆಫರ್:

ಗರಿಷ್ಟ ಎಕ್ಸ್ ಚೇಂಜ್ ಆಫರ್ ರುಪಾಯಿ 25,000 ವು ಟ್ರೇಡ್ ಇನ್ ಐಫೋನ್ 7 ಪ್ಲಸ್( 32ಜಿಬಿ) ಮೆಮೊರಿಯ ಫೋನ್ ಉತ್ತಮ ವರ್ಕಿಂಗ್ ಕಂಡೀಷನ್ ನಲ್ಲಿ ಇದ್ದಾಗ ಮಾತ್ರವೇ ಲಭ್ಯವಾಗುತ್ತದೆ. ಈ ಆಫರ್ ಕೆಲವು ದಿನಗಳವರೆಗೆ ಇನ್-ಸ್ಟೋರ್ ಖರೀದಿಗೆ ಮಾತ್ರವೇ ಲಭ್ಯವಿರುತ್ತದೆ. ಆನ್ ಲೈನ್ ನಲ್ಲಿ ಈ ಆಫರ್ ಲಭ್ಯವಿರುವುದಿಲ್ಲ.ಎಕ್ಸ್ ಚೇಂಜ್ ಆಫರ್ ಕಾಷಿಫೈನಲ್ಲಿ ಮಾತ್ರವೇ ಸಿಗುತ್ತದೆ ಮತ್ತು ವೆಬ್ ಸೈಟ್ ಹೇಳುವ ಪ್ರಕಾರ ಎಕ್ಸ್ ಚೇಂಜ್ ಮೊತ್ತವು ಮಾಡೆಲ್, ಕಂಡೀಷನ್, ವರ್ಷ ಮತ್ತು ಟ್ರೇಡ್ ಇನ್ ಡಿವೈಸ್ ನ ಕಾನ್ಫಿಗರೇಷನ್ ಮೇಲೆ ನಿರ್ಧರಿತವಾಗಿರುತ್ತದೆ.

ಆಪಲ್ ಐಫೋನ್ ಎಕ್ಸ್ಆರ್ ನ ವೈಶಿಷ್ಟ್ಯತೆಗಳು :

ಆಪಲ್ ಐಫೋನ್ ಎಕ್ಸ್ಆರ್ ನ ವೈಶಿಷ್ಟ್ಯತೆಗಳು :

ಐಫೋನ್ ಎಕ್ಸ್ಆರ್ ನಲ್ಲಿ 6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಇದೆ ಮತ್ತು ಇದು ಆಪಲ್ ನ ಎ12 ಬಯೋನಿಕ್ ಪ್ರೊಸೆಸರ್ ನ್ನು ಹೊಂದಿದೆ. ದುಬಾರಿ ಐಫೋನ್ ಗಳಾದ ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನಲ್ಲೂ ಕೂಡ ಇದೇ ಪ್ರೊಸೆಸರ್ ನ್ನು ಬಳಸಲಾಗುತ್ತದೆ. ಇದರ ಹಿಂಭಾಗದಲ್ಲಿ 12ಎಂಪಿ ಏಕಮಾತ್ರ ಕ್ಯಾಮರಾ ವ್ಯವಸ್ಥೆ ಜೊತೆಗೆ OIS ಇದೆ. ಸೆಲ್ಫೀ ತೆಗೆದುಕೊಳ್ಳಲು ಮುಂಭಾಗದಲ್ಲಿ 7ಎಂಪಿ ಟ್ರೂಡೆಪ್ತ್ ಕ್ಯಾಮರಾವನ್ನು ಅಳವಡಿಸಲಾಗಿದೆ. ಪ್ರೊಟ್ರೈಟ್, ಪೊಟ್ರೈಟ್ ಲೈಟಿಂಗ್ ಮತ್ತು ಡೆಪ್ತ್ ಕಂಟ್ರೋಲ್ ನಂತಹ ಫೀಚರ್ ಗಳು ಇದರಲ್ಲಿದೆ. ವಿವಿಧ ಬಣ್ಣಗಳ ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಾಗುತ್ತದೆ ಅದರಲ್ಲಿ ಕೆಂಪು, ಬಿಳಿ, ಕಪ್ಪು, ನೀಲಿ, ಕೋರಲ್ ಮತ್ತು ಹಳದಿ ಬಣ್ಣಗಳು ಸೇರಿವೆ.

Best Mobiles in India

Read more about:
English summary
Here's how you can get the most affordable new iPhone for Rs 46,600

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X