ವಿಶ್ವದ ಅತ್ಯಂತ ವೇಗದ 5G ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

|

ವಿಶ್ವದ ಅತ್ಯಂತ ವೇಗದ 5G ಸ್ಮಾರ್ಟ್‌ಫೋನ್‌ ಯಾವುದು ಅನ್ನೊದನ್ನ ಓಕ್ಲಾ ವರದಿ ಬಹಿರಂಗಪಡಿಸಿದೆ. ಈ ವರದಿಯಲ್ಲಿ 5G ನೆಟ್‌ವರ್ಕ್‌ ಅನ್ನು ಹೊಂದಿರುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ 5G ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವಿಶ್ವದ ಪ್ರಮುಖ 10 ದೇಶಗಳಲ್ಲಿ 5G ಕಾರ್ಯಕ್ಷಮತೆಯ ಡೇಟಾವನ್ನು ನೋಡಲು ನಾವು ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ ಅನ್ನು ಬಳಸಿದ್ದೇವೆ ಎಂದು ಓಕ್ಲಾ ಹೇಳಿದೆ.

5G

ಹೌದು, ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ 5G ನೆಟ್‌ವರ್ಕ್‌ ಲಭ್ಯವಿದೆ. ಇದಕ್ಕೆ ತಕ್ಕಂತೆ ಹಲವು ಕಂಪೆನಿಗಳು 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಆದರೆ ಅತಿ ವೇಗದ 5G ಫೋನ್‌ ಯಾವುದು ಅನ್ನೊದು ಯಾರಿಗೂ ತಿಳಿದಿಲ್ಲ. ಆದರೆ ಫೋನ್‌ನಲ್ಲಿ ಇಂಟರ್‌ನೆಟ್‌ ವೇಗ ಎಷ್ಟಿದೆ ಎಂದು ಪರೀಕ್ಷಿಸುವ ಓಕ್ಲಾ ಸಂಸ್ಥೆ ವರದಿಯೊಂದನ್ನು ಬಹಿರಂಗಪಡಿಸಿದೆ. 2022ರ ಮೂರನೇ ತ್ರೈಮಾಸಿಕದಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ವೇಗದ 5G ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದರ ವಿವರವನ್ನು ಪ್ರಕಟಿಸಿದೆ. ಹಾಗಾದ್ರೆ ಓಕ್ಲಾ ಪ್ರಕಾರ ವಿಶ್ವದ ಅತ್ಯಂತ 5G ವೇಗ ಸ್ಮಾರ್ಟ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಇಂಟರ್‌ನೆಟ್‌

ಇಂಟರ್‌ನೆಟ್‌ ಬಳಸುವ ಡಿವೈಸ್‌ಗಳಲ್ಲಿ ಇಂಟರ್‌ನೆಟ್‌ ವೇಗ ಎಷ್ಟಿದೆ ಎಂದು ತಿಳಿಸುವ ಓಕ್ಲಾ ಸಂಸ್ಥೆ ವಿಶ್ವದ ಅತ್ಯಂತ ವೇಗದ 5G ಫೋನ್‌ಗಳ ಲಿಸ್ಟ್‌ ಮಾಡಿದೆ. ಇದಕ್ಕಾಗಿ ಓಕ್ಲಾ ಒಂದು ನಿರ್ದಿಷ್ಟ ದೇಶದಲ್ಲಿ ಐದು ವೇಗದ ಜನಪ್ರಿಯ 5G ಡಿವೈಸ್‌ಗಳನ್ನು ಪರಿಶೀಲಿಸಿದೆ. ಅದರಂತೆ ಹಲವು ಫೋನ್‌ಗಳಲ್ಲಿ ಲಭ್ಯವಿರುವ 5G ವೇಗವನ್ನು ಗುರುತಿಸಿ ವರದಿ ಮಾಡಿದೆ. ಇದರಲ್ಲಿ ವಿಶ್ವದ 25 ವೇಗದ 5G ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಮಾಡಿದೆ. ಓಕ್ಲಾ ಸಂಸ್ಥೆ ಪಟ್ಟಿ ಮಾಡಿರುವ ವಿಶ್ವದ ವೇಗದ 5G ಫೋನ್‌ಗಳ ವಿವರ ಇಲ್ಲಿದೆ.

ಆಪಲ್‌ ಐಫೋನ್‌ 13ಪ್ರೊ ಮ್ಯಾಕ್ಸ್‌

ಆಪಲ್‌ ಐಫೋನ್‌ 13ಪ್ರೊ ಮ್ಯಾಕ್ಸ್‌

ಓಕ್ಲಾ ಸಂಸ್ಥೆ ಪಟ್ಟಿ ಮಾಡಿರುವ ವಿಶ್ವದ ವೇಗದ 5G ಫೋನ್‌ಗಳಲ್ಲಿ ಆಪಲ್‌ ಕಂಪೆನಿಯ ಐಫೋನ್‌ 13ಪ್ರೊ ಮ್ಯಾಕ್ಸ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಬ್ರೆಜಿಲ್, ವಿಯೆಟ್ನಾಂ, ಜರ್ಮನಿ, ದಕ್ಷಿಣ ಆಫ್ರಿಕಾ, UK ನಲ್ಲಿ ಅತ್ಯಂತ ವೇಗದ 5G ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ. ಇದು A15 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ ನಲ್ಲಿವೆ. ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.

ಆಪಲ್‌ ಐಫೋನ್‌ 13

ಆಪಲ್‌ ಐಫೋನ್‌ 13

ಆಪಲ್‌ ಐಫೋನ್‌13 ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ 5G ಆಗಿದೆ. ಇದರ ಸರಾಸರಿ ಡೌನ್‌ಲೋಡ್ ವೇಗ 344.4 Mpbs ಆಗಿದೆ. ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

ಹುವಾವೇ P40 5G

ಹುವಾವೇ P40 5G

ಚೀನಾದಲ್ಲಿ ಅತ್ಯಂತ ವೇಗದ 5G ಫೋನ್‌ಗಳಲ್ಲಿ ಹುವಾವೇ P40 5G ಕೂಡ ಒಂದು. ಇದು 344.41 Mbps ಸರಾಸರಿ 5G ಡೌನ್‌ಲೋಡ್ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಿರಿನ್‌ 990 5G ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇದು ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 3800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಮೊಟೊ G 5G ಪ್ಲಸ್‌

ಮೊಟೊ G 5G ಪ್ಲಸ್‌

ಓಕ್ಲಾ ವರದಿಯ ಪ್ರಕಾರ ಮೊಟೊ G 5G ಪ್ಲಸ್‌ ಬ್ರೆಜಿಲ್‌ನಲ್ಲಿ ಅತ್ಯಂತ ವೇಗದ 5G ಸ್ಮಾರ್ಟ್‌ಫೋನ್‌ ಆಗಿದೆ. ಇದರಲ್ಲಿ ಸರಾಸರಿ 5G ಡೌನ್‌ಲೋಡ್ ವೇಗ 358.39 Mbps ರಷ್ಟಿದೆ. ಇನ್ನು ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 765 5G ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್‌ ಸೆನ್ಸಾರ್‌ ಸಾಮರ್ಥ್ಯದ ಡ್ಯುಯೆಲ್‌ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಪೊಕೊ X4 ಪ್ರೊ 5G

ಪೊಕೊ X4 ಪ್ರೊ 5G

ಬ್ರೆಜಿಲ್‌ನಲ್ಲಿ ಅತ್ಯಂತ ವೇಗದ 5G ಫೊನ್‌ಗಳಲ್ಲಿ ಪೊಕೊ X4 ಪ್ರೊ 5G ಕೂಡ ಒಂದಾಗಿದೆ. ಇದರಲ್ಲಿ ಸರಸಾರಿ ಡೌನ್‌ಲೋಡ್‌ ವೇಗ 355.43 Mbps ರಷ್ಟಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಆಪಲ್‌ ಐಫೋನ್‌ 14 ಪ್ರೊ ಮ್ಯಾಕ್ಸ್‌

ಆಪಲ್‌ ಐಫೋನ್‌ 14 ಪ್ರೊ ಮ್ಯಾಕ್ಸ್‌

ಆಪಲ್‌ ಐಫೋನ್‌ 14 ಪ್ರೊಮ್ಯಾಕ್ಸ್‌ US, ಜರ್ಮನಿ, ಜಪಾನ್, ಥೈಲ್ಯಾಂಡ್ ಮತ್ತು UK ನಲ್ಲಿ ಅತ್ಯಂತ ವೇಗದ 5G ಆಗಿದೆ. ಇನ್ನು ಐಫೋನ್ 14 ಪ್ರೊ ಮ್ಯಾಕ್ಸ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದಿವೆ. ಆರು-ಕೋರ್ CPU ಹೊಂದಿದ್ದು. ಅಧಿಕ ಕಾರ್ಯಕ್ಷಮತೆಯ ಕೋರ್‌ಗಳನ್ನು ಒಳಗೊಂಡಿದೆ. ಈ ಹೊಸ A16 ಚಿಪ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್‌ ನಲ್ಲಿ ಕಂಡುಬರುವ ಮೃದುವಾದ ಅನಿಮೇಷನ್‌ಗಳಿಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ US, ವಿಯೆಟ್ನಾಂ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೇಗದ 5G ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಹಾಗೆಯೇ ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಒನ್‌ಪ್ಲಸ್‌ 9 5G

ಒನ್‌ಪ್ಲಸ್‌ 9 5G

ಒನ್‌ಪ್ಲಸ್‌ 9 5G ಚೀನಾ ಮತ್ತು ಜರ್ಮನಿಯಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ 5G ಸ್ಮಾರ್ಟ್‌ಫೋನ್‌ ಆಗಿದೆ. ಇದರ ಸರಾಸರಿ 5G ಡೌನ್‌ಲೋಡ್ ವೇಗ 349.15 Mbps ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಶಿಯೋಮಿ ರೆಡ್ಮಿ ನೋಟ್‌ 11 ಪ್ರೊ 5G

ಶಿಯೋಮಿ ರೆಡ್ಮಿ ನೋಟ್‌ 11 ಪ್ರೊ 5G

ಶಿಯೋಮಿ ರೆಡ್ಮಿ ನೋಟ್‌ 11 ಪ್ರೊ 5G ಫಿಲಿಪೈನ್ಸ್‌ನಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ 5G ಫೋನ್‌ ಆಗಿ ಗುರುತಿಸಿಕೊಂಡಿದೆ.

ಸೋನಿ ಎಕ್ಸ್‌ಪೀರಿಯಾ 1 ii 5G

ಸೋನಿ ಎಕ್ಸ್‌ಪೀರಿಯಾ 1 ii 5G

ಜಪಾನ್‌ನಲ್ಲಿ ಅತ್ಯಂತ 5G ಫೋನ್‌ ಆಗಿ ಸೋನಿ ಎಕ್ಸ್‌ಪೀರಿಯಾ 1 ii 5G ಗುರುತಿಸಿಕೊಂಡಿದೆ. ವಿಶ್ವದ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಸೋನಿ ಕಂಪೆನಿ ತನ್ನ ಸ್ವದೇಶವಾದ ಜಪಾನ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

Best Mobiles in India

English summary
Here's list of the fastest 5G smartphones in the world

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X