ಈ ಸ್ಮಾರ್ಟ್‌ಫೋನ್‌ಗಳನ್ನ ಕ್ರೆಡಿಟ್‌ ಕಾರ್ಡ್‌ನಲ್ಲಿ ಖರೀದಿಸಿದರೆ ಸಿಗಲಿದೆ ಬಿಗ್‌ ಡಿಸ್ಕೌಂಟ್‌!

|

ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಸಾಕಷ್ಟು ವಿಚಾರಗಳು ಪ್ರಮುಖವಾಗುತ್ತದೆ. ಅದರಲ್ಲೂ ಯಾವುದೇ ಸ್ಮಾರ್ಟ್‌ಫೋನ್‌ ಖರೀದಿಸುವಾಗಲೂ ಮೊದಲು ಕೇಳಿ ಬರುವ ಮಾತು ಆಫರ್‌ ಏನಿದೆ?. ಇನ್ನು ಸ್ಮಾರ್ಟ್‌ಫೋನ್‌ ಪ್ರಿಯರ ಆಸಕ್ತಿಗೆ ತಕ್ಕಂತೆ ಇ-ಕಾಮರ್ಸ್‌ ಸೈಟ್‌ಗಳು ಅನೇಕ ಆಫರ್‌ಗಳನ್ನು ನೀಡುತ್ತಲೇ ಬಂದಿವೆ. ಅಷ್ಟೇ ಅಲ್ಲ ನೀವು ಕೆಲವು ಬ್ಯಾಂಕ್‌ ಕ್ರೆಡಿಟ್‌ ಇಲ್ಲವೇ ಡೆಬಿಟ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಬ್ಯಾಂಕ್‌ ಆಫರ್‌ಗಳು ಕೂಡ ದೊರೆಯಲಿದೆ. ಇದರಲ್ಲಿ ICICI ಮತ್ತು HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಕ್ಯಾಶ್‌ಬ್ಯಾಕ್‌ ಕೂಡ ಪಡೆಯಬಹುದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ಗಳನ್ನು ನೀವು ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಹಲವಾರು ಬ್ಯಾಂಕ್ ಆಫರ್‌ ದೊರೆಯಲಿದೆ. ಸದ್ಯ ICICI ಮತ್ತು HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಖರೀದಿಮಾಡಿದರೆ ಹಲವು ಆಫರ್‌ಗಳನ್ನು ನೀಡಲಾಗ್ತಿದೆ. ಅದರಲ್ಲೂ ಐಫೋನ್‌ 13 Pro, ಗ್ಯಾಲಕ್ಸಿ S21 ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ ದೊರೆಯಲಿದೆ. ಹಾಗಾದ್ರೆ ICICI ಮತ್ತು HDFC ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ ಯಾವೆಲ್ಲಾ ರಿಯಾಯಿತಿ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ 13 ಪ್ರೊ

ಐಫೋನ್‌ 13 ಪ್ರೊ

ಐಫೋನ್‌ 13 ಪ್ರೊ ಮೇಲೆ ಹಲವಾರು ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಆಫರ್‌ ಲಭ್ಯವಿದೆ. ನೀವು ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ ನೋ ಕಾಸ್ಟ್‌ ಇಎಂಐ ನೀಡಲಾಗುತ್ತದೆ. ಅದರಲ್ಲೂ HDFC ಬ್ಯಾಂಕ್ 3 ತಿಂಗಳುಗಳು, 6 ತಿಂಗಳುಗಳು, 9 ತಿಂಗಳುಗಳು, 12 ತಿಂಗಳುಗಳು, 18 ತಿಂಗಳುಗಳು ಮತ್ತು 24 ತಿಂಗಳುಗಳವರೆಗೆ ನೋ ಕಾಸ್ಟ್‌ಇಎಂಐ ಅನ್ನು ನೀಡುತ್ತಿದೆ. ಅಲ್ಲದೆ 3 ತಿಂಗಳ ಕಂತು ಪ್ರತಿ ತಿಂಗಳಿಗೆ 40662ರೂ. EMI ಆಯ್ಕೆಯೊಂದಿಗೆ ಬರುತ್ತದೆ. ಅಲ್ಲದೆ 6 ತಿಂಗಳ ಕಂತು ಪ್ರತಿ ತಿಂಗಳಿಗೆ 20710ರೂ. EMI ಯೊಂದಿಗೆ ಬರುತ್ತದೆ. ಇನ್ನು 9 ತಿಂಗಳ ಕಂತು ಪ್ರತಿ ತಿಂಗಳಿಗೆ 14062ರೂ. ನಲ್ಲಿ ಲಭ್ಯವಾಗಲಿದೆ. ಆದರೆ 12 ತಿಂಗಳ ಕಂತು ಪ್ರತಿ ತಿಂಗಳಿಗೆ 9,917 ರೂಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ 18 ತಿಂಗಳ ಕಂತು ಪ್ರತಿ ತಿಂಗಳಿಗೆ 7424 ರೂ.ಗಳಲ್ಲಿ ಲಭ್ಯವಾಗಲಿದೆ.

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಡೀಲ್‌ಗಳು

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಡೀಲ್‌ಗಳು

ಇನ್ನು ನೀವು ಒನ್‌ಪ್ಲಸ್‌ 9 Pro ಸ್ಮಾರ್ಟ್‌ಫೋನ್‌ ಅನ್ನು ICICI ಬ್ಯಾಂಕ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ ಖರೀದಿಸಿದರೆ 5,000 ರೂಪಾಯಿಗಳವರೆಗೆ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಐಸಿಐಸಿಐ ಬ್ಯಾಂಕ್ ಮೂಲಕ ಖರೀದಿಸುವವರಿಗೆ 9 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಅನ್ನು ಸಹ ನೀಡುತ್ತಿದೆ. ಈ ಡೀಲ್‌ಗಳನ್ನು OnePlus ನಲ್ಲಿ ಲೈವ್ ಮಾಡಲಾಗಿದೆ. ಇದರ ಜೊತೆಗೆ, ಅಮೆಜಾನ್ ಐಸಿಐಸಿಐ ಬ್ಯಾಂಕ್ ಡೀಲ್‌ಗಳು ಮತ್ತು 5,000ರೂ. ಮೌಲ್ಯದ ಕೂಪನ್ ಕೋಡ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಈ ಎರಡೂ ಕೊಡುಗೆಗಳನ್ನು ಪರಿಗಣಿಸಿದರೆ, ನೀವು OnePlus 9 Pro ಸ್ಮಾರ್ಟ್‌ಫೋನ್ ಅನ್ನು ಕೇವಲ 10,000 ರೂಪಾಯಿಗೆ ಖರೀದಿಸಬಹುದಾಗಿದೆ.

ಒನ್‌ಪ್ಲಸ್‌

ಇದಲ್ಲದೆ ಒನ್‌ಪ್ಲಸ್‌ 9 ಫೋನ್ ಅನ್ನು ICICI ಬ್ಯಾಂಕ್ ಕಾರ್ಡ್ ಮತ್ತು EMI ವಹಿವಾಟಿನ ಮೇಲೆ 8,000ರೂ. ವರೆಗೆ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ICICI ಬ್ಯಾಂಕ್ ಸ್ಮಾರ್ಟ್‌ಫೋನ್‌ ಖರೀದಿಗಾರರಿಗೆ 9 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಅನ್ನು ಸಹ ನೀಡುತ್ತಿದೆ. ಅಮೆಜಾನ್ ಮೂಲಕ ಖರೀದಿಸುವವರಿಗೆ ಐಸಿಐಸಿಐ ಬ್ಯಾಂಕ್ 5,000 ರೂಪಾಯಿ ಮೌಲ್ಯದ ಕೂಪನ್ ಕೋಡ್‌ಗಳನ್ನು ಸಹ ನೀಡುತ್ತಿದೆ.

OnePlus Nord CE 5G ಸ್ಮಾರ್ಟ್‌ಫೋನ್ 1,500 ರೂಗಳ ತ್ವರಿತ ರಿಯಾಯಿತಿ ಕೊಡುಗೆಯೊಂದಿಗೆ ಪಟ್ಟಿಮಾಡಲ್ಪಟ್ಟಿದೆ, ಇದು ICICI ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ. ICICI ಬ್ಯಾಂಕ್ ಈ ಫೋನ್‌ನಲ್ಲಿ 3 ತಿಂಗಳವರೆಗೆ ಯಾವುದೇ ವೆಚ್ಚದ EMI ಅನ್ನು ಸಹ ನೀಡುತ್ತಿದೆ. ಈ ಡೀಲ್‌ಗಳನ್ನು OnePlus.in ಮತ್ತು Amazon ನಲ್ಲಿ ಲೈವ್ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 ಖರೀದಿಸುವವರಿಗೂ ICICI ಬ್ಯಾಂಕ್ ಬಿಗ್‌ ಆಫರ್‌ ನಿಡುತ್ತಿದೆ. ಐಸಿಸೈಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ನಲ್ಲಿ ಖರೀದಿಸಿದರೆ 5000ರೂ.ಗಳ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಈ ಆಫರ್‌ ICICI ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ EMI ಮತ್ತು ಕ್ರೆಡಿಟ್ ಕಾರ್ಡ್ ಫುಲ್‌ ಸ್ವೈಪ್‌ನಲ್ಲಿ ಅನ್ವಯಿಸುತ್ತದೆ. ಇದು ಡಿಸೆಂಬರ್ 03, 2021 ರಿಂದ ಡಿಸೆಂಬರ್ 31, 2021 ರವರೆಗೆ ICICI ಬ್ಯಾಂಕ್ ಕಾರ್ಡ್ ಡೀಲ್‌ಗಳೊಂದಿಗೆ ಖರೀದಿಸಲು ಕಂಪನಿಯು ನಿಮಗೆ ಅನುಮತಿಸುತ್ತದೆ. ಇದಲ್ಲದೆ ಗ್ರಾಹಕರು EMI ವಹಿವಾಟಿನ ಜೊತೆಗೆ ಕ್ಯಾಶ್‌ಬ್ಯಾಕ್ ಪಡೆಯಲು, ಗ್ರಾಹಕರು ಆರು ತಿಂಗಳಿಗಿಂತ ಹೆಚ್ಚಿನ EMI ಅವಧಿಯನ್ನು ಆರಿಸಿಕೊಳ್ಳಬೇಕು. ಕಾರ್ಪೊರೇಟ್ ಕಾರ್ಡ್‌ಗಳಿಗೆ ಕ್ಯಾಶ್‌ಬ್ಯಾಕ್ ಆಫರ್‌ಗಳು ಅನ್ವಯಿಸುವುದಿಲ್ಲ.

Best Mobiles in India

English summary
Here's smartphones to buy discount price with several bank offers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X