ಇಂಟರೆಸ್ಟಿಂಗ್ ವಿಷಯ:ಈ ನಗರದಲ್ಲಿ ಮಾತ್ರ ಸೆಲ್ಫ್ ಡ್ರೈವಿಂಗ್ ಕಾರ್ ಓಡಾಡ್ತಿರೋದು ಅಂತಾ ಗೊತ್ತಾ ನಿಮಗೆ.!

|

ಈಗಾಗಲೇ ಸೆಲ್ಪ್ ಡೈವಿಂಗ್ ಕಾರ್‌ ಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಗಕ್ಕೆ ಸಿದ್ಧವಾಗಿವೆ, ಇದರಲ್ಲಿ ಹಲವು ಕಂಪನಿಗಳು ತೊಡಗಿಕೊಂಡಿದ್ದು, ಗೂಗಲ್, ಆಪಲ್ ಸೇರಿದಂತೆ ಹಲವು ಕಂಪನಿಗಳು ಸೆಲ್ಪ್ ಡ್ರೈವಿಂಗ್ ಕಾರ್‌ಗಳನ್ನು ಆವಿಷ್ಕರಿಸಿದ್ದು, ಈಗಾಗಲೇ ಸಾಮಾನ್ಯ ರಸ್ತೆಯಲ್ಲಿ ಪ್ರಯೋಗವನ್ನು ಮಾಡಲು ಮುಂದಾಗಿವೆ. ಈ ಸೆಲ್ಪ್ ಡ್ರೈವಿಂಗ್ ಕಾರುಗಳು ವಿಶ್ವದಲ್ಲಿ ಸದ್ಯ ಒಂದೇ ಒಂದು ನಗರದಲ್ಲಿ ಮಾತ್ರವೇ ಓಡಾಡುತ್ತಿದ್ದು, ಅಲ್ಲಿ ಮಾತ್ರವೇ ಸೆಲ್ಫ್ ಡ್ರೈವಿಂಗ್ ಕಾರ್ ಓಡಾಡಲು ಅನುಮತಿ ದೊರೆತಿದೆ ಎನ್ನಲಾಗಿದೆ.

ಈ ನಗರದಲ್ಲಿ ಮಾತ್ರ ಸೆಲ್ಫ್ ಡ್ರೈವಿಂಗ್ ಕಾರ್ ಓಡಾಡ್ತಿರೋದು ಅಂತಾ ಗೊತ್ತಾ ನಿಮಗೆ.!

ಅಮೆರಿಕಾದ ಕಾಲಿಪೋರ್ನಿಯಾದಲ್ಲಿ ಮಾತ್ರವೇ ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಪರೀಕ್ಷಿಸಲು ಅನುಮತಿಯೂ ದೊರೆತಿದ್ದು, ಸುಮಾರು 100ಕ್ಕೂ ಹೆಚ್ಚು ವಿವಿಧ ಕಂಪನಿಯ ಸೆಲ್ಫ್ ಡ್ರೈವಿಂಗ್ ಕಾರುಗಳು ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಕಾಣಿಸಿಕೊಂಡಿವೆ. ಶೀಘ್ರವೇ ಅಮೆರಿಕಾದ ರಸ್ತೆಗಳಲ್ಲಿ ಈ ಕಾರುಗಳು ಸಂಪೂರ್ಣ ಪ್ರಮಾಣದಲ್ಲಿ ಓಡಾಡ ನಡೆಸಲಿದ್ದು, ಸದ್ಯ ಕಾಲಿಪೋರ್ನಿಯಾದಲ್ಲಿ ಮಾತ್ರವೇ ಸೆಲ್ಫ್ ಡ್ರೈವಿಂಗ್ ಕಾರುಗಳು ಸಂಚಾರ ನಡೆಸುತ್ತಿವೆ.

ಟಾಪ್ ಕಂಪನಿ ಯಾವುದು ಗೊತ್ತಾ..?

ಟಾಪ್ ಕಂಪನಿ ಯಾವುದು ಗೊತ್ತಾ..?

ಆಪಲ್, ಗೂಗಲ್ ಗಳು ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಪರೀಕ್ಷಿಸುತ್ತಿದೆ ಎಂದು ಕೊಂಡರೆ ತಪ್ಪು, GM ಕ್ರೂಸ್ ಆಟೋ ಮೋಷನ್ ಒಟ್ಟು 100ಕ್ಕೂ ಹೆಚ್ಚು ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಇದನ್ನು ಬಿಟ್ಟರೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರೀಕ್ಷಾರ್ಥವಾಗಿ ಕಾರುಗಳನ್ನು ಯಾವುದೇ ಕಂಪನಿಗಳು ಪರೀಕ್ಷಿಸುತ್ತಿಲ್ಲ.

ಆಪಲ್:

ಆಪಲ್:

ಈ ತಿಂಗಳಿನಿಂದ ಆಪಲ್ ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಆಪಲ್ ತನ್ನ 50ಕ್ಕೂ ಹೆಚ್ಚು ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಪರೀಕ್ಷಾರ್ಥವಾಗಿ ಓಡಿಸುತ್ತಿದೆ ಎನ್ನಲಾಗಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ವ್ಯಾಮೋ:

ವ್ಯಾಮೋ:

ಸೆಲ್ಫ್ ಡ್ರೈವಿಂಗ್ ಕಾರುಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿ ಕಾಣಿಸಿಕೊಂಡಿರುವ ವ್ಯಾವೋ, 40ಕ್ಕೂ ಹೆಚ್ಚು ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಓಡಿಸುತ್ತಿದ್ದು, ಶೀಘ್ರವೇ ಸಾಮಾನ್ಯರ ಬಳಕೆಗೆ ಕಾರುಗಳನ್ನು ನೀಡಲಿದೆ.

ಟೆಲ್ಸಾ:

ಟೆಲ್ಸಾ:

ಹೈಬ್ರಿಡ್ ಬ್ಯಾಟರಿ ಚಾಲಿತ ಕಾರುಗಳ ನಿರ್ಮಾಣದಲ್ಲಿ ಮುಂಚುಣಿಯಲ್ಲಿರು ಟೆಲ್ಸಾ ಸಹ ಸುಮಾರು 40ಕ್ಕೂ ಹೆಚ್ಚು ಕಾರುಗಳನ್ನು ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಓಡಿಸುತ್ತಿದ್ದು, ಹೊಸ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

How to send WhatsApp Payments invitation to others - GIZBOT KANNADA
ಉಬರ್:

ಉಬರ್:

ಪರೀಕ್ಷಾರ್ಥವಾಗಿ ಕಾಲಿಪೋರ್ನಿಯಾದ ರಸ್ತೆಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರುಗಳನ್ನು ಓಡಿಸುತ್ತಿದ್ದ ಉಬರ್, ಮೊನ್ನೇ ತಾನೆ ಉಬರ್ ರೊಂದು ಅಪಘಾತವಾಗಿದ್ದು, ಈ ಹಿನ್ನಲೆಯಲ್ಲಿ ತನ್ನ ಎಲ್ಲಾ ಕಾರುಗಳನ್ನು ಹಿಂದಕ್ಕೆ ಪಡೆದಿದೆ.

Best Mobiles in India

English summary
Here's the aspect of self-driving car testing. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X