30,000 ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳು!

|

ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಅನೇಕ ಜನಪ್ರಿಯ ಬ್ರ್ಯಾಂಡ್‌ಗಳು ವಿಶೇಷವಾದ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಇವುಗಳಲ್ಲಿ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳು ಕೂಡ ಸೇರಿವೆ. ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳು ಮತ್ತು ಲಘು ಕೆಲಸ ಮಾಡುವವರಿಗೆ ಸೂಕ್ತವಾದ ಮಾದರಿಯಾಗಿ ಪ್ರಸಿದ್ಧಿ ಪಡೆದಿವೆ. ಇನ್ನು ಕೆಲವು ವರ್ಷಗಳಿಂದ, ಗೂಗಲ್‌ ಕ್ರೋಮ್‌OS ಅನ್ನು ಕೂಡ ಅಪ್ಡೇಟ್‌ ಮಾಡಿದೆ. ಇದರಿಂದ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ.

ಕ್ರೋಮ್‌ಬುಕ್‌

ಹೌದು, ಮಾರುಕಟ್ಟೆಯಲ್ಲಿ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಕ್ರೋಮ್ ಬ್ರೌಸರ್ ಆಧಾರಿತ ಆಪರೇಟಿಂಗ್ ಸಿಸ್ಟಂ ಕ್ರೋಮ್ ಓಎಸ್ ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್‌ಗಳು ಮ್ಯಾಕ್‌ಬುಕ್‌ಗಿಂತ ಭಿನ್ನವಾಗಿವೆ. ಸದ್ಯ ನೀವು ಕೂಡ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದಾದರೆ ಭಾರತದಲ್ಲಿ ನಿಮಗೆ ಹಲವಾರು ಆಯ್ಕೆಗಳು ಲಭ್ಯವಿವೆ. ಹಾಗಾದ್ರೆ ಭಾರತದಲ್ಲಿ 30,000 ರೂ. ಒಳಗೆ ಲಭ್ಯವಾಗುವ ಅತ್ಯುತ್ತಮ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ಕ್ರೊಮ್‌ಬುಕ್‌ ಫ್ಲಿಪ್

ಆಸುಸ್‌ ಕ್ರೊಮ್‌ಬುಕ್‌ ಫ್ಲಿಪ್

ನೀವು ಬಜೆಟ್ ಸ್ನೇಹಿ ಕ್ರೊಮ್‌ಬುಕ್‌ ಖರೀದಿಸುವುದಾದರೆ ಆಸುಸ್‌ ಕ್ರೋಮ್‌ಬುಕ್‌ ಫ್ಲಿಪ್ ಉತ್ತಮ ಆಯ್ಕೆ ಎನಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ 11.6 ಇಂಚಿನ HD ಆಂಟಿ-ಗ್ಲೇರ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದುಕೊಂಡಿದೆ. ಇದು ಇಂಟೆಲ್‌ ಸೆಲೆರಾನ್‌ ಡ್ಯುಯಲ್‌ ಕೋರ್‌ 1.1GHz ಪ್ರೊಸೆಸರ್‌ ಹೊಂದಿದ್ದು, ಕ್ರೋಮ್‌OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ವೈ-ಫೈ, ಬ್ಲೂಟೂತ್ 5.0 ಮತ್ತು ಮೂರು USB ಪೋರ್ಟ್‌ಗಳನ್ನು ಕನೆಕ್ಟಿವಿಟಿ ಆಯ್ಕೆಗಳಾಗಿ ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 720p ವೆಬ್‌ಕ್ಯಾಮ್ ಮತ್ತು ಗೂಗಲ್ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ 24,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಏಸರ್ ಕ್ರೋಮ್‌ಬುಕ್ ಸೆಲೆರಾನ್

ಏಸರ್ ಕ್ರೋಮ್‌ಬುಕ್ ಸೆಲೆರಾನ್

ಏಸರ್ ಕ್ರೋಮ್‌ಬುಕ್ ಸೆಲೆರಾನ್ ಲ್ಯಾಪ್‌ಟಾಪ್‌ 11.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಇಂಟೆಲ್ ಸೆಲೆರಾನ್ ಡ್ಯುಯಲ್-ಕೋರ್ ಪ್ರೊಸೆಸರ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ನೀಡಲಿದೆ. ಈ ಲ್ಯಾಪ್‌ಟಾಪ್ ಗೀರುಗಳು ಮತ್ತು ನೀರಿನ ಸ್ಪ್ಲಾಶ್‌ಗಳನ್ನು ಸುಲಭವಾಗಿ ಸಹಿಸಿಕೊಳ್ಳುವ ಗುಣಹೊಂದಿದೆ. ಜೊತೆಗೆ ಈ ಲ್ಯಾಪ್‌‌ಟಾಪ್‌ 4GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇಂಟೆಲ್‌ ಗಿಗಾಬಿಟ್‌ವೈಫೈ, ಬ್ಲೂಟೂತ್‌ ಮತ್ತು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿವೆ. ಅಲ್ಲದೆ ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ 11 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಬೆಲೆ 23,990 ರೂ.ಆಗಿದೆ.

ಲೆನೊವೊ ಐಡಿಯಾಪಾಡ್‌ 3 ಕ್ರೋಮ್‌ಬುಕ್‌

ಲೆನೊವೊ ಐಡಿಯಾಪಾಡ್‌ 3 ಕ್ರೋಮ್‌ಬುಕ್‌

ಲೆನೊವೊ ಐಡಿಯಾಪ್ಯಾಡ್ 3 ಕ್ರೋಮ್‌ಬುಕ್‌ ಕೈಗೆಟುಕುವ ಬೆಲೆಯ ಲ್ಯಾಪ್‌ಟಾಪ್ ಆಗಿದೆ. ಇದು 11.6 ಇಂಚಿನ LCD ಜೊತೆಗೆ HD ಡಿಸ್‌ಪ್ಲೇ ಹೊಂದಿದೆ. ಆದರೆ ಈ ಡಿಸ್‌ಪ್ಲೇ 180 ಡಿಗ್ರಿಗಳಲ್ಲಿ ಬಾಗುತ್ತದೆ. ಅಂದರೆ ನೀವು ಈ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿಯೂ ಕೂಡ ಬಳಸಬಹುದಾಗಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ ಸಿಂಗಲ್‌ ಚಾರ್ಜ್‌ನಲ್ಲಿ 10 ಗಂಟೆಗಳ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್ 2W ಡ್ಯುಯಲ್ ಸ್ಪೀಕರ್‌ಗಳು, 720p HD ವೆಬ್‌ಕ್ಯಾಮ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ 5.0 ಮತ್ತು HDMI 1.4 ಪೋರ್ಟ್ ಅನ್ನು ಹೊಂದಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ 18,990 ರೂ. ಬೆಲೆ ಹೊಂದಿದೆ.

ಹೆಚ್‌ಪಿ ಕ್ರೋಮ್‌ಬುಕ್‌ ಮೀಡಿಯಾಟೆಕ್‌

ಹೆಚ್‌ಪಿ ಕ್ರೋಮ್‌ಬುಕ್‌ ಮೀಡಿಯಾಟೆಕ್‌

ಹೆಚ್‌ಪಿ ಕ್ರೋಮ್‌ಬುಕ್‌ ಮೀಡಿಯಾಟೆಕ್‌ ಲ್ಯಾಪ್‌ಟಾಪ್‌ 11.6 ಇಂಚಿನ HD ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಕಾಂಪಾನಿಯೋ 500 ಪ್ರೊಸೆಸರ್ ಹೊಂದಿದ್ದು, ಕ್ರೋಮ್‌OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 15 ಗಂಟೆಗಳ ಲಾಂಗ್‌ ಬ್ಯಾಟರಿ ಅವಧಿಯನ್ನು ಹೊಂದಿದೆ. ಇದು ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಸ್ಪಷ್ಟ ವೀಡಿಯೊ ಕರೆಗಳಿಗಾಗಿ HP ಟ್ರೂ ವಿಷನ್ 720p ವೆಬ್‌ಕ್ಯಾಮ್ ಅನ್ನು ಕೂಡ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ಮತ್ತು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿದೆ. ಇದರ ಬೆಲೆ 24,845ರೂ.ಆಗಿದೆ.

Best Mobiles in India

English summary
These laptops powered by ChromeOS, which is an operating system based on the Chrome browser, are different from your regular PC or MacBook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X