ಈ ವರ್ಷ ವಾಟ್ಸಾಪ್‌ ಪರಿಚಯಿಸಿದ ಅತ್ಯುತ್ತಮ ಫೀಚರ್ಸ್‌ಗಳು ಇಲ್ಲಿವೆ!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿತ್ತಾ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ಅನೇಕ ಫೀಚರ್ಸ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಎಂದಿನಂತೆ ಈ ವರ್ಷವೂ ಕೂಡ ವಾಟ್ಸಾಪ್‌ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಮೆಸೇಜಿಂಗ್‌

ಹೌದು, ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ 2021ರಲ್ಲಿಯೂ ಕೂಡ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಈ ವರ್ಷ ವಾಟ್ಸಾಪ್‌ ಬಳಕೆದಾರರಿಗೆ ತುಂಬಾ ಉತ್ತಮವಾದ ಮತ್ತು ಪ್ರಯೋಜನಕಾರಿಯಾದ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿತು. ಈ ಫೀಚರ್ಸ್‌ಗಳು ಒಟ್ಟಾರೆ ಚಾಟಿಂಗ್ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಹಾಗಾದ್ರೆ ವಾಟ್ಸಾಪ್‌ ಈ ವರ್ಷ ನಿಮಗೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿತು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಲ್ಟಿ ಡಿವೈಸ್‌ ಫೀಚರ್ಸ್‌

ಮಲ್ಟಿ ಡಿವೈಸ್‌ ಫೀಚರ್ಸ್‌

ವಾಟ್ಸಾಪ್‌ ಈ ವರ್ಷ ಪರಿಚಯಿಸಿರುವ ಹಲವು ಫೀಚರ್ಸ್‌ಗಳಲ್ಲಿ ಮಲ್ಟಿ ಡಿವೈಸ್‌ ಫೀಚರ್ಸ್‌ ಕೂಡ ಒಂದಾಗಿದೆ. ಈ ಫೀಚರ್ಸ್‌ ಸೆಟ್ಟಿಂಗ್ಸ್‌ > ಲಿಂಕ್ಡ್ ವಿಭಾಗದಲ್ಲಿ ಗೋಚರಿಸುತ್ತದೆ. ಈ ಫೀಚರ್ಸ್‌ ಬಳಸಿಕೊಂಡು ವಾಟ್ಸಾಪ್‌ ಬಳಕೆದಾರರು ಫೋನ್‌ ಕನೆಕ್ಟ್‌ ಮಾಡದೆ ಹೋದರೂ, ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳನ್ನು ಬಳಸಲು ಸಾಧ್ಯವಾಗಲಿದೆ. ಒಬ್ಬರು ತಮ್ಮ ಖಾತೆಗೆ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡಬಹುದು. ಇದರಲ್ಲಿ ಬ್ರೌಸರ್‌ಗಳು ಮತ್ತು ಇತರ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ನೀವು ಕನೆಕ್ಟ್‌ ಮಾಡಿರುವ ಫೋನ್‌ನಲ್ಲಿ ಸಕ್ರಿಯ ಇಂಟರ್ನೆಟ್ ಇಲ್ಲದೆ ಹೋದರೂ ವಾಟ್ಸಾಪ್‌ ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ 14 ದಿನಗಳವರೆಗೆ ಸಂಪರ್ಕ ಕಡಿತಗೊಂಡಿದ್ದರೆ, ಲಿಂಕ್ ಮಾಡಲಾದ ಡಿವೈಸ್‌ಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ.

ವಾಟ್ಸಾಪ್‌ ಪೇ

ವಾಟ್ಸಾಪ್‌ ಪೇ

ಇನ್ನು ವಾಟ್ಸಾಪ್‌ ಪರಿಚಯಿಸಿರುವ ಅನೇಕ ಫೀಚರ್ಸ್‌ಗಳಲ್ಲಿ ವಾಟ್ಸಾಪ್ ಪೇ ಕೂಡ ಒಂದಾಗಿದೆ. ಯುಪಿಐ ಪಾವತಿ ವ್ಯವಸ್ತೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಂತೆ ವಾಟ್ಸಾಪ್‌ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪೇಮೆಂಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ಸೇವೆಯು ಎಚ್‌ಡಿಎಫ್‌ಸಿ, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಂತಹ ಎಲ್ಲಾ ಪ್ರಮುಖ ಬ್ಯಾಂಕುಗಳನ್ನು ಬೆಂಬಲಿಸುತ್ತದೆ. ಈ ಫೀಚರ್ಸ್‌ ಮೂಲಕ ಅಪ್ಲಿಕೇಶನ್ ಬಳಸಿಕೊಂಡು ಸ್ನೇಹಿತರು ಮತ್ತು ಕುಟುಂಬಕ್ಕೆ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಸಹಾಯ ಮಾಡುತ್ತದೆ.

ವಾಟ್ಸಾಪ್‌ ಡಾರ್ಕ್ ಮೋಡ್

ವಾಟ್ಸಾಪ್‌ ಡಾರ್ಕ್ ಮೋಡ್

ಈ ವರ್ಷ ವಾಟ್ಸಾಪ್‌ ಸೇರಿದ ಜನಪ್ರಿಯ ಫೀಚರ್ಸ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ಸ್‌ ಕೂಡ ಒಂದು. ಡಾರ್ಕ್‌ ಮೋಡ್‌ ಫೀಚರ್ಸ್‌ ಎಲ್ಲಾ ವರ್ಗಗಳ ಡಿಸ್‌ಪ್ಲೇ ಗಾಢ ಬೂದು ಬಣ್ಣಕ್ಕೆ ಬದಲಾಯಿಸುತ್ತದೆ. ಇನ್ನು ಈ ಫೀಚರ್ಸ್‌ ಬಳಕೆದಾರರ ಕಣ್ಣುಗಳ ಮೇಲೆ ರೆಡಿಯೇಷನ್‌ ಬೀಳದಂತೆ ಮಾಡಲಿದೆ. ಅಲ್ಲದೆ ಫೋನ್‌ನ ಬ್ಯಾಟರಿಯನ್ನು ಉಳಿಸುತ್ತದೆ. ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ ಮತ್ತು 'ಚಾಟ್‌ಗಳು' ಅನ್ನು ಟ್ಯಾಪ್ ಮಾಡಿ, ನಂತರ ಡಿಸ್‌ಪ್ಲೇ ವಿಭಾಗದಲ್ಲಿ ಇರುವ 'ಥೀಮ್' ಅನ್ನು ಟ್ಯಾಪ್ ಮಾಡಿ ಮತ್ತು ಲೈಟ್, ಡಾರ್ಕ್ ಮತ್ತು ಸಿಸ್ಟಮ್ ಡೀಫಾಲ್ಟ್ ಆಯ್ಕೆಗಳ ನಡುವೆ ಆಯ್ಕೆಮಾಡಬಹುದಾಗಿದೆ.

ವಾಯ್ಸ್ ಮೆಸೇಜ್ ಪ್ರಿವ್ಯೂ

ವಾಯ್ಸ್ ಮೆಸೇಜ್ ಪ್ರಿವ್ಯೂ

ಈ ವರ್ಷದ ಜನಪ್ರಿಯ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್‌ ಕೂಡ ಸೇರಿದೆ. ಇದು ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ನಲ್ಲಿ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಇದರಿಂದ ನಿಮ್ಮ ವಾಯ್ಸ್‌ ಮೆಸೇಜ್‌ ಅನುಭವ ಇನ್ನಷ್ಟು ಸುಧಾರಿಸಲಿದೆ ಎನ್ನಲಾಗಿದೆ. ವಾಯ್ಸ್‌ ಮೆಸೇಜ್‌ ಅನ್ನು ಪ್ರಿವ್ಯೂ ಮಾಡುವ ಆಯ್ಕೆಯು ನೀವು ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಲು ಸ್ಟಾಪ್ ಬಟನ್ ಅನ್ನು ಒತ್ತಿದ ನಂತರ ಕಾಣಿಸಿಕೊಳ್ಳುತ್ತದೆ. ಪ್ಲೇ ಬಟನ್ ಅನ್ನು ಬಳಸಿಕೊಂಡು ಬಳಕೆದಾರರು ವಾಯ್ಸ್‌ ರೆಕಾರ್ಡಿಂಗ್ ಅನ್ನು ಪ್ರಿವ್ಯೂ ಮಾಡಬಹುದು. ಅಲ್ಲದೆ ಟೈಮ್‌ಸ್ಟ್ಯಾಂಪ್ ಅನ್ನು ಬಳಸಿಕೊಂಡು ವಾಯ್ಸ್‌ ರೆಕಾರ್ಡಿಂಗ್‌ನ ನಿರ್ದಿಷ್ಟ ಭಾಗವನ್ನು ಸಹ ಕೇಳಬಹುದು. ತಮ್ಮ ವಾಯ್ಸ್‌ ಮೆಸೇಜ್‌ ಅನ್ನು ಪರಿಶೀಲಿಸಿದ ನಂತರ, ರೆಕಾರ್ಡಿಂಗ್ ಅನ್ನು ಡಿಲೀಟ್‌ ಮಾಡಲು ಟ್ರಾಶ್‌ ಬಟನ್ ಅನ್ನು ಹಿಟ್ ಮಾಡಬಹುದು.

ಕಸ್ಟಮೈಸ್ ಸ್ಟಿಕ್ಕರ್‌

ಕಸ್ಟಮೈಸ್ ಸ್ಟಿಕ್ಕರ್‌

ವಾಟ್ಸಾಪ್‌ ಇತ್ತೀಚಿಗೆ ಕಸ್ಟಮೈಸ್‌ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಸ್ಟಿಕ್ಕರ್ ಮೇಕರ್ ಟೂಲ್‌ ಬಳಸಿಕೊಂಡು ನಿಮ್ಮ ಸ್ವಂತ ಕಸ್ಟಮ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್‌ ಮಾಡಲು ವಾಟ್ಸಾಪ್‌ ಅನುಮತಿಸುತ್ತದೆ. ಈ ಫೀಚರ್ಸ್‌ ಅನ್ನು ನೀವು ಸುಲಭವಾಗಿ ಪ್ರವೇಶಿಸಬಹುದಾಗಿದ್ದು, ವಾಟ್ಸಾಪ್‌ನ ಸ್ಟಿಕ್ಕರ್ ವಿಭಾಗದಲ್ಲಿ ಇದನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ವಾಟ್ಸಾಪ್‌ ಚಾಟ್ ಅನ್ನು ತೆರೆಯಬೇಕು, ನಂತರ ಪೇಪರ್‌ಕ್ಲಿಪ್ ಐಕಾನ್ ಮೇಲೆ ಕ್ಲಿಕ್ ಮಾಡಿ, ತದನಂತರ "ಸ್ಟಿಕ್ಕರ್" ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ನಿಮ್ಮ ಕಸ್ಟಮ್ ಸ್ಟಿಕ್ಕರ್ ಅನ್ನು ಕ್ರಿಯೆಟ್‌ ಮಾಡಲು ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇದಲ್ಲದೆ ವಾಟ್ಸಾಪ್‌ ನಿಮಗೆ ಫೋಟೋವನ್ನು ಸ್ಟಿಕ್ಕರ್‌ನಲ್ಲಿ ಕ್ರಾಪ್ ಮಾಡಲು ಮತ್ತು ಎಮೋಜಿಗಳನ್ನು ಸೇರಿಸಲು ಅನುಮತಿಸುತ್ತದೆ.

ವ್ಯೂ ಒನ್ಸ್‌ ಮೀಡಿಯಾ

ವ್ಯೂ ಒನ್ಸ್‌ ಮೀಡಿಯಾ

ಇನ್ನು ವಾಟ್ಸಾಪ್‌ ಇತ್ತಿಚಿಗೆ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ವ್ಯೂ ಒನ್ಸ್ ಮೀಡಿಯಾ ಫೀಚರ್ಸ್‌ ಕೂಡ ಸೇರಿದೆ. ಇದರಿಂದಾಗಿ ನೀವು ಸ್ವಿಕರಿಸುವ ವಾಟ್ಸಸಾಪ್‌ ಸಂದೇಶದ ಫೋಟೋಗಳು ಚಾಟ್‌ನಿಂದ ಹೊರಬಂದ ನಂತರ ಕಣ್ಮರೆಯಾಗುತ್ತದೆ. ಅಂದರೆ ವ್ಯೂ ಒನ್ಸ್‌ ಮೀಡಿಯಾ ಫೀಚರ್ಸ್‌ ಅನ್ನು ನೀವು ಬಳಸಿದರೆ ನೀವು ಕಳುಹಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಸ್ವೀಕರಿಸುವವರ ಫೋಟೋಗಳು ಅಥವಾ ಗ್ಯಾಲರಿಯಲ್ಲಿ ಉಳಿಸಲಾಗುವುದಿಲ್ಲ. ಆದರಿಂದ ನೀವು ಒಮ್ಮೆ ಫೋಟೋ ಅಥವಾ ವೀಡಿಯೊವನ್ನು ಒನ್ಸ್‌ ವ್ಯೂ ನಲ್ಲಿ ಕಳುಹಿಸಲು ಬಯಸಿದರೆ ಪ್ರತಿ ಬಾರಿಯೂ ವ್ಯೂ ಒನ್ಸ್‌ ಮೀಡಿಯಾವನ್ನು ಆಯ್ಕೆ ಮಾಡಬೇಕಾಗುತ್ತದೆ.

ವಾಟ್ಸಾಪ್‌ ಚಾಟ್‌ಬಾಟ್‌

ವಾಟ್ಸಾಪ್‌ ಚಾಟ್‌ಬಾಟ್‌

ವಾಟ್ಸಾಪ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ಚಾಟ್‌ ಬಾಟ್‌ ಕೂಡ ಸೇರಿದೆ. ಕೋವಿಡ್‌-19 ಗೆ ಸಂಬಂಧಿಸಿದ ನಕಲಿ ಮಾಹಿತಿಯನ್ನು ತಡೆಗಟ್ಟಲು ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (IFCN) ಮಾರ್ಚ್‌ನಲ್ಲಿ ವಾಟ್ಸಾಪ್‌ ಚಾಟ್‌ಬಾಟ್ ಅನ್ನು ಪ್ರಾರಂಭಿಸಿತು. ಈಗ IFCN ಈ ಸತ್ಯವನ್ನು ಪರಿಶೀಲಿಸುವ ವಾಟ್ಸಾಪ್‌ ಬಾಟ್‌ನ ವ್ಯಾಪ್ತಿಯನ್ನು ಹೆಚ್ಚಿಸಲು ಹಿಂದಿಯಲ್ಲಿ ಲಭ್ಯವಾಗುವಂತೆ ಮಾಡಿದೆ. ವಾಟ್ಸಾಪ್‌ನ ಈ ಫ್ಯಾಕ್ಟ್-ಚೆಕಿಂಗ್ ಬೋಟ್ ಕೋವಿಡ್‌-19 ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ತೆಗೆದುಹಾಕುತ್ತದೆ.

ಸ್ಟೋರೇಜ್ ಮ್ಯಾನೇಜ್‌ಮೆಂಟ್ ಟೂಲ್

ಸ್ಟೋರೇಜ್ ಮ್ಯಾನೇಜ್‌ಮೆಂಟ್ ಟೂಲ್

ವಾಟ್ಸಾಪ್‌ ಈ ವರ್ಷ ಪರಿಚಯಿಸಿದ ಫೀಚರ್ಸ್‌ಗಳಲ್ಲಿ ಸ್ಟೋರೇಜ್ ಮ್ಯಾನೇಜ್‌ಮೆಂಟ್ ಟೂಲ್‌ ಕೂಡ ಒಂದಾಗಿದೆ. ಈ ವರ್ಷ ಇದರ ಸುಧಾರಿತ ಆವೃತ್ತಿಯನ್ನು ವಾಟ್ಸಾಪ್‌ ಪರಿಚಯಿಸಿದೆ. ಇದು ಶೇಖರಣಾ ನಿರ್ವಹಣೆ ವಿಭಾಗದಲ್ಲಿ ಫಾರ್ವರ್ಡ್ ಮಾಡಲಾದ ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ಪರಿಶೀಲಿಸಲು ಮತ್ತು ಅಳಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಬಳಕೆದಾರರು ವೈಯಕ್ತಿಕ ಚಾಟ್‌ಗಳಿಂದ ಮಾಧ್ಯಮವನ್ನು ಪ್ರತ್ಯೇಕವಾಗಿ ಅಳಿಸಬಹುದು. ಇದಲ್ಲದೆ, 5MB ಗಿಂತ ಹೆಚ್ಚಿನ ಫೈಲ್‌ಗಳನ್ನು ವೀಕ್ಷಿಸಲು ಪ್ರತ್ಯೇಕ ವಿಭಾಗವೂ ಇದೆ.

Best Mobiles in India

English summary
WhatsApp also introduced many such features that are very great and beneficial for the users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X