ಜನರ ಬೆಂಬಲಕ್ಕೆ ನಿಂತ ಸರ್ಕಾರ- ವಿದೇಶಿ ಇ-ಕಾಮರ್ಸ್ ಸೈಟ್ ಗಳಿಗೆ ಹೊಸ ನೀತಿ ನಿಯಮ

By Gizbot Bureau
|

ಆನ್ ಲೈನ್ ವಸ್ತುಗಳ ಮಾರಾಟದ ವಿಚಾರದಲ್ಲಿ ಭಾರತೀಯರ ಡಾಟಾವನ್ನು ಕಲೆ ಹಾಕುತ್ತಿದ್ದ ಕೆಲವು ವಿದೇಶಿ ಇ-ಕಾಮರ್ಸ್ ಸೈಟ್ ಗಳಿಗೆ ಭಾರತ ಕಡಿವಾಣ ಹಾಕಲು ಮುಂದಾಗಿದೆ. ಹೊಸ ಕರಡು ನೀತಿಯನ್ನು ಜಾರಿಗೆ ತಂದಿರುವ ಭಾರತ ಭಾರತೀಯರ ಡಾಟಾ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಂಡಿದೆ.

ಡಾಟಾ ಸುರಕ್ಷತೆ:

ಡಾಟಾ ಸುರಕ್ಷತೆ:

ಹೊಸ ನೀತಿ ಜಾರಿಯಿಂದಾಗಿ ಚೀನಾಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಡಾಟಾ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದಾಗ ಡಾಟಾ ಶೇರಿಂಗ್ ಮತ್ತು ಸರ್ಕಾರವು ಇಚ್ಛಿಸಿದರೆ ಯಾವಾಗ ಬೇಕಿದ್ದರೂ ಡಾಟಾ ಆಕ್ಸಿಸ್ ಗೆ ಈ ಹೊಸ ನೀತಿ ಅನುಕೂಲ ಮಾಡಿಕೊಡುತ್ತದೆ .

ಹೊಸ ನೀತಿ ಒಪ್ಪಿಕೊಂಡ ಸ್ನ್ಯಾಪ್ ಡೀಲ್:

ಹೊಸ ನೀತಿ ಒಪ್ಪಿಕೊಂಡ ಸ್ನ್ಯಾಪ್ ಡೀಲ್:

ಯುಸ್ ನ ಚಿಲ್ಲರೆ ದೈತ್ಯ ವಾಲ್ ಮಾರ್ಟ್ ನ 77% ಸ್ವಾಮ್ಯಾದಲ್ಲಿರುವ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಈಗಾಗಲೇ ಈ ಕರಡು ನೀತಿಯನ್ನು ಓದುತ್ತಿದ್ದಾರೆ ಮತ್ತು ತಮ್ಮ ಸಲಹೆ ಸೂಚನೆಗಳನ್ನು ಮಾರ್ಚ್ 9 ರ ಒಳಗೆ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಇತರೆ ಕಂಪೆನಿಗಳಲ್ಲಿ ಒಂದಾದ ಸ್ನ್ಯಾಪ್ ಡೀಲ್ ಈಗಾಗಲೇ ಈ ನೀತಿಯನ್ನು ಒಪ್ಪಿಕೊಂಡಿದೆ.

ಹೊಸ ಮಾರ್ಗದರ್ಶಿ ಸೂತ್ರ:

ಹೊಸ ಮಾರ್ಗದರ್ಶಿ ಸೂತ್ರ:

ಕರಡು ನೀತಿಯಲ್ಲಿ ಭಾರತ ಮತ್ತು ಭಾರತೀಯ ನಾಗರೀಕರ ಡಾಟಾಕ್ಕೆ ಸಾರ್ವಭೌಮ ಹಕ್ಕನ್ನು ಅವರು ಹೊಂದಿರುತ್ತಾರೆ ಎಂದು ಹೇಳಲಾಗಿದ್ದು ಇದು ಹೊಸ ಮಾರ್ಗದರ್ಶಿ ಸೂತ್ರದ ಪ್ರಮುಖ ಅಂಶವಾಗಿರುತ್ತದೆ.

ಡ್ರಾಫ್ಟ್ ನ ಪ್ರಮುಖ ಅಂಶ:

ಡ್ರಾಫ್ಟ್ ನ ಪ್ರಮುಖ ಅಂಶ:

"ಭಾರತದ ಯಾವುದೇ ಸಂಸ್ಥೆ ವಿದೇಶದಲ್ಲಿ ಸಂಗ್ರಹವಾಗಿರುವ ಡಾಟಾವನ್ನು ಪ್ರವೇಶಿಸಲು ಅಥವಾ ಪಡೆಯಲು ತಕ್ಷಣವೇ ಪ್ರತಿಕ್ರಿಯೆ ನೀಡಬೇಕು ಮತ್ತು ಅನುಸರಿಸಬೇಕು ಎಂದು ಹೇಳಲಾಗಿದೆ. ಡಾಟಾ ಸ್ಟೋರೇಜ್ ಮತ್ತು ಅದರ ಬಳಕೆಯ ಬಗ್ಗೆ ಡ್ರಾಫ್ಟ್ ನಲ್ಲಿ ಪ್ರಮುಖವಾಗಿ ನಿರ್ದೇಶಿಸಲಾಗಿದೆ.ನೀತಿಯ ನಿರ್ವಹಣಾ ಅಧಿಕಾರಿಗಳು ಮತ್ತು ವಕೀಲರು ಹೇಳಿರುವ ಪ್ರಕಾರ ಸರ್ಕಾರವು ಕಳೆದ ಒಂದು ವರ್ಷದಲ್ಲಿ ತನ್ನ ನೀತಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಕೇಂದ್ರವು ಡಾಟಾ ಅಗತ್ಯವಿದ್ದಾಗ ಪಡೆಯಲು ಈ ನೀತಿ ಪೂರಕವಾಗಿರುತ್ತದೆ ಎಂದು ತಿಳಿದುಬಂದಿದೆ.

ಹದ್ದಿನ ಕಣ್ಣು:

ಹದ್ದಿನ ಕಣ್ಣು:

ಸರ್ಕಾರವು ಸ್ಪಷ್ಟವಾಗಿ ಎಲ್ಲಾ ನಿಯಮಗಳನ್ನು ಹೇಳಿದೆ ಮತ್ತು ನೀವು ಅವುಗಳನ್ನು ಪಾಲಿಸುವುದನ್ನು ನಾವು ಸ್ವಾಗತಿಸುತ್ತೇವೆ. ಜಗತ್ತಿನಾದ್ಯಂತ ಆರಾಮದಾಯಕವಾಗಿರಬಹುದು ಎಂಬ ಭಾವನೆಯಲ್ಲಿರುವ ಟೆಕ್ ಇಂಡಸ್ಟ್ರಿಗೆ ಒಂದು ರೀತಿಯಲ್ಲಿ ಹದ್ದಿನ ಕಣ್ಣಿಡುವ ಪ್ರಯತ್ನ ಇದಾಗಿದೆ" ಎನ್ನುತ್ತಾರೆ ಇಂಡಿಯಾ ಟೆಕ್ ನ ಸಿಇಓ ಆಗಿರುವ ರಮೇಶ್ ಕೈಲಾಸಂ.

ಗೌಪ್ಯತೆಗೆ ಒತ್ತು:

ಗೌಪ್ಯತೆಗೆ ಒತ್ತು:

ಗ್ರಾಹಕರ ಗೌಪ್ಯತೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ಯುರೋಪಿಯನ್ ಕಡ್ಡುಪಾಡುಗಳನ್ನು ಸಹ ಉದ್ಯಮದ ಕಾರ್ಯನಿರ್ವಾಹಕರು ಉದಾಹರಣೆ ನೀಡುತ್ತಿದ್ದರು. ಇಂತಹ ಸಂದರ್ಬದಲ್ಲಿ ಭಾರತವು ಕೂಡ ಅಂತಹ ಡಾಟಾಗಳಿಗೆ ಅಂದರೆ ದೇಶದ ಹೊರಗಿನ ಅಂತಹ ದತ್ತಾಂಶಗಳಿಗೆ ತಕ್ಷಣದ ಪ್ರವೇಶವನ್ನು ನೀಡಲಾಗುವ ಬಗ್ಗೆ ಹೇಳಿದೆ.ಇದು ಚೀನಾದ ಕೆಲವು ವೆಬ್ ಸೈಟ್ ಗಳಿಗೆ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ಲಬ್ ಫ್ಯಾಕ್ಟರಿ, ಶೈನ್ ಗಳಿಗೆ ಪೆಟ್ಟು:

ಕ್ಲಬ್ ಫ್ಯಾಕ್ಟರಿ, ಶೈನ್ ಗಳಿಗೆ ಪೆಟ್ಟು:

ಹೊಸ ನಿಯಮಾವಳಿಗಳು ಚೀನಾದ ಇ-ಕಾಮರ್ಸ್ ಸೈಟ್ ಗಳಾದ ಕ್ಲಬ್ ಫ್ಯಾಕ್ಟರಿ, ಶೈನ್ ಇತ್ಯಾದಿಗಳಿಗೆ ಭಾರೀ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಇವುಗಳು ತಮ್ಮ ಪ್ರೊಡಕ್ಟ್ ಗಳನ್ನು ಗಿಫ್ಟ್ ಎಂದು ಭಾರತದಲ್ಲಿ ಮಾರಾಟ ನಡೆಸುತ್ತಿದ್ದವು. ಇವುಗಳಿಗೆ ಇನ್ನು ಮುಂದೆ ದೊಡ್ಡ ಹೊಡೆತವನ್ನು ಭಾರತ ನೀಡುತ್ತದೆ.

Best Mobiles in India

Read more about:
English summary
Here's why government's stand on citizens' data is 'spooking' companies9

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X