ಸ್ನೇಹಿತನ ಸಾವಿನಿಂದ ನೊಂದ ಈ ವ್ಯಕ್ತಿ ಮಾಡಿದ್ದೇನು? ಈ ಸ್ಟೋರಿ ಓದಿರಿ!

|

ಸ್ನೇಹಿತನ ಸಾವಿನಿಂದ ನೊಂದ ವ್ಯಕ್ತಿಯೊಬ್ಬ ಮಾಡಿರುವ ಕೆಲಸ ಇದೀಗ ಸಾಕಷ್ಟು ಸಂಚಲನ ಸೃಷ್ಟಿಸಿದೆ. ತನ್ನ ಸ್ನೇಹಿತನಿಗೆ ಬಂದ ಸಂಕಷ್ಟ ಮತ್ತೊಬ್ಬರಿಗೆ ಬಾರದಿರಲಿ ಎಂಬ ಉದ್ದೇಶದಿಂದ ಟೆಕ್ಕಿಯೊಬ್ಬ ಮಾಡಿರುವ ಆವಿಷ್ಕಾರದ ಸ್ಟೋರಿ ಇದಾಗಿದೆ. ಡೆಹ್ರಾಡೂನ್‌ ಮೂಲದ ಈ ವ್ಯಕ್ತಿಯ ಹೆಸರನ್ನು ರಜತ್‌ ಜೈನ್‌ ಎಂದು ಹೆಸರಿಸಲಾಗಿದೆ. ಈತನ ಸ್ನೇಹಿತ ಹೃದಯಾಘಾತದಿಂದ ಮೃತಪಟ್ಟಿದ್ದರು ಎನ್ನಲಾಗಿದ್ದು, ಇದರಿಂದ ನೊಂದ ರಜತ್‌ ಜೈನ್‌ ಸುಲಭವಾಗಿ ಇಸಿಜಿ ಮಾಡುವ ಡಿವೈಸ್‌ ಒಂದನ್ನು ಅಭಿವೃದ್ದಿ ಪಡಿಸಿದ್ದಾರೆ.

ಸ್ನೇಹಿತ

ಹೌದು, ಸ್ನೇಹಿತನ ಸಾವಿನಿಂದ ನೋಂದ ರಜತ್‌ ಜೈನ್‌ ಹೊಸ ಇಸಿಜಿ ಡಿವೈಸ್‌ ಅನ್ನು ಅಭಿವೃದ್ದಿ ಪಡಿಸಿದ್ದಾರೆ. ಇದು ಸ್ಮಾರ್ಟ್‌ಫೋನ್-ಚಾಲಿತ ಪೋರ್ಟಬಲ್ ಇಸಿಜಿ ಡಿವೈಸ್‌ ಆಗಿದ್ದು, ಇದನ್ನು 'ಸ್ಪಂದನ್' ಎಂದು ಹೆಸರಿಸಲಾಗಿದೆ. ಇದರ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ದೂರದ ಊರುಗಳಲ್ಲಿ ವಾಸಿಸುವ ಜನರು ಆಸ್ಪತ್ರೆಗೆ ಹೋಗುವ ಮುನ್ನ ಹೃದಯ ರೋಗದ ಲಕ್ಷಣಗಳನ್ನು ಅರಿತುಕೊಳ್ಳಲು ಸಹಾಯ ಮಾಡಲಿದೆ ಎನ್ನಲಾಗಿದೆ. ಹಾಗಾದ್ರೆ ಸ್ಪಂದನ್‌ ಡಿವೈಸ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡೆಹ್ರಾಡೂನ್

ಡೆಹ್ರಾಡೂನ್ ಮೂಲದ ರಜತ್‌ ಜೈನ್‌ ತಮ್ಮ ಸ್ನೇಹಿತನ ಸಾವಿನಿಂದ ತುಂಬಾ ನೋವನ್ನು ಅನುಭವಿಸುತ್ತಾರೆ. ಅಲ್ಲದೆ ಸ್ನೇಹಿತನ ಸಾವಿಗೆ ಕಾರಣವನ್ನು ಅರಿತು ಅದಕ್ಕೆ ಪರಿಹಾರ ಹುಡುಕುವುದಕ್ಕೆ ಮುಂದಾಗುತ್ತಾರೆ. ಆಗ ಅವರು ಸನ್‌ಫಾಕ್ಸ್ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇದರ ಮೂಲಕ ಪೋರ್ಟಬಲ್ ಇಸಿಜಿ ಡಿವೈಸ್‌ ಅನ್ನು ಅಭಿವೃದ್ದಿ ಪಡಿಸಲು ಮುಂದಾಗುತ್ತಾರೆ. ಇದರ ಮೂಲ ಉದ್ದೇಶ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರಂಭಿಕ ರೋಗಲಕ್ಷಣಗಳನ್ನು ಅರಿತುಕೊಳ್ಳಲು ಸಹಾಯ ಮಾಡುವುದಾಗಿದೆ.

ECG

ECG ಮೂಲಕ ಹೃದಯದ ಆರೋಗ್ಯವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಆದರೆ ಇಸಿಜಿ ಮಾಡಿಸಬೇಕಾದರೆ ನೀವು ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಇದನ್ನು ಮನಗಂಡ ರಜತ್‌ ಜೈನ್‌ ಸ್ಮಾರ್ಟ್‌ಫೋನ್‌ ಪೋರ್ಟಬಲ್‌ ಇಸಿಜಿ ಡಿವೈಸ್‌ 'ಸ್ಪಂದನ್‌' ಅಭಿವೃದ್ದಿ ಪಡಿಸಿದ್ದಾರೆ. ಇದು ಸ್ಮಾರ್ಟ್‌ಫೋನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಈ ಡಿವೈಸ್‌ ಅನ್ನು ಬಳಸಬೇಕಾದರೆ ಮೊದಲಿಗೆ ಸ್ಪಂದನ್‌ ಅಪ್ಲಿಕೇಶನ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಬೇಕಾಗುತ್ತದೆ.

ಸ್ಪಂದನ್

ಸ್ಪಂದನ್ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿದ ನಂತರ ಸ್ಪಂದನ್‌ ಡಿವೈಸ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಈ ಡಿವೈಸ್‌ ಎರಡು ಕೇಬಲ್‌ಗಳನ್ನು ಹೊಂದಿದೆ. ಇದರಲ್ಲಿ ಒಂದನ್ನು ಮೊಬೈಲ್‌ಗೆ ಕನೆಕ್ಟ್‌ ಮಾಡಿದರೆ, ಇನ್ನೊಂದನ್ನು ನಿಮ್ಮ ಎದೆಗೆ ವಿದ್ಯುದ್ವಾರಗಳನ್ನು ಅಂಟಿಸಲು ಅನುಮತಿಸುತ್ತದೆ. ಇದರ ಮೂಲಕ ನಿಮ್ಮ ಎದೆಯೊಂದ ಡೇಟಾವನ್ನು ತೆಗೆದುಕೊಂಡು ನಂತರ ಅದನ್ನು ಸ್ಮಾರ್ಟ್‌ಫೋನ್‌ಗೆ ರವಾನಿಸಲಿದೆ. ಈ ಇಡೀ ಪ್ರಕ್ರಿಯೆಯು ಸುರಕ್ಷಿತ ಮತ್ತು ನೋವುರಹಿತವಾಗಿದೆ ಎಂದು ಹೇಳಲಾಗಿದೆ.

ಡಿವೈಸ್‌

ಇದಲ್ಲದೆ ಈ ಡಿವೈಸ್‌ ಮೂಲಕ ನಿಮ್ಮ ಹೆಲ್ತ್‌ ಡೇಟಾವನ್ನು ಇಮೇಲ್ ಅಥವಾ ವಾಟ್ಸಾಪ್‌ಗೆ ಪಿಡಿಎಫ್‌ ಮಾದರಿಯಲ್ಲಿ ಶೇರ್‌ ಮಾಡಬಹುದು. ಇದರಿಂದ ನಿಮ್ಮ ಹೆಲ್ತ್‌ ಡೇಟಾವನ್ನು ವೈದ್ಯರಿಗೆ ತಲುಪಿಸುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ನಿಮ್ಮ ದೇಹದ ಆಕ್ಸಿಜನ್‌ ಲೆವೆಲ್‌ ಮತ್ತು ಉಸಿರಾಟದ ಲೆವೆಲ್‌ ಅನ್ನು ಕೂಡ ಟ್ರ್ಯಾಕ್‌ ಮಾಡುವ ಲೈವ್‌ ಮಾನಿಟರಿಂಗ್‌ ಫೀಚರ್ಸ್‌ ಪಡೆದಿದೆ. ಇನ್ನು ಸ್ಪಂದನ್ ಅಪ್ಲಿಕೇಶನ್ ರಿಸಲ್ಟ್‌ ಪಡೆಯುವುದಕ್ಕೆ ಇಂಟರ್‌ನೆಟ್‌ ಸಮಸ್ಯೆ ಅಡ್ಡಬರುವುದಿಲ್ಲ ಎನ್ನಲಾಗಿದೆ.

ಜೈನ್‌

ಜೈನ್‌ ಅವರ ಸ್ಪಂದನ್‌ ಡಿವೈಸ್‌ ರಿಸಲ್ಟ್‌ ನೀಡುವುದಕ್ಕೆ 10 ಸೆಕೆಂಡುಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ 2017 ಮತ್ತು 2021 ರ ನಡುವೆ 3,000 ಕ್ಕೂ ಹೆಚ್ಚು ಜನರ ಮೇಲೆ ಇದರ ಪ್ರಯೋಗ ನಡೆಸಿದ್ದು, 99.7% ನಿಖರ ಪಲಿತಾಂಶವನ್ನು ಇದು ನೀಡಿದೆ ಎನ್ನಲಾಗಿದೆ. ಡೇಟಾದ ಪ್ರಮಾಣ ಮತ್ತು ಡೇಟಾದ ಗುಣಮಟ್ಟ ICU ನಲ್ಲಿರುವ ಸ್ಟ್ಯಾಂಡರ್ಡ್ ECG ಯಂತ್ರದ ಮಾದರಿಯಲ್ಲಿಯೇ ಇರಲಿದೆ ಎಂಬ ಮಾತನ್ನು ಜೈನ್ ಹೇಳಿದ್ದಾರೆ.

Best Mobiles in India

Read more about:
English summary
Here's why this Dehradun techie developed portable ECG device

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X