ಇಂದಿನಿಂದ 'ಹಾನರ್ 20ಐ' ಮೊದಲ ಸೇಲ್!..ತಿಳಿಯಬೇಕಾದ ವಿಷಯಗಳು!!

|

ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿ ಗಮನಸೆಳೆಯುತ್ತಿರುವ ಬಜೆಟ್ ಸ್ಮಾರ್ಟ್‌ಫೋನ್ ಹಾನರ್ 20ಐ ಇಂದಿನಿಂದ ಮೊದಲ ಬಾರಿಗೆ ಖರೀದಿಗೆ ಲಭ್ಯವಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ 'ಹಾನರ್ 20ಐ' ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು ಅತ್ಯುತ್ತಮ ಆಫರ್‌ಗಳ ಜೊತೆಗೆ 'ಹಾನರ್ 20ಐ' ಫೋನ್ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.

ಈ ಮೊದಲು ಹಾನರ್ ಬಿಡುಗಡೆ ಮಾಡಿದ್ದ ಜನಪ್ರಿಯ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ದೇಶದಲ್ಲಿ ಭರ್ಜರಿ ಮಾರಾಟ ಕಂಡಿತ್ತು. ಹಾಗಾಗಿ, ಇದೇ ಯಶಸ್ಸನ್ನು ಪಡೆಯಲು ಹಾನರ್ ಸಂಸ್ಥೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಬೆಲೆ ಮಾತ್ರ ಕೇವಲ 14,990 ರೂ.ಗಳಾಗಿರುವುದರಿಂದ ಮೊಬೈಲ್ ಮಾರುಕಟ್ಟೆಯೇ ತಿರುಗಿ ನೋಡುತ್ತಿದೆ.

ಇಂದಿನಿಂದ 'ಹಾನರ್ 20ಐ' ಮೊದಲ ಸೇಲ್!..ತಿಳಿಯಬೇಕಾದ ವಿಷಯಗಳು!!

ಚೀನಾದಲ್ಲಿ 21 ಸಾವಿರ ರೂ.ಆಸುಪಾಸಿನಲ್ಲಿ 'ಹಾನರ್ 20 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಆದರೆ, ಭಾರತದಲ್ಲಿ ಫೋನಿನ ಬೆಲೆ 14,990 ರೂಪಾಯಿಗಳಾಗಿರುವುದರಿಂದ ಎಲ್ಲಾ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯುತ್ತಿದೆ. ಹಾಗಾದರೆ, 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಗಿದೆ?, 14,990 ರೂ.ಗಳಿಗೆ ಖರೀದಿಸಲು ಯೋಗ್ಯವೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಹಾನರ್ 20ಐ' ಡಿಸೈನ್

'ಹಾನರ್ 20ಐ' ಡಿಸೈನ್

ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್‌ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಪಂಚ್‌ಹೋಲ್‌ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ನೋಡಬಹುದು.

'ಹಾನರ್ 20ಐ' ಡಿಸ್‌ಪ್ಲೇ

'ಹಾನರ್ 20ಐ' ಡಿಸ್‌ಪ್ಲೇ

1080 x 2340 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ FHD+ ಡಿಸ್‌ಪ್ಲೇಯನ್ನು 'ಹಾನರ್ 20ಐ' ಹೊಂದಿದೆ. ಸ್ಮಾರ್ಟ್‌ಫೋನ್ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರ ಶೇ.82.91 % ರಷ್ಟಿದ್ದು, ಪಿಕ್ಸಲ್ ಸಾಂದ್ರತೆಯು 415ppi ಮತ್ತು ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. FHD+ ಡಿಸ್‌ಪ್ಲೇ ವೀಡಿಯೊಗೆ ಮತ್ತು ಗೇಮಿಂಗ್‌ಗೆ ಸರಿಯಾದ ರೆಸಲ್ಯೂಶನ್ ನೀಡಲಿದೆ.

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ EMUI 9 ಆಂಡ್ರಾಯ್ಡ್ 9 ಪೈ ಮೂಲಕ ರನ್ ಆಗಲಿದೆ. Mali-G51 MP4 ಸಾಮರ್ಥ್ಯದ ಗ್ರಾಫಿಕ್ ಸೌಲಭ್ಯ ಪಬ್‌ಜಿಯಂತಹ ಗೇಮ್ ಆಡಲು ಸಹಾಯಕ.

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

ಸೆಲ್ಫೀ ಪ್ರಿರಿಗೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಳಿಮಾಡಿಸಿದಂತಿದ್ದು, 32ಎಂಪಿ ಸಾಮರ್ಥ್ಯದ ಕೃತಕ ಬುದ್ದಿಮತ್ತೆ (ಎಐ) ಸೆಲ್ಫೀ ಕ್ಯಾಮೆರಾವನ್ನು ಫೋನಿನಲ್ಲಿ ಅಳವಡಿಲಾಗಿದೆ. ಬ್ಯೂಟಿ ಪ್ಲಸ್, ಆಟೊ ಫೋಕಸ್ ಸೇರಿದಂತೆ ಎಐಎಸ್ ಸೂಪರ್ ನೈಟ್ ಮೋಡ್‌ಗೆ ಬೆಂಬಲ ನೀಡುವಂತಹ ಹಲವು ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನಗಳು ಸೆಲ್ಫೀ ಪ್ರಿಯರನ್ನು ಸೆಳೆಯಲಿವೆ.

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು l f/1.8 ಅಪಾರ್ಚರ್‌ನಲ್ಲಿ 24ಎಂಪಿ ಸಾಮರ್ಥ್ಯದಾಗಿದ್ದರೆ, 8ಎಂಪಿ ವೈಡ್ ಆಂಗಲ್ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾಗಳು ರಿಯರ್ ಕ್ಯಾಮೆರಾ ಸಾಮರ್ಥ್ಯ ಎಂದು ಹೇಳಬಹುದು. ಇನ್ನು ರಿಯರ್ ಕ್ಯಾಮೆರಾವು ಸಂಪೂರ್ಣ 'ಎಐ' ಎಂಬುದನ್ನು ಕ್ಯಾಮೆರಾದ ಮೇಲೆಯೇ ಬರೆಯಲಾಗಿದೆ.

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಸ್ಮಾರ್ಟ್‌ಫೋನ್‌ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಈ ಫೋನ್ ಯಾವುದೇ ವೇಗವಾದ ಚಾರ್ಜಿಂಗ್ ಅನ್ನು ಬೆಂಬಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ, ಮೊಬೈಲ್ ಬಾಕ್ಸ್ 10W ಚಾರ್ಜರ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

'ಹಾನರ್ 20ಐ' ವಿಶೇಷತೆಗಳು

'ಹಾನರ್ 20ಐ' ವಿಶೇಷತೆಗಳು

14,999 ರೂ.ಗಳಲ್ಲಿ ತ್ರಿವಳಿ ಕ್ಯಾಮರಾ ವ್ಯವಸ್ಥೆ ಹಾಗೂ 32 ಎಂಪಿ ಎಐ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್‌ಗಳಲ್ಲಿ 'ಹಾನರ್ 20ಐ' ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇನ್ನು ಪ್ರೊಸೆಸರ್ ಕೂಡ ಬೆಲೆಗೆ ತಕ್ಕಂತಂಹ ಶಕ್ತಿಯುತವಾಗಿದೆ. FHD+ ಡಿಸ್‌ಪ್ಲೇ ಮೂಲಕ ಗಮನಸೆಳೆಯುವ ಈ ಫೋನ್ ಖರೀದಿಗೆ ಅತ್ಯುತ್ತಮವಾದ ಒಂದು ಬಜೆಟ್ ಫೋನ್ ಎಂದೆನ್ನಬಹುದು.

Best Mobiles in India

English summary
Honor 20i to Go on Sale for First Time Today at 12 Noon via Flipkart: Launch Offers, Price, Specifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X