ಜನವರಿ 28 ಕ್ಕೆ ಹುವಾವೆ ಬಿಡುಗಡೆ ಮಾಡಲಿದೆ ಅದ್ಧೂರಿ ಫೋನ್

Written By:

ಹುವಾವೆ ಆನ್‌ಲೈನ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ಹೋನರ್ ಲಾಂಚ್ ಆದದ್ದಿನಿಂದಲೂ ಭಾರತದಲ್ಲಿ ಖ್ಯಾತಿಯನ್ನು ಗಳಿಸಿಕೊಳ್ಳುತ್ತಿದೆ. ಇದೀಗ ದೇಶದಲ್ಲಿ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ತಯಾರಿಯಲ್ಲಿ ಕಂಪೆನಿ ಇದ್ದು ಇದಕ್ಕೆ ಹೋನರ್ 5ಎಕ್ಸ್ ಎಂದು ನಾಮಕರಣ ಮಾಡಿದೆ. ಮಧ್ಯಮ ಕ್ರಮಾಂಕಿತ ಡಿವೈಸ್ ಆಗಿರುವ ಇದು ಜನವರಿ 28 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಕಳೆದ ವರ್ಷ ಬಿಡುಗಡೆಯಾಗಿರುವ ಹೋನರ್ 4ಎಕ್ಸ್‌ನ ಸಕ್ಸೆಸರ್ ಎಂದೆನಿಸಿರುವ ಹೋನರ್ 5ಎಕ್ಸ್ ವಿಶೇಷ ಫೀಚರ್‌ಗಳು ಮತ್ತು ಅಪ್‌ಗ್ರೇಡ್‌ಗಳೊಂದಿಗೆ ಬಂದಿದೆ ಹಾಗೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಭದ್ರತಾ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಹೊಂದಿರುವ ಈ ಡಿವೈಸ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಪ್ರವೇಶಿಸುವ ಅದ್ಭುತ ಫೀಚರ್ ಅನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಕಾರ್ಯಕ್ಷಮತೆ

ಉತ್ತಮ ಕಾರ್ಯಕ್ಷಮತೆ

ಸೆಕೆಂಡ್ ಜನರೇಶನ್ ಫ್ರೇಮ್

ಹೋನರ್ 5ಎಕ್ಸ್ ಸೆಕೆಂಡ್ ಜನರೇಶನ್ ಫ್ರೇಮ್ ಫ್ರಿ ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಬಂದಿದ್ದು ಹೆಚ್ಚುವರಿ ಅಕ್ಯುರಸಿಯನ್ನು ಪಡೆದುಕೊಂಡಿದೆ ಮತ್ತು ಫೋನ್ ಲಾಕಿಂಗ್‌ಗಾಗಿ 0.5 ಸೆಕೆಂಡ್ ಸಮಯವನ್ನು ತೆಗೆದುಕೊಳ್ಳುತ್ತದೆ. ಉತ್ತಮ ಕಾರ್ಯಕ್ಷಮತೆಯನ್ನು ಡಿವೈಸ್ ಪಡೆದುಕೊಂಡಿದ್ದು, ಸೆನ್ಸಾರ್ ಮತ್ತು ಹಿಂಡರ್ ಸುತ್ತ ರಿಮ್ ಅನ್ನು ಇದು ಹೊಂದಿಲ್ಲ.

ಒದ್ದೆ ಕೈಯಲ್ಲೂ ಇದನ್ನು ಬಳಸಬಹುದಾಗಿದೆ

ಒದ್ದೆ ಕೈಯಲ್ಲೂ ಇದನ್ನು ಬಳಸಬಹುದಾಗಿದೆ

ಫಿಂಗರ್ ಪ್ರಿಂಟ್

ಫಿಂಗರ್ ಪ್ರಿಂಟ್ ಅನ್ನು 6 ಪ್ರಯತ್ನಗಳಲ್ಲಿ ಹೊಂದಿಸಬಹುದಾಗಿದ್ದು, 5 ಫಿಂಗರ್ ಪ್ರಿಂಟ್‌ಗಳನ್ನು ದಾಖಲಿಸಬಹುದಾಗಿದೆ. ಹೋನರ್ 5ಎಕ್ಸ್ ಫಿಂಗರ್ ಪ್ರಿಂಟ್ ರೀಡರ್ 360 ಡಿಗ್ರಿ ಇಂಪ್ರೆಶನ್ ಅನ್ನು ಸ್ವೀಕರಿಸುತ್ತಿದ್ದು, ಒದ್ದೆ ಕೈಯಲ್ಲೂ ಇದನ್ನು ಬಳಸಬಹುದಾಗಿದೆ.

ಹಾರ್ಡ್‌ವೇರ್ ಫೀಚರ್‌

ಹಾರ್ಡ್‌ವೇರ್ ಫೀಚರ್‌

ಪ್ರೀಮಿಯಮ್ ಅಂಶ

ಫೋನ್‌ನ ಡಿಸೈನ್ ಪ್ರೀಮಿಯಮ್ ಅಂಶಗಳನ್ನು ಒಳಗೊಂಡಿದೆ. ಹಾರ್ಡ್‌ವೇರ್ ಫೀಚರ್‌ಗಳಲ್ಲಿ ಕಂಪೆನಿಯು ಅದ್ವಿತೀಯ ಅಪ್‌ಗ್ರೇಡ್‌ಗಳನ್ನು ತಂದಿದ್ದು ಗ್ರಾಹಕರಿಗೆ ಇದು ಕೈಗೆಟಕುವಂತಿದೆ.

ಅತ್ಯದ್ಭುತ ಫೀಚರ್

ಅತ್ಯದ್ಭುತ ಫೀಚರ್

ಡೈಮೆಂಡ್ ಪಾಲಿಶ್

ಡೈಮೆಂಡ್ ಪಾಲಿಶ್ ಅನ್ನು ಹೊಂದಿರುವ ಡಿವೈಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬಂದಿದ್ದು ಪೂರ್ಣ ಎಚ್‌ಡಿ ಡಿಸ್‌ಪ್ಲೇಯಂತಹ ಅತ್ಯದ್ಭುತ ಫೀಚರ್ ಅನ್ನು ಪಡೆದುಕೊಂಡಿದೆ. ಓಕ್ಟಾ ಕೋರ್ ಚಿಪ್‌ಸೆಟ್ 13 ಎಮ್‌ಪಿ ಕ್ಯಾಮೆರಾವನ್ನು 5ಎಕ್ಸ್ ಪಡೆದುಕೊಂಡಿದ್ದು ಆಕರ್ಷಕ ಮಧ್ಯಮ ಶ್ರೇಣಿಯ ಡಿವೈಸ್ ಇದಾಗಿದೆ.

ಕಠಿಣ ಸ್ಪರ್ಧೆ

ಕಠಿಣ ಸ್ಪರ್ಧೆ

ಮೆಟಲ್ ಬಾಡಿ ವಿನ್ಯಾಸ

ಮೆಟಲ್ ಬಾಡಿ ವಿನ್ಯಾಸ, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಆಕರ್ಷಕ ಫೀಚರ್‌ಗಳು ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 5 ಸಿಲ್ವರ್ ಡಿವೈಸ್‌ಗೆ ಕಠಿಣ ಸ್ಪರ್ಧೆಯನ್ನು ಒಡ್ಡುವುದು ನಿಜ.

ಹೋನರ್ 5ಎಕ್ಸ್ ಬಿಡುಗಡೆ

ಹೋನರ್ 5ಎಕ್ಸ್ ಬಿಡುಗಡೆ

ಜನವರಿ 28

ಹೋನರ್ 5ಎಕ್ಸ್ ಜನವರಿ 28 ರಂದು ಬಿಡುಗಡೆಗೊಂಡ ನಂತರವೇ ಇದರ ಬೆಲೆ ಮತ್ತು ಇತರ ಮಾಹಿತಿಗಳನ್ನು ನಮಗೆ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei's online-only brand Honor has gained much popularity since its launch over a year back in India, owing to the specs-heavy smartphones priced compellingly. The company is now all set to launch a new smartphone in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot