ಹಾನರ್ 9 ಎನ್ ಲಾಂಚ್..! ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ ಎಕ್ಸ್‌ಕ್ಲೂಸಿವ್ ಮಾರಾಟ..!

By GizBot Bureau
|

ವಿದೇಶಿ ಕಂಪೆನಿ ಫೋನ್ ಗಳು ಭಾರತದಲ್ಲಿ ಬಿಡುಗಡೆಗೊಂಡು ಮಾರಾಟ ಕಾಣುವಾಗ ಸ್ವಲ್ಪ ಸಮಯ ಹಿಡಿಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಹುವಾಯಿ ಕಂಪೆನಿಯ ಹಾನರ್ 9ಎನ್ ಕೂಡ ವಿಶ್ವದ ಇತರೆ ದೇಶಗಳಲ್ಲಿ ಬಿಡುಗಡೆ ಕಂಡರೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರಲಿಲ್ಲ. ಆದರೆ ಈಗ ಅದಕ್ಕೆ ದಿನಾಂಕ ನಿಗದಿಯಾಗಿದೆ.

ಹೌದು ಜುಲೈ 24 ಕ್ಕೆ ಭಾರತೀಯ ಮಾರುಕಟ್ಟೆಗೆ ಹುವಾಯಿ ಹಾನರ್ 9ಎನ್ ಮೊಬೈಲ್ ನ ದರ್ಶನ ಭಾಗ್ಯವಾಗಲಿದೆ. ನಂತರ ಅದು ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಮಾರಾಟಕ್ಕೆ ಲಭ್ಯವಾಗಲಿದೆ. ಫ್ಲಿಪ್ ಕಾರ್ಟ್ ಹೊರತು ಪಡಿಸಿದರೆ ಕಂಪೆನಿಯ ಸ್ವಂತ ವೆಬ್ ಸೈಟ್ ನಲ್ಲಿ ಮಾತ್ರ ಇದನ್ನು ಖರೀದಿಸಲು ಅವಕಾಶವಿರುತ್ತದೆ.

ಹಾನರ್ 9 ಎನ್ ಲಾಂಚ್..! ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ ಎಕ್ಸ್‌ಕ್ಲೂಸಿವ್ ಮಾರಾಟ

ಕಂಪೆನಿಯು ಈಗಾಗಲೇ ಹಾನರ್ 9ಎನ್ ನ ವೈಶಿಷ್ಟ್ಯತೆ ಮತ್ತು ಡಿಸೈನ್ ಗಳ ಬಗ್ಗೆ ಮಾಹಿತಿಯನ್ನು ಹೊರಹಾಕಿದೆ. ಹಾನರ್ 9ಎನ್ ಚೀನಾದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಹಾನರ್ 9ಐ ನ ರೀಬ್ರಾಂಡ್ ಆವೃತ್ತಿ ಎಂದೇ ಪರಿಗಣಿಸಲಾಗಿದೆ.

ಹಾರ್ಡ್ ವೇರ್ ಗಳ ವಿಚಾರಕ್ಕೆ ಬಂದರೆ ಹಾನರ್ 9ಎನ್ ನ ಹಾರ್ಡ್ ವೇರ್ ಗಳಲ್ಲಿ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಕಂಪೆನಿ ಕಾರ್ಯ ನಿರ್ವಹಿಸಿದ್ದು ಒಂದು ರೀತಿಯ ಗ್ಲಾಸ್ ಮೇಲ್ಮೈಯನ್ನು ಫೋನಿಗೆ ನೀಡಿದೆ. ಮುಂಭಾಗದಲ್ಲ ನಾಚ್ ಇರಲಿದ್ದು,

ಹುವಾಯಿ ತಿಳಿಸುವಂತೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅತೀ ಕಡಿಮೆ ಬೆಲೆಯಲ್ಲಿ ನಾಚ್ ಸೌಲಭ್ಯವಿರುವ ಫೋನ್ ಆಗಿರುತ್ತದೆ.ಹಲವಾರು ಎಐ ವೈಶಿಷ್ಟ್ಯತೆಗಳನ್ನು ಇದು ಹೊಂದಿರಲಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳು ನಡೆದಿದೆ ಅದರಲ್ಲೂ ಪ್ರಮುಖವಾಗಿ ಕ್ಯಾಮರಾ ಗಳ ವಿಚಾರದಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಇದು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

" ಫ್ಲಿಪ್ ಕಾರ್ಟ್ ಜೊತೆಗೆ ನಂಬಿಕೆ ನಂಬಿಕೆಯ ಪಾಲುದಾರಿಕೆ ಇದ್ದು, ನಮ್ಮ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುವಂತೆ ಮಾಡುವ ಭರವಸೆ ಇದೆ. ಹಾನರ್ 9ಎನ್ ಫೋನ್ ಫ್ಲಿಪ್ ಕಾರ್ಟ್ ಎಕ್ಸ್ ಕ್ಲೂಸೀವ್ ಆಗಿ ಮಾರಾಟ ಕಾಣುತ್ತದೆ ಎಂದು ಹೇಳಲು ಸಂತೋಷ ಪಡುತ್ತೇವೆ. ಹೊಸ ಫೋನ್ ಮಾರುಕಟ್ಟೆಗೆ ಬಿಡುವಾಗ ಅದರ ಲಭ್ಯತೆಯು ಗ್ರಾಹಕರನಿಗೆ ಸರಿಯಾಗಿ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ.

ಹಾನರ್ 9 ಎನ್ ಲಾಂಚ್..! ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ ಎಕ್ಸ್‌ಕ್ಲೂಸಿವ್ ಮಾರಾಟ

ಆ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ನಮ್ಮ ಜೊತೆ ಕೈಜೋಡಿಸಿದೆ. ಫ್ಲಿಪ್ ಕಾರ್ಟ್ ತಮ್ಮ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ನೀಡಲು ಮತ್ತು ಆ ಮೂಲಕ ನಮ್ಮ ಸಂಸ್ಥೆಯ ಫೋನಿನ ಮಾರಾಟಕ್ಕೆ ಸಹಕಾರಿ ನೀಡಿ ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಬೆಲೆಯನ್ನುಹೆಚ್ಚಿಸಲು ನೆರವು ನೀಡುತ್ತದೆ ಎಂದು ಭಾವಿಸುತ್ತೇವೆ” ಎಂದು ಹುವಾಯಿ ಇಂಡಿಯಾದ ಉಪಾಧ್ಯಕ್ಷರಾಗಿರುವ ಪಿ ಸಂಜೀವ್ ತಿಳಿಸಿದ್ದಾರೆ.

ಈಗಾಗಲೇ ತಿಳಿಸಿರುವಂತೆ, ಹಾನರ್ 9ಎಮ್ ಹಾನರ್ 9ಐ ನ ರೀಬ್ರ್ಯಾಂಡ್ ಆವೃತ್ತಿಯಾಗಿರುತ್ತದೆ. ಹಾನರ್ 9ಐ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದೆ.ಹಾನರ್ 9ಐ 5.84-ಇಂಚಿನ ಫುಲ್ HD+ ಐಪಿಎಸ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು Kirin 659 ಪ್ರೊಸೆಸರ್ ಜೊತೆಗೆ 4ಜಿಬಿ ಮೆಮೊರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. .

ಹಾನರ್ 9ಐ ನ ಕ್ಯಾಮರಾ ಬಗ್ಗೆ ತಿಳಿಸುವುದಾದರೆ, ಹಿಂಭಾಗದಲ್ಲಿ ಎರಡು ಕ್ಯಾಮರಾವನ್ನು ಅಳವಡಿಸಲಾಗಿದೆ. ಅದರಲ್ಲಿ ಒಂದು 13-ಮೆಗಾಪಿಕ್ಸಲ್ ಸೆನ್ಸರ್ ಆದರೆ ಇನ್ನೊಂದು 2 ಮೆಗಾಪಿಕ್ಸಲ್ ಸೆನ್ಸರ್ ನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿರುವಂತೆ ಹಾನರ್ 9ಐ ನಲ್ಲಿ 16 ಮೆಗಾಪಿಕ್ಸಲ್ ನ ಕ್ಯಾಮರಾ ಲಭ್ಯತೆ ಇದೆ.

ಈ ಫೋನ್ ಆಂಡ್ರಾಯ್ಡ್ 8.0 ಓರಿಯೋ ಜೊತೆಗೆ ಮೇಲ್ಬಾಗದಲ್ಲಿ EMUI 8.0 ನಲ್ಲಿ ಕೆಲಸ ಮಾಡುತ್ತದೆ. ಮತ್ತು 3,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಇದೇ ಎಲ್ಲಾ ಪ್ರಮುಖ ವೈಶಿಷ್ಟ್ಯತೆಗಳೇ ಹಾನರ್ 9ಎನ್ ನಲ್ಲೂ ಇರಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Best Mobiles in India

English summary
Honor 9N will be Flipkart exclusive, launch set for July 24. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X