ಭಾರತದಲ್ಲಿ ಶೀಘ್ರದಲ್ಲೇ ಲಾಂಚ್‌ ಆಗಲಿದೆ ಹಾನರ್‌ ಪ್ಯಾಡ್‌ 8 ! ವಿಶೇಷತೆ ಏನು?

|

ಟೆಕ್‌ ಮಾರುಕಟ್ಟೆಯಲ್ಲಿ ಹಾನರ್‌ ಕಂಪೆನಿ ಭಿನ್ನ ಶ್ರೇಣಿಯ ಡಿವೈಸ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ಪ್ಯಾಡ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಹಾನರ್‌ ಪ್ಯಾಡ್‌ 8 ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಟ್ಯಾಬ್ಲೆಟ್‌ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಈ ಪ್ಯಾಡ್‌ ಈಗಾಗಲೇ ಜಾಗತಿಕವಾಗಿ ಅನಾವರಣಗೊಳಿಸಲಾಗಿದ್ದು, ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ.

ಹಾನರ್‌

ಹೌದು, ಹಾನರ್‌ ಕಂಪೆನಿ ತನ್ನ ಹೊಸ ಹಾನರ್‌ ಪ್ಯಾಡ್‌ 8 ಲಾಂಚ್‌ ಮಾಡಲು ಪ್ಲಾನ್‌ ರೂಪಿಸಿದೆ. ಈ ಟ್ಯಾಬ್ಲೆಟ್ 2K ರೆಸಲ್ಯೂಶನ್ ಬೆಂಬಲಿಸುವ 12 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಈ ಟ್ಯಾಬ್ಲೆಟ್ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.1 ಮತ್ತು OTG ಅನ್ನು ಒಳಗೊಂಡಿದೆ. ಇನ್ನುಳಿದಂತೆ ಸ್ಮಾರ್ಟ್‌ ಟ್ಯಾಬ್ಲೆಟ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಒದಿರಿ.

ಹಾನರ್ ಪ್ಯಾಡ್ 8 ಫೀಚರ್ಸ್‌

ಹಾನರ್ ಪ್ಯಾಡ್ 8 ಫೀಚರ್ಸ್‌

ಹಾನರ್‌ ಪ್ಯಾಡ್‌ 8 1,200x2,000 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 12 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 87% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದಿದೆ. ಹಾನರ್ ಪ್ಯಾಡ್ 8 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ ಆಧಾರಿತ ಮ್ಯಾಜಿಕ್ UI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 128GB ಇದು ಸ್ಮಾರ್ಟ್ ಮಲ್ಟಿ-ವಿಂಡೋ ಫೀಚರ್ಸ್‌ನೊಂದಿಗೆ ಬರಲಿದೆ.

ಬಳಕೆದಾರರಿಗೆ

ಇದು ಬಳಕೆದಾರರಿಗೆ ಒಂದು ಪರದೆಯಲ್ಲಿ ನಾಲ್ಕು ವಿಂಡೋಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ಟ್ಯಾಬ್ಲೆಟ್ ಸ್ಕ್ರೀನ್‌ ಬಳಸಿಕೊಂಡು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಜೊತೆಗೆ ಕಮ್ಯೂನಿಕೇಶನ್‌ ನಡೆಸಬಹುದಾಗಿದೆ. ಇನ್ನು ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್‌ ಹಿಂಬದಿ ಹಾಗೂ ಫ್ರಂಟ್‌ ಸೈಡ್‌ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿಕ್ಯಾಮೆರಾಗಳನ್ನು ಹೊಂದಿದೆ.

ಚಾರ್ಜಿಂಗ್‌

ಜೊತೆಗೆ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 22.5W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಈ ಟ್ಯಾಬ್ಲೆಟ್‌ ನಾಲ್ಕು ಟ್ರಿಬಲ್ ಮತ್ತು ನಾಲ್ಕು ಬಾಸ್ ಘಟಕಗಳನ್ನು ಒಳಗೊಂಡಂತೆ ಎಂಟು ಸ್ಪೀಕರ್‌ಗಳನ್ನು ಹೊಂದಿದೆ. ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್‌ ಕನೆಕ್ಟಿವಿಟಿಯಲ್ಲಿ 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5.1 ಬೆಂಬಲವನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್‌ ಯುನಿಬಾಡಿ ವಿನ್ಯಾಸವನ್ನು ಹೊಂದಿದೆ. ಈ ಟ್ಯಾಬ್ಲೆಟ್‌ ಇಬುಕ್ ಮೋಡ್ ಮತ್ತು ಡಾರ್ಕ್ ಮೋಡ್‌ ಅನ್ನು ಒಳಗೊಂಡಿದೆ.

ಹಾನರ್‌

ಇದಲ್ಲದೆ ಹಾನರ್‌ ಕಂಪೆನಿ ಇತ್ತೀಚಿಗೆ ಚೀನಾ ಮಾರುಕಟ್ಟೆಯಲ್ಲಿ ಹಾನರ್‌ ಪ್ಯಾಡ್‌ X8 ಟ್ಯಾಬ್ಲೆಟ್ ಅನ್ನು ಅನಾವರಣ ಮಾಡಿದೆ. ಇದು 10.1 ಇಂಚಿನ ಪೂರ್ಣ ಹೆಚ್‌ಡಿ IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಪಡೆದಿದೆ. ಇದು ಆಕ್ಟಾ ಕೋರ್ ಮಿಡಿಯಾಟೆಕ್‌ ಹಿಲಿಯೋ G80 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್10 ಆಧಾರಿತ ಮ್ಯಾಜಿಕ್ UI 4.0 ನಲ್ಲಿ ರನ್‌ ಆಗಲಿದೆ. ಈ ಪ್ಯಾಡ್ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ.

5,100mAh

ಇದು 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಬರೋಬ್ಬರಿ ಮೂರು ಗಂಟೆಗಳ ಸಮಯ ಬೇಕಾಗುತ್ತದೆ. ಇನ್ನು ಈ ಪ್ಯಾಡ್‌ 1620 ಡ್ಯುಯಲ್ ದೊಡ್ಡ ಆಂಪ್ಲಿಟ್ಯೂಡ್ ಸ್ಪೀಕರ್‌ಗಳು, 2.2cc ಸೌಂಡ್ ಕ್ಯಾವಿಟಿ ಮತ್ತು ಹಾನರ್ ಹಿಸ್ಟನ್ ಸೌಂಡ್ ಎಫೆಕ್ಟ್‌ಗಳನ್ನು ಒಳಗೊಂಡಿದೆ. ಟ್ಯಾಬ್ಲೆಟ್‌ನಲ್ಲಿ ಬ್ಲೂಟೂತ್ 5.1, ವೈಫೈ 802.11 a/b/g/n/ac ವೈಶಿಷ್ಟ್ಯ ಇದ್ದು ಇದರಲ್ಲಿ ಹೆಡ್‌ಫೋನ್ ಜ್ಯಾಕ್ ಇಲ್ಲ.

Best Mobiles in India

Read more about:
English summary
Honor Pad 8 has been teased to soon launch in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X