Subscribe to Gizbot

ಫ್ಲಿಪ್‌ಕಾರ್ಟ್/ಅಮೆಜಾನ್‌'ಗೆ ಚಳ್ಳೆ ಹಣ್ಣು ತಿನ್ನಿಸಿದ ಹೈದರಾಬಾದ್ ಸ್ಟೂಡೆಂಟ್ಸ್

Written By:

ಶಿಕ್ಷಣ ಪಡೆದ ವಿದ್ಯಾವಂತರು ಇತರರಿಗೆ ಉತ್ತಮ ಮಾರ್ಗದರ್ಶಕರಾಗುತ್ತಾರೆ ಎಂಬುದು ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರ ನಂಬಿಕೆ. ಆದ್ರೆ ಇಂದಿನ ಕೆಲವು ವಿದ್ಯಾರ್ಥಿಗಳು ಒಳ್ಳೆಯ ವಿಷಯಕ್ಕೆ ಬಿಟ್ಟು ತಮ್ಮ ಬುದ್ದಿವಂತಿಕೆಯನ್ನು ಇತರರಿಗೆ ವಂಚನೆ ಮಾಡಲು ಬಳಸಿಕೊಳ್ಳುತ್ತಿರುವುದು ಆಧುನಿಕ ಶಿಕ್ಷಣದ ದುರಂತ ಎಂದರೆ ತಪ್ಪಾಗಲಾರದು. ಅದಕ್ಕೆ ಉದಾಹರಣೆ ಆಗಿ ಇಂದು ಸಾಫ್ಟ್‌ವೇರ್‌ ಶಿಕ್ಷಣ ಪಡೆದ ಕೆಲವರು ಕಂಪ್ಯೂಟರ್ ಹ್ಯಾಕ್‌ ಮಾಡುವುದು, ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ಹಣ ಪಡೆಯುವುದು, ಫೇಸ್‌ಬುಕ್‌ ಹ್ಯಾಕ್‌ ಮಾಡಿ ಇತರರನ್ನು ತೊಂದರೆಗೆ ಸಿಲುಕಿಸುವುದು ಇವೇ ಮೊದಲಾದ ಉದಾಹರಣೆಗಳು.

ಮೇಲಿನ ಮಾಹಿತಿಯನ್ನು ಹೇಳಲು ಕಾರಣವೆಂದರೆ ಹೈದರಾಬಾದ್‌ ಮೂಲದ ವಿದ್ಯಾರ್ಥಿಗಳು ಪ್ರಖ್ಯಾತ ಆನ್‌ಲೈನ್‌ ಮಾರುಕಟ್ಟೆಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಇ-ಕಾಮರ್ಸ್‌ ಕಂಪನಿಗಳಿಗೇನೆ ಸುಮಾರು 4 ತಿಂಗಳುಗಳ ಕಾಲ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಅಂದ್ರೆ ವಂಚನೆ ಮಾಡಿದ್ದಾರೆ. ವಾವ್‌ ಇದು ಅಂದ್ರೆ ತಲೆ ರಿ... ಅಂದು ಕೊಳ್ಳಬೇಡಿ. ಕಳ್ಳ ಯಾವತಿದ್ರು ಸಿಕ್ಕಿಹಾಕಿಕೊಳ್ಳುತ್ತಾನೆ ಅಂನ್ನೋದ ಮರಿಯಬೇಡಿ. ಹೌದು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ ಮಾಡಿದ ಆ ವಿದ್ಯಾರ್ಥಿಗಳು ಈಗ ಸಿಕ್ಕಿಬಿದ್ದಿದ್ದಾರೆ. ಅದೆಲ್ಲಾ ಸರಿ, ಅವರು ಮಾಡಿದ ಮೋಸವಾದ್ರು ಏನು ಎಂದು ಈ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಹೈದರಾಬಾದ್‌ನಲ್ಲಿ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕಂಪನಿಗಳ ಸರಕುಗಳನ್ನು ನಕಲಿ ಮಾಡುತ್ತಿದ್ದ ಅಪರಾಧದ ಮೇಲೆ ಬಂಧಿಸಿದ್ದಾರೆ ಎಂದು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.
ಚಿತ್ರ ಕೃಪೆ:BCCL 2015

ವಂಚನೆ ಮಾಡಿದ ವಿದ್ಯಾರ್ಥಿಗಳು

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಗೊಲ್ಕೊಂಡ'ದ, ಯಾಹಿಯಾ ಮೊಹಮ್ಮದ್‌ ಇಶಾಕಿ (19) ಮನಶಾಸ್ತ್ರ ವಿದ್ಯಾರ್ಥಿ ಹಾಗೂ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ ಎಂಡಿ ಶರೊಜ್‌ಅನ್ಸಾರಿ (24) ಎಂಬುವವರು ಬಂಧಿತರು ಎನ್ನಲಾಗಿದೆ.

ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಮೋಸ ಮಾಡಿದ್ದಾದ್ರು ಏನು?

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಅಂದಹಾಗೆ ಇಬ್ಬರು ವಿದ್ಯಾರ್ಥಿಗಳು ಸಹ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಲ್ಲಿ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು, ಅವುಗಳು ಬಂದ ನಂತರ ಪಾರ್ಸೆಲ್‌ಗೆ ಮರಳು, ಮಣ್ಣು ತುಂಬಿ ಹಿಂದಿರುಗಿಸುತ್ತಿದ್ದರು ಎನ್ನಲಾಗಿದೆ.

ವಿದ್ಯಾರ್ಥಿಗಳಿಂದ ನೆಕ್ಸಸ್‌ 6P ಗೋಲ್ಡ್‌ ಮೊಬೈಲ್‌ ವಶ

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ವಿದ್ಯಾರ್ಥಿಗಳನ್ನು ಬಂಧಿಸಿದ ಪೋಲಿಸರು ಅವರಿಂದ ನೆಕ್ಸಸ್‌ 6P ಗೋಲ್ಡ್‌ ಮೊಬೈಲ್‌, ಮೈಕ್ರೋಸಾಫ್ಟ್‌ ಮೊಬೈಲ್‌, 1 ಸ್ಯಾಮ್‌ಸಂಗ್‌ 6S ಎಡ್ಜ್‌ ಮೊಬೈಲ್‌, ನಿಕಾನ್‌ ಡಿಜಿಟಲ್‌ ಕ್ಯಾಮೆರಾ, ಲೆನೊವಾ ಲ್ಯಾಪ್‌ಟಾಪ್‌ ಮತ್ತು ವೀಡಿಯೋ ಗೇಮ್‌ ಕನ್ಸೋಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ವಂಚನೆ ನಡೆಸುತ್ತಿದ್ದದ್ದು ಹೇಗೆ?

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಯಾಹಿಯಾ ಮತ್ತು ಅನ್ಸಾರಿ ಇಬ್ಬರು ಸಹ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಲ್ಲಿ ಇಲೆಕ್ಟ್ರಾನಿಕ್‌ಗ್ಯಾಜೆಟ್‌ಗಳಾದ ಲ್ಯಾಪ್‌ಟಾಪ್‌, ಮೊಬೈಲ್‌,ಕ್ಯಾಮೆರಾಗಳನ್ನು ಆರ್ಡರ್ ಮಾಡುತ್ತಿದ್ದರು. ಡೆಲಿವರಿ ಕಾರ್ಯನಿರ್ವಾಹಕರು ಪ್ರಾಡಕ್ಟ್‌ಗಳನ್ನು ಯಾಹಿಯಾ ಮನೆಗೆ ತಂದಾಗ ಅನ್ಸಾರಿ ಡೆಲಿವರಿ ಮಾಡುವ ವ್ಯಕ್ತಿಯನ್ನು ಮನೆಯ ಹೊರಗಡೆ ನಿಲ್ಲಿಸಿಕೊಳ್ಳತ್ತಿದ್ದ. ಯಾಹಿಯಾ ಪ್ರಾಡಕ್ಟ್‌ ಅನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಿ ಜೋಪಾನವಾಗಿ ಪ್ಯಾಕಿಂಗ್ ಓಪನ್‌ ಮಾಡಿ ಪ್ರಾಡಕ್ಟ್‌ ತೆಗೆದುಕೊಂಡು ಅದರ ಓಳಗೆ ಮರಳು ತುಂಬಿ ಅಷ್ಟೇ ಜೋಪಾನವಾಗಿ ಪ್ಯಾಕ್‌ ಮಾಡಿ ಸೀಲ್‌ ಮಾಡುತ್ತಿದ್ದ. ಪ್ರಾಡಕ್ಟ್‌ ಡೆಲಿವರಿ ವ್ಯಕ್ತಿಗೆ ಡೆಬಿಟ್‌ ಕಾರ್ಡ್‌ ನೀಡಿದಾಗ ಕಾರ್ಡ್‌ ಹಣ ವರ್ಗಾವಣೆಯಲ್ಲಿ ಫೇಲ್‌ ಆಗುತ್ತಿದ್ದು. ನಂತರದಲ್ಲಿ ಕ್ಷಮಿಸಿ ಎಂದು ಹೇಳಿ ಮರಳು ತುಂಬಿದ ಪಾರ್ಸೆಲ್‌ ಅನ್ನು ಮರಳಿ ಆತನಿಗೆ ನೀಡುತ್ತಿದ್ದರು ಎಂದು 'ದಿ ಟೈಮ್ಸ್‌ ಆಫ್ ಇಂಡಿಯಾ'ಗೆ ಟಾಸ್ಕ್ ಫೋರ್ಸ್(ಡಿಸಿಪಿ) , ಬಿ ಲಿಂಬಾ ರೆಡ್ಡಿ'ರವರು ಹೇಳಿದ್ದಾರೆ.

ಯಾಹಿಯಾ ಪುಸ್ತಕ ಮಾರಾಟಗಾರ

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಮೋಸ

ಯಾಹಿಯಾ ಅಮೆಜಾನ್‌ನಲ್ಲಿ ಪುಸ್ತಕ ಮಾರಾಟಗಾರ, ಆತ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಲ್ಲಿನ ಪ್ಯಾಕೇಜಿಂಗ್ ಮಾಹಿತಿಯನ್ನು ಉತ್ತಮವಾಗಿ ತಿಳಿದಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಈ ಕಂಪೆನಿಗಳಲ್ಲಿ ಎಣಿಸಿದರೂ ಮುಗಿಯದ ಸಂಬಳ

ಅಂತು ಬಂತು ಇಂಟರ್ನೆಟ್‌ ಕಾರು: ರಸ್ತೆಗೆ ಯಾವಾಗ?

ಗುಡ್‌ಬಾಯ್‌ ಹೇಳಿ ಟ್ರಾಫಿಕ್‌ ಜಾಮ್‌ಗೆ, ಹಾಯ್‌ ಹೇಳಿ ಪಾಡ್‌ ಟ್ಯಾಕ್ಸಿಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
This Is How Two Hyderabad Students Scammed Flipkart, Amazon For 4 Months. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot