ಅಂತರ್ಜಾಲದಲ್ಲಿ ಮೋಡಿ ಮಾಡಿದ 9 ವರ್ಷದ ಹುಡುಗ

Posted By: Staff
ಅಂತರ್ಜಾಲದಲ್ಲಿ ಮೋಡಿ ಮಾಡಿದ 9 ವರ್ಷದ ಹುಡುಗ

ಮಕ್ಕಳಿಗಂತೂ ಈಗ ಬೇಸಿಗೆ ರಜೆ. ಅನೇಕ ಮಕ್ಕಳು ಗ್ರೌಂಡಿನಲ್ಲಿ ಆಡುವುದೋ, ಇಲ್ಲಾ ಕಂಪ್ಯೂಟರ್ ನಲ್ಲಿ ವೀಡಿಯೋ ಗೇಮ್ಸ್ ಆಡುವುದೋ ಮಾಡುತ್ತಾರೆ. ಅಪ್ಪಿ ತಪ್ಪಿ ಬೇಸಿಗೆ ಶಿಬಿರಕ್ಕೆ ಪೋಷಕರು ಸೇರಿಸಿದರೆ ಹೋಗುತ್ತಾರೆ.

ಆದರೆ ಲಾಸ್ ಎಂಜಲೀಸ್ ನ 9 ವರ್ಷದ ಹುಡುಗ ಕೈನ್ ಮನ್ರೋಯ್ ಎಂಬ ಪೋರ ಮಾಡಿದ್ದೇ ಬೇರೆ. ರಜೆಯಲ್ಲಿ ಏನಪ್ಪಾ ಮಾಡುವುದು ಎಂದು ಯೋಚಿಸುತ್ತಿದ್ದ ಅವನ ತಲೆಗೆ ಹೊಳೆದದ್ದು, ತಂದೆಯ ಆನ್ಲೈನ್ ಆಟೋ ಸ್ಪೇರ್ ಪಾರ್ಟ್ಸ್ ಅಂಗಡಿ.

ಹೇಗಿದ್ದರೂ ಆನ್ಲೈನ್ ಅಂಗಡಿಯಾಗಿದ್ದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿರಲಿಲ್ಲ. ಆಟೋ ಬಿಡಿಭಾಗಗಳ ಖಾಲಿ ಡಬ್ಬಗಳನ್ನು ನೋಡಿ ಅವನ ತಲೆಗೆ ಐಡಿಯಾ ಒಂದು ಹೊಳೆಯಿತು. ಈ ದಬ್ಬಗಳನ್ನೇ ಬಳಸಿ ಹೊಸ ಹೊಸ ಆಟಗಳನ್ನು ಸೃಷ್ಟಿಸಿದರೆ ಹೇಗೆ ಎಂದು ಯೋಚಿಸಿ, ಮಿನಿ-ಬ್ಯಾಸ್ಕೆಟ್ ಬಾಲ್, ರಿಂಗ್ ಟಾಸ್, ಆರ್ಕೇಡ್ ಸ್ಟೈಲ್ ಗೇಮ್ಸ್ ಗಳನ್ನು ಸೃಷ್ಟಿಸಿ ಅಂಗಡಿಗೆ ಬರುವ ಕೆಲವೇ ಗ್ರಾಹಕರು ಈ ಗೇಮ್ ಗಳನ್ನು ಟ್ರೈ ಮಾಡಲು ಹೇಳಿದ.

ಇದನ್ನು ನೋಡಿದ ಮುಲಿಕ್ ಎಂಬ ಗ್ರಾಹಕ ಕುತೂಹಲಗೊಂಡು ಒಮ್ಮೆ ಆಟವಾಡಿದ. ಅವನಿಗೆ ಮತ್ತಷ್ಟು ಹಿಡಿಸಿ ಮತ್ತೆ ಮತ್ತೆ ಆಡಲು ಅಂಗಡಿಗೆ ಬರುತ್ತಿದ್ದ. ಈ ಆಟಗಳನ್ನು ಮತ್ತಷ್ಟು ಪ್ರಚಾರ ಮಾಡಲು ಎಲ್ಲಾ ಆಟಗಳ 10 ನಿಮಿಷದ ವೀಡಿಯೋ ಡಾಕ್ಯುಮೆಂಟರಿ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ, ಕೈನ್ ಮನ್ರೋಯ್ ನ ಪ್ರತಿಭೆಯನ್ನು ಗುರುತಿಸಿ ಈತನ ಭವಿಷ್ಯದ ಓದಿಗೆ ಸಹಾಯ ಮಾಡಲು ಕೇಳಿಕೊಂಡ. ಏನಾಶ್ಚರ್ಯ, ಈ ವೀಡಿಯೋ ನೋಡಿ ಕೈನ್ ಮನ್ರೋಯ್ ಗೆ ಸಹಾಯ ಮಾಡಿದ ಜನರಿಂದ ಈಗಾಗಲೇ 1,75,000 ಡಾಲರ್ ಹಣ ಸಂಗ್ರಹವಾಗಿದೆ.

ಇಂಟರ್ನೆಟ್ ಜಗತ್ತಿನಲ್ಲಿ ಒಂದು ವೀಡಿಯೋ ಏನೆಲ್ಲಾ ಮಾಡುತ್ತದೆ ಎಂಬುದಕ್ಕೆ ಈಗಾಗಲೇ ನಮ್ಮಲ್ಲಿ ಕೊಲವರಿ ಹಾಗು ಪ್ಯಾರ್ ಗೆ ಆಗ್ಬಿಟೈತೆ ಹಾಡುಗಳೇ ಸಾಕ್ಷಿ. ಹಾಗೆಯೇ ಕೈನ್ ಮನ್ರೋಯ್ ನ ವೀಡಿಯೋ ಸೂಪರ್ ಹಿಟ್.

ಕೈನ್ ನ ಫೇಸ್ ಬುಕ್ ಫ್ಯಾನ್ ಪೇಜ್ ನಲ್ಲಿ 1,00,000  ಹಾಗು ಟ್ವಿಟರ್ ಖಾತೆಯಲ್ಲಿ 6,000 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾನೆ. 9 ವರ್ಷ ವಯಸ್ಸಿನಲ್ಲಿಯೇ ಈ ರೀತಿಯ ಸಾಧನೆ ಮಾಡಿ ರಜೆಯನ್ನೂ ಮಜವಾಗಿ ಉಪಯೋಗಿಸಿಕೊಂಡು ಆನ್ಲೈನ್ ನಲ್ಲಿ ತನ್ನನ್ನೇ ತಾನು ಮಾರುಕಟ್ಟೆ ಮಾಡಿಕೊಂಡ (ಇದಕ್ಕೆ ಇಂಟರ್ನೆಟ್ ಮೆಮ್ ಎನ್ನುತಾರೆ) ರೀತಿ ನಿಜಕ್ಕೂ ನಮ್ಮ ದೇಶದ ಹುಡುಗರಿಗೆ ಒಂದು ಒಳ್ಳೆ ಉದಾಹರಣೆ.

ಕೈನ್ ನ ಕ್ರಿಯಾಶೀಲ ವೀಡಿಯೋ ನೋಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot